Advertisment

ಸೂರ್ಯನ ರಣತಂತ್ರಕ್ಕಿಲ್ಲ ಪ್ರತಿತಂತ್ರ; ಟೀಂ ಇಂಡಿಯಾದ ಸ್ಟ್ರೆಂಥ್ ಹೇಗಿದೆ ಗೊತ್ತಾ..?

ಭಾರತ- ಸೌತ್​ ಆಫ್ರಿಕಾ 2ನೇ ಟಿ20 ಕದನಕ್ಕೆ ಕೆಲವೇ ಗಂಟೆಗಳು ಬಾಕಿ. ಕಟಕ್​ನಲ್ಲಿ ದಿಗ್ವಿಜಯ ಸಾಧಿಸಿದ ಟೀಮ್​ ಇಂಡಿಯಾ, ಚಂಡೀಗಢದಲ್ಲೂ ಸೌತ್​ ಆಫ್ರಿಕಾವನ್ನ ಚೆಂಡಾಡಲು ತುದಿಗಾಲಲ್ಲಿ ನಿಂತಿದೆ. ಇಂಡಿಯನ್​ ಟೈಗರ್ಸ್​ ಅಬ್ಬರ ಕಂಡು ಹರಿಣಗಳ ಪಡೆ ಬೆಚ್ಚಿ ಬಿದ್ದಿದೆ. ಇಂದಿನ ಪಂದ್ಯದ ಆರಂಭಕ್ಕೂ ಮುನ್ನವೇ ಸೌತ್

author-image
Ganesh Kerekuli
Suryakumar and Gambhir

ಸೂರ್ಯಕುಮಾರ್ ಯಾದವ್ ಮತ್ತು ಕೋಚ್ ಗಂಭೀರ್ Photograph: (ಬಿಸಿಸಿಐ)

Advertisment
  • ಚಂಡೀಗಢದಲ್ಲಿ ಇಂಡೋ- ಆಫ್ರಿಕಾ 2ನೇ ಟಿ20 ಕದನ
  • ಆರಂಭಕ್ಕೂ ಮುನ್ನವೇ ಆಫ್ರಿಕಾಗೆ ಸೋಲಿನ ಟೆನ್ಶನ್​
  • ಹಾರ್ದಿಕ್​ ಸೂಪರ್​ ಹಿಟ್​​..! ಸಿಕ್ಸರ್ಸ್​ ಸೆಂಚೂರಿ..!

ಕಟಕ್​ನಲ್ಲಿ ಕೆರಳಿದ ಇಂಡಿಯನ್​ ಟೈಗರ್ಸ್​ ಹರಿಣಿಗಳನ್ನ ಭರ್ಜರಿ ಬೇಟೆಯಾಡಿದ್ದಾಯ್ತು. ಇದೀಗ ಚಂಡೀಗಢದಲ್ಲಿ ಆಫ್ರಿಕನ್ನರನ್ನ ಚೆಂಡಾಡಲು ಸೂರ್ಯಕುಮಾರ್​ ಸೈನ್ಯ ಸಜ್ಜಾಗಿದೆ. ಮೊದಲ ಟಿ20ಯಲ್ಲಿ ಟೀಮ್​ ಇಂಡಿಯನ್ಸ್​ ಆರ್ಭಟಕ್ಕೆ ಬೆಚ್ಚಿ ಬಿದ್ದಿರೋ, ಸೌತ್​ ಆಫ್ರಿಕಾ ಪಡೆಗೆ ದಿಕ್ಕೇ ತೋಚದಂತಾಗಿದೆ. ಮೆನ್​ ಇನ್​ ಬ್ಲ್ಯೂ ಪಡೆಯ ಗೇಮ್ ಚೇಂಜರ್ಸ್ ಮರ್ಕರಮ್​ ಬಳಗದ ನಿದ್ದೆಗೆಡಿಸಿದ್ದಾರೆ. 

