/newsfirstlive-kannada/media/media_files/2025/12/07/ashwin-faf-maxi-2025-12-07-15-52-49.jpg)
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ಕ್ಕೂ ಮುನ್ನ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಆಘಾತ ಎದುರಾಗಿದೆ. ಐಪಿಎಲ್ ಹರಾಜು ಹತ್ತಿರವಾಗ್ತಿದಂತೆ ವಿದೇಶಿ ಆಟಗಾರರು, ಫ್ರಾಂಚೈಸಿಗಳಿಗೆ ಕೈಕೊಟ್ಟಿದ್ದಾರೆ. ಮಿಲಿಯನ್ ಡಾಲರ್ ಟೂರ್ನಿಯಿಂದ ದಿಢೀರ್​ ಹಿಂದೆ ಸರಿದಿದ್ದಾರೆ.
ಐಪಿಎಲ್​​ನಲ್ಲಿ ಒಂದೇ ಒಂದು ಚಾನ್ಸ್ ಸಿಕ್ಕಿದ್ರೆ ಸಾಕು. ರಾತ್ರೋರಾತ್ರಿ ಕೋಟ್ಯಾಧಿಪತಿಗಳು ಆಗಿಬಿಡ್ತಾರೆ. ಐಪಿಎಲ್ ಕೇವಲ ಚಿನ್ನದ ಮೊಟ್ಟೆ ಇಡೋ ಕೋಳಿ ಮಾತ್ರವಲ್ಲ. ಐಪಿಎಲ್, ಒಬ್ಬ ಕ್ರಿಕೆಟಿಗನ ಕರಿಯರ್​ ನಿರ್ಧಾರಿಸುವ ಅದೃಷ್ಟದ ಟೂರ್ನಿ. ಆದ್ರೀಗ ಕೆಲ ಸೂಪರ್​​ಸ್ಟಾರ್ ಆಟಗಾರರು, ಐಪಿಎಲ್ ಸಹವಾಸವೇ ಬೇಡ ಅಂತಿದ್ದಾರೆ. ಅಂದು ಮಿಲಿಯನ್ ಡಾಲರ್ ಟೂರ್ನಿಯಿಂದ ಹೀರೋಗಳಾಗಿದ್ದ ಆಟಗಾರರು, ಇಂದು ಐಪಿಎಲ್​​ಗೆ ಕೈಮುಗಿಯುತ್ತಿದ್ದಾರೆ.
ಇದನ್ನೂ ಓದಿ: ಕಾರ್ತಿಕ್ - ನಮ್ರತಾ ಗೌಡ ಸಂಬಂಧ.. Exclusive ರಿಯಾಕ್ಷನ್..! VIDEO
ಆಸ್ಟ್ರೇಲಿಯಾದ ಡೇಂಜರಸ್ ಟಿ-20 ಪ್ಲೇಯರ್ ಗ್ಲೇನ್ ಮ್ಯಾಕ್ಸ್​ವೆಲ್ ಈಗಾಗಲೇ ನಾಲ್ಕು ಐಪಿಎಲ್ ಫ್ರಾಂಚೈಸಿಗಳ ಪರ ಆಡಿದ್ದಾರೆ. ಆದ್ರೀಗ ಇದೇ ಮ್ಯಾಕ್ಸ್​ವೆಲ್, ಈ ಬಾರಿಯ ಐಪಿಎಲ್​ಗೆ ಗುಡ್​ ಬೈ ಹೇಳಿದ್ದಾರೆ. ಮ್ಯಾಕ್ಸ್​ವೆಲ್ ಹಿಂದೆ ಸರಿದಿರೋದಕ್ಕೆ ಸೂಕ್ತ ಕಾರಣ ತಿಳಿದು ಬಂದಿಲ್ಲ. ಪಿಎಸ್​​ಎಲ್​ ಕಡೆಗೆ ಮ್ಯಾಕ್ಸ್​ವೆಲ್​ ಮುಖ ಮಾಡಲಿದ್ದಾರೆ ಅನ್ನೋ ಸುದ್ದಿಯಿದೆ. ಐಪಿಎಲ್​ ಬಿಟ್ಟು ಪಾಕಿಸ್ತಾನ ಪ್ರೀಮಿಯರ್​ ಲೀಗ್ ಕಡೆಗೆ ಮುಖ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ.
ರಸೆಲ್ ಐಪಿಎಲ್​​ನಿಂದ ರಿಟೈರ್ ಆಗಿದ್ದೇಕೆ..?
ವೆಸ್ಟ್​ ಇಂಡೀಸ್​​ನ ಬಿಗ್ ಹಿಟ್ಟರ್ ಌಂಡ್ರೆ ರಸೆಲ್ ಮಿನಿ ಹರಾಜಿಗೂ ಮುನ್ನ ಐಪಿಎಲ್​ನಿಂದ ರಿಟೈರ್ ಆಗಿದ್ದಾರೆ. ಕೊಲ್ಕತ್ತಾ ನೈಟ್​ರೈಡರ್ಸ್,​ ಈ ಬಾರಿ ರಸೆಲ್​ರನ್ನ ರೀಟೇನ್ ಮಾಡಲಿಲ್ಲ. ಕಳೆದ ಸೀಸನ್​ನಲ್ಲಿ ಕಳಪೆ ಪರ್ಫಾಮೆನ್ಸ್ ನೀಡಿದ್ದ ರಸೆಲ್, ತನ್ನಷ್ಟಕ್ಕೆ ತಾನೇ ರಿಟೈರ್​ಮೆಂಟ್ ಪ್ಲಾನ್ ಮಾಡಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸುವ ಮುನ್ನವೇ, ರಸೆಲ್ ಕೆಕೆಆರ್ ಜೆರ್ಸಿ ಬಿಚ್ಚಿಟ್ಟಿದ್ದಾರೆ.
