/newsfirstlive-kannada/media/media_files/2025/12/12/tilak-varma-2025-12-12-07-59-04.jpg)
ಟಾಸ್​ ಸೋತು ಮೊದಲು ಬ್ಯಾಟಿಂಗ್​ಗಿಳಿದ ಸೌತ್​ ಆಫ್ರಿಕಾ ಗುಡ್​ ಓಪನಿಂಗ್​ ಪಡೆದುಕೊಳ್ತು. ಅನುಭವಿ ಕ್ವಿಂಟನ್​ ಡಿ ಕಾಕ್​ ಅಬ್ಬರದ ಆರಂಭ ಒದಗಿಸಿದ್ರು. ಡಿ ಕಾಕ್​ ಅಬ್ಬರಿಸಿದ್ರೆ ಇನ್ನೊಬ್ಬ ಆರಂಭಿಕ ಬ್ಯಾಟರ್​ ರಿಝಾ ಹೆಂಡ್ರಿಕ್ಸ್​ ತಡಕಾಡಿದ್ರು. 10 ಎಸೆತಗಳಲ್ಲಿ ಕೇವಲ 8 ರನ್​ಗಳಿಸಿದ ಹೆಂಡ್ರಿಕ್ಸ್, ವರುಣ್​ ಚಕ್ರವರ್ತಿ ಬೌಲಿಂಗ್​ನಲ್ಲಿ ಕ್ಲೀನ್​ಬೋಲ್ಡ್​ ಆದ್ರು. 3ನೇ ವಿಕೆಟ್​ಗೆ ಜೊತೆಯಾದ ಕ್ವಿಂಟನ್​ ಡಿ ಕಾಕ್​ - ಎಡೆನ್​ ಮರ್ಕರಮ್​ ಬೊಂಬಾಟ್​ ಬ್ಯಾಟಿಂಗ್​ ನಡೆಸಿದ್ರು. ಡಿ ಕಾಕ್​ ಅಬ್ಬರದ ಆಟವಾಡಿದ್ರೆ, ಎಡೆನ್​ ಮರ್ಕರಮ್​ ಕೂಲ್ ಅಂಡ್ ಕಾಮ್​ ಇನ್ನಿಂಗ್ಸ್​ ಕಟ್ಟಿದ್ರು. ಬೌಲರ್​ಗಳ ಮೇಲೆ ಸವಾರಿ ಮಾಡಿದ ಡಿ ಕಾಕ್​, 26 ಎಸೆತಕ್ಕೆ ಹಾಫ್​ ಸೆಂಚುರಿ ಚಚ್ಚಿದ್ರು.
/filters:format(webp)/newsfirstlive-kannada/media/media_files/2025/12/12/team-india-11-2025-12-12-08-03-19.jpg)
ಡಿಕಾಕ್​ - ಮರ್ಕರಮ್​ ಜೊತೆಯಾಟ ಬ್ರೇಕ್​ ಮಾಡಲು ಮಾಡಿದ ಕ್ಯಾಪ್ಟನ್​ ಸೂರ್ಯನ ತಂತ್ರಗಳೆಲ್ಲಾ ಫೇಲ್​ ಆದ್ವು. ವಿಕೆಟ್​ ಕಬಳಿಸಿಲು 11ನೇ ಓವರ್​ನಲ್ಲಿ ಬೌಲಿಂಗ್​ಗೆ ಬಂದ ಆರ್ಷ್​​ದೀಪ್​ ಸಿಂಗ್​ ಬರೋಬ್ಬರಿ 18 ರನ್​ ಬಿಟ್ಟು ಕೊಟ್ಟು ದುಬಾರಿಯಾದ್ರು. ಬರೋಬ್ಬರಿ 7 ವೈಡ್​ ಹಾಕಿ ಹೀನಾಯ ಸಾಧನೆ ಮಾಡಿದ್ರು. 12ನೇ ಓವರ್​​ನಲ್ಲಿ ಎಡೆನ್​ ಮರ್ಕರಮ್​ ಭರ್ಜರಿ 2 ಸಿಕ್ಸರ್​ ಸಿಡಿಸಿ ಅಬ್ಬರಿಸಿದ್ರು. ಅದೇ ಓವರ್​ನಲ್ಲಿ ಮರ್ಕರಮ್​ ಆಟಕ್ಕೆ ವರುಣ್​ ಚಕ್ರವರ್ತಿ ಅಂತ್ಯ ಹಾಡಿದ್ರು. 29 ರನ್​ಗಳಿಸಿ ಮರ್ಕರಮ್​ ಔಟ್​ ಆಗೋದ್ರೊಂದಿಗೆ 83 ರನ್​ಗಳ ಜೊತೆಯಾಟಕ್ಕೆ ಬ್ರೇಕ್​ ಬಿತ್ತು.
