/newsfirstlive-kannada/media/media_files/2025/09/14/surya_salman-2025-09-14-16-14-17.jpg)
ಏಷ್ಯಾ ಕಪ್​ನ ಸೂಪರ್-4 ಪಂದ್ಯದಲ್ಲಿ ಟೀಮ್ ಇಂಡಿಯಾ, ಪಾಕಿಸ್ತಾನ ವಿರುದ್ಧ ಜಯಭೇರಿ ಬಾರಿಸಿದೆ. ಈ ಒಂದೇ ಟೂರ್ನಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಎರಡು ಬಾರಿ ಸೋತು ಅವಮಾನಕ್ಕೆ ಒಳಗಾಗಿದೆ. ಈಗಾಗಲೇ ಎರಡು ಬಾರಿ ಮುಖಾಮುಖಿ ಆಗಿರುವ ಭಾರತ- ಪಾಕಿಸ್ತಾನ ಮತ್ತೊಮ್ಮೆ ಫೈನಲ್​​ನಲ್ಲಿ ಕಾದಾಡುವ ಸಂಭವವೂ ಇದೆ. ಅದು ಹೇಗೆಂದರೆ..?
ಸೂಪರ್​-4 ಹಂತದಲ್ಲಿ ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಪಾಕಿಸ್ತಾನ ಆಡುತ್ತಿವೆ. ಇದರಲ್ಲಿ ಈಗಾಗಲೇ ತಲಾ ಒಂದೊಂದು ಪಂದ್ಯಗಳನ್ನು ಆಡಿರುವ ಈ ತಂಡಗಳು ಭಾರತ, ಬಾಂಗ್ಲಾ ಮ್ಯಾಚ್ ಗೆದ್ದು ಮೊದಲ ಎರಡು ಸ್ಥಾನ ಪಡೆದಿವೆ. ಶ್ರೀಲಂಕಾ ಹಾಗೂ ಪಾಕಿಸ್ತಾನ ಸೋತು ಮೂರು, ನಾಲ್ಕನೇ ಸ್ಥಾನದಲ್ಲಿವೆ. ಈ 4 ತಂಡಗಳಿಗೆ ಇನ್ನು ಸೂಪರ್-4 ಪಂದ್ಯಗಳು ಬಾಕಿ ಇವೆ. ಇದರಲ್ಲಿ ಭಾರತ ಹಾಗೂ ಪಾಕ್ ಫೈನಲ್​ಗೆ ಎಂಟ್ರಿ ಕೊಡುವ ಅವಕಾಶ ಕೂಡ ಇದೆ.
ಟೀಮ್ ಇಂಡಿಯಾ ವರ್ಸಸ್​ ಪಾಕ್ ಫೈನಲ್ ಹಾದಿ..?
ಪಾಕಿಸ್ತಾನ ತಂಡವು ಮುಂದಿನ ಸೂಪರ್-4ನಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ವಿರುದ್ಧ ಸೆಣಸಾಟ ನಡೆಸಲಿದೆ. ಈ ಎರಡು ಪಂದ್ಯಗಳಲ್ಲಿ ಪಾಕ್ ಗೆಲುವು ಸಾಧಿಸಿದರೆ 4 ಪಾಯಿಂಟ್​ಗಳಿಂದ ಫೈನಲ್​ ಸ್ಪಾಟ್ ಅನ್ನು ಕನ್​ಫರ್ಮ್​ ಮಾಡಿಕೊಳ್ಳುತ್ತದೆ.
ಟೀಮ್ ಇಂಡಿಯಾ ಕೂಡ ಮುಂದಿನ ಪಂದ್ಯಗಳಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ವಿರುದ್ಧ ಅಖಾಡಕ್ಕೆ ಧುಮುಕಲಿದೆ. ಈ ಎರಡು ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದರೆ ನೇರವಾಗಿ ಫೈನಲ್​ಗೆ ಎಂಟ್ರಿ ಕೊಡಲಿದೆ. ಭಾರತ ಇನ್ನು ಒಂದು ಪಂದ್ಯ ಗೆದ್ದರೂ ಫೈನಲ್​ ಮ್ಯಾಚ್ ಅನ್ನು ಖಚಿತ ಪಡಿಸಿಕೊಳ್ಳಬಹುದು.
ಸದ್ಯ ಈ 4 ತಂಡಗಳು ಏಷ್ಯಾಕಪ್​ ಫೈನಲ್​ಗಾಗಿ ಜಿದ್ದಿಗೆ ಬಿದ್ದಿವೆ. ಸೂಪರ್-4ನಲ್ಲಿ ಭಾರತ, ಪಾಕ್​ ಜೊತೆ ವಿನ್ ಆಗಿದೆ. ಬಾಂಗ್ಲಾ, ಶ್ರೀಲಂಕಾ ಜೊತೆ ಗೆಲುವು ಪಡೆದಿದೆ. ಹೀಗಾಗಿ ಪಾಯಿಂಟ್​​ ಟೇಬಲ್​ನಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ರೆ, ಬಾಂಗ್ಲಾ 2ನೇ ಸ್ಥಾನದಲ್ಲಿದೆ. ನಾಳೆ ಪಾಕ್ ಮತ್ತು ಶ್ರೀಲಂಕಾ ನಡುವೆ ಪೈಪೋಟಿ ನಡೆಯಲಿದೆ. ಈ ಪಂದ್ಯ ಈ ಎರಡಕ್ಕೂ ಮುಖ್ಯ. ಏಕೆಂದರೆ ಮೊದಲ ಸೂಪರ್-4 ಸೋತಿವೆ. ಸೆಪ್ಟೆಂಬರ್​ 24 ರಂದು ಭಾರತ-ಬಾಂಗ್ಲಾ ಅಖಾಡಕ್ಕೆ ಇಳಿಯಲಿವೆ. ಸೆ.25 ರಂದು ಪಾಕ್- ಬಾಂಗ್ಲಾ ಎದುರಾಗಲಿವೆ. ಸೆ.27 ಭಾರತ-ಶ್ರೀಲಂಕಾ ನಡುವೆ ಪಂದ್ಯವಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