/newsfirstlive-kannada/media/post_attachments/wp-content/uploads/2024/11/RCB-5.jpg)
ಐಪಿಎಲ್​.. ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​​.. ಸಾವಿರಾರು ಕೋಟಿ ಲೆಕ್ಕದಲ್ಲಿ ಈ ಕಲರ್​​ಫುಲ್​ ಲೀಗ್​ನಿಂದ ಬಿಸಿಸಿಐಗೆ ಆದಾಯ ಹರಿದು ಬರುತ್ತೆ. ಇದೇ ಐಪಿಎಲ್​ ಬಿಸಿಸಿಐ ಬಾಸ್​​ಗಳನ್ನ ಚಿಂತೆಗೆ ದೂಡಿದೆ. ರಿಚೆಸ್ಟ್​ ಲೀಗ್​ನ ವ್ಯಾಲ್ಯೂವೇಷನ್​​ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕುಸಿತ ಕಂಡಿದೆ. ಫ್ರಾಂಚೈಸಿಗಳ ವಲಯದಲ್ಲೂ ಹೊಸ ಟೆನ್ಶನ್​ ಆರಂಭವಾಗಿದೆ.
ವರ್ಷದಿಂದ ವರ್ಷಕ್ಕೆ ಐಪಿಎಲ್​ನ ಕ್ರೇಜ್​ ಹೆಚ್ಚಾಗ್ತಿದೆ. ವಿಶ್ವದಾದ್ಯಂತ ಐಪಿಎಲ್​ ಟೂರ್ನಿಯನ್ನ ಫ್ಯಾನ್ಸ್​ ಹುಚ್ಚೆದ್ದು ನೋಡ್ತಿದ್ದಾರೆ. ಸಂಭ್ರಮಿಸ್ತಿದ್ದಾರೆ. ಆದ್ರಲ್ಲೂ, 2025ರ ಐಪಿಎಲ್​ ಈ ಹಿಂದೆಂದಿಗಿಂತ ಫ್ಯಾನ್ಸ್​ಗೆ ಭರ್ಜರಿ ಮನರಂಜನೆ ನೀಡಿತು. ಬೌಂಡರಿ, ಸಿಕ್ಸರ್​ಗಳ ಸುರಿಮಳೆ, ರಣರೋಚಕ ಪಂದ್ಯಗಳು, ಜಿದ್ದಾಜಿದ್ದಿನ ಕಾಳಗಗಳಿಗೆ ಸೀಸನ್​ ಸಾಕ್ಷಿಯಾಗಿತ್ತು. ಐಪಿಎಲ್ ಫ್ರಾಂಚೈಸಿಗಳ ಪೈಕಿ ಅತಿ ಹೆಚ್ಚು ಕ್ರೇಜ್​​​ ಹೊಂದಿರೋ ಆರ್​​ಸಿಬಿ ಬೊಂಬಾಟ್​ ಪರ್ಫಾಮೆನ್ಸ್​​ ನೀಡಿತ್ತು. ಆದರೂ ಐಪಿಎಲ್​ನ ವ್ಯಾಲ್ಯೂವೇಶನ್​ ಕುಸಿತ ಕಂಡಿದೆ. ಹೊಸದಾಗಿ ರಿವೀಲ್​ ಆಗಿರುವ ಡಾಟಾ ಇಂತದ್ದೊಂದು ಶಾಕಿಂಗ್​ ಸುದ್ದಿಯನ್ನ ರಿವೀಲ್​ ಮಾಡಿದೆ.
20% ಕುಸಿತ ಕಂಡ IPL ವ್ಯಾಲ್ಯೂವೇಶನ್​.!
2024ಕ್ಕೆ ಹೋಲಿಸಿದ್ರೆ ಶ್ರೇಕಡಾ 20ರಷ್ಟು ಕುಸಿತ ಕಂಡುಬಂದಿದೆ. 2024ರ ಅಂತ್ಯಕ್ಕೆ 12 ಬಿಲಿಯನ್​ ಡಾಲರ್​ ಇದ್ದ ವ್ಯಾಲ್ಯೂ 9.6 ಬಿಲಿಯನ್​ ಡಾಲರ್​ಗೆ ಕುಸಿತ ಕಂಡಿದೆ. 2024ರಲ್ಲಿ 82,700 ಕೋಟಿ ಇದ್ದ ವ್ಯಾಲ್ಯೂವೇಶನ್​ ಇದೀಗ 76,100 ಕೋಟಿಗೆ ಕುಸಿದಿದೆ. 2024ರಲ್ಲೂ ಐಪಿಎಲ್​ನ ಬ್ರ್ಯಾಂಡ್​​ ಮೌಲ್ಯ ಕುಸಿತ ಕಂಡಿತ್ತು. 2023ರ ಟೂರ್ನಿಯ ಅಂತ್ಯಕ್ಕೆ 92,500 ಕೋಟಿಯಷ್ಟಿದ್ದ ಶ್ರೀಮಂತ ಲೀಗ್​ನ ವ್ಯಾಲ್ಯೂವೇಶನ್​ 82,700 ಕೋಟಿಗೆ ಬಿದ್ದೊಗಿತ್ತು.
