/newsfirstlive-kannada/media/media_files/2025/11/11/venkatesh-prasad-2025-11-11-20-40-17.jpg)
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆಯ ನೂತನ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ ಆಗಿದ್ದಾರೆ. ಇವತ್ತು ನಡೆದ ಕೆಎಸ್‌ಸಿಎ ಚುನಾವಣೆಯಲ್ಲಿ ವೆಂಕಟೇಶ್​​ ಪ್ರಸಾದ್​ ಬಣ ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ನೂತನ ಅಧ್ಯಕ್ಷ ವೆಂಕಟೇಶ್​ ಪ್ರಸಾದ್​ ಪರ 749 ಮತಗಳು, ಎದುರಾಳಿ ಶಾಂತಕುಮಾರ್​ ಪರ 558 ಮತಗಳು ಚಲಾವಣೆ ಆಗಿದ್ದವು. ವೆಂಕಟೇಶ್ ಪ್ರಸಾದ್, 191 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇನ್ನು, ಉಪಾಧ್ಯಕ್ಷರಾಗಿ ಸುಜಿತ್​ ಸೋಮಸುಂದರ್ ಜಯಗಳಿಸಿದರೆ, ಕಾರ್ಯದರ್ಶಿಯಾಗಿ ಸಂತೋಷ್​ ಮೆನನ್​ಗೆ ಗೆಲುವು ಪಡೆದುಕೊಂಡರು. ಜಂಟಿ ಕಾರ್ಯದರ್ಶಿಯಾಗಿ BK ರವಿಗೆ ಜಯಗಳಿಸಿದರು.
ವೆಂಕಟೇಶ್ ಪ್ರಸಾದ್ ಹೇಳಿದ್ದೇನು?
ಫಲಿತಾಂಶ ಬೆನ್ನಲ್ಲೇ ಮಾತನ್ನಾಡಿರುವ ವೆಂಕಟೇಶ್ ಪ್ರಸಾದ್.. ಈ ಗೆಲುವಿಗೆ ಕಾರಣ ನಮ್ಮ ಸದಸ್ಯರು ಇಟ್ಟಿರುವ ನಂಬಿಕೆ. ಕಳೆದ 3 ವರ್ಷಗಳಲ್ಲಾದ ಅನಾಹುತಗಳಿಂದ ಬೇಸರದಲ್ಲಿದ್ರು. ಕಾಲ್ತುಳಿತ ಮಾತ್ರವಲ್ಲ, ಕ್ರಿಕೆಟ್​​ನಲ್ಲಿ ಅನಾಹುತಗಳಾದ್ವು. ಪ್ಲ್ಯಾನಿಂಗ್, ಸ್ಟೇಡಿಯಂ, ಅಕಾಡೆಮಿ ಸರಿಯಾಗಿರಲಿಲ್ಲ. ಸದಸ್ಯರು ಹೊಸ ಭರವಸೆಗಾಗಿ ನಮ್ಮನ್ನ ಆಯ್ಕೆ ಮಾಡಿದ್ದಾರೆ. ಈ ವಿಕ್ಟರಿ ಕ್ರಿಕೆಟ್​ಗೋಸ್ಕರ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತೆ ವಾಪಸ್ ಬರಬೇಕು. ಯಾವುದೇ ಕಾರಣಕ್ಕೂ IPL​ ಪಂದ್ಯಗಳನ್ನ ಬಿಡಲು ಸಾಧ್ಯವಿಲ್ಲ. ಸರ್ಕಾರ, BCCI ಜೊತೆಗೂ ಮಾತನಾಡಬೇಕಿದೆ. ಬೆಂಬಲ ಕೊಟ್ಟ ಲೆಜೆಂಡರಿ ಕ್ರಿಕೆಟರ್ಸ್ ನಮ್ಮ​ ಜೊತೆಗಿರುತ್ತಾರೆ. ರಾಜ್ಯ ಸರ್ಕಾರ ಕೂಡ KSCAಯಲ್ಲಿ ಬದಲಾವಣೆ ಬಯಸಿತ್ತು ಎಂದರು.
ಇದನ್ನೂ ಓದಿ: ಐಪಿಎಲ್ ಮಿನಿ ಹರಾಜು - ಈ 5 ಆಟಗಾರರಿಗೆ ಭಾರೀ ಡಿಮ್ಯಾಂಡ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us