/newsfirstlive-kannada/media/media_files/2025/12/11/surya-kumar-yadav-1-2025-12-11-13-09-44.jpg)
ಫಿಯರ್​ಲೆಸ್ ಬ್ಯಾಟರ್.. ಪವರ್ ಹಿಟ್ಟರ್.. ಸ್ಟ್ರೀಟ್ ಸ್ಮಾರ್ಟ್ ಕ್ರಿಕೆಟರ್.. ಮಿಸ್ಟರ್ 360 ಎಂದೆಲ್ಲಾ ಕರೆಸಿಕೊಳ್ಳುವ ಸೂರ್ಯಕುಮಾರ್ ಯಾದವ್​ಗೆ, ಅದೇನು ಆಗಿದಿಯೋ ಗೊತ್ತಿಲ್ಲ. ಒಂದೆರಡು ಮ್ಯಾಚ್​ಗಳಲ್ಲಿ ಫ್ಲಾಪ್ ಆದ್ರೆ ಪರ್ವಾಗಿಲ್ಲ. ವರ್ಷವಿಡೀ ಆಡಿರೋ ಎಲ್ಲಾ ಮ್ಯಾಚ್​ಗಳಲ್ಲೂ ಸೂರ್ಯ ಅಟ್ಟರ್ ಫ್ಲಾಪ್ ಆಗಿದ್ದಾರೆ.
ಟಿ-20 ವಿಶ್ವಕಪ್​​​​​ಗೆ ಕೇವಲ ಎರಡೇ ಎರಡು ತಿಂಗಳು ಮಾತ್ರ ಬಾಕಿ ಉಳಿದಿದೆ. ಟಿ-20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಫಾರ್ಮ್​​, ಕೋಚ್ ಗೌತಮ್ ಗಂಭೀರ್​​ಗೆ ಟೆನ್ಶನ್ ನೀಡಿದೆ. ಸೂರ್ಯ ಫಾರ್ಮ್​​ ಕಳೆದುಕೊಂಡಿದ್ದು ಇದೊಂದೇ ವರ್ಷ ಅಲ್ಲ. ಸತತ 2ನೇ ವರ್ಷ ಸೂರ್ಯ ಬ್ಯಾಟಿಂಗ್​ನಲ್ಲಿ ಫುಲ್​ ಡಲ್ ಆಗ್ಬಿಟ್ಟಿದ್ದಾರೆ.
ಇದನ್ನೂ ಓದಿ: ಸೂರ್ಯನ ರಣತಂತ್ರಕ್ಕಿಲ್ಲ ಪ್ರತಿತಂತ್ರ; ಟೀಂ ಇಂಡಿಯಾದ ಸ್ಟ್ರೆಂಥ್ ಹೇಗಿದೆ ಗೊತ್ತಾ..?
/filters:format(webp)/newsfirstlive-kannada/media/media_files/2025/12/11/suryakumar-and-gambhir-2025-12-11-10-09-07.jpg)
2024ರಲ್ಲಿ ಸೂರ್ಯಕುಮಾರ್ ಯಾದವ್ ರನ್​ಗಳಿಸೋದಕ್ಕೆ ಪರದಾಡ್ತಿದ್ರು. ಸೂರ್ಯ ಗಳಿಸ್ತಿದ್ದ ಒಂದೊಂದು ರನ್ ಶತಕ ಸಿಡಿಸಿದಂತಿತ್ತು. ಬ್ಯಾಡ್ ಫಾರ್ಮ್​​, ಲೋ ಕಾನ್ಫಿಡೆನ್ಸ್​ನಿಂದ ಸೂರ್ಯ, ಬ್ಯಾಟಿಂಗ್​ನಲ್ಲಿ ಮಂಕಾಗಿದ್ರು. ಆ ವರ್ಷ ಸೂರ್ಯ ಬ್ಯಾಟಿಂಗ್ ಸರಾಸರಿ, ಜಸ್ಟ್ 25.55
2025 ಸೂರ್ಯ ಪಾಲಿಗೆ ಅತ್ಯಂತ ಕರಾಳ ವರ್ಷವಾಗಿದೆ. ಕಳೆದ ವರ್ಷ ಸೂರ್ಯ ಬ್ಯಾಟಿಂಗ್ ಸರಾಸರಿ ಅಟ್ಲೀಸ್ಟ್ 20 ದಾಟಿತ್ತು. ಈ ವರ್ಷ ಸೂರ್ಯ ಬ್ಯಾಟಿಂಗ್ ಌವರೇಜ್ 15ಕ್ಕಿ ಬಂದು ಕುಸಿದಿದೆ. ಕಳೆದೆರಡು ವರ್ಷಗಳಲ್ಲಿ ಸೂರ್ಯ ಬ್ಯಾಟಿಂಗ್ ಯಾವ ಮಟ್ಟಕ್ಕೆ ಕುಸಿದಿದೆ ಅಂದ್ರೆ ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ.
