ಮೊದಲ ಟಿ-20 ಪಂದ್ಯ.. ಬಲಿಷ್ಠ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲ ಸ್ಥಾನ..?

ಟೆಸ್ಟ್, ಏಕದಿನ ನಂತರ ಟಿ-20 ಫಾರ್ಮೆಟ್​​ಗೆ ಟೀಮ್ ಇಂಡಿಯಾ ಭರ್ಜರಿ ಸಿದ್ಧತೆ ನಡೆಸಿಕೊಂಡಿದೆ. ಸೂರ್ಯಕುಮಾರ್ ಯಾದವ್​ ಸಾರಥ್ಯದಲ್ಲಿ ಕಣಕ್ಕಿಳಿಯುತ್ತಿರುವ ಟೀಂ ಇಂಡಿಯಾ ಕಟಕ್​​​ನಲ್ಲಿ ಆಫ್ರಿಕನ್ನರ ಸಂಹಾರ ಮಾಡಲು ತುದಿಗಾಲಲ್ಲಿ ನಿಂತಿದೆ.

author-image
Ganesh Kerekuli
Surya and sundar
Advertisment
  • ಅಭಿಷೇಕ್​​ ಶರ್ಮಾಗೆ ಸಾಥ್ ಕೊಡೋದ್ಯಾರು..?
  • ಮಿಡಲ್ ಆರ್ಡರ್​​​ನಲ್ಲಿ ಬಲ ತುಂಬೋದ್ಯಾರು..?
  • ಪ್ಲೇಯಿಂಗ್​ ಇಲೆವೆನ್​​ನಲ್ಲಿ ಎಷ್ಟು ಸ್ಪಿನ್ನರ್ಸ್​ ಆಡ್ತಾರೆ..?

ಟೆಸ್ಟ್, ಏಕದಿನ ನಂತರ ಟಿ-20 ಫಾರ್ಮೆಟ್​​ಗೆ ಟೀಮ್ ಇಂಡಿಯಾ ಭರ್ಜರಿ ಸಿದ್ಧತೆ ನಡೆಸಿಕೊಂಡಿದೆ. ಸೂರ್ಯಕುಮಾರ್ ಯಾದವ್​ ಸಾರಥ್ಯದಲ್ಲಿ ಕಣಕ್ಕಿಳಿಯುತ್ತಿರುವ ಟೀಂ ಇಂಡಿಯಾ ಕಟಕ್​​​ನಲ್ಲಿ ಆಫ್ರಿಕನ್ನರ ಸಂಹಾರ ಮಾಡಲು ತುದಿಗಾಲಲ್ಲಿ ನಿಂತಿದೆ. ಟಿ-20 ಸ್ಪೆಷಲಿಸ್ಟ್​​ಗಳನ್ನ ಒಳಗೊಂಡಿರುವ ಆಫ್ರಿಕನ್ನರು, ಎದುರಾಳಿಗಳಿಗೆ ಟಕ್ಕರ್ ನೀಡಲು ರೆಡಿಯಾಗಿದ್ದಾರೆ. 

ಕಟಕ್​ನ ಬಾರಾಬತಿ ಸ್ಟೇಡಿಯಂನಲ್ಲಿ ಇಂದು ರನ್​ಮಳೆ ನಿರೀಕ್ಷಿಸಲಾಗಿದೆ. ಹೊಡಿ ಬಡಿ ಆಟದಲ್ಲಿ ಬೌಲರ್​ಗಳ ಮಾರಣ ಹೋಮ ನಡೆಯಲಿದೆ. ರನ್​ಭೂಮಿಯಲ್ಲಿ ನಡೆಯಲಿರೋ ಮಹಾ ಯುದ್ಧದಲ್ಲಿ, ಅಭಿಮಾನಿಗಳಿಗೆ ರಸದೌತಣ ಸಿಗಲಿದೆ. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸೋ ಪಂದ್ಯದಲ್ಲಿ, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್​​​ಗೆ ಸಾಲು ಸಾಲು ಸವಾಲುಗಳು ಎದುರಾಗಿವೆ.

ಇದನ್ನೂ ಓದಿ:ಮ್ಯಾಕ್ಸಿ, ಫಾಫ್, ರಸೆಲ್, ಅಶ್ವಿನ್! IPL ಸಹವಾಸವೇ ಬೇಡ ಅಂತಿರೋದ್ಯಾಕೆ..?

Gambhir and Gill

ಅಭಿಷೇಕ್​​ ಶರ್ಮಾಗೆ ಸಾಥ್ ಕೊಡೋದ್ಯಾರು..?

ಇನ್​ಫಾರ್ಮ್ ಬ್ಯಾಟರ್ ಅಭಿಷೇಕ್ ಶರ್ಮಾ, ಓಪನರ್ ಆಗಿ ಕಣಕ್ಕಿಳಿಯೋದು ಫಿಕ್ಸ್. ಆದ್ರೆ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾಗೆ ಜೊತೆಗಾರ ಯಾರು ಅನ್ನೋದೇ ದೊಡ್ಡ ಪ್ರಶ್ನೆ. ಶುಭ್ಮನ್ ಗಿಲ್ ಇಂಜುರಿಯಿಂದ ಕಮ್​ಬ್ಯಾಕ್ ಮಾಡ್ತಿದ್ದಾರೆ. ಗಿಲ್, ಅಭಿಷೇಕ್​ಗೆ ಸಾಥ್ ಕೊಡ್ತಾರಾ? ಅಥವಾ ಸಂಜು ಸ್ಯಾಮ್ಸನ್​​ಗೆ ಪ್ರಮೋಷನ್ ನೀಡ್ತಾರಾ?

