ಒಂದು ಇನ್​ಸ್ಟಾ ಪೋಸ್ಟ್​​ಗೆ ಕೊಹ್ಲಿ ಎಷ್ಟು ಕೋಟಿ ಚಾರ್ಜ್ ಮಾಡ್ತಾರೆ..?

ಕ್ರಿಕೆಟ್​ ಲೋಕದ ಕಿಂಗ್​, ಮಾಡ್ರನ್​ ಕ್ರಿಕೆಟ್​ ದೊರೆ ಕ್ರಿಕೆಟ್​ ಲೋಕದ ಸುಲ್ತಾನ ಮಾತ್ರವಲ್ಲ. ಆಫ್​ ದ ಫೀಲ್ಡ್​ನಲ್ಲೂ ರಾಜನೇ. ಇನ್ಸ್​​ಸ್ಟಾಗ್ರಾಂ ಸಾಮ್ರಾಜ್ಯಕ್ಕಂತೂ ಕೊಹ್ಲಿಯೇ ಅಧಿಪತಿ. ಕೊಹ್ಲಿಯ ಮುಂದೆ ವಿಶ್ವದ ಯಾವೊಬ್ಬ ಕ್ರಿಕೆಟರ್​ ಕೂಡ ಲೆಕ್ಕಕ್ಕೇ ಇಲ್ಲ.

author-image
Ganesh Kerekuli
Kohli rcb
Advertisment
  • ಆಫ್​​ ದ ಫೀಲ್ಡ್​ನಲ್ಲೂ ಕೊಹ್ಲಿಯೇ ಕಿಂಗ್​..!
  • ಕೊಹ್ಲಿ ಕ್ರೇಜ್​ ಕಂಡು ದಂಗಾದ ಕ್ರಿಕೆಟ್​ ಲೋಕ
  • ಇನ್ಸ್​​ಸ್ಟಾಗ್ರಾಂ ಸಾಮ್ರಾಜ್ಯಕ್ಕೆ ಕೊಹ್ಲಿ ಅಧಿಪತಿ

ಕ್ರಿಕೆಟ್​ ಲೋಕದ ಕಿಂಗ್​, ಮಾಡ್ರನ್​ ಕ್ರಿಕೆಟ್​ ದೊರೆ ಕ್ರಿಕೆಟ್​ ಲೋಕದ ಸುಲ್ತಾನ ಮಾತ್ರವಲ್ಲ. ಆಫ್​ ದ ಫೀಲ್ಡ್​ನಲ್ಲೂ ರಾಜನೇ. ಇನ್ಸ್​​ಸ್ಟಾಗ್ರಾಂ ಸಾಮ್ರಾಜ್ಯಕ್ಕಂತೂ ಕೊಹ್ಲಿಯೇ ಅಧಿಪತಿ. ಕಿಂಗ್​ ಕೊಹ್ಲಿಯ ಮುಂದೆ ವಿಶ್ವದ ಯಾವೊಬ್ಬ ಕ್ರಿಕೆಟರ್​ ಕೂಡ ಲೆಕ್ಕಕ್ಕೇ ಇಲ್ಲ. ವಿರಾಟ್​ ಕೊಹ್ಲಿಯ ದರ್ಬಾರ್​ನ ಮುಂದೆ ದಿಗ್ಗಜ ಕ್ರಿಕೆಟರ್ಸ್​​​ ಎಲ್ಲಾ ಸೈಡ್​ಲೈನ್​ ಆಗಿದ್ದಾರೆ. 

ವಿರಾಟ್ ಕೊಹ್ಲಿ.. ಮಾಡ್ರನ್ ಡೇ ಕ್ರಿಕೆಟ್ ಲೋಕದ ರಿಯಲ್​ ಕಿಂಗ್. ಕ್ರಿಕೆಟ್​​ ಲೋಕದ ಸುಲ್ತಾನ ಎಂದೇ ಕರೆಸಿಕೊಳ್ಳೋ ವಿರಾಟ್ ಕೊಹ್ಲಿ ರನ್​ಗಳಿಕೆಯಲ್ಲಿ​ ಮಾಡದ ದಾಖಲೆಗಳಿಲ್ಲ. ಫೀಲ್ಡಿಂಗ್, ಫಿಟ್ನೆಸ್ ವಿಚಾರದಲ್ಲೂ ಕಿಂಗ್​​ ಕೊಹ್ಲಿಯನ್ನ ಮೀರಿಸುವವರಿಲ್ಲ. ಈ ಕಿಂಗ್ ಕೊಹ್ಲಿ ಆನ್​​ಫೀಲ್ಡ್​ನಲ್ಲಿ ಮಾತ್ರವಲ್ಲ... ಆಫ್ ದ ಫೀಲ್ಡ್​ನ ಅಧಿಪತಿಯೂ ಹೌದು.! 