ಇದನ್ನೂ ಓದಿ: ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಬೆತ್ತಲೆ ಓಡುವುದನ್ನು ತಪ್ಪಿಸಿದ ಜೋ ರೂಟ್! ಜೋ ರೂಟ್‌ಗೆ ಗ್ರೇಸ್ ಹೇಡನ್ ರಿಂದ ಧನ್ಯವಾದ!
/filters:format(webp)/newsfirstlive-kannada/media/media_files/2025/12/09/surya-kumar-yadav-2025-12-09-10-39-15.jpg)
2025ರಲ್ಲಿ ಸೂರ್ಯ ಅಟ್ಟರ್ ಫ್ಲಾಪ್
ಈ ವರ್ಷ 15 ಇನ್ನಿಂಗ್ಸ್​ಗಳನ್ನ ಆಡಿರುವ ಸ್ಕೈ 15.3ರ ಬ್ಯಾಟಿಂಗ್ ಸರಾಸರಿಯಲ್ಲಿ 184 ರನ್​ ಕಲೆಹಾಕಿದ್ದಾರೆ. 3 ಬಾರಿ ಡಕ್​ಔಟ್ ಆಗಿರುವ ಸೂರ್ಯ ಬೆಸ್ಟ್ ಸ್ಕೋರ್ 47 ರನ್ ನಾಟೌಟ್. ಸೂರ್ಯಕುಮಾರ್ ಆಟಗಾರನಾಗಿ ಒಳ್ಳೆ ರನ್ ಸ್ಕೋರ್ ಮಾಡಿದ್ದಾರೆ. ಆದ್ರೆ ನಾಯಕನಾಗಿ ಮುಂಬೈಕರ್ ರನ್ ಗಳಿಸಿಸೋದ್ರಲ್ಲಿ ಹಿಂದೆ ಬಿದ್ದಿದ್ದಾರೆ.
ಸೂರ್ಯ ಬ್ಯಾಟಿಂಗ್ ಸಾಧನೆ
ಆಟಗಾಯನಾಗಿ ಸೂರ್ಯ | ಕ್ಯಾಪ್ಟನ್ ಆಗಿ ಸೂರ್ಯ | |
| 58 | ಇನ್ನಿಂಗ್ಸ್ | 32 |
| 2040 | ರನ್ಸ್ | 726 |
| 43.40 | ಸರಾಸರಿ | 25.03 |
| 168.17 | ಸ್ಟ್ರೈಕ್​ರೇಟ್ | 153.48 |
ನಾಯಕತ್ವದ ಒತ್ತಡಕ್ಕೆ ಸಿಲುಕಿದ್ರಾ ಸೂರ್ಯ?
ಆಟಗಾರನಾಗಿ ಉತ್ತಮ ಬ್ಯಾಟಿಂಗ್ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಸೂರ್ಯ, ಸಾರಥಿ ಆದಮೇಲೆ ಮಂಕಾಗಿದ್ದೇಕೆ ಅನ್ನೋದು ಅಭಿಮಾನಿಗಳ ಪ್ರಶ್ನೆ. ಆದ್ರೆ ಸೂರ್ಯ ನಾಯಕತ್ವದ ಜವಾಬ್ದಾರಿ ಹೊತ್ತ ಮೇಲೆ, ಒತ್ತಡಕ್ಕೆ ಸಿಲುಕಿದ್ದಾರೆ ಅನ್ನೋದು ಸದ್ಯದ ಉತ್ತರ. ಒತ್ತಡದಲ್ಲೇ ಬ್ಯಾಟಿಂಗ್​ಗಿಳಿಯೋ ಸೂರ್ಯ, ಕ್ರೀಸ್​​ಗೆ ಗೆಸ್ಟ್ ಅಪಿಯರೆನ್ಸ್ ಮಾಡಿ ಹೋಗ್ತಾರೆ. ಒಟ್ನಲ್ಲಿ ಸೂರ್ಯಕುಮಾರ್​​​ ಯಾದವ್​ ಸದ್ಯ ಡೇಂಜರ್ ಝೋನ್​ನಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಸೂರ್ಯ ಮತ್ತೆ ಬ್ಯಾಟಿಂಗ್​ನಲ್ಲಿ ಫ್ಲಾಪ್ ಆದ್ರೆ ಸೂರ್ಯ ಕತ್ತಲಾಗೋ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಬೇರೆ ಕೋರ್ಟ್ ಗೆ ಕೇಸ್ ವರ್ಗಾವಣೆ ಕೋರಿದ್ದ ಪ್ರಜ್ವಲ್ ರೇವಣ್ಣ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ವಜಾ : ಪ್ರಜ್ವಲ್‌ಗೆ ಹಿನ್ನಡೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us