/newsfirstlive-kannada/media/media_files/2026/01/10/ashwini-gowda-and-gilli-nata-5-2026-01-10-16-15-16.jpg)
ಬಿಗ್​ ಬಾಸ್​​ಗೆ ಹೋದ್ಮೇಲೆ ‘ಕಿಚ್ಚನ ಚಪ್ಪಾಳೆ’ ತಗೋಬೇಕು ಅನ್ನೋದು ಬಹುತೇಕ ಸ್ಪರ್ಧಿಗಳ ಕನಸು. ಅದು ಎಲ್ಲರಿಗೂ ದಕ್ಕೋದಿಲ್ಲ. ಪ್ರತಿಯೊಂದು ವಿಚಾರವನ್ನೂ ಅಳೆದು, ತೂಗಿ ಲೆಕ್ಕ ಹಾಕಿಯೇ ಸುದೀಪ್ ಚಪ್ಪಾಳೆ ನೀಡೋದು.
ಅದೇ ಕಾರಣಕ್ಕೆ ಅದೆಷ್ಟೋ ವೀಕೆಂಡ್​ಗಳಲ್ಲಿ ಕಿಚ್ಚನ ಚಪ್ಪಾಳೆ ಯಾರಿಗೂ ಸಿಗದಿರುವ ಉದಾಹರಣೆಗಳೂ ಉಂಟು. ಈ ವಾರ ಈ ಸೀಸನ್​​ನ ಕೊನೆಯ ಚಪ್ಪಾಳೆಯನ್ನು ಇಬ್ಬರು ಸ್ಪರ್ಧಿಗಳಿಗೆ ಸುದೀಪ್ ನೀಡಿದ್ದಾರೆ. ಅಶ್ವಿನಿ ಗೌಡ ಮತ್ತು ಧ್ರುವಂತ್ ಅವರಿಗೆ ಸುದೀಪ್, ಕಿಚ್ಚನ ಚಪ್ಪಾಳೆ ಕೊಟ್ಟಿದ್ದಾರೆ.
ಏನಂದ್ರು ಸುದೀಪ್..?
ಈ ವಾರ ಮನೆ ಎರಡು ಭಾಗ ಆಗುತ್ತದೆ. 2 ವರ್ಸಸ್ 6. ಇಡೀ ವಾರ ಕೂತು ಎಪಿಸೋಡ್ ನೋಡಿದಾಗ ನನಗೆ ಕಾಣಿಸಿದ್ದು ಏನೆಂದರೆ ಒಂದು ವ್ಯಕ್ತಿಯ ಹಠ, ಛಲ, ಫೋಕಸ್. ಎಲ್ಲೆಲ್ಲಿಂದ ಅವಮಾನಗಳು ಆಗುತ್ತವೋ, ಅದೇ ಬಾಯಿಗಳಿಂದ ನಾವು ಯಾವತ್ತು ಹೊಗಳಿಸಿಕೊಳ್ತೇವೋ ಅಲ್ಲೇ ಗೆಲುವಿನ ಪ್ರಾರಂಭ. ಈ ಸೀಸನ್​​ ಕೊನೆಯ ಕಿಚ್ಚನ ಚಪ್ಪಾಳೆ ಅಶ್ವಿನಿ ಮತ್ತು ಧ್ರುವಂತ್​​ಗೆ ಎಂದಿದ್ದಾರೆ.
ಭಾವುಕರಾದ ಸ್ಪರ್ಧಿಗಳು
ಅಶ್ವಿನಿ ಗೌಡ ಮತ್ತು ಧ್ರುವಂತ್ ಆಟವನ್ನು ಮೆಚ್ಚಿ ಸುದೀಪ್ ಹೊಗಳುತ್ತಿರುವಾಗ ಇಬ್ಬರು ಸ್ಪರ್ಧಿಗಳು ತುಂಬಾ ಭಾವುಕರಾಗಿದ್ದಾರೆ. ಅಶ್ವಿನಿಯ ಕಣ್ಣುಗಳಲ್ಲಿ ನೀರು ತುಂಬಿದ್ದವು. ಧ್ರುವಂತ್ ಕೂಡ ಕಣ್ಣೀರು ಇಟ್ಟಿದ್ದಾರೆ. ಗಿಲ್ಲಿ ಮೂಲಕ ಅಶ್ವಿನಿ ಅವರ ಹಾಗೂ ರಕ್ಷಿತಾ ಮೂಲಕ ಧ್ರುವಂತ್ ಅವರ ಫೋಟೋ ತೋರಿಸಿ ಚಪ್ಪಾಳೆ ನೀಡಿದ್ದಾರೆ ಸುದೀಪ್.
ದೂರಿದವರ ಬಾಯಲ್ಲೇ “ಭೇಷ್” ಅನ್ನಿಸಿಕೊಂಡವರಿಗೆ ಕಿಚ್ಚನ ಚಪ್ಪಾಳೆ.
— Colors Kannada (@ColorsKannada) January 10, 2026
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/TrDtGhuCwS
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us