ಸೌತ್ ಆಫ್ರಿಕಾದ ಮಾಜಿ ನಾಯಕ ಫಾಫ್ ಡುಪ್ಲೆಸಿ, ಐಪಿಎಲ್​​​​ ಸಹವಾಸವೇ ಬೇಡ ಅನ್ನೋ ಅಚ್ಚರಿಯ ನಿರ್ಧಾರ ಕೈಕೊಂಡಿದ್ದಾರೆ. ಈಗಾಗಲೇ 4 ಐಪಿಎಲ್ ಫ್ರಾಂಚೈಸಿಗಳನ್ನ ರೆಪ್ರೆಸೆಂಟ್ ಮಾಡಿರುವ ಫಾಫ್, ಪಾಕಿಸ್ತಾನ ಪ್ರೀಮಿಯರ್ ಲೀಗ್ ಮೇಲೆ ಹೆಚ್ಚು ಒಲವು ತೋರಿಸಿದ್ದಾರೆ. ಡುಪ್ಲೆಸಿಗೆ ಪಿಎಸ್​​ಎಲ್​ ಮೇಲೆ ಯಾಕೆ ಅಷ್ಟೊಂದು ಆಸಕ್ತಿ ಅನ್ನೋದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ಮಂದಾನ ಜೊತೆ ಮದುವೆ ಕ್ಯಾನ್ಸಲ್, ‘ಕಠಿಣ ಕಾನೂನು ಕ್ರಮ’ ಎಂದ ಮುಚ್ಚಲ್..!
ಇಂಗ್ಲೆಂಡ್ ಆಲ್​ರೌಂಡರ್ ಮೊಯಿನ್ ಅಲಿಗೂ, ಐಪಿಎಲ್ ಬೇಡ ಎನಿಸಿದೆ. ಈ ಬಾರಿ ಕೆಕೆಆರ್ ಮೊಯಿನ್ ಅಲಿಯನ್ನ ತಂಡದಲ್ಲಿ ರೀಟೇನ್ ಮಾಡಿಕೊಳ್ಳಲಿಲ್ಲ. ಇನ್ನು ಮೊಯಿನ್ ಆಕ್ಷನ್​ಗೆ ಹೋದ್ರೆ ಯಾರೂ ಪರ್ಚೇಸ್ ಮಾಡೋದಿಲ್ಲ ಅನ್ನೋದು ಚೆನ್ನಾಗಿ ಗೊತ್ತು. ಆ ಭೀತಿಯಿಂದಲೇ ಮೊಯಿನ್, ಮಿಲಿಯನ್ ಡಾಲರ್ ಟೂರ್ನಿಯಿಂದ ಹೊರ ನಡೆದಿರೋದು ಅಂತ ಹೇಳಲಾಗ್ತಿದೆ.
ಆರ್​.ಅಶ್ವಿನ್​​ಗೆ ಅವಮಾನದ ಭೀತಿ?
ಚೆನ್ನೈ ಸೂಪರ್​ಕಿಂಗ್ಸ್​ನ ಆರ್​.ಅಶ್ವಿನ್, ಪ್ಲೇಯರ್ಸ್​ ರಿಟೆನ್ಶನ್​​ಗೂ ಮುನ್ನ ಸಿಎಸ್​ಕೆಗೆ ಗುಡ್​ಬೈ ಹೇಳಿದ್ರು. ಚೆನ್ನೈ ರಿಲೀಸ್​ ಮಾಡುತ್ತೆ ಅನ್ನೋದು ಗೊತ್ತಾದ ಬಳಿಕ ಅಶ್ವಿನ್​ ಈ ನಿರ್ಧಾರ ಕೈಗೊಂಡಿದ್ರು. ಕಳಪೆ ಫಾರ್ಮ್​ನಲ್ಲಿರೋ ಅಶ್ವಿನ್​ಗೆ ಹರಾಜಿನಲ್ಲಿ ಅನ್​​ಸೋಲ್ಡ್ ಅವಮಾನ ಆಗಬಹುದು ಅನ್ನೋ ಭೀತಿ ಕಾಡಿರಬಹುದು. ಹೀಗಾಗಿಯೇ ನಿವೃತ್ತಿಯ ನಿರ್ಧಾರ ಮಾಡಿದ್ರು ಎನ್ನಲಾಗ್ತಿದೆ.
ಒಟ್ನಲ್ಲಿ ಫ್ರಾಂಚೈಸಿ ಮಾಲೀಕರು ಸೀನಿಯರ್ ಪ್ಲೇಯರ್​ಗಳನ್ನ ಬಿಟ್ಟು ಮುಂದೆ ಸಾಗಲು ನಿರ್ಧರಿಸಿದ್ದಾರೆ. ಟಿ-20 ಕ್ರಿಕೆಟ್​ಗೆ ಸೂಟ್ ಆಗೋ ಅಗ್ರೆಸಿವ್ ಆಟಗಾರರ ಮೊರೆ ಹೋಗಿದ್ದಾರೆ. ಹಾಗಾಗಿ ಹಿರಿಯ ಆಟಗಾರರು, ಸೈಲೆಂಟ್ ಆಗಿ ಐಪಿಎಲ್​​ನಿಂದ ದೂರ ಸರಿಯುವ ನಿರ್ಧಾರ ಮಾಡಿರೋದು ಸ್ಪಷ್ಟ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us