ಇದನ್ನೂ ಓದಿ: ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಬೆತ್ತಲೆ ಓಡುವುದನ್ನು ತಪ್ಪಿಸಿದ ಜೋ ರೂಟ್! ಜೋ ರೂಟ್‌ಗೆ ಗ್ರೇಸ್ ಹೇಡನ್ ರಿಂದ ಧನ್ಯವಾದ!
ಕಳೆದ ವರ್ಷಕ್ಕೆ ಹೋಲಿಸಿದ್ರೆ 2025ರಲ್ಲಿ ಫ್ರಾಂಚೈಸಿಗಳ ಬ್ರ್ಯಾಂಡ್​ ವ್ಯಾಲ್ಯೂನಲ್ಲೂ ಕುಸಿತ ಕಂಡಿದೆ. ಈ ವರ್ಷ ಗುಜರಾತ್​ ಹೊರತುಪಡಿಸಿದ್ರೆ, ಉಳಿದೆಲ್ಲಾ ಫ್ರಾಂಚೈಸಿಗಳು ಕುಸಿತ ಅನುಭವಿಸಿವೆ. ಮುಂಬೈ ಇಂಡಿಯನ್ಸ್​​ ವ್ಯಾಲ್ಯೂ ಶೇಕಡಾ 9ರಷ್ಟು ಕುಸಿದಿದ್ರೆ, ಚೊಚ್ಚಲ ಕಪ್​ ಗೆದ್ರೂ ಆರ್​​​ಸಿಬಿ ವ್ಯಾಲ್ಯೂ 10 ಪರ್ಸೆಂಟ್​ ಕುಸಿದಿದೆ. ಚೆನ್ನೈ ಸೂಪರ್​ ಕಿಂಗ್ಸ್​ನ ವ್ಯಾಲ್ಯೂ ಬರೋಬ್ಬರಿ 24 ಪರ್ಸೆಂಟ್​ ಬಿದ್ದೋಗಿದೆ. ಕಳೆದ ವರ್ಷ ಬ್ರ್ಯಾಂಡ್ ವಾಲ್ಯೂನಲ್ಲಿ ನಂಬರ್​​​.1 ತಂಡವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್​, 3ನೇ ಸ್ಥಾನಕ್ಕೆ ಕುಸಿದಿದೆ.
2025ರ ಮೋಸ್ಟ್​ ವ್ಯಾಲ್ಯೂಬಲ್ IPL ಟೀಮ್ಸ್
2025ರ ಮೋಸ್ಟ್​ ವ್ಯಾಲ್ಯೂಬಲ್​ ಟೀಮ್ಸ್​ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್​ ಅಗ್ರಸ್ಥಾನದಲ್ಲಿದೆ. 973.41 ಕೋಟಿಯೊಂದಿಗೆ ಮುಂಬೈ ನಂಬರ್​ 1 ಸ್ಥಾನದಲ್ಲಿದ್ರೆ ಆರ್​ಸಿಬಿ 943.55 ಕೋಟಿಯೊಂದಿಗೆ 2ನೇ ಸ್ಥಾನದಲ್ಲಿದೆ. 835.71ಕೋಟಿ ಬ್ರ್ಯಾಂಡ್ ವ್ಯಾಲ್ಯೂ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್​, 3ನೇ ಸ್ಥಾನಕ್ಕಿಳಿದಿದೆ. 655.93 ಕೋಟಿ ಹೊಂದಿರೋ ಕೊಲ್ಕತ್ತಾ 4ನೇ, 629.04 ಕೋಟಿ ಹೊಂದಿರೋ ಗುಜರಾತ್​ ಜೈಂಟ್ಸ್​ 5ನೇ ಸ್ಥಾನದಲ್ಲಿವೆ.
