Advertisment

2 ಸರಣಿ, 10 ಪಂದ್ಯ! ವಿಶ್ವಕಪ್​ಗೂ ಮುನ್ನ 5 ಸವಾಲ್.. ಗಂಭೀರ್ ಬಳಿ ಉತ್ತರ ಇದ್ಯಾ?

ಟಿ-20 ವಿಶ್ವಕಪ್​​ಗೆ ಕೇವಲ 2 ತಿಂಗಳು ಬಾಕಿ ಉಳಿದಿದೆ. ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸಿಕೊಳ್ತಿವೆ. ಹಾಲಿ ಚಾಂಪಿಯನ್ಸ್​ ಟೀಮ್ ಇಂಡಿಯಾಗೆ ವಿಶ್ವಕಪ್​ಗೂ ಮುನ್ನ ಸಾಲು ಸಾಲು ಸವಾಲುಗಳು ಎದುರಾಗಿವೆ. ಟಫ್ ಚಾಲೆಂಜಸ್ ಫೇಸ್ ಮಾಡ್ತಿರುವ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮೊದಲು ಈ 5 ಸವಾಲುಗಳಿಗೆ ಉತ್ತರಿಸಬೇಕಿದೆ

author-image
Ganesh Kerekuli
Gambhir (3)
Advertisment
  • ಟೀಮ್ ಮ್ಯಾನೇಜ್ಮೆಂಟ್​​ಗೆ ಸವಾಲು ಎದುರಾಗೋದು ಎಲ್ಲಿ..?
  • T20 ವಿಶ್ವಕಪ್​ ತಂಡದಲ್ಲಿ ಸ್ಥಾನ ನಿರೀಕ್ಷೆ, ಆಟಗಾರರ ಕಥೆ ಏನು..?
  • ಅಗ್ರೆಸಿವ್ ಕ್ರಿಕೆಟ್ vs ಸ್ಮಾರ್ಟ್ ಕ್ರಿಕೆಟ್​​​​​ ಚಾಲೆಂಜ್ ಹೇಗೆ..?

ಕಳೆದ ವರ್ಷ ಬಾರ್ಬಡೋಸ್​ನಲ್ಲಿ ಟಿ-20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ಟೈಟಲ್ ಡಿಫೆಂಡ್ ಮಾಡಿಕೊಳ್ಳಲು ಹೊರಟಿದೆ. ಉಪಖಂಡದಲ್ಲೇ ವಿಶ್ವಕಪ್ ನಡೆಯೋದ್ರಿಂದ ಟೀಮ್ ಇಂಡಿಯಾಕ್ಕೆ ಅಡ್ವಾಂಟೇಜ್. ಆದ್ರೆ ಬಿಗ್ ಟೂರ್ನಿಗೂ ಮುನ್ನ ಟೀಮ್ ಇಂಡಿಯಾ ಪ್ರಾಬ್ಲಂ ಫ್ರೀ ಆಗಬೇಕಿದೆ. 

Advertisment

ವಿಶ್ವಕಪ್​ಗೂ ಮುನ್ನ ಸಾಕಾ?

ಟಿ-20 ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧ 2 ಸರಣಿಗಳನ್ನ ಆಡಲಿದೆ. ತವರಿನಲ್ಲೇ ಒಟ್ಟು 10 ಪಂದ್ಯಗಳನ್ನಾಡಲಿರುವ ಸ್ಕೈ ಪಡೆ, ಆ ಎರಡು ಸರಣಿಗಳನ್ನಾಡಿ ವಿಶ್ವಕಪ್​ಗೆ ರೆಡಿಯಾಗಬೇಕಿದೆ. ಪ್ರಶ್ನೆ ಏನಪ್ಪಾ ಅಂದ್ರೆ ವಿಶ್ವಕಪ್ ಗೆಲ್ಲೋಕೆ ಆ 10 ಪಂದ್ಯಗಳು ಸಾಕಾ ಅನ್ನೋದು? 

ಇದನ್ನೂ ಓದಿ: ಮಂಕಾದ ಸೂರ್ಯ.. ಗ್ರಹಣ ಬಿಡದಿದ್ದರೆ ಪಟ್ಟ ಒಂದೇ ಅಲ್ಲ, ತಂಡದಿಂದಲೇ ಕಿಕ್​ ಔಟ್!

ಸವಾಲು ಎದುರಾಗೋದು ಎಲ್ಲಿ..?

ಕೋಚ್ ಗೌತಮ್ ಗಂಭೀರ್ ಮತ್ತು ಟೀಮ್ ಮ್ಯಾನೇಜ್ಮೆಂಟ್, ದೊಡ್ಡ ಸವಾಲು ಎದುರಾಗೋದು ತಂಡದ ಆಯ್ಕೆಯಲ್ಲಿ. ಸದ್ಯ ಆಫ್ರಿಕಾ ವಿರುದ್ಧ ಟಿ-20 ಸರಣಿಯನ್ನಾಡ್ತಿರುವ ತಂಡವೇ ಹೆಚ್ಚು ಕಡಿಮೆ ನ್ಯೂಜಿಲೆಂಡ್ ಸರಣಿಗೂ ಆಯ್ಕೆಯಾಗಬಹುದು. ಟೀಮ್ ಮ್ಯಾನೇಜ್ಮೆಂಟ್, ಆಫ್ರಿಕಾ ವಿರುದ್ಧದ ಸರಣಿ ಜಸ್ಟ್ ಎಕ್ಸ್​ಪೀರಿಮೆಂಟ್ ಅಂದ್ರೆ ಮತ್ತೆ ಎಲ್ಲವೂ ಗೊಂದಲಮಯವಾಗಲಿದೆ.

