/newsfirstlive-kannada/media/media_files/2025/09/28/tilak_varma_50-2025-09-28-23-44-06.jpg)
ಟಿ20 ವಿಶ್ವಕಪ್​ ಟೂರ್ನಿ ಆರಂಭಕ್ಕೆ ತಿಂಗಳು ಮುನ್ನವೇ ಟೀಮ್​ ಅನೌನ್ಸ್​ ಮಾಡಿ ರಿಲ್ಯಾಕ್ಸ್​ ಆಗಿದ್ದ ಟೀಮ್​ ಇಂಡಿಯಾ ಸೆಲೆಕ್ಷನ್​ ಕಮಿಟಿಗೆ ಈಗ ಟೆನ್ಶನ್​ ಶುರುವಾಗಿದೆ. ಯುವ ಬ್ಯಾಟ್ಸ್​​ಮನ್​ ತಿಲಕ್​ ವರ್ಮಾ ಇಂಜುರಿ ಸೆಲೆಕ್ಷನ್​ ಕಮಿಟಿಗೆ ಹೊಸ ಟಾಸ್ಕ್​ ತಂದಿಟ್ಟಿದೆ. 3ನೇ ಕ್ರಮಾಂಕದಲ್ಲಿ ಟೀಮ್​ ಇಂಡಿಯಾದ ಬಲವಾಗಿದ್ದ ತಿಲಕ್​ ವರ್ಮಾಗೆ ರಿಪ್ಲೇಸ್​ಮೆಂಟ್​ ಹುಡುಕಾಟ ನಡೀತಿದೆ. ಹೈದ್ರಾಬಾದ್​ ಬ್ಯಾಟರ್​​ ಇಂಜುರಿ ಕರ್ನಾಟಕದ ಆಟಗಾರನಿಗೆ ವರವಾಗೋ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ಕೊನೆಯ 4 ಎಸೆತದಲ್ಲಿ 18 ರನ್ಸ್ ಅಗತ್ಯ ಇತ್ತು.. 6, 4, 6, 4 ಬಾರಿಸಿ ಇತಿಹಾಸ ನಿರ್ಮಿಸಿದ RCB ಸ್ಟಾರ್..!
/filters:format(webp)/newsfirstlive-kannada/media/media_files/2026/01/03/devdutt-padikkal-2026-01-03-17-44-02.jpg)
ತಿಲಕ್​ ವರ್ಮಾ ವಿಶ್ವಕಪ್​ಗೆ ಡೌಟ್
ಸರ್ಜರಿಗೆ ಒಳಗಾಗಿರೋ ತಿಲಕ್​ ವರ್ಮಾ ನ್ಯೂಜಿಲೆಂಡ್​ ಸರಣಿಯ ಮೊದಲ 3 ಪಂದ್ಯಗಳಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಸರಣಿಯ ಉಳಿದ 2 ಪಂದ್ಯಗಳ ವೇಳೆಗೂ ಚೇತರಿಸಿಕೊಳ್ಳೋದು ಅನುಮಾನವಾಗಿದೆ. ಆ ಬಳಿಕ ನಡೆಯೋ ವಿಶ್ವಕಪ್​ ವೇಳೆಗೂ ಕಂಪ್ಲೀಟ್​ ಫಿಟ್​ ಆಗೋದು ಡೌಟ್​ ಅನ್ನೋದು ಮೂಲಗಳ ಮಾಹಿತಿ ಆಗಿದೆ. ಹೀಗಾಗಿ ಬದಲಿ ಆಟಗಾರನ ಹುಡುಕಾಟ ನಡೀತಿದ್ದು, ಸೆಲೆಕ್ಟರ್ಸ್​ ಕಣ್ಣು ಕನ್ನಡಿಗ ದೇವದತ್ ಪಡಿಕ್ಕಲ್​ ಮೇಲೆ ಬಿದ್ದಿದೆ.
