ವಿಶ್ವಕಪ್ ಹೊಸ್ತಿಲಲ್ಲಿ ಟೀಂ ಇಂಡಿಯಾಗೆ ಆಘಾತ.. ಸ್ಟಾರ್ ಬ್ಯಾಟರ್​​​ಗೆ ಗಾಯ..!

ಟಿ20 ವಿಶ್ವಕಪ್​ ಟೂರ್ನಿಗೆ ಕೇವಲ 4 ವಾರಗಳು ಬಾಕಿ ಇರುವಾಗಲೇ ಟೀಮ್​ ಇಂಡಿಯಾಗೆ ಹೊಸ ಆಘಾತ ಎದುರಾಗಿದೆ. ಸಾಲಿಡ್​ ಫಾರ್ಮ್​ನಲ್ಲಿದ್ದ ಬ್ಯಾಟರ್​ ತಿಲಕ್​ ವರ್ಮಾ ಗಂಭೀರ ಇಂಜುರಿಗೆ ತುತ್ತಾಗಿ ಸರ್ಜರಿಗೆ ಒಳಗಾಗಿದ್ದಾರೆ. ತಿಲಕ್​ ವರ್ಮಾ ಇಂಜುರಿ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​​ ಹೆಡ್ಡೇಕ್​ಗೆ ಕಾರಣವಾಗಿದೆ.

author-image
Ganesh Kerekuli
Team india (16)
Advertisment
  • ವಿಶ್ವಕಪ್​ಗೆ 4 ವಾರಕ್ಕೂ ಮುನ್ನ ಟೀಮ್​ ಇಂಡಿಯಾಗೆ ಹಿನ್ನಡೆ
  • ಗಂಭೀರ ಇಂಜುರಿಗೆ ತುತ್ತಾದ ಬ್ಯಾಟ್ಸ್​ಮನ್ ತಿಲಕ್​ ವರ್ಮಾ
  • ರಾಜ್​​ಕೋಟ್​ನಲ್ಲಿ ಸರ್ಜರಿ, 4 ವಾರ ಕ್ರಿಕೆಟ್​ನಿಂದ ಔಟ್​

ಫೆಬ್ರವರಿ 7ರಿಂದ ಆರಂಭವಾಗೋ ಏಷ್ಯಾಕಪ್​ ಟೂರ್ನಿಗೆ ಒಂದು ತಿಂಗಳು ಮೊದಲೇ ಟೀಮ್​ ಅನೌನ್ಸ್​ಮೆಂಟ್​ ಮಾಡಿದ ಟೀಮ್​ ಇಂಡಿಯಾಗೆ ಹೊಸ ಟೆನ್ಶನ್​ ಶುರುವಾಗಿದೆ. ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ತಿಲಕ್​ ವರ್ಮಾ, ಸೆಲೆಕ್ಷನ್​ ಕಮಿಟಿ ಹಾಗೂ ಟೀಮ್​ ಮ್ಯಾನೇಜ್​ಮೆಂಟ್​ ನಿದ್ದೆಗೆಡಿಸಿದ್ದಾರೆ. ವಿಶ್ವಕಪ್​ ಟೂರ್ನಿಗೆ ಕೇವಲ 4 ವಾರ ಬಾಕಿ ಇರುವಾಗಲೇ ಮೇನ್​ ಪ್ಲೇಯರ್​​ ಇಂಜುರಿಗೆ ತುತ್ತಾಗಿದ್ದು, ಹೆಡ್ ​ಕೋಚ್​ ಗಂಭೀರ್​, ಕ್ಯಾಪ್ಟನ್​ ಸೂರ್ಯಕುಮಾರ್​ ಹೆಡ್ಡೇಕ್​ಗೆ ಕಾರಣವಾಗಿದೆ. 

ಗಂಭೀರ ಇಂಜುರಿಗೆ ತುತ್ತಾದ ತಿಲಕ್​ ವರ್ಮಾ..!

