Advertisment

ಗಿಲ್​​, ಸೂರ್ಯ​ ಫೇಲ್, ಭಾರೀ ಆಕ್ರೋಶ.. ಜನ ಮೆಚ್ಚಿದ ಪಾಂಡ್ಯ ಆಟ..!

ಕಟಕ್​ ಸ್ಟೇಡಿಯಂನಲ್ಲಿ ನಿನ್ನೆ ಟೀಮ್​ ಇಂಡಿಯಾದ ಬ್ಯಾಟ್ಸ್​ಮನ್​ಗಳು ಸಿಕ್ಕಾಪಟ್ಟೆ ತಿಣುಕಾಟ ನಡೆಸಿದ್ರು. ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ಮಾತ್ರ ವಿಸ್ಪೋಟಕ ಇನ್ನಿಂಗ್ಸ್​ ಕಟ್ಟಿದ್ರು. ಸೌತ್​ ಆಫ್ರಿಕಾ ಬೌಲರ್​ಗಳನ್ನ ಬೆಂಡೆತ್ತಿದ ಹಾರ್ದಿಕ್ ಫ್ಯಾನ್ಸ್​ಗೆ ಫುಲ್​ ಮೀಲ್ಸ್​ ಮನರಂಜನೆ ನೀಡಿದ್ರು.

author-image
Ganesh Kerekuli
Hardik Pandya (9)
Advertisment
  • ​ತಿಣುಕಾಡಿದ ತಿಲಕ್​ ವರ್ಮಾ, ಅಭಿಶೇಕ್​ ಶರ್ಮಾ
  • ಕಮ್​ಬ್ಯಾಕ್​ ಪಂದ್ಯದಲ್ಲಿ ಹಾರ್ದಿಕ್​ ಸೂಪರ್ ಹಿಟ್​
  • ಸೌತ್​ ಆಫ್ರಿಕಾ ಬೌಲರ್​ಗಳ ಮೇಲೆ ಹಾರ್ದಿಕ್​ ಸವಾರಿ

ಇಂಡೋ-ಆಫ್ರಿಕಾ ಮೊದಲ ಟಿ20 ಫೈಟ್​ನಲ್ಲಿ ನಡೆದಿದ್ದು ಒನ್​ ಮ್ಯಾನ್​ ಶೋ. ಟೀಮ್​ ಇಂಡಿಯಾದ ಉಳಿದೆಲ್ಲಾ ಬ್ಯಾಟ್ಸ್​ಮನ್​ಗಳು ಪೆವಿಲಿಯನ್​ ಪರೇಡ್​ ನಡೆಸಿದ್ರೆ ಹಾರ್ದಿಕ್​ ಪಾಂಡ್ಯ ಸೂಪರ್​ ಹಿಟ್​ ಪರ್ಫಾಮೆನ್ಸ್​ ನೀಡಿದ್ರು. ಕಟಕ್​​​ನಲ್ಲಿ ಕ್ರಿಸ್​ ಕಚ್ಚಿ ನಿಂತ ಹಾರ್ದಿಕ್​ ಸೌತ್​ ಆಫ್ರಿಕಾ ಬೌಲರ್​​ಗಳನ್ನ ಚೆಂಡಾಡಿದ್ರು. ಹೇಗಿತ್ತು ಹಾರ್ದಿಕ್​ ಆರ್ಭಟ ಅನ್ನೋ ವಿವರ ಇಲ್ಲಿದೆ. 

Advertisment

ಇದನ್ನೂ ಓದಿ: ಹೆಚ್ಚಾದ ವಿವಾಹ ವಿಚ್ಛೇದನ : ಬೆಂಗಳೂರಿನ ಸೋಮೇಶ್ವರ ದೇವಾಲಯದಲ್ಲಿ ಮದುವೆಯೇ ನಿಷೇಧ!

Arshdeep singh

ಟಾಸ್​​ ಸೋತು ಮೊದಲು ಬ್ಯಾಟಿಂಗ್​ಗಿಳಿದ ಟೀಮ್​ ಇಂಡಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ವೈಸ್​ ಕ್ಯಾಪ್ಟನ್​ ಶುಭ್​ಮನ್​ ಗಿಲ್​ ಕಟಕ್​ನಲ್ಲೂ ಫ್ಲಾಪ್​ ಶೋ ನೀಡಿದ್ರು. 4 ರನ್​ಗೆ ಗಿಲ್​ ಆಟ ಅಂತ್ಯವಾಯ್ತು.

