ತವರಿಗಾಗಿ ಕಾದು ಪರದಾಡಿದ ಆರ್​​ಸಿಬಿ.. ಈಗ ಮತ್ತೆರಡು ಮೈದಾನಗಳ ಮೇಲೆ ಕಣ್ಣು..!

ಐಪಿಎಲ್ ಸೀಸನ್-19ಕ್ಕೂ ಮುನ್ನ ಫ್ರಾಂಚೈಸಿಗಳ ಫೈಟ್ ತಾರಕ್ಕೇರಿದೆ. ಒಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ಪುಣೆಯಲ್ಲಿ ಗ್ರೌಂಡ್​​ಗಾಗಿ ನೀನಾ ನಾನಾ ಅಂತಾ ಫೈಟ್​ ನಡೆಸ್ತಿವೆ. ಇದ್ರ ನಡುವೆ ಆರ್​​ಸಿಬಿ ಇದೀಗ ಹೊಸದಾಗಿ 2 ಸ್ಥಳಗಳ ಮೇಲೆ ಕಣ್ಣಿಟ್ಟಿದೆ.

author-image
Ganesh Kerekuli
RCB (1)
Advertisment
  • ಹೊಸ ತವರಿಗಾಗಿ ರೆಡ್​ ಆರ್ಮಿ ಹುಡುಕಾಟ ಜೋರು
  • ಹೊಸದಾಗಿ 2 ಸ್ಟೇಡಿಯಂಗಳ ಮೇಲೆ ಆರ್​​ಸಿಬಿ ಕಣ್ಣು
  • ರಾಯ್​​ಪುರ, ಇಂದೋರ್​ ಸ್ಟೇಡಿಯಂಗಳ ಮೇಲೆ ಕಣ್ಣು

ಐಪಿಎಲ್ ಸೀಸನ್-19ಕ್ಕೂ ಮುನ್ನ ಫ್ರಾಂಚೈಸಿಗಳ ಫೈಟ್ ತಾರಕ್ಕೇರಿದೆ. ಒಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ಪುಣೆಯಲ್ಲಿ ಗ್ರೌಂಡ್​​ಗಾಗಿ ನೀನಾ ನಾನಾ ಅಂತಾ ಫೈಟ್​ ನಡೆಸ್ತಿವೆ. ಇದ್ರ ನಡುವೆ ಆರ್​​ಸಿಬಿ ಇದೀಗ ಹೊಸದಾಗಿ 2 ಸ್ಥಳಗಳ ಮೇಲೆ ಕಣ್ಣಿಟ್ಟಿದೆ. ಬೆಂಗಳೂರು ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆ ಕಾದಿದೆ.

ಜೂನ್ 4, 2025..! ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ, ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ರು. 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ದುರ್ಘಟನೆಯ ಬಳಿಕ, ಐಕಾನಿಕ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ಒಂದೇ ಒಂದು ಅಂತರಾಷ್ಟ್ರೀಯ ಪಂದ್ಯ ನಡೆದಿಲ್ಲ. ಇದೀಗ ಬೆಂಗಳೂರು ಐಪಿಎಲ್ ಆತಿಥ್ಯವನ್ನೂ ಕಳೆದುಕೊಳ್ಳುವ ಭೀತಿಯಲ್ಲಿದೆ. ಹಾಗಾಗಿ ಆರ್​ಸಿಬಿ ಫ್ರಾಂಚೈಸಿ, ಹೊಸ ಹೋಂ ಗ್ರೌಂಡ್ ಹುಡುಕಲು ಆರಂಭಿಸಿದೆ.

ಇದನ್ನೂ ಓದಿ: ತಿಲಕ್​ ವರ್ಮಾ ವಿಶ್ವಕಪ್​ಗೆ ಡೌಟ್; ಕನ್ನಡಿಗನಿಗೆ ತೆರೆಯುತ್ತಾ ಅದೃಷ್ಟದ ಬಾಗಿಲು..?