ಎಡಗೈ ಬ್ಯಾಟ್ಸ್​ಮನ್​ ತಿಲಕ್​ ವರ್ಮಾ ಗಂಭೀರ ಇಂಜುರಿಗೆ ತುತ್ತಾಗಿದ್ದಾರೆ. ವಿಜಯ್​ ಹಜಾರೆ ಟೂರ್ನಿಯಲ್ಲಿ ಆಂದ್ರಪ್ರದೇಶ ಪರ ಆಡ್ತಿದ್ದ ತಿಲಕ್​ ವರ್ಮಾ ಟೆಸ್ಟಿಕಲ್ಸ್‌ ಇಂಜುರಿಗೆ ತುತ್ತಾಗಿದ್ದಾರೆ. ನಿನ್ನೆ ಬೆಳಗ್ಗೆ ದಿಢೀರ್​ ನೋವು ಕಾಣಿಸಿಕೊಂಡಿದ್ದು, ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಬಳಿಕ ನಡೆಸಿದ ಟೆಸ್ಟ್​ ಹಾಗೂ ಸ್ಕ್ಯಾನ್​​ನಲ್ಲಿ ಟಸ್ಟಿಕಲ್ಸ್​ ಇಂಜುರಿಗೆ ತುತ್ತಾಗಿರೋದು ತಿಳಿದುಬಂದಿದೆ. 

ಇದನ್ನೂ ಓದಿ: ತಿಲಕ್ ವರ್ಮಾ ಏಕಾಂಗಿ ಹೋರಾಟಕ್ಕೆ ಮಣಿಯಲಿಲ್ಲ ಗೆಲುವು.. ಮುಗ್ಗರಿಸಿದ ಭಾರತ ತಂಡ..!

Tilak varma

4 ವಾರ ಕ್ರಿಕೆಟ್​ನಿಂದ ಔಟ್

ತಿಲಕ್​ ವರ್ಮಾ ಸ್ಕ್ಯಾನ್​ ರಿಪೋರ್ಟ್​ ನೋಡಿದ ಬೆನ್ನಲ್ಲೇ, ಖಾಸಗಿ ಆಸ್ಪತ್ರೆಯ ಡಾಕ್ಟರ್ಸ್​​ ದಿಢೀರ್​ ಸರ್ಜರಿಯಾಗಬೇಕು ಎಂದು ತಿಳಿಸಿದ್ದಾರೆ. ಬಳಿಕ ಬಿಸಿಸಿಐ ಮೆಡಿಕಲ್​ ಟೀಮ್​ನ ಸಲಹೆಯನ್ನ ಪಡೆದು ತಜ್ಙ ವೈದ್ಯರ ತಂಡ ತಿಲಕ್ ವರ್ಮಾ ಸರ್ಜರಿ ಮಾಡಿದೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, 2 ವಾರಗಳ ವಿಶ್ರಾಂತಿಗೆ  ಡಾಕ್ಟರ್ಸ್​ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಕನಿಷ್ಠ 4 ವಾರಗಳ ಕಾಲ ತಿಲಕ್​ ವರ್ಮಾ ಮೈದಾನದಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಸರ್ಜರಿ ಬಗ್ಗೆ ಚೀಫ್​ ಸೆಲೆಕ್ಟರ್​​ ಅಜಿತ್ ಅಗರ್ಕರ್​ಗೆ ಹೈದ್ರಾಬಾದ್​ ಕ್ರಿಕೆಟ್​ ಅಸೋಸಿಯೇಷನ್​ ಮಾಹಿತಿ ರವಾನಿಸಿದೆ. 

ಇದನ್ನೂ ಓದಿ: ಪ್ರೀತಿಯ ಅಣ್ಣನಿಗೆ..’ ನಾರಾ ಲೋಕೇಶ್​ಗೆ ಸ್ಪೆಷಲ್ ಗಿಫ್ಟ್​ ಕೊಟ್ಟ ತಿಲಕ್ ವರ್ಮಾ.. ಏನದು?

