Advertisment

ಮಂಕಾದ ಸೂರ್ಯ.. ಗ್ರಹಣ ಬಿಡದಿದ್ದರೆ ಪಟ್ಟ ಒಂದೇ ಅಲ್ಲ, ತಂಡದಿಂದಲೇ ಕಿಕ್​ ಔಟ್!

ಇಂಡೋ-ಆಫ್ರಿಕಾ ಚುಟುಕು ಯುದ್ಧದಲ್ಲಿ ಸಾರಥಿ ಸೂರ್ಯಕುಮಾರ್​ ಯಾದವೇ​ ಸೆಂಟರ್​​ ಆಫ್​ ಅಟ್ರಾಕ್ಷನ್​. ಮಿಸ್ಟರ್​ 360 ಡಿಗ್ರಿ ಬ್ಯಾಟರ್​ ಮೇಲೆ ಸದ್ಯ ತೂಗುಗತ್ತಿ ನೇತಾಡ್ತಿದೆ. ತಂಡದ ನಾಯಕನಿಗೆ ಪ್ರತಿಷ್ಠಿತ ವಿಶ್ವಕಪ್​ಗೂ ಮುನ್ನ ಪಟ್ಟ ಕಳೆದುಕೊಳ್ಳೋ ಭೀತಿ ಎದುರಾಗಿದೆ. ಸೂರ್ಯನಿಗೆ ಸಂಕಷ್ಟ ಎದುರಾಗಿರೋದ್ಯಾಕೆ?

author-image
Ganesh Kerekuli
Surya kumar yadav
Advertisment

ಇಂಡೋ-ಆಫ್ರಿಕಾ ಚುಟುಕು ಯುದ್ಧದಲ್ಲಿ ಸಾರಥಿ ಸೂರ್ಯಕುಮಾರ್​ ಯಾದವೇ​ ಸೆಂಟರ್​​ ಆಫ್​ ಅಟ್ರಾಕ್ಷನ್​. ಮಿಸ್ಟರ್​ 360 ಡಿಗ್ರಿ ಬ್ಯಾಟರ್​ ಮೇಲೆ ಸದ್ಯ ತೂಗುಗತ್ತಿ ನೇತಾಡ್ತಿದೆ. ತಂಡದ ನಾಯಕನಿಗೆ ಪ್ರತಿಷ್ಠಿತ ವಿಶ್ವಕಪ್​ಗೂ ಮುನ್ನ ಪಟ್ಟ ಕಳೆದುಕೊಳ್ಳೋ ಭೀತಿ ಎದುರಾಗಿದೆ. ಸೂರ್ಯನಿಗೆ ಸಂಕಷ್ಟ ಎದುರಾಗಿರೋದ್ಯಾಕೆ?

Advertisment

ಸೂರ್ಯಕುಮಾರ್ ಯಾದವ್.. ಟಿ20 ಕ್ರಿಕೆಟ್​​ನ ಬ್ರ್ಯಾಂಡ್ ಅಂಬಾಸಿಡರ್.. ಸೂರ್ಯಕುಮಾರ್ ಡಿದು ನಿಂತ್ರೆ ಸ್ಫೋಟ ಫಿಕ್ಸ್​.​ ಡಾಟ್ ಬಾಲ್​​ ಪದವನ್ನೇ ಇಷ್ಟ ಪಡದ ಡೆಡ್ಲಿಯೆಸ್ಟ್ ಬ್ಯಾಟರ್. ಫಸ್ಟ್​ ಬಾಲ್​ನಿಂದ ಕೊನೇ ಬಾಲ್​​​​​​​​​​​​​​​​​​​​​​​​ ತನಕ ರನ್​​​​ ಸುನಾಮಿ ಸೃಷ್ಟಿಸಬಲ್ಲ ಸರದಾರ. 
ಅಷ್ಟ ದಿಕ್ಕುಗಳಿಗೂ ಚೆಂಡನ್ನ ಬಡಿದಟ್ಟುತ್ತಿದ್ದ ಸೂರ್ಯನ ಶಾಖಕ್ಕೆ ಎದುರಾಳಿಗಳು ವಿಲವಿಲ ಒದ್ದಾಡಿದ ಹಲವು ಉದಾಹರಣೆಗಳಿವೆ. ಆದ್ರೀಗ ಸೂರ್ಯನಿಗೆ ಗ್ರಹಣ ಹಿಡಿದಂತಿದೆ. ಪ್ರಜ್ವಲಿಸ್ತಿದ್ದ ಸೂರ್ಯ ಮುಸುಕಾಗ್ತಿದ್ದಾನೆ. ವೈಫಲ್ಯದ ಸುಳಿಗೆ ಸಿಲುಕಿ ಸೂರ್ಯಕುಮಾರ್​ ತಿಣುಕಾಡ್ತಿದ್ದಾರೆ.

ಇದನ್ನೂ ಓದಿ: ಐಪಿಎಲ್ ಮಿನಿ ಹರಾಜು - ಈ 5 ಆಟಗಾರರಿಗೆ ಭಾರೀ ಡಿಮ್ಯಾಂಡ್..!

