/newsfirstlive-kannada/media/media_files/2025/09/29/tilak_rinku-2025-09-29-16-26-40.jpg)
ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ ಏಷ್ಯಾ ಕಪ್​ಗೆ ಮುತ್ತಿಕ್ಕಿದೆ. ರೋಚಕ ಫೈನಲ್​ ಪಂದ್ಯ ಗೆದ್ದು ಬೀಗಿರುವ ಸೂರ್ಯಕುಮಾರ್ ಪಡೆ ಮೈದಾನದಲ್ಲಿ ಅದ್ಧೂರಿಯಾಗಿ ಸೆಲೆಬ್ರೆಷನ್ ಮಾಡಿದೆ. ಈ ಎಲ್ಲದರ ಮಧ್ಯೆ ಏಷ್ಯಾಕಪ್​ ಆರಂಭಕ್ಕೂ ಮೊದಲೇ ಫೈನಲ್​ ಮ್ಯಾಚ್​​ನಲ್ಲಿ ನಾನು ಹೆಚ್ಚು ರನ್​ ಗಳಿಸುತ್ತೇನೆ, ನಾನು ವಿನ್ನಿಂಗ್​ ಶಾಟ್​ ಬಾರಿಸುತ್ತೇನೆ ಎಂದು ಶಪಥ ಮಾಡಿದ್ದ ಇಬ್ಬರು ಯಂಗ್ ಪ್ಲೇಯರ್ಸ್​ ಹೇಳಿದಂತೆ ಮಾಡಿ ತೋರಿಸಿದ್ದಾರೆ.
ಇದು ಪವಾಡವೋ, ಇಲ್ಲ ಕನಸಿನಲ್ಲಿ ದೇವರು ಬಂದು ಹೇಳಿದ್ದರೋ ಗೊತ್ತಿಲ್ಲ. ಏಕೆಂದರೆ ಏಷ್ಯಾಕಪ್​ ಟೂರ್ನಿ ಆರಂಭಕ್ಕೂ ಮೊದಲು ತಿಲಕ್ ವರ್ಮಾ ಹಾಗೂ ರಿಂಕು ಸಿಂಗ್​ ಇಬ್ಬರು ಸೇರಿ ಜಸ್​ಪ್ರಿತ್ ಬೂಮ್ರಾ ಅವರ ಪತ್ನಿ ಸಂಜನಾ ಗಣೇಶನ್​ಗೆ ಬರೆದುಕೊಟ್ಟು ಬಂದಿದ್ದರು. ಏಷ್ಯಾಕಪ್​ ಫೈನಲ್​​ನಲ್ಲಿ ನಾನು ಹೆಚ್ಚು ರನ್​ ಗಳಿಸಬೇಕು ಎಂದು ತಿಲಕ್ ವರ್ಮಾ ಬರೆದಿದ್ರೆ, ಯಂಗ್​ ಗನ್​ ರಿಂಕು ಸಿಂಗ್ ಯಾರೇ ಎಷ್ಟೇ ರನ್​ ಗಳಿಸಲೇ ಭಾರತದ ವಿನ್ನಿಂಗ್​ ಶಾಟ್​ ನಾನು ಬಾರಿಸುತ್ತೇನೆ ಅಂತ ಬರೆದು ಸಂಜನಾ ಗಣೇಶನ್​ ಕೈಗೆ ಕೊಟ್ಟಿದ್ದರು.
ತಿಲಕ್ ವರ್ಮಾ ಹಾಗೂ ರಿಂಕು ಸಿಂಗ್​ ಇಬ್ಬರು ಬರೆದುಕೊಟ್ಟಂತೆ ಪಾಕಿಸ್ತಾನದ ವಿರುದ್ಧದ ಫೈನಲ್​ ಮ್ಯಾಚ್​ನಲ್ಲಿ ಇಬ್ಬರು ಅದನ್ನು ಮಾಡಿ ತೋರಿಸಿದ್ದಾರೆ. ಪಂದ್ಯದ ಕೊನೆವರೆಗೆ ತಿಲಕ್​ ವರ್ಮಾ ಅಬ್ಬರದ ಬ್ಯಾಟಿಂಗ್ ಮಾಡಿ 69 ರನ್​ ಸಿಡಿಸಿ ಗೆಲುವಿಗೆ ಕಾರಣವಾಗಿದ್ದಾರೆ. ಆದರೆ ವಿಚಿತ್ರ ಎಂದರೆ ಪಂದ್ಯ ಗೆಲ್ಲುವುದಕ್ಕೂ ಇನ್ನು 11 ರನ್​ ಇರುವಾಗ ಬಿಗ್ ಶಾಟ್ ಮಾಡಲು ಹೋಗಿ ಶಿವಂ ದುಬೆ ವಿಕೆಟ್​ ಒಪ್ಪಿಸಿದರು. ಆ ಬಳಿಕ ಕ್ರೀಸ್​ಗೆ ಬಂದ ರಿಂಕು ಸಿಂಗ್ ನಾನ್​ಸ್ಟ್ರೈಕ್​​ನಲ್ಲಿದ್ದರು.