RCB (6)

ತವರಿಗಾಗಿ ರೆಡ್​ ಆರ್ಮಿ ಹುಡುಕಾಟ ಜೋರು

ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕೋಲ್ಡ್ ವಾರ್​ ಸದ್ಯಕ್ಕೆ ನಿಲ್ಲೋ ತರ ಕಾಣ್ತಿಲ್ಲ. ಈ ಫೈಟ್​​ನಿಂದಾಗಿ ಐಪಿಎಲ್​​ ಬೆಂಗಳೂರಿನಿಂದ ಬೇರೆಡೆ ಸ್ಥಳಾಂತರವಾಗೋ ಸಾಧ್ಯತೆ ಹೆಚ್ಚಿದೆ. ಆರ್​​ಸಿಬಿ ಫ್ರಾಂಚೈಸಿಯಂತೂ ಹೊಸ ಹೋಂ ಗ್ರೌಂಡ್​ಗಾಗಿ ಭರ್ಜರಿ ಹುಡುಕಾಟ ನಡೆಸ್ತಿದೆ. ಸದ್ಯದ ಬೆಳವಣಿಗೆಯನ್ನ ಗಮನಿಸಿದ್ರೆ, ಬೆಂಗಳೂರು ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆ ಕಾದಿದೆ.

ಬೆಂಗಳೂರು ಬಿಟ್ಟು ಹೊರಟಿರೋ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿರೋ ಫಸ್ಟ್ ಚಾಯ್ಸ್​ ಗ್ರೌಂಡ್ ಅಂದ್ರೆ, ಅದು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ, ಪುಣೆ ಸ್ಟೇಡಿಯಮ್. ಪುಣೆಯಲ್ಲಿ ಆರ್​ಸಿಬಿ ಪಂದ್ಯಗಳನ್ನ ನಡೆಸಿದ್ರೆ, ಪಂದ್ಯಗಳನ್ನ ನೋಡಲು ಸುತ್ತಮುತ್ತಲಿನ ರಾಜ್ಯಗಳ ಅಭಿಮಾನಿಗಳು, ಪುಣೆಗೆ ಆಗಮಿಸ್ತಾರೆ ಅನ್ನೋದು ಆರ್​ಸಿಬಿ ಫ್ರಾಂಚೈಸಿ ಮಾಲೀಕರ ಲೆಕ್ಕಾಚಾರ. ಚಿನ್ನಸ್ವಾಮಿಗೆ ಹೋಲಿಸಿದ್ರೆ, ಪುಣೆ ಸ್ಟೇಡಿಯಮ್​ನಲ್ಲಿ ಇನ್ನೂ 11 ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಗೆ ಪಂದ್ಯ ವೀಕ್ಷಣೆಗೆ ಅವಕಾಶ ಸಿಗಲಿದೆ. ಹಾಗಾಗಿ ಪುಣೆ ಬೆಸ್ಟ್ ಚಾಯ್ಸ್ ಅನ್ನೋದು, ಆರ್​ಸಿಬಿ ಮಾಲೀಕರ ಅಭಿಪ್ರಾಯ.

ಇದನ್ನೂ ಓದಿ: ಒಂದು ಇನ್​ಸ್ಟಾ ಪೋಸ್ಟ್​​ಗೆ ಕೊಹ್ಲಿ ಎಷ್ಟು ಕೋಟಿ ಚಾರ್ಜ್ ಮಾಡ್ತಾರೆ..?

