Advertisment

BCCIಗೆ ಗಿಲ್​ ಮೇಲೆ ವ್ಯಾಮೋಹ.. ಪ್ರತಿಭಾವಂತ ಕ್ರಿಕೆಟಿಗ ಜೈಸ್ವಾಲ್ ಬಲಿ..?

ಟೀಮ್ ಇಂಡಿಯಾದ ಪ್ರಿನ್ಸ್​ ಶುಭ್ಮನ್​​ ಗಿಲ್​ಗೆ ಏನಾಯ್ತು? ಟೆಸ್ಟ್, ಏಕದಿನ ಕ್ರಿಕೆಟ್​ನಲ್ಲಿ ಮಿಂಚುವ ಗಿಲ್, ಟಿ-20​ನಲ್ಲಿ ಮಾತ್ರ ಫ್ಲಾಪ್ ಶೋ ನೀಡೋದ್ಯಾಕೆ? ಶಾರ್ಟರ್​ ಫಾರ್ಮೆಟ್ ಗಿಲ್​​ಗೆ ಸೆಟ್ ಆಗ್ತಿಲ್ವಾ ಅಥವಾ ಗಿಲ್​​​ಗೆ ಟಿ-20 ಸೂಟ್ ಆಗಲ್ವಾ? ಗಿಲ್, ಟಿ-20​​ ಮತ್ತು ಬಿಸಿಸಿಐ ಆಟ ಹೇಗಿದೆ?

author-image
Ganesh Kerekuli
GILL_STYLE
Advertisment
  • ಜುಲೈ 13, 2024ರಲ್ಲಿ ಸಿಡಿಸಿದ್ದು ಕೊನೆಯ ಅರ್ಧಶತಕ
  • 513 ದಿನ, 16 ಪಂದ್ಯ, ಒಂದೇ ಒಂದು ಫಿಫ್ಟಿ ಇಲ್ಲ
  • ಟಿ-20 ಫಾರ್ಮೆಟ್ ಬಿಡಬೇಕಾ ಶುಭ್ಮನ್ ಗಿಲ್..?

ಟೀಮ್ ಇಂಡಿಯಾದ ಯಂಗ್ ಌಂಡ್ ಸ್ಟೈಲಿಶ್ ಬ್ಯಾಟರ್ ಶುಭ್ಮನ್ ಗಿಲ್, ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಮತ್ತೆ ಎಡವಿದ್ದಾರೆ. ಇಂಜುರಿ ಬಳಿಕ ಕಮ್​ಬ್ಯಾಕ್ ಪಂದ್ಯದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಗಿಲ್, ಎಲ್ಲಾ ನಿರೀಕ್ಷೆಗಳನ್ನ ಹುಸಿಗೊಳಿಸಿದ್ದಾರೆ. ಟಿ-20 ಕ್ರಿಕೆಟ್​ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಗಿಲ್​​​​​​​​​ ಸ್ಥಾನದ ಬಗ್ಗೆ ಇದೀಗ ಪ್ರಶ್ನೆ ಎದ್ದಿದೆ. 

Advertisment

ಇದನ್ನೂ ಓದಿ:ಸೂರ್ಯನ ರಣತಂತ್ರಕ್ಕಿಲ್ಲ ಪ್ರತಿತಂತ್ರ; ಟೀಂ ಇಂಡಿಯಾದ ಸ್ಟ್ರೆಂಥ್ ಹೇಗಿದೆ ಗೊತ್ತಾ..?

ಬಿಸಿಸಿಐಗೆ ಗಿಲ್​ ಮೇಲೆ ಯಾಕೆ ವ್ಯಾಮೋಹ?