Advertisment

ಕ್ಯಾಪ್ಟನ್​ ಸೂರ್ಯನ ರಣತಂತ್ರಕ್ಕಿಲ್ಲ ಪ್ರತಿತಂತ್ರ

ಸೂರ್ಯಕುಮಾರ್​ ಬ್ಯಾಟ್ಸ್​​​ಮನ್​ ಆಗಿ ಫ್ಲಾಪ್​ ಆಗಿರಬಹುದು. ಆದ್ರೆ ನಾಯಕನಾಗಿ ಸೂರ್ಯ ಸೂಪರ್​ ಡೂಪರ್​ ಹಿಟ್​. ಸಾರಥಿ ಸೂರ್ಯನ ರಣವ್ಯೂಹಕ್ಕೆ ಸಿಲುಕಿ ಎದುರಾಳಿಗಳು ವಿಲವಿಲ ಒದ್ದಾಡಿದ್ದಾರೆ. ಮೊದಲ ಟಿ20ಯಲ್ಲಿ ಸೌತ್​ ಆಫ್ರಿಕಾ ಸ್ಟನ್​ ಆಗಿದ್ದು ಲೇಟೆಸ್ಟ್​ ಎಕ್ಸಾಂಪಲ್​. ಈವರೆಗೆ ಸೂರ್ಯ ಭಾರತ ತಂಡವನ್ನ 35 ಟಿ20ಯಲ್ಲಿ ಮುನ್ನಡೆಸಿದ್ದಾರೆ. ಅದ್ರಲ್ಲಿ 28 ಪಂದ್ಯ ಗೆಲ್ಲಿಸಿದ್ರೆ, ಜಸ್ಟ್​ 5 ಪಂದ್ಯ ಸೋತು 2 ಪಂದ್ಯದಲ್ಲಿ ಡ್ರಾ ಸಾಧಿಸಿದ್ದಾರೆ. ಶೇಕಡಾ 84.9ರ ಗೆಲುವಿನ ಸರಾಸರಿ ಹೊಂದಿದ್ದಾರೆ. ಕ್ರಿಕೆಟ್​ ಇತಿಹಾಸದಲ್ಲೇ ಅತಿ ಹೆಚ್ಚು ಗೆಲುವಿನ ಸರಾಸರಿ ಹೊಂದಿರೋ ನಾಯಕ ಮತ್ತೊಬ್ಬ ಇಲ್ಲ. ಸೂರ್ಯನ ರಣತಂತ್ರಕ್ಕೆ ಸೌತ್​ ಆಫ್ರಿಕಾ ಬಿಡಿ. ವಿಶ್ವದ ಯಾವ ತಂಡದ ನಾಯಕನಲ್ಲೂ ಪ್ರತಿತಂತ್ರವಿಲ್ಲ. 

ಹಾರ್ದಿಕ್​ ಸೂಪರ್​ ಹಿಟ್​​

ಕಟಕ್​ನ ಟ್ರಿಕ್ಕಿ ಪಿಚ್​ನಲ್ಲಿ ನಡೆದಿದ್ದು ಒನ್​ ಮ್ಯಾನ್​ ಶೋ. ಭಾರತ, ಸೌತ್​ ಆಫ್ರಿಕಾ ಎರಡೂ ತಂಡದ ಬ್ಯಾಟರ್ಸ್​ ತಿಣುಕಾಟ ನಡೆಸಿದ್ರು. ಆಲ್​​​ರೌಂಡರ್​ ಹಾರ್ದಿಕ್​ ಪಾಂಡ್ಯ ಕಮ್​ಬ್ಯಾಕ್​ ಮ್ಯಾಚ್​ನಲ್ಲಿ ಸೂಪರ್​ ಶೋ ನೀಡಿದ್ರು. ಬೌಂಡರಿ, ಸಿಕ್ಸರ್​ ಬಾರಿಸಿ ಫ್ಯಾನ್ಸ್​ಗೆ ಟ್ರೀಟ್​ ನೀಡಿದ ಹಾರ್ದಿಕ್​ ಹೊಸ ದಾಖಲೆಯನ್ನೂ ಬರೆದ್ರು, ಟಿ20 ಫಾರ್ಮೆಟ್​ನಲ್ಲಿ ಸಿಕ್ಸರ್​ಗಳ ಸೆಂಚೂರಿ ಪೂರೈಸಿ ದಾಖಲೆ ಬರೆದ ಕುಂಗ್​ ಫು ಪಾಂಡ್ಯ ಬೊಂಬಾಟ್​ ಬ್ಯಾಟಿಂಗ್​ಗೆ ಆಫ್ರಿಕನ್​​ ಬೌಲರ್ಸ್​ ದಂಗಾಗಿ ಹೋದ್ರು. ಇಂದಿನ ಪಂದ್ಯಕ್ಕೂ ಮುನ್ನವೂ ಹಾರ್ದಿಕ್​ ಭಯ ಆಫ್ರಿಕನ್​ ಪಡೆಯನ್ನ ಆವರಿಸಿದೆ. 