ಕೊಹ್ಲಿ ಕ್ರೇಜ್​ ಕಂಡು ದಂಗಾದ ಕ್ರಿಕೆಟ್​ ಲೋಕ

ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಯನ್ನಾಡಲು ಮೊನ್ನೆ ವಿರಾಟ್​ ಕೊಹ್ಲಿ, ವಡೋದರಾಗೆ ಬಂದ್ರು. ವಡೋದರಾ ಏರ್​​ಪೋರ್ಟ್​ನಿಂದ ವಿರಾಟ್​ ಹೊರ ಬರ್ತಿದ್ದಂತೆ, ಅಭಿಮಾನಿಗಳು ಮುತ್ತಿಗೆ ಹಾಕಿ ಬಿಟ್ರು. ಫ್ಯಾನ್ಸ್​ ಮಧ್ಯೆ ಸಿಲುಕಿ ಹೊರ ಬರೋದ್ರೋಳಗೆ ಕೊಹ್ಲಿಯೇ ಸುಸ್ತಾಗಿ ಹೋದ್ರು. ಭದ್ರತಾ ಸಿಬ್ಬಂದಿ ಫ್ಯಾನ್ಸ್​ ಚದುರಿಸೋಕೆ ಆಗದೇ ಹೈರಾಣಾದ್ರು. ಕೊಹ್ಲಿಗಿರೋ ಈ ಕ್ರಿಕೆಟ್​ ಲೋಕವೇ ದಂಗಾಗಿ ಹೋಗಿದೆ. ಆನ್​​ ಫೀಲ್ಡ್​ನಲ್ಲಿ ಮಾತ್ರವಲ್ಲ.. ಆಫ್​​ ದ ಫೀಲ್ಡ್​ನಲ್ಲೂ ಕೊಹ್ಲಿಯೇ ಕಿಂಗ್​ ಅನ್ನೋದಕ್ಕೆ ಇದೊಂದು ಎಕ್ಸಾಂಪಲ್​​.

ಇದನ್ನೂ ಓದಿ:ಡಲ್‌ ಹೊಡೆದ ಗಿಲ್ಲಿ.. ಕೊನೆ ಕ್ಷಣದಲ್ಲಿ ಗೇಮ್‌ ಚೇಂಜರ್‌ ಆದ್ರಾ ಅಶ್ವಿನಿ ಗೌಡ..?

Virat kohli (4)

ಕ್ರಿಕೆಟ್​ ಲೋಕದಂತೆ, ಸೋಷಿಯಲ್​ ಮೀಡಿಯಾದಲ್ಲೂ ವಿರಾಟ್​ ಕೊಹ್ಲಿ ತನ್ನದೇ ಸಾಮ್ರಾಜ್ಯವನ್ನೇ ಕಟ್ಟಿಕೊಂಡಿದ್ದಾರೆ. ಅದ್ರಲ್ಲೂ ಇನ್ಸ್​​ಸ್ಟಾಗ್ರಾಂ ಸಾಮ್ರಾಜ್ಯಕ್ಕೆ ವಿರಾಟ್​ ಕೊಹ್ಲಿಯೇ ಅಧಿಪತಿಯಾಗಿ ಮರೆದಾಡ್ತಿದ್ದಾರೆ. ಇನ್ಸ್​​ಸ್ಟಾಗ್ರಾಂನಲ್ಲಿರೋ ವಿಶ್ವದ ಮೋಸ್ಟ್​ INFLUENTIAL ಕ್ರಿಕೆಟರ್​ ಯಾರು ಎಂಬ ಸರ್ವೆ ರಿಪೋರ್ಟ್​ ಹೊರಬಿದ್ದಿದೆ. ಇದ್ರಲ್ಲಿ ಕೊಹ್ಲಿಗಿರುವಷ್ಟು ಕ್ರೇಜ್​, ವಿಶ್ವದ ಯಾವ ಕ್ರಿಕೆಟರ್​ಗೂ ಇಲ್ಲ ಅನ್ನೋದು ಮತ್ತೊಮ್ಮೆ ಬಹಿರಂಗವಾಗಿದೆ. ವಿಶ್ವದ ಹಾಲಿ-ಮಾಜಿ ಕ್ರಿಕೆಟರ್ಸ್​​​ಗಳೆಲ್ಲಾ ಕೊಹ್ಲಿಯ ದರ್ಬಾರ್​ ಮುಂದೆ ಸೈಡ್​​ಲೈನ್​ ಆಗಿದ್ದಾರೆ. ಕೊಹ್ಲಿ MOST INFLUENTIAL CRICKETER IN THE WORLD ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ವಿಶ್ವಕ್ಕೇ ವಿರಾಟ್​​ ಸುಲ್ತಾನ..!

