ಮಗನಿಗೆ 'ಶೇಖರ್‌' ಎಂದು ಹೆಸರಿಟ್ಟ ಮಸ್ಕ್‌.. ಭಾರತದ ಮಹಾನ್‌ ವ್ಯಕ್ತಿಯ ಸಾಧನೆಯೇ ಈ ಹೆಸರಿಡಲು ಸ್ಫೂರ್ತಿ..!

ಮಸ್ಕ್ ಇತ್ತೀಚೆಗೆ ತಮ್ಮ ಮಗನ ಹೆಸರು ಬಹಿರಂಗಪಡಿಸಿದ್ದಾರೆ. ಮಗನಿಗೆ ʼಶೇಖರ್ʼ ಎಂದು ಹೆಸರಿಟ್ಟಿದ್ದಾರೆ. ಮಸ್ಕ್‌ ತಮ್ಮ ಮಗನ ಹೆಸರನ್ನು ಬಹಿರಂಗಪಡಿಸುತ್ತಿದ್ದಂತೆಯೇ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗುತ್ತಿದೆ. ಹೆಸರಿನ ಹಿಂದಿರುವ ಭಾರತದ ಕನೆಕ್ಷನ್‌ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸ್ತಿದ್ದಾರೆ.

author-image
Ganesh Kerekuli
Elon Musk
Advertisment

ಟೆಸ್ಲಾ ಮತ್ತು ಎಕ್ಸ್ ಸಿಇಒ ಎಲಾನ್ ಮಸ್ಕ್ (Elon Musk) ಪ್ರತಿದಿನ ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ಕೆಲವೊಮ್ಮೆ ಅವರ ಬ್ಯುಸಿನೆಸ್‌ ವಿಚಾರಕ್ಕೆ, ಇನ್ನೂ ಕೆಲವೊಮ್ಮೆ ಇತರ ಕಾರಣಗಳಿಂದ. ಅಂತೆಯೇ ಮಸ್ಕ್‌  ಮತ್ತೊಮ್ಮೆ ಹೆಡ್‌ಲೈನ್‌ ಆಗಿದ್ದಾರೆ. ಈ ಬಾರಿ ತಂತ್ರಜ್ಞಾನ, ರಾಕೆಟ್ ಉಡಾವಣೆಗಳು ಅಥವಾ ವ್ಯವಹಾರ ಒಪ್ಪಂದಗಳಿಗಾಗಿ ಅಲ್ಲ. ತಮ್ಮ ಮಗನ ಹೆಸರಿನಿಂದ.  


ಮಸ್ಕ್ ಇತ್ತೀಚೆಗೆ ತಮ್ಮ ಮಗನ ಹೆಸರನ್ನು ಬಹಿರಂಗಪಡಿಸಿದ್ದಾರೆ. ಅವರು ಮಗನಿಗೆ ʼಶೇಖರ್ʼ ಎಂದು ಹೆಸರಿಟ್ಟಿದ್ದಾರೆ. ಮಸ್ಕ್‌  ತಮ್ಮ ಮಗನ ಹೆಸರನ್ನು ಬಹಿರಂಗಪಡಿಸುತ್ತಿದ್ದಂತೆಯೇ ಸೋಶಿಯಲ್‌ ಮೀಡಿಯಾದಲ್ಲಿ ಈ ಹೆಸರು  ಟ್ರೆಂಡ್‌ ಆಗುತ್ತಿದೆ. ಹೆಸರಿನ ಹಿಂದಿರುವ ಭಾರತದ ಕನೆಕ್ಷನ್‌ ಬಗ್ಗೆ ತಿಳಿದುಕೊಳ್ಳಲು ಜನ ಗೂಗಲ್‌ ಮೊರೆ ಹೋಗಿದ್ದಾರೆ. 

ಇದನ್ನೂ ಓದಿ: ಬಿಗ್‌ ಬಾಸ್‌ ನಂತರ ಮುಂದೇನು..? ಕಲರ್ಸ್‌ನಿಂದ ವೀಕ್ಷಕರಿಗೆ ಭರ್ಜರಿ ನ್ಯೂಸ್‌..!
 

ಮಂಗಳನ ಅಂಗಳಕ್ಕೆ ತಲುಪಲಿದೆ ಎಲಾನ್ ಮಸ್ಕ್​​ನ ಸ್ಟಾರ್​ಶಿಪ್​.. ಮಾನವ ಸಮೇತ ಯಾನ ಯಾವಾಗ?