ಶುಭ್ಮನ್ ಗಿಲ್​ ಒಬ್ಬ ಅಪ್ರತಿಮ ಟ್ಯಾಲೆಂಟೆಡ್ ಕ್ರಿಕೆಟರ್. ಲಾಂಗರ್ ಫಾರ್ಮೆಟ್​ನಲ್ಲಿ ಗಿಲ್, ಸಕ್ಸಸ್ ಕಂಡಿದ್ದಾರೆ. ಶಾರ್ಟರ್ ಫಾರ್ಮೆಟ್​ನಲ್ಲಿ ಗಿಲ್​ಗೆ ಚಾನ್ಸ್ ಮೇಲೆ ಚಾನ್ಸ್ ಕೊಟ್ಟರು, ಪ್ರಯೋಜನವಾಗ್ತಿಲ್ಲ. ಬಿಗ್​​ಬಾಸ್​ಗಳಿಗೆ ಗಿಲ್​ ಮೇಲಿನ ವ್ಯಾಮೋಹಕ್ಕೆ, ಯಶಸ್ವಿ ಜೈಸ್ವಾಲ್​ರಂತಹ ಪ್ರತಿಭಾವಂತ ಕ್ರಿಕೆಟಿಗ ಬಲಿಯಾಬೇಕಾಗಿದೆ. ಗಿಲ್​​ಗಾಗಿ ಜೈಸ್ವಾಲ್ ತನ್ನ ಸ್ಥಾನವನ್ನ ತ್ಯಜಿಸಬೇಕಾಗಿದೆ.
ಗಿಲ್​ ಯಂಗ್ ಕ್ರಿಕೆಟರ್. 26 ವರ್ಷದ ಗಿಲ್​​, ಸದ್ಯ ಮೂರೂ ಫಾರ್ಮೆಟ್ ಆಡ್ತಿದ್ದಾರೆ. ಗಿಲ್​​ಗೆ ಎಲ್ಲಾ ಫಾರ್ಮೆಟ್ ಆಡೋ ಸಾಮರ್ಥ್ಯ ಇದೆ. ಗಿಲ್​ರನ್ನ ಬಲವಂತವಾಗಿ ಮೂರೂ ಫಾರ್ಮೆಟ್ ಆಡಿಸ್ತಿರೋದು ಸರಿಯಲ್ಲ ಅಷ್ಟೇ. ಸದ್ಯ ಮೂರೂ ಫಾರ್ಮೆಟ್​ಗಳಲ್ಲಿ ಕಾಣಿಸಿಕೊಳ್ತಿರುವ ಗಿಲ್, ಅಂಡರ್​​ ಪರ್ಫಾಮೆನ್ಸ್ ಮೂಲಕ​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ ಇಮೇಜ್​ ಡ್ಯಾಮೇಜ್​ ಮಾಡಿಕೊಳ್ತಿದ್ದಾರೆ.  

ಒಂದೇ ಒಂದು ಫಿಫ್ಟಿ ಇಲ್ಲ

ಕಳೆದ ವರ್ಷ ಜುಲೈ 13ರಂದು ಗಿಲ್, ಜಿಂಬಾಬ್ವೆ ವಿರುದ್ಧ ಅರ್ಧಶತಕ ಸಿಡಿಸಿದ್ರು. ಹರಾರೆ ಟಿ-20 ಪಂದ್ಯದಲ್ಲಿ ಆಫ್ ಸೆಂಚುರಿ ಬಾರಿಸಿದ ಗಿಲ್, ನಂತರ ಫಿಫ್ಟಿ ಹೊಡೆಯಲಿಲ್ಲ. ಆ ಪಂದ್ಯದ ನಂತರ 16 ಟಿ-20 ಪಂದ್ಯಗಳನ್ನ ಆಡಿದ್ದ ಗಿಲ್, 513 ದಿನಗಳ ಬಳಿಕವೂ ಅರ್ಧಶತಕ ಬಾರಿಸಿಲ್ಲ. ಗಿಲ್ ಟಿ-20 ಫಾರ್ಮ್​​ ಚರ್ಚೆಗೆ ಇದೇ ಪ್ರಮುಖ ಕಾರಣ.