ಹೊಸ ಸರ್ವೆ ರಿಪೋರ್ಟ್​​ನ ಪ್ರಕಾರ 270 ಮಿಲಿಯನ್​ ಫಾಲೋವರ್ಸ್​ ಹೊಂದಿರೋ ವಿರಾಟ್​​ ಕೊಹ್ಲಿ, MOST INFLUENTIAL INDIAN ಎಂಬ ಪಟ್ಟವನ್ನ ಏರಿದ್ದಾರೆ. ಅಂದ್ಹಾಗೆ ಕೊಹ್ಲಿಯ ಪ್ರಭಾವ ಕೇವಲ ಭಾರತಕ್ಕೆ ಮಾತ್ರ ಸೀಮೀತವಾಗಿಲ್ಲ. ಏಷ್ಯಾಗೇ ಕೊಹ್ಲಿ ಕಿಂಗ್​ ಅನಿಸಿದ್ದಾರೆ. MOST INFLUENTIAL INDIAN ಮಾತ್ರವಲ್ಲ.. ಇನ್ಸ್​​ಸ್ಟಾಗ್ರಾಂನಲ್ಲಿರೋ MOST INFLUENTIAL ASIAN ಕೂಡ ಹೌದು ಎಂದು ಹೊಸ ಸರ್ವೇ ರಿಪೋರ್ಟ್​ ಹೇಳ್ತಿದೆ. 

ಇದನ್ನೂ ಓದಿ:ಕೊನೆಯ 4 ಎಸೆತದಲ್ಲಿ 18 ರನ್ಸ್‌ ಅಗತ್ಯ ಇತ್ತು.. 6, 4, 6, 4 ಬಾರಿಸಿ ಇತಿಹಾಸ ನಿರ್ಮಿಸಿದ RCB ಸ್ಟಾರ್‌..!

Virat kohli (1)

ಇನ್ಸ್​​ಸ್ಟಾಗ್ರಾಂನಲ್ಲಿರೋ ವಿಶ್ವದ ಮೋಸ್ಟ್​ INFLUENTIAL ವ್ಯಕ್ತಿಗಳ ಪಟ್ಟಿಯಲ್ಲಿ ಕೊಹ್ಲಿ 6ನೇ ಸ್ಥಾನದಲ್ಲಿದ್ದಾರೆ. ಅಥ್ಲೀಟ್​ಗಳ ಪಟ್ಟಿಯಲ್ಲಿ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ. ಫುಟ್ಬಾಲ್​ ತಾರೆಗಳಾದ ಕ್ರಿಸ್ಟಿಯಾನೋ ರೊನಾಲ್ಡೋ, ಲಿಯೋನಲ್​ ಮೆಸ್ಸಿ ನಂತರದ ಸ್ಥಾನದಲ್ಲಿರೋದೆ ವಿರಾಟ್​​ ಕೊಹ್ಲಿ. ಕೊಹ್ಲಿ ಬಿಟ್ರೆ ಯಾವೊಬ್ಬ ಕ್ರಿಕೆಟರ್​ ಕೂಡ ಟಾಪ್​ 10 ಲಿಸ್ಟ್​ನಲ್ಲಿ ಇಲ್ಲ.. 

