/newsfirstlive-kannada/media/media_files/2025/09/29/rinku_singh-3-2025-09-29-18-25-24.jpg)
ಏಷ್ಯಾಕಪ್​ ಟೂರ್ನಿಯ ರೋಚಕ್ ಫೈನಲ್​ ಪಂದ್ಯದಲ್ಲಿ ಸೂರ್ಯಕುಮಾರ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಇದರಿಂದ ಪಾಕಿಸ್ತಾನಕ್ಕೆ ಒಂದು ಕಡೆ ಅವಮಾನವಾದರೆ, ಇನ್ನೊಂದು ಕಡೆ ಹ್ಯಾಟ್ರಿಕ್ ಸೋಲಿನ ರುಚಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಭಾರತದ ಎಲ್ಲ ಆಟಗಾರರು ಅತ್ಯುತ್ತಮ ಪರ್ಫಾಮೆನ್ಸ್​ ನೀಡಿದ್ದು ಎಲ್ಲರೂ ಮೆಚ್ಚುಗೆಯಾಟ ಆಡಿದ್ದಾರೆ. ವಿಶೇಷ ಎಂದರೆ ಟೂರ್ನಿಯಲ್ಲಿ ಒಂದೂ ಪಂದ್ಯವಾಡದ ರಿಂಕು ಸಿಂಗ್ 1 ಬಾಲ್ ಆಡಿ ಚಾಂಪಿಯನ್ ಆದರು.
ಸೂರ್ಯಕುಮಾರ್ ನೇತೃತ್ವದ ಭಾರತ ತಂಡ ಏಷ್ಯಾಕಪ್​ನಲ್ಲಿ ಫೈನಲ್​ ಸೇರಿ ಒಟ್ಟು ಏಳು ಪಂದ್ಯಗಳನ್ನು ಆಡಿದೆ. ಈ 7ರಲ್ಲಿ ರಿಂಕು ಸಿಂಗ್ ಯಾವುದೇ ಪಂದ್ಯ ಆಡಿಲ್ಲ. ಏಷ್ಯಾಕಪ್​ ತಂಡಕ್ಕೆ ಆಯ್ಕೆ ಆದರೂ ವಿನ್ನಿಂಗ್​ ಟೀಮ್ ನಿರ್ಧಾರವಾಗಿದ್ದರಿಂದ ರಿಂಕು ಸಿಂಗ್​ರನ್ನ ಬೆಂಚ್​ಗೆ ಸೀಮಿತ ಮಾಡಲಾಗಿತ್ತು. ಆದರೆ ಫೈನಲ್​ ಪಂದ್ಯದ ಸಮಯದಲ್ಲಿ ಸ್ಟಾರ್ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ರಿಂಕುಗೆ ಅವಕಾಶ ಒಲಿದು ಬಂದಿತು ಎನ್ನಬಹುದು.
ಈ ಟೂರ್ನಿಯಲ್ಲಿ ಒಂದೂ ಪಂದ್ಯವಾಡದ ರಿಂಕು ಸಿಂಗ್ ಅವರು ಕೊನೆಗೆ ಫೈನಲ್​ ಪಂದ್ಯದಲ್ಲಿ ಚಾನ್ಸ್​ ಕೊಡಲಾಗಿತ್ತು. ಫೈನಲ್​ನಲ್ಲಿ ಆಡಿದರೂ ಬ್ಯಾಟಿಂಗ್​ ಬರುತ್ತೋರೋ, ಇಲ್ವೋ ಎನ್ನುವುದು ಕನ್​ಫರ್ಮ್​ ಇರಲಿಲ್ಲ. ಏಕೆಂದರೆ ಟೀಮ್ ಇಂಡಿಯಾ ಅದಾಗಲೇ ಗೆಲುವಿನ ಸಮೀಪ ಬಂದಿತ್ತು. ಕೇವಲ 11 ರನ್​ಗಳು ಬೇಕಿದ್ದವು ಅಷ್ಟೇ. ಆದರೆ ಈ ವೇಳೆ ಶಿವಂ ದುಬೆ ಕ್ಯಾಚ್​ ಔಟ್ ಆಗಿದ್ದರಿಂದ ರಿಂಕು ಸಿಂಗ್​ ಕ್ರೀಸ್​ಗೆ ಬಂದರು.
ರಿಂಕು ಸಿಂಗ್ ಕ್ರೀಸ್​ಗೆ ಬಂದರೂ ಬ್ಯಾಟಿಂಗ್​ ಸಿಗುವುದು ಡೌಟ್ ಇತ್ತು. ಏಕೆಂದರೆ 20ನೇ ಓವರ್​ನಲ್ಲಿ ಬ್ಯಾಟಿಂಗ್​ ಮುಂದುವರೆಸಿದ್ದ ತಿಲಕ್ ವರ್ಮಾ ಸ್ಟ್ರೈಕ್​ನಲ್ಲಿ ಅಬ್ಬರಿಸುತ್ತಿದ್ದರು. ಕೊನೆ ಓವರ್​ನಲ್ಲಿ ತಿಲಕ್ ವರ್ಮಾ ಮೂರು ಬಾಲ್​ಗೆ 9 ರನ್​ ಬಾರಿಸಿ ಗೆಲುವಿಗೆ 1 ರನ್​ ಬೇಕಿದ್ದಾಗ ರಿಂಕು ಸಿಂಗ್​ಗೆ ಬ್ಯಾಟಿಂಗ್​ ಸ್ಟ್ರೈಕ್​ ಕೊಟ್ಟರು. ಕೇವಲ ಒಂದೇ ಒಂದು ಎಸೆತದಲ್ಲಿ ಬೌಂಡರಿ ಬಾರಿಸಿ ಟೀಮ್ ಇಂಡಿಯಾಗೆ ರಿಂಕು ಸಿಂಗ್ ಜಯ ತಂದುಕೊಟ್ಟರು. ಕೊನೆ ಪಂದ್ಯ, ಕೊನೆ ಓವರ್​ನಲ್ಲಿ ಕೇವಲ ಒಂದೇ ಒಂದು ಬಾಲ್ ಆಡಿ ರಿಂಕು ಸಿಂಗ್ ಚಾಂಪಿಯನ್ ಎನಿಸಿಕೊಂಡರು. ಇಡೀ ಟೂರ್ನಿಯಲ್ಲಿ ರಿಂಕು ಸಿಂಗ್ ಆಡಿದ್ದೇ ಒಂದೇ ಒಂದು ಬಾಲ್​.
Rinku singh out of nowhere , hitting the winning runs. God’s plan
— Bihar_se_hai (@Bihar_se_hai) September 28, 2025
pic.twitter.com/FTyJ4fnoQ7
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