Surya and sundar

ರೋಷಾವೇಶ ಮಾಯ

ಮಿಸ್ಟರ್​ 360 ಡಿಗ್ರಿ ಬ್ಯಾಟರ್​ ಸೂರ್ಯಕುಮಾರ್​ ಸದ್ಯ ಒಂದೊಂದು ರನ್​ಗೂ ಪರದಾಡ್ತಿದ್ದಾರೆ. ಮೈದಾನದ ಉದ್ದಗಲಕ್ಕೂ ಚೆಂಡಿನ ದರ್ಶನ ಮಾಡಿಸಿ ಪ್ರಜ್ವಲಿಸ್ತಿದ್ದ ಸೂರ್ಯಕುಮಾರ್​ ಯಾದವ್​​ ರೋಷಾವೇಶವೇ ಮಾಯವಾಗಿದೆ. ಕ್ರಿಸ್​ಗಿಳಿದಷ್ಟೇ ವೇಗವಾಗಿ ಪೆವಿಲಿಯನ್​ ಸೇರ್ತಿದ್ದಾರೆ.  ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸೂರ್ಯ ಕುಮಾರ್​ ಯಾದವ್​ ಅಟ್ಟರ್ ಫ್ಲಾಪ್​ ಪ್ರದರ್ಶನ ನೀಡಿದ್ರು. ಆಸಿಸ್​ ಪ್ರವಾಸದಲ್ಲಿ ಆಡಿದ 5 ಪಂದ್ಯದಲ್ಲಿ 19.71ರ ಹೀನಾಯ ಸರಾಸರಿಯಲ್ಲಿ ಬ್ಯಾಟ್​ ಬೀಸಿದ ಸೂರ್ಯಕುಮಾರ್​ ಕೇವಲ 84 ರನ್​ಗಳಿಸಿದ್ರು. ಬೌಂಡರಿ, ಸಿಕ್ಸರ್​ಗಳನ್ನ ಸಲೀಸಾಗಿ ಚಚ್ಚಿ ಬಿಸಾಕ್ತಿದ್ದ ಸೂರ್ಯ, ಕಾಂಗರೂಗಳ ಎದುರು 5 ಪಂದ್ಯದಲ್ಲಿ ಸಿಡಿಸಿದ್ದು ಕೇವಲ 4 ಬೌಂಡರಿ, 6 ಸಿಕ್ಸರ್​ ಮಾತ್ರ.

ಸೂರ್ಯನಿಗೆ ‘ಗ್ರಹಣ’.!

ಆಸ್ಟ್ರೇಲಿಯಾ ಪ್ರವಾಸ ಮಾತ್ರವಲ್ಲ.. ಈ 2025ರಲ್ಲಿ ಸೂರ್ಯನಿಗೆ ಗ್ರಹಣ ಹಿಡಿದುಬಿಟ್ಟಿದೆ. ಆಸ್ಟ್ರೇಲಿಯಾ ಪ್ರವಾಸ, ಏಷ್ಯಾಕಪ್​ ಅದಕ್ಕೂ ಹಿಂದಿನ ಇಂಗ್ಲೆಂಡ್​ ಸರಣಿ ಎಲ್ಲಾ ಕಡೆ ಫ್ಲಾಪ್​.. ಫ್ಲಾಪ್​.. ಫ್ಲಾಪ್​.! ಈ ವರ್ಷ 15 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್​ ನಡೆಸಿರೋ ಸೂರ್ಯಗಳಿಸಿರೋದು ಕೇವಲ 184 ರನ್​ ಮಾತ್ರ. 15.33ರ ಹೀನಾಯ ಸರಾಸರಿಯನ್ನ ಹೊಂದಿರೋ ಸೂರ್ಯ ತನ್ನ ಹಳೆ ಖದರ್​ ಅನ್ನೇ ಮರೆತಂತಿದೆ. 

Advertisment

ಇದನ್ನೂ ಓದಿ:ಕೆಎಸ್‌ಸಿಎಗೆ ವೆಂಕಿ ನೂತನ ಸಾರಥಿ.. ಎಲೆಕ್ಷನ್‌ ಗೆದ್ದ ಬೆನ್ನಲ್ಲೇ ಸ್ಫೋಟಕ ಹೇಳಿಕೆ..!‌

