/newsfirstlive-kannada/media/media_files/2026/01/10/rcb-2026-01-10-07-13-17.jpg)
ಮಹಿಳಾ ಪ್ರೀಮಿಯರ್ ಲೀಗ್ ಸೀಸನ್-4 (WPL 2026) ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಮುಂಬೈ ಇಂಡಿಯನ್ಸ್ (MI) ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿದೆ. 155 ರನ್‌ಗಳ ಗುರಿ ಬೆನ್ನಟ್ಟಿದ ಸ್ಮೃತಿ ಮಂದಾನ ಮತ್ತು ಗ್ರೇಸ್ ಹ್ಯಾರಿಸ್ ಉತ್ತಮ ಆರಂಭ ನೀಡಿದರು. ಆದರೆ ಆರಂಭಿಕ ಜೋಡಿ 40 ರನ್‌ಗಳಿಗೆ ವಿಕೆಟ್ ಕಳೆದುಕೊಂಡ ನಂತರ ತಂಡವು ಸಂಕಷ್ಟಕ್ಕೆ ಸಿಲುಕಿತ್ತು. ಮುಂಬೈ ಇಂಡಿಯನ್ಸ್ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಅಂತೆಯೇ ಕೊನೆಯ ಓವರ್‌ನವರೆಗೂ ಮುಂಬೈ ಇಂಡಿಯನ್ಸ್ ಗೆಲುವಿನ ಸನಿಹದಲ್ಲಿತ್ತು. ಆದರೆ ನಾಡಿನ್ ಡಿ ಕ್ಲರ್ಕ್ (Nadine de Klerk) ಕೊನೆಯ ನಾಲ್ಕು ಎಸೆತಗಳಲ್ಲಿ ಪಂದ್ಯವನ್ನು ತಿರುಗಿಸಿದರು.
ಇದನ್ನೂ ಓದಿ: ಶಬರಿಮಲೆ ದೇವಾಲಯ ಚಿನ್ನ ಕಳ್ಳತನ ಕೇಸ್ : ಪ್ರಧಾನ ಅರ್ಚಕರ ಬಂಧಿಸಿದ ಎಸ್‌ಐಟಿ
ಹಾಗಿದ್ದೂ ಇದು ಕೇವಲ ನಾಲ್ಕು ಎಸೆತಗಳ ಕಥೆಯಾಗಿರಲಿಲ್ಲ. ನಾಡಿನ್ ಡಿ ಕ್ಲರ್ಕ್ ಪಂದ್ಯದುದ್ದಕ್ಕೂ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಗೆಲುವಿನ ಬೌಂಡರಿಯನ್ನು ಹೊಡೆಯುವ ಮೊದಲು ಅರ್ಧಶತಕ ಬಾರಿಸಿದರು. ವಿಕೆಟ್‌ಗಳ ಮೇಲೆ ವಿಕೆಟ್ ಬೀಳುತ್ತಿದ್ದರೂ ಒಂದು ಕಡೆ ಕ್ರೀಸ್ ಕಚ್ಚಿ ನಿಂತ ಅವರು ವಿನ್ನಿಂಗ್ಸ್ ಆಡಿದರು.
ಕೊನೆಯ ಓವರ್‌ನಲ್ಲಿ ಏನಾಯಿತು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಲು ಆರು ಎಸೆತಗಳಲ್ಲಿ 18 ರನ್ ಗಳ ಅಗತ್ಯವಿತ್ತು. ಪ್ರೇಮಾ ರಾವತ್ ನಾನ್ ಸ್ಟ್ರೈಕ್ ನಲ್ಲಿದ್ದರು. ಆದ್ದರಿಂದ ನಾಡಿನ್ ಡಿ ಕ್ಲರ್ಕ್ ಮೊದಲ ಎರಡು ಎಸೆತಗಳಲ್ಲಿ ಸುಲಭವಾದ ಸಿಂಗಲ್ಸ್ ಗಳನ್ನು ತಪ್ಪಿಸಿಕೊಂಡರು. ನಟಾಲಿ ಸಿವರ್-ಬ್ರಂಟ್ ಅವರ ಓವರ್‌ನ ಮೂರನೇ ಎಸೆತದಲ್ಲಿ ಅದ್ಭುತ ಸಿಕ್ಸರ್ ಬಾರಿಸಿದರು. ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು. ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಇದರಿಂದಾಗಿ ಆರ್‌ಸಿಬಿಗೆ ಕೊನೆಯ ಎಸೆತದಲ್ಲಿ ಎರಡು ರನ್‌ಗಳು ಬೇಕಾಗಿದ್ದವು. ಕೊನೆಯ ಎಸೆತದಲ್ಲಿ ಫೋರ್ ಬಾರಿಸಿ ಆರ್‌ಸಿಬಿಗೆ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಅವರು 44 ಎಸೆತಗಳಲ್ಲಿ ಎರಡು ಸಿಕ್ಸರ್‌ಗಳು ಮತ್ತು ಏಳು ಬೌಂಡರಿ ಒಳಗೊಂಡಂತೆ ಅಜೇಯ63 ರನ್ ಗಳಿಸಿದರು.
ಇತಿಹಾಸ ನಿರ್ಮಿಸಿದ ಆರ್‌ಸಿಬಿ
ಕಳೆದ ಮೂರು ಋತುಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆವೃತ್ತಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನ್ನ ಕಂಡಿತ್ತು. ಇದೇ ಮೊದಲ ಬಾರಿಗೆ ಮುಂಬೈ ತಂಡವನ್ನು ಮೊದಲ ಪಂದ್ಯದಲ್ಲೇ ಮಣಿಸಿದೆ. ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ಸ್ಮೃತಿ ಮಂದಾನ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 154 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಜೋಡಿ (ಸ್ಮೃತಿ ಮತ್ತು ಗ್ರೇಸ್ ಹ್ಯಾರಿ) 40 ರನ್‌ಗಳ ಜೊತೆಯಾಟ ನೀಡಿದರು. ಅದಾದ ಬಳಿಕ ಆರ್‌ಸಿಬಿ ಬೇಗ ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಡಿನ್ ಡಿ ಕ್ಲರ್ಕ್ (63) ಅರ್ಧಶತಕ ಗಳಿಸಿದರೆ, ಅರುಂಧತಿ ರೆಡ್ಡಿ (20) ಮತ್ತು ಪ್ರೇಮಾ ರಾವತ್ (8) ಸಣ್ಣ ಮತ್ತು ನಿರ್ಣಾಯಕ ಇನ್ನಿಂಗ್ಸ್ ಆಡಿದರು.
ಇದನ್ನೂ ಓದಿ: ಡಲ್ ಹೊಡೆದ ಗಿಲ್ಲಿ.. ಕೊನೆ ಕ್ಷಣದಲ್ಲಿ ಗೇಮ್ ಚೇಂಜರ್ ಆದ್ರಾ ಅಶ್ವಿನಿ ಗೌಡ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us