Advertisment

ಇದನ್ನೂ ಓದಿ:ಡೇಂಜರ್ ಝೋನ್​ನಲ್ಲಿ SKY.. ಟೀಂ ಇಂಡಿಯಾದ ಆತಂಕ ಹೆಚ್ಚಿಸಿದ ಸೂರ್ಯ..!

ಗಿಲ್ T20 ಜರ್ನಿ ಹೇಗಿದೆ..?

ಫೆಬ್ರವರಿ 1, 2023. ಅಹ್ಮದಾಬಾದ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗಿಲ್ ಆಕರ್ಷಕ ಅಜೇಯ ಶತಕ ಸಿಡಿಸಿದ್ರು. 126ರ ಸರಾಸರಿಯಲ್ಲಿ 200ರ ಸ್ಟ್ರೈಕ್​ರೇಟ್​ನಲ್ಲಿ ಅಬ್ಬರಿಸಿದ್ರು. ಬಳಿಕ ಬೇರೆ ಬೇರೆ ಸ್ಟೇಡಿಯಮ್​​ಗಳಲ್ಲಿ ಗಿಲ್, 7 ಟಿ-20 ಪಂದ್ಯಗಳನ್ನ ಆಡಿದ್ದಾರೆ. ಕೇವಲ 14 ಬ್ಯಾಟಿಂಗ್ ಌವರೇಜ್ ಹೊಂದಿರುವ ಗಿಲ್ 103 ರನ್​ಗಳಿಸಿದ್ದು ಒಂದೇ ಒಂದು ಅರ್ಧಶತಕ ದಾಖಲಿಸಿಲ್ಲ. 

ಸದ್ಯ ಟಿ-20 ವಿಶ್ವಕಪ್​ಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಬ್ಲೂ ಪ್ರಿಂಟ್ ರೆಡಿ ಮಾಡ್ತಿದ್ದಾರೆ. ಆ ಪ್ಲಾನ್​​ನಲ್ಲಿ ಗಿಲ್​ಗೆ ಅವಕಾಶದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಯಂಗ್ ಬ್ಯಾಟರ್ ಶುಭ್ಮನ್​ ಗಿಲ್​ರನ್ನ ಕೋಚ್ ಗೌತಮ್ ಗಂಭೀರ್, ಟೀಮ್ ಮ್ಯಾನೇಜ್ಮೆಂಟ್, ಸೆಲೆಕ್ಟರ್ಸ್ ಮತ್ತು ಬಿಸಿಸಿಐ ಬಾಸ್​ಗಳು, ಸ್ಟ್ರಾಂಗ್ ಆಗಿ ಬ್ಯಾಕ್ ಮಾಡ್ತಿದ್ದಾರೆ. ಗಿಲ್ ಪರ್ಫಾಮ್ ಮಾಡಲಿ, ಬಿಡಲಿ. ಮೂರೂ ಫಾರ್ಮೆಟ್​​​ಗಳಲ್ಲಿ ಆಡಿಸಬೇಕು ಅನ್ನೋದು ಬಿಗ್​ಬಾಸ್​ಗಳ ಅಭಿಪ್ರಾಯ. ಗಿಲ್ ಇದೇ ಫಾರ್ಮ್​ನಲ್ಲಿ ಮುಂದುವರೆದ್ರೆ, ಟಿ-20 ವಿಶ್ವಕಪ್ ಆಡೋದು ಅನುಮಾನ. 

ಇದನ್ನೂ ಓದಿ: ಇಂಡಿಗೋ ವಿಮಾನ ರದ್ದಿನಿಂದ ತೊಂದರೆ ಅನುಭವಿಸಿದ ಪ್ರಯಾಣಿಕರಿಗೆ ಗಿಫ್ಟ್ : ಇಂಡಿಗೋದಿಂದ 10 ಸಾವಿರ ರೂ. ವೋಚರ್ ನೀಡಿಕೆ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Yashasvi Jaiswal Shubman Gill
Advertisment
Advertisment
Advertisment