/newsfirstlive-kannada/media/media_files/2026/01/10/swastik-chikara-chat-2026-01-10-16-32-56.jpg)
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಉತ್ತರ ಪ್ರದೇಶ ತಂಡದ ಆಟಗಾರರ ಕತೆಯೇ ಅರ್ಥವಾಗ್ತಿಲ್ಲ. ತಂಡದ ವೇಗಿ ಯಶ್​ ದಯಾಳ್​ ಒಂದಲ್ಲ.. ಎರಡು ರೇಪ್​ ಕೇಸ್​​ಗಳಲ್ಲಿ ಸಿಲುಕಿದ್ದಾರೆ. ಯಶ್​ ದಯಾಳ್ ವಿರುದ್ಧ ವಿಚಾರಣೆ ತೀವ್ರಗತಿಯಲ್ಲಿ ನಡೀತಾ ಇದ್ದು, ಯಾವ ಕ್ಷಣದಲ್ಲಾದ್ರೂ ಬಂಧನವಾಗೋ ಭೀತಿಯಲ್ಲೇ ಯಶ್​ ದಯಾಳ್ ಬದುಕ್ತಿದ್ದಾರೆ. ಆರ್​​ಸಿಬಿಯ ಆಟಗಾರನೊಬ್ಬನ ಕೇಸೆ ಇನ್ನೂ ಮುಗಿದಿಲ್ಲ. ಅದಾಗಲೇ ಆರ್​​ಸಿಬಿಯ ಮಾಜಿ ಹಾಗೂ ಉತ್ತರ ಪ್ರದೇಶದ ಆಟಗಾರನೊಬ್ಬ ಹೊಸ ವಿವಾದದಲ್ಲಿ ಸಿಲುಕಿದ್ದಾರೆ.
ಉತ್ತರ ಪ್ರದೇಶ ಪರ ಡೊಮೆಸ್ಟಿಕ್​ ಪಂದ್ಯಗಳನ್ನಾಡ್ತಿರೋ ಸ್ವಸ್ತಿಕ್​ ಚಿಕಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ಸೌಂಡ್​ ಮಾಡ್ತಿದ್ದಾರೆ. ಆನ್​ ಫೀಲ್ಡ್​ನಲ್ಲಿ ಭರ್ಜರಿ ಆಟವಾಡಿ ಸ್ವಸ್ತಿಕ್​ ಸುದ್ದಿಯಾಗಿಲ್ಲ. ಆಫ್​ ದ ಫೀಲ್ಡ್​ ಹುಡುಗಿಯೊಂದಿಗೆ ಚಾಟಿಂಗ್​ ಮಾಡಿ ಹೊಸ ವಿವಾದದ ಸುಳಿಯಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ.
ಆರ್​​​ಸಿಬಿ ಮಾಜಿ ಆಟಗಾರನ ಖಾಸಗಿ ಚಾಟ್ಸ್​ ಸದ್ಯ ಲೀಕ್​ ಆಗಿವೆ. ಹಲವು ಯುವತಿಯರ ಜೊತೆಗೆ ಸ್ವಸ್ತಿಕ್​ ಚಿಕಾರ ಚಾಟಿಂಗ್​ ನಡೆಸಿರೋ ಸ್ಕ್ರಿನ್​ ಶಾಟ್ಸ್​ ​ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿವೆ. ಹಲವು ಯುವತಿಯರ ಜೊತೆಗೆ ಸ್ವಸ್ತಿಕ್ ಚಿಕಾರ, ಅಶ್ಲೀಲ ಸಂದೇಶಗಳನ್ನ ಕಳಿಸಿ, ಫ್ಲರ್ಟ್​ ಮಾಡಿರೋದನ್ನ ಹಲವು ಅಭಿಮಾನಿಗಳು ಟೀಕೆ ಮಾಡಿದ್ದಾರೆ. ಇನ್ನು ಕೆಲವರು, ಅದು ಪರ್ಸನಲ್​ ವಿಚಾರ ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.
‘ಕೊಹ್ಲಿ ಶಿಷ್ಯ’ನನ್ನ ಆರ್​​ಸಿಬಿ ಕೈ ಬಿಟ್ಟಿದ್ದು ಇದೇ ಕಾರಣಕ್ಕಾ?