ಮಿಡಲ್ ಆರ್ಡರ್​​​ನಲ್ಲಿ ಬಲ ತುಂಬೋದ್ಯಾರು?

ಟೀಮ್ ಇಂಡಿಯಾ ಟಾಪ್ ಆರ್ಡರ್​ನಲ್ಲಿ ಸುರ್ಯಕುಮಾರ್ ಯಾದವ್ ಬ್ಯಾಟ್ ಮಾಡೋದು ಪಕ್ಕಾ. ಮಿಡಲ್ ಆರ್ಡರ್​ನಲ್ಲಿ ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ತಂಡದ ಬ್ಯಾಟಿಂಗ್ ಬಲ ಹೆಚ್ಚಿಸಲಿದ್ದಾರೆ. ಸ್ಟಾರ್​​​ ಆಟಗಾರರ ಉಪಸ್ಥಿತಿಯ ನಡುವೆಯೂ, ಟೀಮ್ ಇಂಡಿಯಾ ಮಿಡಲ್ ಆರ್ಡರ್ ಹೇಳಿಕೊಳ್ಳುವಂತಹ ಸ್ಟ್ರಾಂಗ್ ಏನೂ ಇಲ್ಲ.

ಇದನ್ನೂ ಓದಿ: ಕೆಎಸ್‌ಸಿಎಗೆ ವೆಂಕಿ ನೂತನ ಸಾರಥಿ.. ಎಲೆಕ್ಷನ್‌ ಗೆದ್ದ ಬೆನ್ನಲ್ಲೇ ಸ್ಫೋಟಕ ಹೇಳಿಕೆ..!‌

SANJU_SAMSON_New (1)

ಜಿತೇಶ್ ಶರ್ಮಾ, ಸಂಜು ಸ್ಯಾಮ್ಸನ್ ಇಬ್ಬರ ನಡುವೆ ವಿಕೆಟ್ ಕೀಪಿಂಗ್ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಲಿದ್ದಾರೆ. ಸದ್ಯ ಸಂಜು ಕ್ಯಾಪ್ಟನ್ಸ್ ಫೇವರಿಟ್ ಆದ್ರೂ, ಜಿತೇಶ್ ಶರ್ಮಾಗೆ ಸ್ಥಾನ ನೀಡೋ ಬಗ್ಗೆ ಸಹ, ಟೀಮ್ ಮೀಟಿಂಗ್​ನಲ್ಲಿ ಚರ್ಚೆಯಂತೂ ನಡೆದೇ ನಡೆಯುತ್ತದೆ.  
ಇದು ನಡುವೆ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಬಗ್ಗೆಯೂ ಡಿಸ್ಕಸ್ ಮಾಡಲಾಗುತ್ತದೆ. ಇಬ್ಬರು ಫಾಸ್ಟ್ ಬೌಲಿಂಗ್ ಆಲ್​ರೌಂಡರ್​ಗಳಲ್ಲಿ, ಯಾರು ಜವಾಬ್ದಾರಿ ವಹಿಸಿಕೊಳ್ಳಬೇಕು ಅನ್ನೋದನ್ನ ಕೋಚ್ ಆಲೋಚಿಸುತ್ತಾರೆ.

ಎಷ್ಟು ಸ್ಪಿನ್ನರ್ಸ್​ಗೆ ಸ್ಥಾನ? 

ಕುಲ್​ದೀಪ್ ಯಾದವ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್​​​​, ನಾಲ್ವರು ಸ್ಪಿನ್ನರ್ಸ್​​​ ನಡುವೆ ಸ್ಥಾನ ಪಡೆಯಲು ಟಫ್ ಕಾಂಪಿಟೇಷನ್ ಇದೆ. ಪ್ಲೇಯಿಂಗ್ ಇಲೆವೆನ್​ನಲ್ಲಿ ಅಕ್ಷರ್ ಪಟೇಲ್, ಸುಂದರ್ ಆಡೋದು ಕನ್ಫರ್ಮ್ ಆಗಿದೆ. ಅಭಿಷೇಕ್ ಶರ್ಮಾ ಸಹ ಸ್ಪಿನ್ ಬೌಲಿಂಗ್ ಮಾಡೋದ್ರಿಂದ, ನಾಯಕನಿಗೆ ಸ್ಪಿನ್ ಆಪ್ಶನ್ ಅಂತೂ ಇದೆ. 

ಬೂಮ್ರಾ ತಂಡದ ಪ್ರಮುಖ ಫ್ರಂಟ್​​ಲೈನ್ ಬೌಲರ್. ಆದ್ರೆ ಬೂಮ್ರಾಗೆ ಸಾಥ್ ಕೊಡೋದ್ಯಾರು..? ಆರ್ಷ್​ದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ನಡುವೆ, ಫೈಟ್ ಇದೆ. ಫಾಸ್ಟ್ ಬೌಲಿಂಗ್ ಆಲ್​ರೌಂಡರ್​​​​​ ಇರೋದ್ರಿಂದ ಎಡಗೈ ವೇಗಿ ಆರ್ಷ್​​ದೀಪ್​ಗೆ, ಲಕ್ ಇದೆ. ಒಟ್ನಲ್ಲಿ ತಂಡದಲ್ಲಿ ಹೆಚ್ಚು ಟಿ-20 ಸ್ಪೆಷಲಿಸ್ಟ್​ಗಳನ್ನೇ ಹೊಂದಿರುವ ಆಫ್ರಿಕಾವನ್ನ, ಟೀಮ್ ಇಂಡಿಯಾ ಮಣಿಸುತ್ತಾ? ಕಾದುನೋಡೋಣ. 

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ind vs SA T20I India vs South Africa
Advertisment