BUMRHA_TILAK

ವಿಶ್ವಕಪ್​ಗೆ ಡೌಟ್​

ಸರ್ಜರಿಗೆ ಒಳಗಾಗಿರೋ ತಿಲಕ್​ ವರ್ಮಾ ಮುಂಬರುವ ನ್ಯೂಜಿಲೆಂಡ್​ ವಿರುದ್ಧದ ಸರಣಿಯಿಂದ ಹೊರ ಬೀಳೋದು ಬಹುತೇಕ ಕನ್​​ಫರ್ಮ್​ ಆಗಿದೆ. ನ್ಯೂಜಿಲೆಂಡ್​ ವಿರುದ್ಧದ 5 ಪಂದ್ಯಗಳ ಟಿ20 ಸರಣಿ ಜನವರಿ 21ರಿಂದ ಆರಂಭವಾಗಲಿದ್ದು, ಅಷ್ಟರಲ್ಲಿ ಫಿಟ್​ ಆಗೋದು ಅನುಮಾನವೇ. ಇಷ್ಟೇ ಅಲ್ಲ.. ತಿಂಗಳ ಅಂತರದಲ್ಲಿ ನಡೆಯೋ ಟಿ20 ವಿಶ್ವಕಪ್​ ಟೂರ್ನಿ ವೇಳೆಗೆ ಸಂಪೂರ್ಣ ಚೇತರಿಸಿಕೊಳ್ತಾರಾ ಎಂಬ ಪ್ರಶ್ನೆಯೂ ಹುಟ್ಟಿದೆ. ಸರ್ಜರಿಯಾದ ಬೆನ್ನಲ್ಲೇ, ಮೈದಾನಕ್ಕೆ ಕಮ್​ಬ್ಯಾಕ್​ ಮಾಡಲು ಕನಿಷ್ಠ 4 ವಾರಗಳು ಬೇಕು ಎಂದು ಡಾಕ್ಟರ್ಸ್​​ ತಿಳಿಸಿದ್ದಾರೆ. 4 ವಾರದ ಬಳಿಕ ಫೀಲ್ಡ್​ ಕಮ್​​ಬ್ಯಾಕ್​ ಮಾಡಿದ್ರೂ, ಮ್ಯಾಚ್​ ಫಿಟ್​ನೆಸ್​ ಸಾಧಿಸೋಕೆ ಇನ್ನಷ್ಟು ದಿನ ಬೇಕಾಗಲಿದೆ. ಹೀಗಾಗಿ ತಿಲಕ್ ವರ್ಮಾ ವಿಶ್ವಕಪ್ ಆಡೋದು ಅನುಮಾನವೇ ಆಗಿದೆ. 

ಟೀಮ್​ ಇಂಡಿಯಾಗೆ ಹಿನ್ನಡೆ

ತಿಲಕ್​ ವರ್ಮಾ ಇಂಜುರಿ ಟೀಮ್​ ಮ್ಯಾನೇಜ್​ಮೆಂಟ್​ ಹಾಗೂ ಸೆಲೆಕ್ಷನ್ ಕಮಿಟಿಗೆ ದೊಡ್ಡ ತಲೆನೋವು ತಂದಿಟ್ಟಿದೆ. ತಿಲಕ್​ ವರ್ಮಾ ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ರೆ, ಟೀಮ್ ಇಂಡಿಯಾಗೆ ದೊಡ್ಡ ಮಟ್ಟದ ಹಿನ್ನಡೆಯಾಗಲಿದೆ. ಸಾಲಿಡ್​ ಫಾರ್ಮ್​ನಲ್ಲಿದ್ದ ತಿಲಕ್​ ವರ್ಮಾ, ಏಷ್ಯಾಕಪ್​ ಟೂರ್ನಿಯಲ್ಲಿ ಮ್ಯಾಚ್​ ವಿನ್ನಿಂಗ್​ ಪರ್ಫಾಮೆನ್ಸ್​ ನೀಡಿದ್ರು. ಆಸ್ಟ್ರೇಲಿಯಾ, ಸೌತ್​ ಆಫ್ರಿಕಾ ವಿರುದ್ಧ ಕನ್ಸಿಸ್ಟೆಂಟ್​ ಆಟವಾಡಿ 3ನೇ ಕ್ರಮಾಂಕದ ಬಲವಾಗಿದ್ರು. ಟಾಪ್​ ಕ್ಲಾಸ್​ ಬ್ಯಾಟರ್​ ಹೊರಬಿದ್ರೆ, ಟಾಪ್​ ಆರ್ಡರ್​  ಬ್ಯಾಟಿಂಗ್​ಗೆ ದೊಡ್ಡ ಹೊಡೆತ ಬೀಳಲಿದೆ. 