1 ಇನ್ಸ್​​​ಸ್ಟಾ ಪೋಸ್ಟ್​ ಬೆಲೆ 12 ರಿಂದ 14 ಕೋಟಿಗೆ ಏರಿಕೆ

ಕೊಹ್ಲಿಗಿರೋವಷ್ಟು Followers, ​ಸೋಷಿಯಲ್ ಮೀಡಿಯಾ INCOME ಯಾವ ಕ್ರಿಕೆಟರ್​ಗೂ ಇಲ್ಲ. ಸೋಷಿಯಲ್ ಮೀಡಿಯಾದಿಂದಲೇ ಕೋಟಿ ಕೋಟಿ ಆದಾಯ ಗಳಿಸ್ತಿದ್ದಾರೆ. ಇನ್ಸ್​​​ಸ್ಟಾಗ್ರಾಂನಲ್ಲಿ ಕೊಹ್ಲಿ ಮಾಡೋ ಒಂದು ಪೋಸ್ಟ್​ನ ಬೆಲೆ ಬರೋಬ್ಬರಿ 14 ಕೋಟಿ. 2023ರಲ್ಲಿ ಕೊಹ್ಲಿ ಒಂದು ಕಮರ್ಷಿಯಲ್​ ಪೋಸ್ಟ್​ ಮಾಡೋಕೆ 11ರಿಂದ 12 ಕೋಟಿ ತೆಗೆದುಕೊಳ್ತಾ ಇದ್ರು. 2026ರ ಆರಂಭದಲ್ಲೇ ಈ ಬೆಲೆ ಮತ್ತಷ್ಟು ಹೆಚ್ಚಾಗಿದೆ. ಸದ್ಯದ ಮಾಹಿತಿ ಪ್ರಕಾರ ಕೊಹ್ಲಿ ಈಗ ಒಂದು ಕಮರ್ಷಿಯಲ್​ ಪೋಸ್ಟ್​​ ಮಾಡೋಕೆ ಬರೋಬ್ಬರಿ 14 ಕೋಟಿ ಚಾರ್ಜ್​ ಮಾಡ್ತಾರಂತೆ. 

ವಿರಾಟ್ ಕೊಹ್ಲಿ​ ಈಗ ಟೆಸ್ಟ್​, ಟಿ20ಗೆ ಗುಡ್​ ಬೈ ಹೇಳಿ ಏಕದಿನಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಒನ್​ ಡೇ ಹಾಗೂ ಐಪಿಎಲ್​ಗೆ ಮಾತ್ರ ಸೀಮಿತವಾಗಿರೋ ಕೊಹ್ಲಿಯ ದರ್ಶನವಾಗೋದು ವರ್ಷದಲ್ಲಿ ಕೆಲ ತಿಂಗಳು ಮಾತ್ರ. ಆದ್ರೆ, ಕ್ರೇಜ್​ ಮಾತ್ರ ಕಡಿಮೆಯಾಗಿಲ್ಲ. ವಿರಾಟ್​ ಕೊಹ್ಲಿ ಅನ್ನೋ ಹೆಸರಿಗಿರೋ ಶಕ್ತಿನೇ ಬೇರೆ. ಈ ಹೆಸರೇ ಒಂದು ಬ್ರ್ಯಾಂಡ್​​. ಎಲ್ಲಾ ಫಾರ್ಮೆಟ್​ ಆಡಲಿ ಅಥವಾ ಕೆಲವೇ ಫಾರ್ಮೆಟ್​​ ಆಡಲಿ ಕೊಹ್ಲಿ ಕೊಹ್ಲಿನೇ. ಈ ಇನ್ಸ್​​ಸ್ಟಾಗ್ರಾಂ ಹೊಸ ಸರ್ವೆ ರಿಪೋರ್ಟ್ ಕೊಹ್ಲಿಯ ಗತ್ತನ್ನ ಮತ್ತೊಮ್ಮೆ ಜಗಜ್ಜಾಹೀರು ಮಾಡಿರೋದು ಸುಳ್ಳಲ್ಲ. 

ಇದನ್ನೂ ಓದಿ: ಮಗನಿಗೆ 'ಶೇಖರ್‌' ಎಂದು ಹೆಸರಿಟ್ಟ ಮಸ್ಕ್‌.. ಭಾರತದ ಮಹಾನ್‌ ವ್ಯಕ್ತಿಯ ಸಾಧನೆಯೇ ಈ ಹೆಸರಿಡಲು ಸ್ಫೂರ್ತಿ..!


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Virat Kohli
Advertisment