ಮಸ್ಕ್‌ ತಮ್ಮ ಎಕ್ಸ್‌ ಅಕೌಂಟ್‌ನಲ್ಲಿ ಅವಳಿ ಮಕ್ಕಳೊಂದಿಗೆ ಇರುವ ಫೋಟೋ ಹಂಚಿಕೊಂಡಿದ್ದಾರೆ. ಇದೇ ಪೋಸ್ಟ್‌ನಲ್ಲಿ ಮಗನ ಹೆಸರು ಬಹಿರಂಗ ಮಾಡಿದ್ದಾರೆ. ಮಕ್ಕಳ ಪೂರ್ಣ ಹೆಸರುಗಳನ್ನು ಬಹಿರಂಗಪಡಿಸಿರುವ ಅವರು, ಸ್ಟ್ರೈಡರ್ ಶೇಖರ್  ( Strider Sekhar) ಮತ್ತು ಮಗಳು ಕಾಮೆಟ್ ಅಜೂರ್  ಎಂದು ಬರೆದುಕೊಂಡಿದ್ದಾರೆ. ಮಗನ ಮಧ್ಯದ ಹೆಸರು ಶೇಖರ್, ಮಹಾನ್ ಭಾರತೀಯ ವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರ್ (Subrahmanyan Chandrasekhar) ಅವರಿಂದ ಸ್ಫೂರ್ತಿ ಪಡೆದಿದೆ. ಚಂದ್ರಶೇಖರ್ ವಿಜ್ಞಾನ ಜಗತ್ತಿನಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. 1983 ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು ಎಂದು ಮಸ್ಕ್ ಹೇಳಿದ್ದಾರೆ. ಮಸ್ಕ್ ತಮ್ಮ ಮಗನ ಮೊದಲ ಹೆಸರು ಸ್ಟ್ರೈಡರ್. ಇದು ಜೆ.ಆರ್.ಆರ್. ಟೋಲ್ಕಿನ್ ಅವರ ಪುಸ್ತಕ, ದಿ ಲಾರ್ಡ್ ಆಫ್ ದಿ ರಿಂಗ್ಸ್‌ನ ಅರಾಗೋರ್ನ್ ಪಾತ್ರದಿಂದ ಬಂದಿದೆ ಎಂದು ಬಹಿರಂಗಪಡಿಸಿದ್ದಾರೆ. ಆದರೆ ಶೇಖರ್ ಎಂಬ ಹೆಸರು ವಿಜ್ಞಾನ ಮತ್ತು ವೈಜ್ಞಾನಿಕ ಗೌರವದೊಂದಿಗೆ ಸಂಬಂಧಿಸಿದೆ. ಅವರ ಪಾಲುದಾರ ಶಿವೋನ್ ಗಿಲ್ಲಿಸ್ ಭಾರತದಲ್ಲಿ ಕುಟುಂಬ ಹೊಂದಿದ್ದಾರೆ. ಅದಕ್ಕಾಗಿಯೇ ಈ ಹೆಸರು ಭಾರತೀಯ ಸಂಪರ್ಕವನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ. 

ಎಲೋನ್ ಮಸ್ಕ್ ಮಗನ ಹೆಸರಿನ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಜನ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿ ಕಾಮೆಂಟ್‌ ಮಾಡ್ತಿದ್ದಾರೆ. ಕೆಲವು ಬಳಕೆದಾರರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಎಲೋನ್ ಮಸ್ಕ್ ಭಾರತ ಮತ್ತು ಅದರ ಸಂಸ್ಕೃತಿಯನ್ನು ಗೌರವಿಸುತ್ತಾರೆ. ಇದು ಹೆಮ್ಮೆಯ ವಿಷಯ ಎಂದು ಕೆಲವರು ಬರೆದಿದ್ದಾರೆ. ಅದರಲ್ಲೂ ವಿಶೇಷವಾಗಿ ಭಾರತೀಯ ಬಳಕೆದಾರರು ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ಕೆಲಸ ಮತ್ತು ಸಾಧನೆಗಳ ಬಗ್ಗೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಡಲ್‌ ಹೊಡೆದ ಗಿಲ್ಲಿ.. ಕೊನೆ ಕ್ಷಣದಲ್ಲಿ ಗೇಮ್‌ ಚೇಂಜರ್‌ ಆದ್ರಾ ಅಶ್ವಿನಿ ಗೌಡ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Elon Musk Strider Sekhar
Advertisment