3ನೇ ಕ್ರಮಾಂಕದಲ್ಲಿ ಪಡಿಕ್ಕಲ್ ಶೈನ್
ವಿಜಯ್​ ಹಜಾರೆ ಟೂರ್ನಿಯಲ್ಲಿ ಭರ್ಜರಿ ಆಟವಾಡಿದ್ದ ದೇವದತ್​ ಪಡಿಕ್ಕಲ್​ ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಗೆ ಸೆಲೆಕ್ಟ್​ ಆಗ್ತಾರೆ ಅನ್ನೋ ನಿರೀಕ್ಷೆಯಿತ್ತು. ಸ್ಥಾನ ಸಿಗಲಿಲ್ಲ. ಇದೀಗ ಪಡಿಕ್ಕಲ್​ಗೆ ಟಿ20 ತಂಡದಲ್ಲಿ ಸ್ಥಾನ ಸಿಗೋ ಸಾಧ್ಯತೆ ದಟ್ಟವಾಗಿದೆ. ತಿಲಕ್​ ವರ್ಮಾ ಸ್ಥಾನಕ್ಕೆ ದೇವದತ್​ ಪಡಿಕ್ಕಲ್​ ಬೆಸ್ಟ್​​ ರಿಪ್ಲೇಸ್​ಮೆಂಟ್​. ಎಡಗೈ ಬ್ಯಾಟರ್ ಕೂಡ ಹೌದು. 3ನೇ ಕ್ರಮಾಂಕದಲ್ಲಿ ಸಾಮರ್ಥ್ಯ ನಿರೂಪಿಸಿದ ಆಟಗಾರ ಕೂಡ ಹೌದು. ಕಳೆದ ಐಪಿಎಲ್​ನಲ್ಲಿ ಆರ್​​ಸಿಬಿ ಪರ 3ನೇ ಕ್ರಮಾಂಕದಲ್ಲೇ ಆಡಿದ್ದ ಪಡಿಕ್ಕಲ್​ 150.60ರ ಸ್ಟ್ರೈಕ್​ರೇಟ್​ನಲ್ಲಿ ಅಬ್ಬರಿಸಿದ್ರು. 2 ಹಾಫ್​ ಸೆಂಚುರಿ ಸಹಿತ 247 ರನ್​ಗಳಿಸಿ ಶೈನ್​ ಆಗಿದ್ರು.
ಈ ಸೀಸನ್​ನ ಮುಷ್ತಾಕ್​ ಅಲಿ ಟೂರ್ನಿಯಲ್ಲೂ ದೇವದತ್​​ ಪಡಿಕ್ಕಲ್​ ಬ್ಯಾಟ್​ ಸಿಕ್ಕಾಪಟ್ಟೆ ಸೌಂಡ್​ ಮಾಡಿತ್ತು. ಆಡಿದ 6 ಪಂದ್ಯಗಳಲ್ಲೇ ಪಡಿಕ್ಕಲ್ 309 ರನ್​ ಚಚ್ಚಿದ್ರು. 61.80ರ ಸರಾಸರಿಯಲ್ಲಿ ರನ್ ಕೊಳ್ಳೆ ಹೊಡೆದಿದ್ದ ಪಡಿಕ್ಕಲ್​, 1 ಸೆಂಚುರಿ, 2 ಹಾಫ್​ ಸೆಂಚುರಿ ಸಿಡಿಸಿದ್ರು. 167.02ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟಿಂಗ್​ ನಡೆಸಿ ಬೌಲರ್​ಗಳ ಮೇಲೆ ಸವಾರಿ ಮಾಡಿದ್ರು. ಅದೇ ಆಟವನ್ನ ಇದೀಗ ವಿಜಯ್​ ಹಜಾರೆಯಲ್ಲೂ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಒಂದು ಇನ್​ಸ್ಟಾ ಪೋಸ್ಟ್​​ಗೆ ಕೊಹ್ಲಿ ಎಷ್ಟು ಕೋಟಿ ಚಾರ್ಜ್ ಮಾಡ್ತಾರೆ..?