rcb cares

ಆರ್​ಸಿಬಿ, ಪುಣೆ ಸ್ಟೇಡಿಯಂ ಮೇಲೆ ಆಸಕ್ತಿ ತೋರಿದ ಬೆನ್ನಲ್ಲೇ ರಾಜಸ್ಥಾನ್ ರಾಯಲ್ಸ್ ಕೂಡ ಪುಣೆಗಾಗಿ ಫೈಟ್​​ಗಿಳಿದಿದೆ. ಕಳೆದ ಐಪಿಎಲ್ ಸೀಸನ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಜಸ್ಥಾನ್ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳ ನಡುವೆ ಜಟಾಪಟಿ ಉಂಟಾಯ್ತು. ಹೀಗಾಗಿ ರಾಜಸ್ಥಾನ್ ರಾಯಲ್ಸ್​, ಜೈಪುರದಿಂದ ಹೊರ ನಡೆಯಲು ತೀರ್ಮಾನಿಸಿದೆ. ಈಗಾಗಲೇ ಆರ್​ಆರ್ ಫ್ರಾಂಚೈಸಿ ಮಾಲೀಕರು, ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ರಾಜಸ್ಥಾನ್​ ರಾಯಲ್ಸ್​ ತಂಡ ಪುಣೆಗಾಗಿ ಫೈಟ್​ಗಿಳಿದ ಬೆನ್ನಲ್ಲೇ ಆರ್​​ಸಿಬಿ ಬೇರೆ ಗ್ರೌಂಡ್​ಗಳತ್ತ ಮುಖ ಮಾಡಿದೆ. 

ರಾಯ್​​ಪುರ, ಇಂದೋರ್​ ಸ್ಟೇಡಿಯಂಗಳ ಮೇಲೆ ಕಣ್ಣು

ಪುಣೆ ಸ್ಟೇಡಿಯಂ ಜೊತೆ ಜೊತೆಗೆ ಮತ್ತೆರೆಡು ಸ್ಟೇಡಿಯಂಗಳ ಮೇಲೆ ಆರ್​​ಸಿಬಿಯ ಕಣ್ಣು ಬಿದ್ದಿದೆ. ರಾಯ್ಪುರ ಹಾಗೂ ಇಂದೋರ್​ ಸ್ಟೇಡಿಯಂಗಳಲ್ಲಿ ಸೀಸನ್​ 19ರ ಪಂದ್ಯಗಳನ್ನಾಡಲು ಹಾಲಿ ಚಾಂಪಿಯನ್​ ಟೀಮ್ ಮುಂದಾಗಿದೆ. ಇವೆರೆಡರ ಪೈಕಿ ರಾಯ್​ಪುರ ಸ್ಟೇಡಿಯಂ ಮೇಲೆ ಫ್ರಾಂಚೈಸಿ ಹೆಚ್ಚು ಆಸಕ್ತಿಯನ್ನ ತೋರಿದ್ದು, ಈಗಾಗಲೇ ಛತ್ತಿಸ್​ಘಡ ಕ್ರಿಕೆಟ್​ ಅಸೋಸಿಯೇಷನ್​ ಜೊತೆಗೆ ಚರ್ಚೆ ನಡೆಸಿದೆ. ಫಸ್ಟ್​ ಚಾಯ್ಸ್​ ಸ್ಟೇಡಿಯಂ ಪುಣೆ ಸಿಗಲಿಲ್ಲ ಅಂದ್ರೆ ರಾಯ್​​ಪುರದಲ್ಲಿ ಆಡಲು ರೆಡ್​ ಆರ್ಮಿ ಮುಂದಾಗಿದೆ. ಇದ್ರ ಜೊತೆಗೆ ಇಂದೋರ್​ ಸ್ಟೇಡಿಯಂ ಕೂಡ ಆರ್​​ಸಿಬಿಯ ಶಾರ್ಟ್​ ಲಿಸ್ಟ್​ನಲ್ಲಿದೆ. 

ಇದನ್ನೂ ಓದಿ:ಕೊನೆಯ 4 ಎಸೆತದಲ್ಲಿ 18 ರನ್ಸ್‌ ಅಗತ್ಯ ಇತ್ತು.. 6, 4, 6, 4 ಬಾರಿಸಿ ಇತಿಹಾಸ ನಿರ್ಮಿಸಿದ RCB ಸ್ಟಾರ್‌..!

