/newsfirstlive-kannada/media/media_files/2025/12/29/suraj-singh-1-2025-12-29-12-53-09.jpg)
ಬಿಗ್ ಬಾಸ್ ಸೀಸನ್ 12 ಸುರ ಸುಂದರಾಂಗ ಸೂರಜ್ ಸಿಂಗ್, ಬಿಗ್ ಮನೆಯಿಂದ ಹೊರ ಬರ್ತಿದ್ದಂತೆಯೇ ಅವಕಾಶ ಬಾಗಿಲು ತೆರೆದಿದೆ. ಮನೆಯಿಂದ ಹೊರ ಬಂದ ಎರಡೇ ವಾರದಲ್ಲಿ ಅವರು ಮುಂದೇನು ಮಾಡ್ತಾರೆ ಅನ್ನೋದಕ್ಕೆ ಬಿಗ್ ಅಪ್‌ಡೇಟ್ಸ್ ಸಿಕ್ಕಿದ್ದು, ಮತ್ತೊಮ್ಮೆ ಕಲರ್ಸ್ ಕನ್ನಡದ ಮೂಲಕವೇ ಮಿಂಚಲಿದ್ದಾರೆ.
ಬಿಗ್ ಬಾಸ್ ಅವರ ಬದುಕಿನ ಪಯಣಕ್ಕೆ ಹೊಸ ತಿರುವು ನೀಡಿದ್ದು, ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಿಟ್ಟಿದೆ. ಅದರಂತೆ ಕಲರ್ಸ್ ಕನ್ನಡ ಪ್ರೊಮೋ ಒಂದನ್ನ ರಿಲೀಸ್ ಮಾಡಿದೆ. ಆ ಪ್ರಮೋದಲ್ಲಿ ಸೂರಜ್ ಸಿಂಗ್ ಶೈನ್ ಆಗಿದ್ದಾರೆ. ಅಂದ್ಹಾಗೆ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಮುಗಿದ ಬಳಿಕ ʼಪವಿತ್ರ ಬಂಧನʼ ಎಂಬ ಸೀರಿಯಲ್ ಬರಲಿದೆ. ಆ ಧಾರಾವಾಹಿಯಲ್ಲಿ ಸೂರಜ್ ಸಿಂಗ್, ಹೀರೋ ಆಗಿ ನಟಿಸುತ್ತಿದ್ದಾರೆ.
/filters:format(webp)/newsfirstlive-kannada/media/media_files/2026/01/11/suraj-singh-2026-01-11-08-40-38.jpg)
ಸ್ಟೋರಿ ಏನು..?
ಪವಿತ್ರ ಬಂಧನ ಧಾರಾವಾಹಿಯು ಅಣ್ಣ -ತಮ್ಮನ ಬಾಂಧವ್ಯದ ಕಥೆಯಾಗಿದೆ. ಹಾಗೆಯೇ ಇದರಲ್ಲಿ ನಾಯಕಿಯಾಗಿ ಅಮೂಲ್ಯ ಭಾರದ್ವಾಜ್ ನಟಿಸಿದ್ದಾರೆ. ಜೊತೆಗೆ ಸೂರಜ್ ಸಿಂಗ್ ಪಾತ್ರದ ಹೆಸರು ದೇವದತ್ ದೇಶ್‌ಮುಖ್ ಎಂಬುದು ಜೊತೆಗೆ ತಮ್ಮನ ಪಾತ್ರಧಾರಿ ವಿಕಾಸ್ ದೇಶ್‌ಮುಖ್ ಎಂದಾಗಿದೆ. ಪವಿತ್ರಾ ಮತ್ತು ವಿಕಾಸ್ ಇಬ್ಬರು ಪ್ರೀತಿಸುತ್ತಿರುತ್ತಾರೆ. ನಂತರ ಪವಿತ್ರಾ ದೇವದತ್ ಜೊತೆ ಮದುವೆಯಾಗುತ್ತಾಳೆ. ಆದರೆ ನಿನ್ನನ್ನ ಎಂದಿಗೂ ನನ್ನ ಗಂಡ ಎಂದು ಒಪ್ಪಿಕೊಳ್ಳೋದಿಲ್ಲ ಎಂದು ಸೂರಜ್‌ಗೆ ಹೇಳುತ್ತಾಳೆ. ಈ ನೋಟವನ್ನು ಈಗಾಗಲೇ ಪ್ರೋಮೋದಲ್ಲಿ ಬಿಡುಗಡೆ ಮಾಡಲಾಗಿದೆ.
ಕೆನಡಾದಲ್ಲಿ ಶೆಫ್ ಆಗಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಸೂರಜ್ ಸಿಂಗ್ ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದರು. ಜೊತೆಗೆ ಪಾರ್ಟ್ ಟೈಮ್ ಜಿಮ್‌ನಲ್ಲಿ ಟ್ರೇನರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಮಾಡೆಲಿಂಗ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಸೂರಜ್‌ಗೆ ಅಚಾನಕ್ ಆಗಿ ಬಿಗ್ ಬಾಸ್ ಅವಕಾಶ ಸಿಕ್ಕಿತ್ತು. ಇದೀಗ ಧಾರಾವಾಹಿಯಲ್ಲೂ ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ಬಣ್ಣದ ಲೋಕಕ್ಕೂ ಕಾಲಿಟ್ಟಿದ್ದಾರೆ.
ಇದನ್ನೂ ಓದಿ: BBK12 ಸೂರಜ್ ಮಳ್ಳನಾ? ಕ್ಲಾರಿಟಿ ಕೊಟ್ರಾ ರಿಷಾ ಗೌಡ..? VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us