/newsfirstlive-kannada/media/media_files/2026/01/11/rakshith-shetty-1-2026-01-11-16-22-09.jpg)
ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ 777 ಚಾರ್ಲಿ, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಯಶಸ್ಸಿನ ಬಳಿಕ ಅಭಿಮಾನಿಗಳಿಂದ ಅಂತರ ಕಾಯ್ದು ಕೊಂಡಿದ್ದರು. ಇತ್ತ ರಕ್ಷಿತ್​ ಶೆಟ್ಟಿಯನ್ನ ಮತ್ತೆ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದು, ರಿಚರ್ಡ್ ಆಂಟನಿ ಸಿನಿಮಾಗಾಗಿ ಕಾದು ನೋಡುತ್ತಿದ್ದಾರೆ. ಇಷ್ಟರಲ್ಲೇ ರಕ್ಷಿತ್​ ಹೊಸ ಸಿನಿಮಾ ಕೂಡ ಅನೌನ್ಸ್ ಮಾಡಲಿದ್ದಾರೆ ಅಂತ ಹೇಳಲಾಗ್ತಿದೆ. ಹೊಸ ಸಿನಿಮಾಗೂ ಮುನ್ನ ರಕ್ಷಿತ್​ ಶೆಟ್ಟಿ ದೈವದ ಮೊರೆ ಹೋಗಿದ್ದಾರೆ.
ಕರಾವಳಿಯಲ್ಲಿ ದೈವರಾಜ ಬಬ್ಬುಸ್ವಾಮಿ ಕಾರ್ಣಿಕ ದೈವ ಅಂತಾನೇ ಪ್ರಸಿದ್ಧಿ. ನಟ ರಕ್ಷಿತ್​ ಶೆಟ್ಟಿ ಉಡುಪಿಯ ಅಲೆವೂರು ಬಬ್ಬುಸ್ವಾಮಿ ದೈವದ ಸಿರಿ ಸಿಂಗಾರ ನೇಮೋತ್ಸವದಲ್ಲಿ ಭಾಗಿಯಾಗಿದ್ದರು. ಇಷ್ಟರಲ್ಲೇ ರಕ್ಷಿತ್​ ಶೆಟ್ಟಿ ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದು, ನೇಮೋತ್ಸವದಲ್ಲಿ ಭಾಗಿಯಾಗಿ ಬಬ್ಬುಸ್ವಾಮಿ ದೈವದ ಅಭಯ ಪಡೆದುಕೊಂಡರು.ನಟ ರಕ್ಷಿತ್​ ಸ್ಪರ್ಶ್ ಮಸಾಲಾ ಮಾಲೀಕ ಶಿವಕುಮಾರಯ್ಯ ಬಯೋಪಿಕ್‌ನಲ್ಲಿ​ ನಟಿಸಲಿದ್ದಾರೆ ಅನ್ನೋ ಮಾತು ಕೇಳಿಬಂದಿದೆ.
/filters:format(webp)/newsfirstlive-kannada/media/media_files/2026/01/11/rakshith-shetty-2-2026-01-11-16-27-22.jpg)
ಅಲೆವೂರು ಮನೆತನದ ಕುಡಿ ‘ಸಿಂಪಲ್ ಸ್ಟಾರ್’
ಹೌದು, ನಟ ರಕ್ಷಿತ್​ ಶೆಟ್ಟಿ ಅಲೆವೂರು ಮನೆತನದ ಕುಡಿ. ಅಲೆವೂರು ದೊಡ್ಡಮನೆ ಕರ್ನಾಟಕ ಕರಾವಳಿಯ ಪ್ರಸಿದ್ಧ ಗುತ್ತು ಮನೆತನ. ಬಂಟ ಜಾತಿಗೆ ಸೇರಿದ ರಕ್ಷಿತ್ ಶೆಟ್ಟಿ ಈ ಕುಟುಂಬದ ಕುಡಿ. ಈ ನಡುವೆ ರಕ್ಷಿತ್​ ಶೆಟ್ಟಿ ಕಾಣೆಯಾಗಿದ್ದರು.ಸಡನ್ ಆಗಿ ಏನಾಯ್ತು? ಎಲ್ಲಿ ಹೋದ್ರು ರಕ್ಷಿತ್ ಎಂದು ಸಿಂಪಲ್ ಸ್ಟಾರ್ ಅಭಿಮಾನಿಗಳು ತುಂಬಾ ದಿನದಿಂದ ತಲೆ ಕೆಡಿಸಿಕೊಂಡಿದ್ದರು. ಈಗ ಅವರೆಲ್ಲರ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಕ್ಷಿತ್​ ಶೆಟ್ಟಿ ನೇಮೋತ್ಸವದಲ್ಲಿ ಭಾಗಿಯಾಗುವ ಮೂಲಕ ಅಭಿಮಾನಿಗಳಲ್ಲಿ ಹೊಸ ಸಿನಿಮಾದ ಭರವಸೆಯನ್ನ ಹುಟ್ಟು ಹಾಕಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us