/newsfirstlive-kannada/media/media_files/2025/09/30/tilak-varma-and-nara-lokesh-2025-09-30-07-37-32.jpg)
ಏಷ್ಯಾ ಕಪ್ ಫೈನಲ್ (Asia cup final) ಪಂದ್ಯದಲ್ಲಿ ಭಾರತವನ್ನು ಗೆಲ್ಲಿಸಿಕೊಟ್ಟ ತಿಲಕ್ ವರ್ಮಾ, ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್​ಗೆ ವಿಶೇಷ ಉಡುಗೊರೆ ನೀಡಲಿದ್ದಾರೆ.
ಸ್ವತಃ ತಿಲಕ್ ವರ್ಮಾ ಅವರೇ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಂತಿಮ ಪಂದ್ಯದಲ್ಲಿ ಬಳಸಿದ್ದ ಕ್ಯಾಪ್ ಅನ್ನು ಲೋಕೇಶ್ ಅಣ್ಣಾಗೆ ಪ್ರೀತಿಯಿಂದ ನೀಡುತ್ತಿರೋದಾಗಿ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಆ ವೀಡಿಯೊದಲ್ಲಿ, ತಿಲಕ್ ವರ್ಮಾ ಕ್ಯಾಪ್ ಮೇಲೆ ಸಹಿ ಮಾಡಿ ಸಚಿವ ಲೋಕೇಶ್ ಹೆಸರನ್ನು ಬರೆಯೋದನ್ನು ನೋಡಬಹುದು.
This made my day, tammudu! 😍 Excited to get it straight from you when you’re back in India, champ!#AsiaCup2025@TilakV9pic.twitter.com/hsdEljJ2lS
— Lokesh Nara (@naralokesh) September 29, 2025
ತಿಲಕ್ ವರ್ಮಾರ ಪೋಸ್ಟ್​​ಗೆ ಪ್ರತಿಕ್ರಿಯಿಸಿರುವ ಲೋಕೇಶ್.. ಸಹೋದರ ತಿಲಕ್ ವರ್ಮಾ ಅವರಿಂದ ಬಂದ ಉಡುಗೊರೆ ನನಗೆ ತುಂಬಾ ವಿಶೇಷವಾಗಿದೆ. ನೀವು ಭಾರತಕ್ಕೆ ಹಿಂತಿರುಗಿದಾಗ ಕ್ಯಾಪ್ ತೆಗೆದುಕೊಳ್ತೀನಿ ಎಂದಿದ್ದಾರೆ. ಇನ್ನು, ತಿಲಕ್ ವರ್ಮಾ ಕ್ಯಾಪ್‌ಗೆ ಸಹಿ ಹಾಕುತ್ತಿರುವ ವೀಡಿಯೊವನ್ನು ಲೋಕೇಶ್ ಹಂಚಿಕೊಂಡಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ತಿಲಕ್ ವರ್ಮಾ ಅದ್ಭುತ ಪ್ರದರ್ಶನ ನೀಡಿದರು. 147 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ, ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ 9 ನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಪಂದ್ಯದಲ್ಲಿ ತಿಲಕ್ ವರ್ಮಾ ಪ್ರಮುಖ ಪಾತ್ರ ವಹಿಸಿದರು. ಅವರು 53 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 69 ರನ್ ಗಳಿಸಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