ಇದನ್ನೂ ಓದಿ: ತಿಲಕ್ ವರ್ಮಾ ರಿಟೈರ್ಡ್ ಔಟ್ ಆಗಿದ್ಕೆ ಸೂರ್ಯ ಶಾಕ್.. ಕೋಚ್ ಜೊತೆ ಆಕ್ರೋಶ VIDEO

TILAK_VARMA_50

ತಿಲಕ್​ ವರ್ಮಾ ಇಂಜುರಿ ಟೀಮ್​ ಇಂಡಿಯಾದ ಕೆಲ ಆಟಗಾರರ ಪಾಲಿಗೆ ಹೊಸ ಆಸೆಯನ್ನ ಚಿಗುರಿಸಿದೆ. ಟಿ20 ತಂಡದಿಂದ ಹೊರಬಿದ್ದಿರೋ ಆಟಗಾರರು ಇದೀಗ ತಿಲಕ್​ ವರ್ಮಾ ರಿಪ್ಲೇಸ್​ಮೆಂಟ್​ ಪ್ಲೇಯರ್​ ಆಗಿ ಕಮ್​ಬ್ಯಾಕ್​ ಎದುರು ನೋಡ್ತಿದ್ದಾರೆ. ವೈಸ್​ ಕ್ಯಾಪ್ಟನ್ ಆಗಿದ್ರೂ ವಿಶ್ವಕಪ್​ ತಂಡದಿಂದ ಡ್ರಾಪ್​ ಆಗಿರೋ ಶುಭ್​ಮನ್​ ಗಿಲ್​ ಪಾಲಿಗೆ ತಿಲಕ್​ ವರ್ಮಾ ಇಂಜುರಿ ಅದೃಷ್ಠದ ಅವಕಾಶ ನೀಡೋ ಸಾಧ್ಯತೆಯಿದೆ. ಗಿಲ್​ ಜೊತೆಗೆ ಶ್ರೇಯಸ್​​ ಅಯ್ಯರ್​, ಋತುರಾಜ್​ ಗಾಯಕ್ವಾಡ್​, ರಿಯಾನ್​ ಪರಾಗ್​ಕೂಡ ಟಿ20 ತಂಡಕ್ಕೆ ಕಮ್​ಬ್ಯಾಕ್​ ಎದುರು ನೋಡ್ತಿದ್ದಾರೆ. 

ಒಟ್ಟಿನಲ್ಲಿ ವಿಶ್ವಕಪ್​ಗೆ ಕೇವಲ 4 ವಾರಗಳು ಮಾತ್ರ ಬಾಕಿ ಇರೋ ವೇಳೆ ತಿಲಕ್​ ವರ್ಮಾ ಇಂಜುರಿಗೆ ತುತ್ತಾಗಿ, ಸರ್ಜರಿಗೆ ಒಳಗಾಗಿರೋದು ಟೀಮ್​ ಇಂಡಿಯಾದಲ್ಲಿ ಹೊಸ ಟೆನ್ಶನ್​ ಹುಟ್ಟು ಹಾಕಿದೆ. ನಿನ್ನೆ ತಾನೆ ಸರ್ಜರಿಯಾಗಿರೋದ್ರಿಂದ ಕಮ್​ಬ್ಯಾಕ್​ ಬಗ್ಗೆ ಸ್ಪಷ್ಟ ಮಾಹಿತಿ ಸಿಗೋಕೆ ಇನ್ನೂ ಕೆಲ ದಿನಗಳು ಬೇಕಿದೆ. ಒಂದಂತೂ ಸತ್ಯ.. ವಿಶ್ವಕಪ್​ ಆಡಬೇಕಂದ್ರೆ ತಿಲಕ್​ ವರ್ಮಾ ಟೈಮ್​ ಜೊತೆಗಿನ ರೇಸ್​ನಲ್ಲಿ ಗೆಲ್ಲಬೇಕಿದೆ.

ಇದನ್ನೂ ಓದಿ: ಯಶ್‌ಗೆ ಗಜ ಕೇಸರಿ ಯೋಗ, ಟಾಕ್ಸಿಕ್ ಸಾವಿರಾರು ಕೋಟಿ ಬಾಚುವುದರಲ್ಲಿ ಡೌಟು ಇಲ್ಲ ಎಂದ ಕೆ.ಮಂಜು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  

Tilak Varma
Advertisment