/newsfirstlive-kannada/media/media_files/2025/09/29/surya_tilak-1-2025-09-29-17-50-30.jpg)
ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ 5 ವಿಕೆಟ್​ಗಳಿಂದ ಏಷ್ಯಾಕಪ್​ ಗೆಲ್ಲುತ್ತಿದ್ದಂತೆ ಕ್ಯಾಪ್ಟನ್​ ಸೂರ್ಯಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. 2025ರ ಏಷ್ಯಾಕಪ್​ ಪಂದ್ಯಗಳಿಂದ ತಮಗೆ ಮಾತ್ರ ಬಂದಿರುವ ಎಲ್ಲ ಹಣವನ್ನು ಭಾರತದ ಸೇನೆಗೆ ಹಾಗೂ ಪಹಲ್ಗಾಮ್​ ಅಟ್ಯಾಕ್​ನಲ್ಲಿ ಮಡಿದಂತಹ ಸಂತ್ರಸ್ತರ ಕುಟುಂಬಗಳಿಗೆ ನೀಡಲು ಸೂರ್ಯಕುಮಾರ್ ಅವರು ನಿರ್ಧಾರ ಮಾಡಿದ್ದಾರೆ. ಹಾಗಾದ್ರೆ ಸೂರ್ಯ ಕುಮಾರ್ ಒಟ್ಟು ಎಷ್ಟು ಲಕ್ಷ ರೂಪಾಯಿ ದಾನ ಮಾಡುತ್ತಾರೆ?.
ಭಾರತದ ಸೇನೆ ಹಾಗೂ ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿಯಲ್ಲಿ ಜೀವ ಕಳೆದುಕೊಂಡ ಸಂತ್ರಸ್ತ ಕುಟುಂಬಳಿಗೆ ದೇಣಿಗೆ ನೀಡಲು ನಿರ್ಧರಿಸಿದ್ದೇನೆ. ಏಷ್ಯಾಕಪ್​ ಟೂರ್ನಿಯಲ್ಲಿ ಆಡಿದಂತ ಎಲ್ಲ ಪಂದ್ಯಗಳಿಂದ ನನಗೆ ಬರುವ ಎಲ್ಲ ಶುಲ್ಕವನ್ನು ನೀಡಲಾಗುವುದು. ದಾಳಿಯಲ್ಲಿ ಮಡಿದ ಎಲ್ಲರೂ ಯಾವಾಗಲೂ ನೆನಪಿನಲ್ಲಿ ಇರುತ್ತೀರಿ. ಜೈಹಿಂದ್​.. ಎಂದು ಸೂರ್ಯಕುಮಾರ್ ಯಾದವ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿದ್ದಾರೆ.
ಎಷ್ಯಾ ಕಪ್​ ಟೂರ್ನಿಯಲ್ಲಿ ಸೂರ್ಯಕುಮಾರ್ ಅವರು ಫೈನಲ್​ ಮ್ಯಾಚ್ ಸೇರಿ ಒಟ್ಟು 7 ಪಂದ್ಯಗಳನ್ನು ಆಡಿದ್ದಾರೆ. ಪ್ರತಿ ಮ್ಯಾಚ್​ಗೆ 4 ಲಕ್ಷ ರೂಪಾಯಿಗಳನ್ನು ಶುಲ್ಕವಾಗಿ ಸೂರ್ಯ ಪಡೆಯುತ್ತಾರೆ. 7 ಪಂದ್ಯಗಳಿಗೆ ಒಟ್ಟು 28 ಲಕ್ಷ ರೂಪಾಯಿ ಸೂರ್ಯಕುಮಾರ್ ಪಡೆದಂತೆ ಆಗುತ್ತದೆ. ಈ ಎಲ್ಲ ಹಣವನ್ನು ಭಾರತ ಸೇನೆ ಹಾಗೂ ಪಹಲ್ಗಾಮ್​ ಸಂತ್ರಸ್ತರಿಗೆ ದೇಣಿಗೆಯಾಗಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಸದ್ಯ ಸೂರ್ಯಕುಮಾರ್ ಅವರ ಈ ನಿರ್ಧಾರದಿಂದ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಸೋಷಿಯಲ್ ಮೀಡಿಯಾದಲ್ಲಂತೂ ಸೂರ್ಯಕುಮಾರ್ ಪೋಸ್ಟ್​ಗೆ ಭಾರತೀಯರು ಹಾಡಿ ಹೊಗಳುತ್ತಿದ್ದಾರೆ. ಇಲ್ಲೊಂದು ವಿಶೇಷ ಎಂದರೆ ಸೂರ್ಯಕುಮಾರ್ ಅವರು ಒಂದೇ ಟೂರ್ನಿಯಲ್ಲಿ ಮೂರು ಬಾರಿ ಪಾಕಿಸ್ತಾನವನ್ನು ಬಗ್ಗುಬಡಿದರು.
ಇದು ನಾಯಕನಾಗಿ ಸೂರ್ಯಕುಮಾರ್ ಅವರ ಸಾಧನೆ ಎನ್ನಬಹುದು. ಪಹಲ್ಗಾಮ್ ಅಟ್ಯಾಕ್ ಅನ್ನು ತೀವ್ರವಾಗಿ ಖಂಡಿಸಿದ ಸೂರ್ಯಕುಮಾರ್, ಪಾಕ್​ ವಿರುದ್ಧದ ಪಂದ್ಯದಲ್ಲಿ ಹೆಜ್ಜೆ ಹೆಜ್ಜೆಗೂ ಕಿಡಿ ಕಾರಿದರು ಎನ್ನಬಹುದು. ಹೇಗೆಂದರೆ ಹ್ಯಾಂಡ್​ಶೇಕ್ ಮಾಡದಿರುವುದು, ಟ್ರೋಫಿ ಸ್ವೀಕರಿಸಿದೇ ಇರುವುದು, ಮಾಧ್ಯಮ ಗೋಷ್ಠಿಯಲ್ಲಿ ಸರಿಯಾಗಿ ಟಕ್ಕರ್ ಕೊಟ್ಟಿರುವುದು ಸೇರಿದಂತೆ ಇನ್ನು ಕೆಲವು ಸನ್ನಿವೇಶಗಳಲ್ಲಿ.
All match fees from #AsiaCup2025 → Indian Army 🇮🇳
— Vivek Yadav (@Vivek_28_Yadav) September 28, 2025
Pure class from Surya 🔥
No controversies, just facts.#INDvPAK#INDvsPAK#AsiaCup2025pic.twitter.com/EFQkV0OpYC
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