20ನೇ ಓವರ್​ನ ಮೊದಲ ಬಾಲ್ ತಿಲಕ್ ವರ್ಮಾ 2 ರನ್​ ಓಡಿ ಸ್ಟ್ರೈಕ್​ಗೆ ಬಂದು 2ನೇ ಬಾಲ್​ ಅನ್ನು ಸಿಕ್ಸ್​ ಬಾರಿಸಿದರು. 3ನೇ ಎಸೆತದಲ್ಲಿ 1 ರನ್​ ತೆಗೆದುಕೊಂಡಿದ್ದರಿಂದ ರಿಂಕು ಸ್ಟ್ರೈಕ್​​ಗೆ ಬಂದರು. ಇದರಿಂದ ಪಂದ್ಯ ಡ್ರಾ ಆಗಿತ್ತು. 3 ಬಾಲ್​ನಲ್ಲಿ 1 ರನ್​ ಇದ್ದಾಗ ರಿಂಕು ಸಿಂಗ್​ ಬ್ಯಾಟಿಂಗ್​ ಸ್ಟ್ರೈಕ್​ ಬಂದು ಅವರು ಮೊದಲೇ ಹೇಳಿದಂತೆ ವಿನ್ನಿಂಗ್​ ಶಾಟ್​ ಅನ್ನು ಬೌಂಡರಿ ಬಾರಿಸಿ ಭಾರತಕ್ಕೆ ಜಯ ತಂದು ಕೊಟ್ಟರು.
ಇನ್ನೊಂದು ಪವಾಡ ಎಂದರೆ ರಿಂಕು ಸಿಂಗ್​ ಏಷ್ಯಾ ಕಪ್ ಆರಂಭದಿಂದಲೂ ಯಾವ ಪಂದ್ಯದಲ್ಲೂ ಆಡೇ ಇಲ್ಲ. ಆದರೆ ಫೈನಲ್​ ಪಂದ್ಯದ ವೇಳೆ ಸ್ಟಾರ್ ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯ ಇಂಜುರಿಗೆ ಒಳಗಾದರು. ಇದರಿಂದ ಕೋಚ್ ಗಂಭೀರ್​, ರಿಂಕು ಸಿಂಗ್​ಗೆ ಫೈನಲ್​​ನಲ್ಲಿ ಅವಕಾಶ ಕೊಟ್ಟರು. ಕೊನೆಗೆ ಬ್ಯಾಟಿಂಗ್​ ಸಿಗುವುದು ಡೌಟ್ ಇತ್ತು. ಆದರೆ ವಿನ್ನಿಂಗ್​ ಶಾಟ್​ ಬಾರಿಸಿ ಹೇಳಿದಂತೆ ಮಾಡಿ ತೋರಿಸಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಗೆಲುವಿನ ಸಿಂಧೂರವಿಟ್ಟ ತಿಲಕ್.. ಪಾಕ್​ಗೆ ಅವಮಾನ, Asia Cup​ ಗೆದ್ದ ಸೂರ್ಯ ಪಡೆ
ಸದ್ಯ ಇದೆಲ್ಲವನ್ನು ನಿನ್ನೆ ಕಾಮೆಂಟರಿ ಬಾಕ್ಸ್​​ನಲ್ಲಿ ಜಸ್​ಪ್ರೀತ್​ ಬೂಮ್ರಾ ಅವರ ಪತ್ನಿ ಸಂಜನಾ ಗಣೇಶನ್ ಅವರು ರಿವೀಲ್ ಮಾಡಿದ್ದಾರೆ. ಸೆಪ್ಟೆಂಬರ್​ 6 ರಂದು ತಿಲಕ್ ವರ್ಮಾ ಹಾಗೂ ರಿಂಕು ಸಿಂಗ್ ಅವರು ಇಂಗ್ಲಿಷ್​ನಲ್ಲಿ ಬರೆದುಕೊಟ್ಟಿದ್ದ ಆ ಲೆಟರ್​ಗಳನ್ನು ಸಂಜನಾ ಗಣೇಶನ್ ಅವರು ಕ್ಯಾಮೆರಾಗೆ ತೋರಿಸಿದ್ದಾರೆ. ಇದನ್ನೆಲ್ಲಾ ಕೇಳಿ ಪಾಕಿಸ್ತಾನದ ಕ್ರಿಕೆಟರ್​ ವಾಸಿಂ ಅಕ್ರಮ್ ಹಾಗೂ ಭಾರತದ ಲೆಜೆಂಡರಿ ರವಿಶಾಸ್ತ್ರಿ ಫುಲ್ ಶಾಕ್ ಆಗಿದ್ದಾರೆ. ​
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