ಕಳೆದ ಸೀಸನ್​ನಲ್ಲಿ ಆರ್​​ಸಿಬಿ ತಂಡದ ಭಾಗವಾಗಿದ್ದ ಸ್ವಸ್ತಿಕ್​ ಚಿಕಾರ ತಂಡದ ಫ್ಯೂಚರ್​ ಸ್ಟಾರ್​ ಎನಿಸಿದ್ರು. ಸ್ವಸ್ತಿಕ್​ ಚಿಕಾರನ ಹಾಡಿ ಹೊಗಳಿದ್ದ ಆರ್​​ಸಿಬಿ ಮೆಂಟರ್​ ದಿನೇಶ್​ ಕಾರ್ತಿಕ್​ ಅನ್​ ಕಟ್​ ಡೈಮೆಂಡ್​ ಎಂದೆಲ್ಲಾ ಹೊಗಳಿದ್ರು. ವಿರಾಟ್ ಕೊಹ್ಲಿ ಹೋದಲ್ಲಿ ಬಂದಲ್ಲಿ ಸ್ವಸ್ತಿಕ್​ ಚಿಕಾರ ಕಾಣಿಸಿಕೊಳ್ತಿದ್ರು. ಇಂತಾ ಆಟಗಾರನನ್ನ ಮೆಗಾ ಆಕ್ಷನ್​ಗೂ ಆರ್​​ಸಿಬಿ ರಿಲೀಸ್​ ಮಾಡಿ ಅಚ್ಚರಿ ಮೂಡಿಸಿತ್ತು. ಮಿನಿ ಹರಾಜಿನಲ್ಲಾದ್ರೂ ರಿಟೈನ್​ ಮಾಡಿಕೊಳ್ಳುತ್ತೆ ಅನ್ನೋ ನಿರೀಕ್ಷೆಯಿತ್ತು. ಆದ್ರೆ, ಚಿಕಾರಗೆ ಕನಿಷ್ಠ ಬಿಡ್​ ಕೂಡ ಮಾಡಲಿಲ್ಲ.
ಪ್ರೈವೇಟ್​ ಚಾಟ್ಸ್​ ವೈರಲ್​ ಆದ ಬೆನ್ನಲ್ಲೇ ಅಂದು ಆರ್​​ಸಿಬಿ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಇದೂ ಒಂದು ಕಾರಣ ಎನ್ನಲಾಗ್ತಿದೆ. ಸ್ವಸ್ತಿಕ್​ ಚಿಕಾರ ನಡವಳಿಕೆಯ ವಿಚಾರದಲ್ಲಿ ಮ್ಯಾನೇಜ್​ಮೆಂಟ್​ ವಲಯದಲ್ಲಿ ಬೇಸರ. ಇದೇ ಕಾರಣದಿಂದಲೇ ಕೊಹ್ಲಿ ಶಿಷ್ಯ ಅನ್ನೋದ್ರ ಹೊರತಾಗಿಯೂ ಸ್ವಸ್ತಿಕ್​ ಚಿಕಾರನ ರಿಟೈನ್​ ಮಾಡಿಕೊಳ್ಳೋದಕ್ಕಾಗಲಿ, ಹರಾಜಿನಲ್ಲಿ ಖರೀದಿಸೋದಕ್ಕಾಗಲಿ ಆರ್​​ಸಿಬಿ ತಂಡ ಮುಂದಾಗಲಿಲ್ಲ ಎಂಬ ಸುದ್ದಿ ಇದೀಗ ಹರಿದಾಡ್ತಿದೆ.
ಸ್ವಸ್ತಿಕ್​ ಚಿಕಾರ ಹಲವು ಯವತಿಯರೊಂದಿಗೆ ನಡೆಸಿದ್ದು ಎನ್ನಲಾದ ಪ್ರೈವೇಟ್ ಚಾಟ್​ಗಳು ಹಲ್ ಚಲ್ ಎಬ್ಬಿಸಿವೆ. ಆದ್ರೆ, ಯಾವುದೇ ಯುವತಿಯಿಂದಾಗಲಿ ಯಾವುದೇ ಆರೋಪಗಳು ಬಂದಿಲ್ಲ. ಸ್ವಸ್ತಿಕ್​ ಚಿಕಾರ ಕೂಡ ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ಯಾವುದಾದ್ರೂ ಬಲವಾದ ಆರೋಪ ಕೇಳಿಬಂದ್ರೆ ಮಾತ್ರ, ಈ ಕೇಸ್​ ಜೀವಂತವಾಗಿರಲಿದೆ. ಇಲ್ಲದಿದ್ರೆ, ಮುಚ್ಚಿ ಹೋಗಲಿದೆ.
ಇದನ್ನೂ ಓದಿ: ತವರಿಗಾಗಿ ಕಾದು ಪರದಾಡಿದ ಆರ್​​ಸಿಬಿ.. ಈಗ ಮತ್ತೆರಡು ಮೈದಾನಗಳ ಮೇಲೆ ಕಣ್ಣು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us