ಕ್ಯಾಪ್ಟನ್​ ಸೂರ್ಯಕುಮಾರ್​ ಕೂಡ ಫಾರ್ಮ್​ ಕಂಡುಕೊಳ್ಳುವಲ್ಲಿ ಫೇಲ್​ ಆದ್ರು. ರಿಧಮ್​ ಕಂಡುಕೊಳ್ಳಲು ಸೂರ್ಯಕುಮಾರ್​ ಸಿಕ್ಕಾಪಟ್ಟೆ ಸ್ಟ್ರಗಲ್​ ಮಾಡಿದ್ರು. 1 ಸಿಕ್ಸರ್​, 1 ಬೌಂಡರಿ ಬಾರಿಸಿದ ಕ್ಯಾಪ್ಟನ್​ 12 ರನ್​ಗಳಿಸುವಷ್ಟರಲ್ಲಿ ಸುಸ್ತಾದ್ರು.  ಅಗ್ರೆಸ್ಸಿವ್​ ಇಂಟೆಂಟ್​ನಲ್ಲಿ ಬ್ಯಾಟ್​ ಬೀಸಿದ ಅಭಿಷೇಕ್​ ಶರ್ಮಾ 1 ಸಿಕ್ಸರ್​, 2 ಭರ್ಜರಿ ಬೌಂಡರಿ ಬಾರಿಸಿದ್ರು. ಬಿಗ್​ ಇನ್ನಿಂಗ್ಸ್​ ಕಟ್ಟುವಲ್ಲಿ ವಿಫಲರಾದ್ರು. 12 ಎಸೆತಗಳಲ್ಲಿ 17 ರನ್​ಗಳಿಸಿ ನಿರ್ಗಮಿಸಿದ್ರು. 

Advertisment

ಇದನ್ನೂ ಓದಿ: 2 ಸರಣಿ, 10 ಪಂದ್ಯ! ವಿಶ್ವಕಪ್​ಗೂ ಮುನ್ನ 5 ಸವಾಲ್.. ಗಂಭೀರ್ ಬಳಿ ಉತ್ತರ ಇದ್ಯಾ?

Hardik Pandya (8)

4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ತಿಲಕ್​ ವರ್ಮಾ ಕೂಡ ತಿಣುಕಾಡಿದ್ರು. 32 ಎಸೆತ ಎದುರಿಸಿ ಕೇವಲ 26 ರನ್​ಗಳಿಸಿದ್ರು. 21 ಎಸೆತ ಎದುರಿಸಿದ ಅಕ್ಷರ್​ ಪಟೇಲ್​ ಕೂಡ 23 ರನ್​​ಗಳಿಸಿ ನಿರ್ಗಮಿಸಿದ್ರು.  ಎಲ್ಲಾ ಬ್ಯಾಟ್ಸ್​​ಮನ್​ಗಳು ವೈಫಲ್ಯ ಅನುಭವಿಸಿದ್ರೆ ಕಮ್​​ಬ್ಯಾಕ್​ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಸೂಪರ್​ ಹಿಟ್​ ಇನ್ನಿಂಗ್ಸ್​ ಕಟ್ಟಿದ್ರು. ಮೈದಾನದ ಉದ್ದಗಲಕ್ಕೆ ಚೆಂಡಿನ ದರ್ಶನ ಮಾಡಿಸಿದ ಹಾರ್ದಿಕ್​ ಫಾನ್ಸ್​ಗೆ ಭರ್ಜರಿ ಟ್ರೀಟ್​ ನೀಡಿದ್ರು. 

210ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸಿದ ಹಾರ್ದಿಕ್​ ಪಾಂಡ್ಯ 6 ಬೌಂಡರಿ, 4 ಬೊಂಬಾಟ್​ ಸಿಕ್ಸರ್​ ಬಾರಿಸಿದ್ರು. ಸ್ಫೋಟಕ ಇನ್ನಿಂಗ್ಸ್​ನೊಂದಿಗೆ ಟಿ20 ಕರಿಯರ್​ನ 4ನೇ ಹಾಫ್​ ಸೆಂಚುರಿ ಸಿಡಿಸಿದ್ರು.   ಶಿವಂ ದುಬೆ 11 ರನ್​ಗಳಿಸಿ ಔಟಾದ್ರೆ, ಹಾರ್ದಿಕ್​ ಪಾಂಡ್ಯ ಅಜೇಯ 59, ಜಿತೇಶ್​ ಶರ್ಮಾ ಅಜೇಯ 10 ರನ್​ಗಳ ಕಾಣಿಕೆ ನೀಡಿದ್ರು. ಇದರೊಂದಿಗೆ 20 ಓವರ್​ಗಳ ಅಂತ್ಯಕ್ಕೆ 6 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ 175 ರನ್​ಗಳ ಕಾಂಪಿಟೇಟಿವ್​ ಸ್ಕೋರ್​ ಕಲೆ ಹಾಕಿತು. 

Advertisment

176 ರನ್​ಗಳ ಗುರಿ ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ, 12.3 ಓವರ್​​ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯ್ತು. ಆ ಮೂಲಕ ಟೀಂ ಇಂಡಿಯಾ 101 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು. 

ಇದನ್ನೂ ಓದಿ:74 ರನ್​ಗಳಿಗೆ ಸೌತ್ ಆಫ್ರಿಕಾ ಆಲೌಟ್.. 101 ರನ್​ಗಳ ಅಂತರದಲ್ಲಿ ಗೆದ್ದ ಭಾರತ ತಂಡ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Hardik Pandya Surya kumar Yadav Abhishek Sharma Shubman Gill Ind vs SA T20I India vs South Africa
Advertisment
Advertisment
Advertisment