Surya kumara Yadav

2024ರಲ್ಲಿ ಟೀಮ್​ ಇಂಡಿಯಾ ಟಿ20 ಚಾಂಪಿಯನ್​ ಆದ ಬಳಿಕ ನಾಯಕನ ಪಟ್ಟ ಅಲಂಕರಿಸಿದ ಸೂರ್ಯಕುಮಾರ್​​ ಯಾದವ್​ ಮೇಲೆ ಅಪಾರವಾದ ನಿರೀಕ್ಷೆಯಿತ್ತು. ನಾಯಕನ ಪಟ್ಟವೇರಿದ್ದೇ ಏರಿದ್ದು, ಸೂರ್ಯಕುಮಾರ್​​ ಬ್ಯಾಟಿಂಗ್​ ಚಾರ್ಮೇ​ ಕಳೆದು ಹೋಗಿದೆ. ಮೈದಾನದ ಉದ್ದಗಲಕ್ಕೆ ಚೆಂಡಿನ ದರ್ಶನ ಮಾಡಿಸಿ ಎದುರಾಳಿಗಳನ್ನ ಕಂಗೆಡಿಸ್ತಾ ಇದ್ದ ಸೂರ್ಯಕುಮಾರ್​ ರನ್​ಗಳಿಕೆಗೆ ತಿಣುಕಾಟ ನಡೆಸಿದ್ದಾರೆ. ನಾಯಕತ್ವವೇ ಸೂರ್ಯನಿಗೆ ಹೊರೆಯಾಗ್ತಿದ್ಯಾ ಎಂಬ ಪ್ರಶ್ನೆಯೂ ಹುಟ್ಟಿದೆ.

ನಾಯಕನಾದ ಬಳಿಕ ಸೂರ್ಯ

ಟೀಮ್​ ಇಂಡಿಯಾದ ನಾಯಕನ ಪಟ್ಟವೇರಿದ ಬಳಿಕ ಸೂರ್ಯಕುಮಾರ್​​ 24 ಟಿ 20 ಪಂದ್ಯಗಳನ್ನ ಆಡಿದ್ದಾರೆ. ಈ ಪಂದ್ಯಗಳಲ್ಲಿ ಕೇವಲ 19.71ರ ಸರಾಸರಿಯಲ್ಲಿ 414 ರನ್​ಗಳಿಸಿರೋ ಸೂರ್ಯ 2 ಬಾರಿ ಅರ್ಧಶತಕದ ಗಡಿದಾಟಿದ್ದಾರಷ್ಟೇ. ಟಿ20 ವಿಶ್ವಕಪ್​ ಟೂರ್ನಿಗೂ ಮುನ್ನ ಟೀಮ್​ ಇಂಡಿಯಾ ಮುಂದಿರೋದು ಕೇವಲ 2 ಸರಣಿಗಳು ಮಾತ್ರ. ತವರಿನಲ್ಲಿ ನಡೆಯೋ ಪ್ರತಿಷ್ಟೆಯ ಟೂರ್ನಿಗೆ ಸಿದ್ಧತೆ ಟೀಮ್​ ಇಂಡಿಯಾದಲ್ಲಿ ಜೋರಾಗಿ ನಡೀತಿದೆ.

Advertisment

ಇದನ್ನೂ ಓದಿ: ಮ್ಯಾಕ್ಸಿ, ಫಾಫ್, ರಸೆಲ್, ಅಶ್ವಿನ್! IPL ಸಹವಾಸವೇ ಬೇಡ ಅಂತಿರೋದ್ಯಾಕೆ..?

SURYA_KUMAR (1)

ಇದ್ರ ನಡುವೆ ನಾಯಕ ಸೂರ್ಯಕುಮಾರ್​ ಯಾದವ್​ ಸತತ ವೈಫಲ್ಯ ಅನುಭವಿಸ್ತಿರೋದು ಮ್ಯಾನೇಜ್​ಮೆಂಟ್​ಗೆ ತಲೆನೋವಾಗಿದೆ. ಸೌತ್​ ಆಫ್ರಿಕಾ ಎದುರೂ ಫೇಲ್​ ಆದ್ರೆ ಸೂರ್ಯನ ಪಟ್ಟಕ್ಕೆ ಕುತ್ತು ಬರೋದು ಪಕ್ಕಾ. ಸೂರ್ಯನಿಗೆ ಪರ್ಯಾಯವಾಗಿ ಶುಭ್​ಮನ್​ ಗಿಲ್​ ನಾಯಕತ್ವದ ಜವಾಬ್ದಾರಿ ಹೊರಲು ರೆಡಿಯಾಗಿದ್ದಾರೆ. ಚಾಂಪಿಯನ್ಸ್​ ಟ್ರೋಫಿ ಗೆಲ್ಲಿಸಿದ್ದನ್ನೂ ಲೆಕ್ಕಿಸದೇ ಏಕದಿನದಲ್ಲಿ ರೋಹಿತ್​ ಶರ್ಮಾನೇ ಕೆಳಗಿಳಿಸಿ ಗಿಲ್​ಗೆ​ ಪಟ್ಟ ಕಟ್ಟಲಾಗಿದೆ. ಹೀಗಿರೋವಾಗ ಸತತ ವೈಫಲ್ಯ ಅನುಭವಿಸ್ತಿರೋ ಸೂರ್ಯಕುಮಾರ್ ಸಂಕಷ್ಟ ಎದುರಾಗದೇ ಇರುತ್ತಾ?

ಇದನ್ನೂ ಓದಿ: ಮೊದಲ ಟಿ-20 ಪಂದ್ಯ.. ಬಲಿಷ್ಠ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲ ಸ್ಥಾನ..?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Surya kumar Yadav T20I India vs South Africa
Advertisment
Advertisment
Advertisment