ಮರ್ಕರಮ್​ ಪೆವಿಲಿಯನ್​ ಸೇರಿದ ಕೆಲ ಹೊತ್ತಲ್ಲೆ ಡಿ ಕಾಕ್​ ಕೂಡ ಔಟ್​ ಆದ್ರು. 46 ಎಸೆತ ಎದುರಿಸಿದ ಡಿ ಕಾಕ್​ 7 ಭರ್ಜರಿ ಸಿಕ್ಸರ್​, 5 ಬೌಂಡರಿ ಸಹಿತ 90 ರನ್​ಗಳಿಸಿ ನಿರ್ಗಮಿಸಿದ್ರು. ಜಿತೇಶ್​ ಶರ್ಮಾ ಚುರುಕಿನ ಕೀಪಿಂಗ್​ಗೆ ಡಿ ಕಾಕ್​ ಆಟ ಅಂತ್ಯವಾಯ್ತು. 1 ಸಿಕ್ಸರ್​, 1 ಬೌಂಡರಿ ಬಾರಿಸಿದ ಡೆವಾಲ್ಡ್​ ಬ್ರೆವಿಸ್​ ಬಿಗ್​ ಸ್ಕೋರ್​ ಕಲೆ ಹಾಕುವಲ್ಲಿ ಫೇಲ್​ ಆದ್ರು. 14 ರನ್​ಗೆ ಬ್ರೆವಿಸ್​ ಔಟಾದ ಬಳಿಕ ಜೊತೆಯಾದ ಡೇವಿಡ್​ ಮಿಲ್ಲರ್​, ಡೊನೊವನ್​ ಪೆರೆರಾ ಅಂತಿಮ ಹಂತದಲ್ಲಿ ಅಬ್ಬರಿಸಿದ್ರು.
ಇದನ್ನೂ ಓದಿ: ಡೇಂಜರ್ ಝೋನ್​ನಲ್ಲಿ SKY.. ಟೀಂ ಇಂಡಿಯಾದ ಆತಂಕ ಹೆಚ್ಚಿಸಿದ ಸೂರ್ಯ..!
/filters:format(webp)/newsfirstlive-kannada/media/media_files/2025/12/12/team-india-12-2025-12-12-08-03-19.jpg)
ಮಿಲ್ಲರ್​-ಪೆರೆರಾ ಬೌಂಡರಿ-ಸಿಕ್ಸರ್​ಗಳಲ್ಲೇ ರನ್​ ಡೀಲ್ ಮಾಡಿ 23 ಎಸೆತಗಳಲ್ಲಿ 53 ರನ್​ಗಳ ಜೊತೆಯಾಟವಾಡಿದ್ರು. 3 ಸಿಕ್ಸರ್​ 1 ಬೌಂಡರಿ ಬಾರಿಸಿದ ಪೆರೆರಾ 16 ಎಸೆತಗಳಲ್ಲೇ 30 ರನ್​ಗಳಿಸಿದ್ರು. ಮಿಲ್ಲರ್​ 12 ಎಸೆತಗಳಲ್ಲಿ 20 ರನ್​ಗಳಿಸಿದ್ರು. ಸ್ಲಾಗ್​ ಓವರ್​ಗಳಲ್ಲಿ ಬಿರುಸಿನ ಆಟವಾಡಿದ ಮಿಲ್ಲರ್​-ಪೆರೆರಾ ತಂಡದ ಸ್ಕೋರ್​ 200ರ ಗಡಿ ದಾಟಿಸಿದ್ರು. 20 ಓವರ್​​ಗಳ ಅಂತ್ಯಕ್ಕೆ 4 ವಿಕೆಟ್​ ಕಳೆದುಕೊಂಡ ಸೌತ್​ ಆಫ್ರಿಕಾ 213 ರನ್​ಗಳ ಬಿಗ್​ ಟಾರ್ಗೆಟ್​​ ಸೆಟ್​ ಮಾಡಿತು.