ಇದನ್ನೂ ಓದಿ: ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್‌ ಬೆತ್ತಲೆ ಓಡುವುದನ್ನು ತಪ್ಪಿಸಿದ ಜೋ ರೂಟ್‌! ಜೋ ರೂಟ್‌ಗೆ ಗ್ರೇಸ್ ಹೇಡನ್ ರಿಂದ ಧನ್ಯವಾದ! 

Advertisment
Abhishek Sharma
ಅಭಿಷೇಕ್ ಶರ್ಮಾ Photograph: (ಬಿಸಿಸಿಐ)

‘ಸಾವಿರದ ಸರದಾರ’ ತಿಲಕ್​ ಆಟಕ್ಕೆ ಬೌಲರ್ಸ್​ ಥಂಡಾ

ಮೊದಲ ಟಿ20ಯಲ್ಲಿ ತಿಲಕ್​ ವರ್ಮಾ, ಅಭಿಷೇಕ್​ ಹಾಗೂ ಅಕ್ಷರ್​ ಜೊತೆಗೆ ಉತ್ತಮ ಪಾರ್ಟನರ್​ಶಿಪ್​ ಕಟ್ಟಿ ತಂಡಕ್ಕೆ ನೆರವಾದ್ರು. ಕಟಕ್​ನಲ್ಲಿ ತಿಲಕ್​ ವರ್ಮಾ ಆಡಿದ್ದು ಅಸಲಿ ಆಟವಲ್ಲ. ಸಿಚ್ಯುವೇಶನ್​ಗೆ ತಕ್ಕಂತೆ ಸ್ಲೋ ಬ್ಯಾಟಿಂಗ್​ ನಡೆಸಿದ್ರಷ್ಟೇ. ತಿಲಕ್​ ಸಿಡಿದು ನಿಂತ್ರೆ ಎದುರಾಳಿ ಬೌಲರ್​ಗಳನ್ನ ಚಿಂದಿ ಉಡಾಯಿಸಿ ಬಿಡ್ತಾರೆ. ಮೊದಲ ಪಂದ್ಯದಲ್ಲಿ ತಿಲಕ್​ ವರ್ಮಾ ಟಿ20 ಇಂಟರ್​ನ್ಯಾಷನಲ್ಸ್​ನಲ್ಲಿ ಸಾವಿರ ರನ್​ ಪೂರೈಸಿದ ಸಾಧನೆಯನ್ನ ಮಾಡಿದ್ರು. ಕೇವಲ 5 ಭಾರತೀಯ ಕ್ರಿಕೆಟರ್ಸ್​ ಮಾತ್ರ ಈ ಸಾಧನೆ ಮಾಡಿದ್ದಾರೆ. ತಿಲಕ್​ ಸಾಮರ್ಥ್ಯ ಏನು ಅನ್ನೋದಕ್ಕೆ ಇದೇ ಬೆಸ್ಟ್​ ಎಕ್ಸಾಂಪಲ್​.

ಸೌತ್​ ಆಫ್ರಿಕನ್ನರಿಗೆ ಎಲ್ಲಕ್ಕಿಂತ ಹೆಚ್ಚು ಭಯ ಹುಟ್ಟಿಸಿರೋದು ಬೂಮ್ರಾ ಬಿರುಗಾಳಿ. ಮೊದಲ ಟಿ20ಯಲ್ಲಿ ಎಕಾನಮಿಕಲ್​ ಸ್ಪೆಲ್​ ಹಾಕಿದ ಬೂಮ್ರಾ 2 ಪ್ರಮುಖ ವಿಕೆಟ್​ ಬೇಟೆಯಾಡಿದ್ರು. ಜೊತೆಗೆ ಟಿ20ಯಲ್ಲಿ 100 ವಿಕೆಟ್​ ಸಾಧನೆ ಮಾಡಿದ್ರು. 3 ಫಾರ್ಮೆಟ್​ನಲ್ಲಿ 100 ವಿಕೆಟ್​ ಕಬಳಿಸಿದ ಏಕೈಕ ಭಾರತೀಯ ಬೌಲರ್​ ಎಂಬ ದಾಖಲೆಯನ್ನ ಬರೆದ್ರು. ಪರ್ಫೆಕ್ಟ್​ ಲೈನ್​ ಅಂಡ್ ಲೆಂಥ್​ನೊಂದಿಗೆ ಸಾಲಿಡ್​ ರಿಧಮ್​ನಲ್ಲಿ ಬೌಲಿಂಗ್​ ಮಾಡ್ತಿರೋ ಬೂಮ್ರಾ, ಆಫ್ರಿಕನ್ನರನ್ನ ಕಂಗೆಡಿಸಿದ್ದಾರೆ. 

