/newsfirstlive-kannada/media/media_files/2025/12/10/arshdeep-singh-2025-12-10-08-37-49.jpg)
ಟೀಮ್ ಇಂಡಿಯಾ ಸವಾಲಿಗೆ ಉತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡ, ಆರಂಭದಲ್ಲೇ ಆಘಾತ ಎದುರಿಸಿತು. ಮೊದಲ ಓವರ್​ನ 2ನೇ ಎಸೆತದಲ್ಲಿ ಕ್ವಿಂಟನ್ ಡಿಕಾಕ್, ಸೆಕೆಂಡ್ ಸ್ಲಿಪ್​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ್ರು. ಎರಡು ಬೌಂಡರಿ ಸಿಡಿಸಿದ ಟ್ರಿಸ್ಟನ್ ಸ್ಟಬ್ಸ್​​, 14 ರನ್​ಗಳಿಸಿ ಆರ್ಷ್​ದೀಪ್​ ಸಿಂಗ್​ಗೆ 2ನೇ ಬಲಿಯಾದ್ರು.
ದಾಳಿಗಿಳಿದ ಮೊದಲ ಎಸೆತದಲ್ಲೇ ಅಕ್ಷರ್ ಪಟೇಲ್ 14 ರನ್​ಗಳಿ
ಸಿದ್ದ ಆಫ್ರಿಕನ್ ನಾಯಕ ಏಡಿಯನ್ ಮಾಕ್ರರ್ಮ್​​​​​ರನ್ನ ಕ್ಲೀನ್ ಬೌಲ್ಡ್ ಮಾಡಿದ್ರು. ಡೇಂಜರಸ್ ಡೇವಿಡ್ ಮಿಲ್ಲರ್​ಗೆ ಹಾರ್ದಿಕ್ ಪಾಂಡ್ಯ ತನ್ನ ಮೊದಲ ಎಸೆತದಲ್ಲೇ ಪೆವಿಲಿಯನ್ ದಾರಿ ತೋರಿಸಿದ್ರು. ವರುಣ್ ಚಕ್ರವರ್ತಿ ಎಸೆದ ಮಿಸ್ಟ್ರಿ ಬಾಲ್​​ಗೆ ಡೊನೊವನ್ ಫೆರೆರಾ, ವಿಕೆಟ್ ಕೀಪರ್​​​​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು.
ಇದನ್ನೂ ಓದಿ: 2 ಸರಣಿ, 10 ಪಂದ್ಯ! ವಿಶ್ವಕಪ್​ಗೂ ಮುನ್ನ 5 ಸವಾಲ್.. ಗಂಭೀರ್ ಬಳಿ ಉತ್ತರ ಇದ್ಯಾ?
ಬ್ಯಾಕ್ ಟು ಬ್ಯಾಕ್ 2 ಸಿಕ್ಸರ್ ಸಿಡಿಸಿದ ಮಾರ್ಕೊ ಯಾನ್ಸನ್, 12 ರನ್​ಗಳಿಸಿ ಹೋರಾಟ ಮುಗಿಸಿದ್ರು. ಯಂಗ್ ಌಂಡ್ ಡೈನಾಮಿಕ್ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಸೆಟಲ್ ಆಗ್ತಿದ್ದಂತೆ, ವೇಗಿ ಜಸ್ಪ್ರೀತ್ ಬೂಮ್ರಾ ಬ್ರೇಕ್ ನೀಡಿದ್ರು. 22 ರನ್​ಗಳಿಸಿದ ಬ್ರೆವಿಸ್ ಎಕ್ಸ್ಟ್ರಾ ಕವರ್​​ನಲ್ಲಿ ಕ್ಯಾಚ್ ನೀಡಿದ್ರು.
ಕೊನೆಗೆ ಕೇಶವ್ ಮಹಾರಾಜ್, ಎನ್ರಿಚ್ ನೋಕಿಯಾ ಮತ್ತು ಸಿಪಾಮ್ಲಾ ಒಬ್ಬರ ಹಿಂದೊಬ್ಬರು ಔಟಾಗೋ ಮೂಲಕ, ಆಫ್ರಿಕನ್ ಇನ್ನಿಂಗ್ಸ್​ ಮುಗಿಸಿದ್ರು. ಅಂತಿಮವಾಗಿ ಸೌತ್ ಆಫ್ರಿಕಾ ಕೇವಲ 12.3 ಓವರ್​ಗಳಲ್ಲಿ 74 ರನ್​ಗಳಿಗೆ ಆಲೌಟ್​ ಆಯ್ತು. ಆ ಮೂಲಕ ಆಫ್ರಿಕಾ 101 ರನ್​ಗಳ ಹೀನಾಯ ಸೋಲು ಅನುಭವಿಸಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us