/newsfirstlive-kannada/media/media_files/2025/10/26/kiccha-sudeep-7-2025-10-26-16-08-17.jpg)
ಒಂದ್ಕಡೆ ಬಿಗ್‌ಬಾಸ್ನಲ್ಲಿ ಗೆಲ್ಲೋರು ಯಾರು ಅನ್ನೋ ಚಿಂತೆಯಾದ್ರೆ, ಇನ್ನೊಂದ್ಕಡೆ, ಬಿಗ್‌ಬಾಸ್ ಮುಗಿಯುತ್ತಿದ್ದೆಯಲ್ಲಾ ಅನ್ನೋ ಕೊರಗು ಹಲವು ವೀಕ್ಷಕರಲ್ಲಿ. ಪ್ರತಿ ವರ್ಷ ಬಿಗ್‌ಬಾಸ್ ಮುಗಿಯುವಾಗ ವೀಕ್ಷಕರು ಇದೇ ರೀತಿ ಫೀಲ್ ಮಾಡ್ತಾರೆ. ಹಾಗಂತಾ ಚಾನಲ್‌ನವ್ರು ಬೇರೇನೂ ಪ್ಲಾನ್ ಮಾಡಿಲ್ಲ ಅಂದ್ಕೋಬೇಡಿ. ಮಾಡಿದ್ದಾರೆ. ಈ ಬಾರಿ ಭರ್ಜರಿಯಾಗಿಯೇ ಮಾಡಿದ್ದಾರೆ.
ಸಾಧುಕೋಕಿಲಾ! ಟಾಕಿಂಗ್ ಸ್ಟಾರ್ ಸೃಜನ್! ಪಂಚಿಂಗ್ ಸ್ಟಾರ್ ಶ್ರುತಿ ಮೇಡಂ! ಇವ್ರೆಲ್ಲಾ ಬಿಗ್ಬಾಸ್ ಮುಗಿದ್ಮೇಲೆ ನಿಮ್ಮ ಮನೆಗೆ ಪಕ್ಕಾ ಬರ್ತಾರೆ. ಇವ್ರು ಮಾತ್ರವಲ್ಲ, ಬಿಗ್‌ಬಾಸ್ ಮುಗಿದ್ಮೇಲೆ, ವೀಕೆಂಡ್‌ನಲ್ಲಿ ನಕ್ಕು ನಲಿಸಲು ಗಿಚ್ಚಿಗಿಲಿಗಿಲಿ ತಂಡ ಬರ್ತಿದೆ. ಈ ಬಾರಿ ನಗಿಸೋಕೆ ಬರ್ತಿರೋರು ಪುಟಾಣಿಗಳು ಅನ್ನೋದೇ ಸ್ಪೆಷಲ್.
ಈ ಬಾರಿ ರಾಜ್ಯಾದ್ಯಂತ ಆಡಿಷನ್ ನಡೆಸಿ, ಹಲವು ಮಕ್ಕಳನ್ನ ಸೆಲೆಕ್ಟ್ ಮಾಡಲಾಗಿದೆ. ಆ ಪುಟಾಣಿಗಳೆಲ್ಲಾ ಮೊದಲ ಎಪಿಸೋಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 6 ರಿಂದ 10 ವರ್ಷದೊಳಗಿನ ಮಕ್ಕಳನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ಕೇವಲ ಮಕ್ಕಳು ಮಾತ್ರವಲ್ಲ, ಸೀನಿಯರ್ಸ್ ಕೂಡ ಇರ್ತಾರೆ. ದೊಡ್ಡವರು ಮತ್ತು ಪುಟಾಣಿಗಳು ಸೇರಿ ಇನ್ಮೇಲೆ, ನಿಮ್ಮನ್ನ ರಂಜಿಸಲಿದ್ದಾರೆ.
ಈ ಬಾರಿಯ ವಿಶೇಷತೆ, ಅನುಪಮಾ ಗೌಡ ಈ ಶೋನ ನಿರೂಪಕಿಯಾಗಿದ್ದಾರೆ. ನಿರಂಜನ್ ದೇಶಪಾಂಡೆ ಜ್ಹೀಗೆ ಜಂಪ್ ಆಗಿರೋದರಿಂದ, ಅನುಪಮಾ ಗೌಡ, ಗಿಚ್ಚಿ ಗಿಲಿಗಿಲಿಯ ಸಾರಥ್ಯವಹಿಸಲಿದ್ದಾರೆ. ಬಿಗ್‌ಬಾಸ್ ನಂತರ ಗಿಚ್ಚಿ ಗಿಲಿಗಿಲಿ ನೋಡಿ ಎಂಜಾಯ್ ಮಾಡಬಹುದು.
ಇದನ್ನೂ ಓದಿ: ಡಲ್ ಹೊಡೆದ ಗಿಲ್ಲಿ.. ಕೊನೆ ಕ್ಷಣದಲ್ಲಿ ಗೇಮ್ ಚೇಂಜರ್ ಆದ್ರಾ ಅಶ್ವಿನಿ ಗೌಡ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us