/newsfirstlive-kannada/media/media_files/2025/08/29/vishal1-2025-08-29-13-16-02.jpg)
ತಮಿಳು ಸ್ಟಾರ್ ನಟ ವಿಶಾಲ್ ಅವರ ಮನೆಯಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ. ಇಂದು ನಟ ವಿಶಾಲ್ ಅವರ ಹುಟ್ಟು ಹಬ್ಬ. ಮತ್ತೊಂದು ಹುಟ್ಟು ಹಬ್ಬದ ದಿನವೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಕೈಕೊಟ್ಟ ಬುರುಡೆ ಗ್ಯಾಂಗ್.. ಏಕಾಂಗಿಯಾದ ಸುಜಾತಾ ಭಟ್!
ಹೌದು, ನಟ ವಿಶಾಲ್, ನಟಿ ಸಾಯಿ ಧನ್ಶಿಕಾ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮೇ ತಿಂಗಳಲ್ಲಿ ಈ ಬಗ್ಗೆ ವಿಶಾಲ್ ಅವರು ಬಹಿರಂಗ ಘೋಷಣೆ ಮಾಡಿದ್ದರು. ಸಾಯಿ ಧನ್ಶಿಕಾ ಸಹ ತಮಿಳು ಚಿತ್ರರಂಗದ ನಟಿ. ಈ ಹಿಂದೆ ಕಬಾಲಿ ಸೇರಿದಂತೆ ಕೆಲವು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.
ವಿಶಾಲ್ ಹಾಗೂ ಸಾಯಿ ಧನ್ಶಿಕಾ ಅವರ ನಿಶ್ಚಿತಾರ್ಥವು ವಿಶಾಲ್ ನಿವಾಸದಲ್ಲಿಯೇ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ನೆರವೇರಿದೆ. ಇದೇ ವಿಚಾರವನ್ನು ವಿಶಾಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಭಿಮಾನಿಗಳೆಲ್ಲ ಮದುವೆ ಯಾವಾಗ ಎಂದು ಕೇಳಿ ಕೇಳಿ ಸುಸ್ತಾಗಿದ್ದರು. ಆದರೆ ಇದೀಗ ಬ್ಯಾಚುಲರ್ ಲೈಫ್ಗೆ ಬ್ರೇಕ್ ಹಾಕಿದ ವಿಶಾಲ್ ಅವರು ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡೋದಕ್ಕೆ ಸಜ್ಜಾಗಿದ್ದಾರೆ. ಈ ಹಿಂದೆ ನನ್ನ ಬಹುದಿನಗಳ ಗೆಳತಿಯನ್ನು ವಿವಾಹ ಆಗಲಿದ್ದೇನೆ ಎಂದು ಸ್ವತಹ ವಿಶಾಲ್ ಅವರೇ ಹೇಳಿಕೊಂಡಿದ್ದರು.
ಚೆನ್ನೈನಲ್ಲಿ ನಡೆದ ಯೋಗಿ ದ ಎನ್ನುವ ಸಿನಿಮಾದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಟ ವಿಶಾಲ್ ಅವರು, ನಾನು ಮದುವೆ ಆಗುತ್ತಿದ್ದೇನೆ. ಹುಡುಗಿ ಯಾರು ಅಲ್ಲ. ಹುಡುಗಿ ಹಾಗೂ ಅವರ ತಂದೆ ಕೂಡ ಇಲ್ಲೇ ಇದ್ದಾರೆ. ನಟಿ ಸಾಯಿ ಅವರ ಜೊತೆ ನಾನು ಸಪ್ತಪದಿ ತುಳಿಯಲಿದ್ದೇನೆ. ನಾವಿಬ್ಬರು ಒಳ್ಳೆಯ ಲೈಫ್ ಲೀಡ್ ಮಾಡಲಿದ್ದೇವೆ ಎಂದು ಹೇಳಿದ್ದರು. ಇದೀಗ ನಟ ವಿಶಾಲ್, ನಟಿ ಸಾಯಿ ಧನ್ಶಿಕಾ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