214 ರನ್​ಗಳ ಬೃಹತ್ ಮೊತ್ತ ಬೆನ್ನಟ್ಟಿದ್ದ ಟೀಮ್ ಇಂಡಿಯಾ, ಮೊದಲ ಓವರ್​​ನಲ್ಲೇ ಶುಭ್ಮನ್ ಗಿಲ್ ವಿಕೆಟ್ ಕಳೆದುಕೊಂಡಿತು.​ ಅಭಿಷೇಕ್ ಶರ್ಮಾ, 2 ಸಿಕ್ಸರ್ ಸಿಡಿಸಿ ಮಾರ್ಕೋ ಯಾನ್ಸನ್ ಬೌಲಿಂಗ್​ನಲ್ಲಿ ಔಟಾದ್ರು. ನಾಯಕ ಸೂರ್ಯಕುಮಾರ್ ಯಾದವ್ ಬ್ಯಾಡ್ ಫಾರ್ಮ್ ಮತ್ತೆ ಮುಂದುವರೆಯಿತು. 5 ರನ್​ಗಳಿಸಿ ಸೂರ್ಯ, ಪೆವಿಲಿಯನ್ ಸೇರಿಕೊಂಡ್ರು.
/filters:format(webp)/newsfirstlive-kannada/media/media_files/2025/12/12/team-india-13-2025-12-12-08-03-19.jpg)
ಪ್ರಮೋಷನ್ ಪಡೆದು ಟಾಪ್ ಆರ್ಡರ್​ನಲ್ಲಿ ಬ್ಯಾಟಿಂಗ್​ಗಿಳಿದ ಅಕ್ಷರ್ ಪಟೇಲ್, 21 ರನ್​ಗಳಿಸಿ ಹೆಂಡ್ರಿಕ್ಸ್ ಕೈಗೆ​​ ಕ್ಯಾಚ್ ನೀಡಿದ್ರು. ಹಾರ್ದಿಕ್ ಪಾಂಡ್ಯ ಆರಂಭದಲ್ಲಿ ಭರವಸೆ ಮೂಡಿಸಿದ್ರು. ಆದ್ರೆ ಪಾಂಡ್ಯ ಹೋರಾಟ 20 ರನ್​ಗಳಿಗೆ ಅಂತ್ಯವಾಯ್ತು. ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ 2 ಬೌಂಡರಿ ಮತ್ತು 2 ಸಿಕ್ಸರ್​ಗಳ ನೆರವಿನಿಂದ 27 ರನ್​ ಸಿಡಿಸಿದ್ರು. ಆದ್ರೆ ಜಿತೇಶ್ ಸಿಕ್ಕ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳಲಿಲ್ಲ.
ನಂಬರ್.8 ಸ್ಲಾಟ್​​ನಲ್ಲಿ ಬ್ಯಾಟಿಂಗ್​ಗಿಳಿದ ಶಿವಂ ದುಬೆ ಕೇವಲ 1 ರನ್​ಗಳಿಸಿದ್ರೆ, ಆರ್ಷ್​ದೀಪ್ ಸಿಂಗ್ ಬೌಂಡರಿ ಸಿಡಿಸಿ ಮಾಯವಾದ್ರು. ವರುಣ್ ಚಕ್ರವರ್ತಿ ಖಾತೆ ತೆರೆಯದೆ, ಬಂದ ಹಾದಿಯಲ್ಲೇ ಹಿಂತಿರುಗಿದ್ರು. ಏಕಾಂಗಿ ಹೋರಾಟ ನಡೆಸಿದ ತಿಲಕ್ ವರ್ಮಾ, 34 ಎಸೆತಗಳಲ್ಲಿ 62 ರನ್​ ಬಾರಿಸಿದ್ರು. 2 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್, ತಿಲಕ್ ಬ್ಯಾಟ್​ನಿಂದ ದಾಖಲಾಯ್ತು.
ಇದನ್ನೂ ಓದಿ: BCCIಗೆ ಗಿಲ್​ ಮೇಲೆ ವ್ಯಾಮೋಹ.. ಪ್ರತಿಭಾವಂತ ಕ್ರಿಕೆಟಿಗ ಜೈಸ್ವಾಲ್ ಬಲಿ..?
ಅಂತಿಮವಾಗಿ ಟೀಮ್ ಇಂಡಿಯಾ 19.1 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 162 ರನ್​ಗಳಿಸಿತು. 51 ರನ್​ಗಳ ಗೆಲುವು ದಾಖಲಿಸಿದ ದಕ್ಷಿಣ ಆಫ್ರಿಕಾ, ಸರಣಿಯಲ್ಲಿ 1-1 ಅಂತರದಿಂದ ಸಮಬಲ ಸಾಧಿಸಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us