ಇದನ್ನೂ ಓದಿ: ಗಿಲ್​​, ಸೂರ್ಯ​ ಫೇಲ್, ಭಾರೀ ಆಕ್ರೋಶ.. ಜನ ಮೆಚ್ಚಿದ ಪಾಂಡ್ಯ ಆಟ..!
ಸೀಸನ್​​-18ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಪಂಜಾಬ್ ಕಿಂಗ್ಸ್​ ತಂಡದ ಬ್ರ್ಯಾಂಡ್​ ವ್ಯಾಲ್ಯೂನಲ್ಲೂ ಇಳಿಕೆಯಾಗಿದೆ. ಪಂಜಾಬ್​ ವ್ಯಾಲ್ಯೂ ಶೇಕಡಾ 3ರಷ್ಟು ಕುಸಿದಿದ್ದು 66 ಮಿಲಿಯನ್​ ಡಾಲರ್​ ಹೊಂದಿದೆ. ಡೆಲ್ಲಿ ಕ್ಯಾಪಿಟಲ್ಸ್​ ತಂಡದ ವ್ಯಾಲ್ಯೂ ಬರೋಬ್ಬರಿ 26% ಕುಸಿದಿದ್ದು, 59 ಮಿಲಿಯನ್​ ಡಾಲರ್​ಗೆ ಇಳಿಕೆ ಕಂಡಿದೆ.
2025ರ ಮೋಸ್ಟ್​ ವ್ಯಾಲ್ಯೂಬಲ್ IPL ಟೀಮ್ಸ್
ಐಪಿಎಲ್ ಫ್ರಾಂಚೈಸಿ | ಕೋಟಿ ರೂಪಾಯಿ |
| ಪಂಜಾಬ್ ಕಿಂಗ್ಸ್ | 593.81 ಕೋಟಿ |
| ಲಕ್ನೋ ಸೂಪರ್ ಜೈಂಟ್ಸ್ | 530.13 ಕೋಟಿ |
| ಡೆಲ್ಲಿ ಕ್ಯಾಪಿಟಲ್ಸ್ | 530.13 ಕೋಟಿ |
| ಎಸ್​ಆರ್​ಹೆಚ್​ | 504.81 ಕೋಟಿ |
| ರಾಜಸ್ಥಾನ್ ರಾಯಲ್ಸ್ | 476.13 ಕೋಟಿ |
IPL ವ್ಯಾಲ್ಯೂವೇಶನ್ ಕುಸಿತಕ್ಕೆ ಕಾರಣ ಏನು.?
ಚಿನ್ನದ ಮೊಟ್ಟೆ ಇಡೋ ಕೋಳಿ ಅನಿಸಿಕೊಂಡಿದ್ದ ಐಪಿಎಲ್​ನ ವ್ಯಾಲ್ಯೂ ವರ್ಷದಿಂದ ವರ್ಷಕ್ಕೆ ಕುಸಿತ ಕಾಣ್ತಿರೋದು ಬಿಸಿಸಿಐ ವಲಯದಲ್ಲಿ ಟೆನ್ಶನ್​ ಹೆಚ್ಚಿಸಿದೆ. ವ್ಯಾಲ್ಯೂವೇಶನ್​ ಕುಸಿತಕ್ಕೆ ಕಾರಣ ಏನು ಅನ್ನೋ ಉತ್ತರ ಹುಡುಕಾಟ ಜೋರಾಗಿ ನಡೀತಿದೆ. ಕೇಂದ್ರ ಸರ್ಕಾರ ಆನ್​​ ಲೈನ್​ ಬೆಟ್ಟಿಂಗ್​ ಆ್ಯಪ್​​​ಗಳನ್ನ ನಿಷೇಧಿಸಿದ್ದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಆರ್​​ಸಿಬಿ, ರಾಜಸ್ಥಾನ್​​ನಂತಹ ಫ್ರಾಂಚೈಸಿಗಳು ಮಾರಾಟಕ್ಕೆ ಮುಂದಾಗಿರೋದು ಅನ್ನೋದು ಎಕ್ಸ್​ಪರ್ಟ್​ಗಳ ವಿಶ್ಲೇಷಣೆಯಾಗಿದೆ.
ಇದನ್ನೂ ಓದಿ: ತುಮಕೂರು ಜಿಲ್ಲೆಗೆ ಐದಾರು ತಿಂಗಳಲ್ಲಿ ಎತ್ತಿನಹೊಳೆ ಯೋಜನೆ ನೀರು : ಡಿಸಿಎಂ ಡಿಕೆಶಿ ಭರವಸೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us