ಸಿಂಗ್​ ಈಸ್​ ಕಿಂಗ್​..!

ಆರ್ಷ್​​ದೀಪ್​ ಸಿಂಗ್​.. ಚುಟುಕು ಫಾರ್ಮೆಟ್​ನ ಪವರ್​ ಪ್ಲೇ ಪಂಟರ್​. ಟೀಮ್​ ಇಂಡಿಯಾ ಪರ ಪವರ್​ ಪ್ಲೇನಲ್ಲಿ ಹೈಯೆಸ್ಟ್​ ವಿಕೆಟ್​​ ಕಬಳಿರೋ ಬೌಲರ್​. ಟಿ20 ಇಂಟರ್​ನ್ಯಾಷನಲ್​​ನಲ್ಲಿ ಪವರ್​ ಪ್ಲೇನಲ್ಲಿ ಈವರೆಗೆ 760 ಎಸೆತಗಳನ್ನ ಹಾಕಿರೋ ಆರ್ಷ್​​ದೀಪ್​ 47 ವಿಕೆಟ್​ ಬೇಟೆಯಾಡಿದ್ದಾರೆ. ಮೊನ್ನೆ ಕೂಡ ಅಷ್ಟೇ.. ಮೊದಲ ಓವರ್​ನಲ್ಲೇ ವಿಕೆಟ್​ ಬೇಟೆಯಾಡಿದ ಆರ್ಷ್​​​ದೀಪ್​ ಪವರ್​ ಪ್ಲೇನಲ್ಲೇ ಒಟ್ಟು 2 ವಿಕೆಟ್​ ಕಬಳಿಸಿ ಸೌತ್​ ಆಫ್ರಿಕಾಗೆ ಶಾಕ್​ ಕೊಟ್ರು. ಇಂದಿನ ಪಂದ್ಯಕ್ಕೂ ಮುನ್ನ ಕೂಡ ಸೌತ್​ ಆಫ್ರಿಕಾ ಆರ್ಡರ್​ ಬ್ಯಾಟರ್ಸ್​​​ಗೆ ಆರ್ಷ್​​ದೀಪ್​ ಭೀತಿ ಕಾಡ್ತಿದೆ. 

Advertisment

ಇದನ್ನೂ ಓದಿ:ವಿಶ್ವದ ಶ್ರೀಮಂತ​ ಲೀಗ್​ನ ಶಾಕಿಂಗ್​ ಸುದ್ದಿ ರಿವೀಲ್​.. ಆರ್​​ಸಿಬಿಗೂ ಆಘಾತ..! 

Arshdeep singh (1)
ಅರ್ಷದೀಪ್ ಸಿಂಗ್ Photograph: (ಬಿಸಿಸಿಐ)

ಈ ಐವರು ಮಾತ್ರವಲ್ಲ.. ಅಭಿಷೇಕ್​ ಶರ್ಮಾ, ಶುಭ್​ಮನ್​ ಗಿಲ್, ಅಕ್ಷರ್​ ಪಟೇಲ್​, ಶಿವಂ ದುಬೆ.. ಟೀಮ್​ ಇಂಡಿಯಾದ ಟಿ20 ತಂಡದ ಸೆಟಪ್​ನಲ್ಲಿರೋ ಎಲ್ಲಾ ಆಟಗಾರರು ಡೇಂಜರೇ. ಯಾಕಂದ್ರೆ ಟಿ20 ಫಾರ್ಮೆಟ್​ಗೆ ಚಾಂಪಿಯನ್ಸ್​. ಹಾಗಂತ ಮೈ ಮರೆಯುವಂತಿಲ್ಲ. ಎಚ್ಚರಿಕೆಯ ಆಟ ಅತ್ಯಗತ್ಯ.

ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Surya kumar Yadav BCCI Team India Ind vs SA India vs South Africa
Advertisment
Advertisment
Advertisment