RCB_TEAM (1)

ಚಿನ್ನಸ್ವಾಮಿಯಲ್ಲೇ ಆಡಲು ಆರ್​ಸಿಬಿ ಬಯಕೆ

ಬೆಂಗಳೂರಿನಲ್ಲಿ ಆರ್​ಸಿಬಿ ತಂಡಕ್ಕೆ ಲಾಯಲ್ ಫ್ಯಾನ್ಸ್ ಇದ್ದಾರೆ. ಹೀಗಿರುವಾಗ ಆರ್​ಸಿಬಿಗೆ, ಚಿನ್ನಸ್ವಾಮಿ ಬಿಟ್ಟು ಬೇರೆ ಕಡೆ ಪಂದ್ಯ ಆಯೋಜಿಸುವ ಆಕಸ್ತಿ ಇಲ್ಲವೇ ಇಲ್ಲ. ಸದ್ಯ ಆರ್​ಸಿಬಿ ಫ್ರಾಂಚೈಸಿ ಮೇಲೆ, ಕಾಲ್ತುಳಿದ ಪ್ರಕರಣದ ಗಂಭೀರ ಆರೋಪವಿದೆ. ಕಾಲ್ತುಳಿತಕ್ಕೆ ಆರ್​ಸಿಬಿ ಫ್ರಾಂಚೈಸಿಯೇ ನೇರ ಹೊಣೆ ಅಂತಾನೂ ವರದಿ ಬಂದಿದೆ. ಹೀಗಿರುವಾಗ ಆರ್​ಸಿಬಿ ಫ್ರಾಂಚೈಸಿ, ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳನ್ನ ಆಯೋಜಿಸೋದು ಹೇಗೆ ಅಂತ, ದಾರಿ ಹುಡುಕುತ್ತಿದೆ. ಆರ್​ಸಿಬಿ ಪ್ಲಾನ್ ವರ್ಕ್​ಔಟ್ ಅಗುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಪ್ರಯತ್ನವಂತೂ ಮಾಡ್ತಿದೆ.

ಏನಾಗುತ್ತೆ ಅಂತಿಮ ನಿರ್ಧಾರ?

ಚೆಂಡು ಬಿಸಿಸಿಐನ ಅಂಗಳದಲ್ಲಿದೆ. ಚಿನ್ನಸ್ವಾಮಿ ಸೇರಿದಂತೆ, ಆರ್​​ಸಿಬಿ ತನ್ನ ಆಯ್ಕೆಯ ಹೋಮ್​ಗ್ರೌಂಡ್​ನ ಲಿಸ್ಟ್​ಗಳನ್ನ ಬಿಸಿಸಿಐಗೆ ಸಲ್ಲಿಸಿದೆ. ಕಾಲ್ತುಳಿತದ ಕಪ್ಪುಚುಕ್ಕೆ ಅಂಟಿರೋದ್ರಿಂದ ಚಿನ್ನಸ್ವಾಮಿ ವಿಚಾರದಲ್ಲಿ ರಿಸ್ಕ್​ ತೆಗೆದುಕೊಳ್ಳೋಕೆ ಬಿಸಿಸಿಐ ರೆಡಿಯಿಲ್ಲ. ಹೀಗಾಗಿ ಉಳಿದ 3 ಆಯ್ಕೆಗಳಲ್ಲಿ ಒಂದಕ್ಕೆ ಒಪ್ಪಿಗೆ ನೀಡಲಿದೆ. ಆ ಗ್ರೌಂಡ್​ ಯಾವುದು.? ಅನ್ನೋದು ಸದ್ಯ ಎಲ್ಲರಿಗೂ ಇರೋ ಕುತೂಹಲವಾಗಿದೆ.

ಇದನ್ನೂ ಓದಿ: ವಿಶ್ವಕಪ್ ಹೊಸ್ತಿಲಲ್ಲಿ ಟೀಂ ಇಂಡಿಯಾಗೆ ಆಘಾತ.. ಸ್ಟಾರ್ ಬ್ಯಾಟರ್​​​ಗೆ ಗಾಯ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Virat Kohli RCB rcb team
Advertisment