Advertisment

ಆಟಗಾರರ ಕಥೆ ಏನು..?

ತವರಿನಲ್ಲೇ ನಡೆಯಲಿರೋ ಟಿ-20 ವಿಶ್ವಕಪ್ ತಂಡಕ್ಕೆ ಸಾಕಷ್ಟು ಮಂದಿ ಯುವ ಆಟಗಾರರು ಆಯ್ಕೆಯಾಗೋ ನಿರೀಕ್ಷೆಯಲ್ಲಿದ್ದಾರೆ. ಕೆ.ಎಲ್.ರಾಹುಲ್, ರಿಷಭ್ ಪಂತ್, ಇಶಾನ್ ಕಿಶನ್​ರಂತಹ ಆಟಗಾರರು ಟಿ-ಟ್ವೆಂಟಿ ವಿಶ್ವಕಪ್ ಆಡೋ ವಿಶ್ವಾಸದಲ್ಲಿದ್ದಾರೆ. ಹಾಗೆ ಯುವ ಕ್ರಿಕೆಟಿಗರಾದ ವೈಭವ್ ಸುರ್ಯವಂಶಿ, ಯಶ್ ಠಾಕೂರ್​ರಂತಹ ಆಟಗಾರರೂ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಇವರ ಕಥೆ ಏನು ಅನ್ನೋದು ಕ್ಲಾರಿಟಿ ಇಲ್ಲ.​​ 

ಇದನ್ನೂ ಓದಿ:ಮೊದಲ ಟಿ-20 ಪಂದ್ಯ.. ಬಲಿಷ್ಠ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲ ಸ್ಥಾನ..?

ಅಗ್ರೆಸಿವ್ ಕ್ರಿಕೆಟ್ V/S ಸ್ಮಾರ್ಟ್..!

ಗೌತಮ್ ಗಂಭೀರ್ ಕೋಚ್ ಹುದ್ದೆ ಅಲಂಕರಿಸಿದ ಬಳಿಕ ಟೀಮ್ ಇಂಡಿಯಾ ಟೆಸ್ಟ್, ಏಕದಿನ ಮತ್ತು ಟಿ-20 ಫಾರ್ಮೆಟ್​​ನಲ್ಲಿ ಅಗ್ರೆಸಿವ್ ಬ್ರ್ಯಾಂಡ್ ಆಫ್ ಕ್ರಿಕೆಟ್ ಆಡ್ತಿದೆ. ಆದ್ರೆ ಆನ್​ಫೀಲ್ಡ್​ನಲ್ಲಿ ಅತಿಹೆಚ್ಚು ಅಗ್ರೆಸಿವ್​ನೆಸ್ ತೋರಿಸೋದು, ಒಳ್ಳೇದಲ್ಲ. ಕೆಲವೊಮ್ಮೆ ಸ್ಮಾರ್ಟ್ ಕ್ರಿಕೆಟ್​​​ ಸಹ ಆಡಬೇಕಾಗುತ್ತದೆ. ವಿಶ್ವಕಪ್​ಗೂ ಮುನ್ನ ಅಗ್ರೆಸಿವ್ ಕ್ರಿಕೆಟ್ ಅಥವಾ ಸ್ಮಾರ್ಟ್ ಕ್ರಿಕೆಟಾ ಅನ್ನೋದನ್ನ ಡಿಸೈಡ್ ಮಾಡಬೇಕಿದೆ.

Advertisment

ಬ್ಲೂ ಪ್ರಿಂಟ್ ರೆಡಿಯಾಗಿದ್ಯಾ?

ಕಳೆದ ಕೆಲ ದಿನಗಳ ಹಿಂದೆ ಕೋಚ್ ಗಂಭೀರ್​​​​​​​​​​​​​​​​​​​​​​​, ನಾವು ವಿಶ್ವಕಪ್​​ಗೆ ರೆಡಿ ಇಲ್ಲ ಅಂತ ಬಹಿರಂಗ ಹೇಳಿಕೆ ನೀಡಿದ್ರು. ಆದ್ರೀಗ ವಿಶ್ವಕಪ್​​ಗೆ ಗಂಭೀರ್ ಬ್ಲೂ ಪ್ರಿಂಟ್ ರೆಡಿ ಮಾಡಿಕೊಂಡಿದ್ದಾರಾ? ಇನ್ನು ಏನಾದ್ರೂ ಪ್ಲಾನ್​ನಲ್ಲಿ ತೊಡಗಿಕೊಂಡಿದ್ದಾರಾ ಅನ್ನೋದು ಇನ್ನು ಸ್ಪಷ್ಟತೆ ಇಲ್ಲ. ವಿಶ್ವಕಪ್​ಗೆ ಕೇವಲ 2 ತಿಂಗಳು ಬಾರಿ ಇರೋದ್ರಿಂದ ಗಂಭೀರ್​ ತಲೆಯಲ್ಲಿ ನೂರಾರು ಯೋಜನೆಗಳು ಇರಬಹುದು. 2 ಸರಣಿ, 2 ತಿಂಗಳು, ಟೈಟಲ್ ಡಿಫೆಂಡ್ ಮಾಡಿಕೊಳ್ಳಲು ಟೀಮ್ ಇಂಡಿಯಾಕ್ಕೆ ಸುಲಭವಲ್ಲ.

ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gautam Gambhir Surya kumar Yadav Team India T20I T20 world cup
Advertisment
Advertisment
Advertisment