/filters:format(webp)/newsfirstlive-kannada/media/media_files/2026/01/05/devudatta-padikkal-2026-01-05-13-13-42.jpg)
ನಡೀತಿರೋ ಈ ಸೀಸನ್​ನ ವಿಜಯ್​ ಹಜಾರೆ ಟೂರ್ನಿಯಲ್ಲಿ ಪಡಿಕ್ಕಲ್​ ಪರಾಕ್ರಮ ಮೆರೆಯುತ್ತಿದ್ದಾರೆ. ಡ್ರೀಮ್​ ಫಾರ್ಮ್​ನಲ್ಲಿರೋ ಕನ್ನಡಿಗ, ಬೌಲರ್​ಗಳನ್ನ ಬೆಂಡೆತ್ತಿ ಲೀಲಾಜಾಲವಾಗಿ ರನ್​ಗಳಿಸ್ತಾ ಇದ್ದಾರೆ. ಪಡಿಕ್ಕಲ್​ ಪರಾಕ್ರಮಕ್ಕೆ ಬೌಲರ್​​ಗಳು ಥಂಡಾ ಹೊಡೆದಿದ್ದಾರೆ. ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಲ್ಲೇ ಪಡಿಕ್ಕಲ್​ 4 ಸೆಂಚುರಿ ಸಿಡಿಸಿ ಮಿಂಚಿದ್ದಾರೆ.
ವಿಜಯ್​​ ಹಜಾರೆ ಟೂರ್ನಿಯಲ್ಲಿ ದೇವದತ್​ ಪಡಿಕ್ಕಲ್​ ಡ್ರೀಮ್​ ಫಾರ್ಮ್​ನಲ್ಲಿ ಬ್ಯಾಟಿಂಗ್​ ನಡೆಸ್ತಾ ಇದ್ದಾರೆ. ಈ ಸೀಸನ್​ನಲ್ಲಿ ಆಡಿರೋ 7 ಪಂದ್ಯಗಳಲ್ಲಿ 4 ಸೆಂಚುರಿ ಸಿಡಿಸಿರೋ ಪಡಿಕ್ಕಲ್​, 1 ಹಾಫ್​ ಸೆಂಚುರಿಯನ್ನೂ ಚಚ್ಚಿದ್ದಾರೆ. ಬರೋಬ್ಬರಿ 91.42ರ ರನ್​ಗಳಿಕೆಯ ಸರಾಸರಿ ಹೊಂದಿದ್ದಾರೆ. 640 ರನ್​ಗಳೊಂದಿಗೆ ಟಾಪ್​ ಸ್ಕೋರರ್​ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಒಟ್ಟಿನಲ್ಲಿ ಕಳೆದೊಂದು ವರ್ಷದಿಂದ ದೇವದತ್​ ಪಡಿಕ್ಕಲ್​ ಭರ್ಜರಿ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಕನ್ಸಿಸ್ಟೆಂಟ್​ ಆಗಿ ರನ್​ಗಳಿಸಿರೋ ಪಡಿಕ್ಕಲ್​ ಕಡೆಗೆ ಕೊನೆಗೂ ಸೆಲೆಕ್ಟರ್ಸ್​ ಕಣ್ಣು ತಿರುಗಿದೆ. ವಿಶ್ವಕಪ್ ವೇಳೆಗೆ ತಿಲಕ್​ ವರ್ಮಾ ಫುಲ್​ ಫಿಟ್​ ಆಗದಿದ್ರೆ ದೇವದತ್​​ ಪಡಿಕ್ಕಲ್ ಅವಕಾಶ ಸಿಗುವಂತಾಗಲಿ.
ಇದನ್ನೂ ಓದಿ:10 ತಿಂಗಳ ಮಗು ಕೊಂದು ತಾಯಿಯಿಂದ ದುಡುಕಿನ ನಿರ್ಧಾರ! ಸುಂದರಿಯ ಬಾಳಿನಲ್ಲಿ ಆಗಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us