/newsfirstlive-kannada/media/media_files/2025/08/22/sujata-bhatt-2025-08-22-21-21-47.jpg)
ಅನನ್ಯಾ ಭಟ್ ನಾಪತ್ತೆ ಪ್ರಕರಣ.. ನನ್ನ ಮಗಳು ಕಾಣಿಸ್ತಿಲ್ಲ.. ಧರ್ಮಸ್ಥಳಕ್ಕೆ ಹೋದವಳು ವಾಪಸ್ ಬಂದೇ ಇಲ್ಲ ಅಂತ ಕಣ್ಣೀರಿಟ್ಕೊಂಡೇ ದೂರು ನೀಡಿದ್ದ ಸುಜಾತಾ ಭಟ್ ಅಸಲಿಯತ್ತು ಈಗಾಗಲೇ ಜಗಜ್ಜಾಹೀರಾಗಿದೆ. ಮೇಲಿಂದ ಮೇಲೆ ತರಹೇವಾರಿ ಟ್ವಿಸ್ಟ್ ಕೊಟ್ಟಿದ್ದ ಸುಜಾತಾಗೆ ಈಗ ಸಂಕಷ್ಟ ಎದುರಾಗಿದೆ.
ದಾಖಲೆ ನೀಡದ ಸುಜಾತಾಗೆ ಸಂಕಷ್ಟ!
ಅನನ್ಯಾ ಭಟ್ ನಾಪತ್ತೆ ಪ್ರಕರಣವೇ ಸದ್ಯ ನಾಪತ್ತೆಯಾಗೋಗಿದೆ. ಪ್ರಕರಣ ಸಂಬಂಧ ದಾಖಲೆ ಪತ್ರ ಒದಗಿಸಲು ವಿಫಲ ಹಿನ್ನೆಲೆ ಸುಜಾತಾ ಭಟ್ರನ್ನು ವಶಕ್ಕೆ ಪಡೆಯಲು ಎಸ್‌ಐಟಿ ಮುಂದಾಗಿದೆ. ಸುಳ್ಳು ದೂರು ನೀಡಿದ ಆರೋಪ ಹಿನ್ನೆಲೆ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ:ಅನುಶ್ರೀ ಕಲ್ಯಾಣ -ಲೇಟೆಸ್ಟ್ ಫೋಟೋಗಳು
ಅನನ್ಯಾ ನಾಪತ್ತೆ ಕೇಸ್ ಸಂಬಂಧ ಇಂದೂ ಕೂಡ ಸುಜಾತಾ ಭಟ್ ವಿಚಾರಣೆ ಮುಂದುವರೆದಿದೆ. 2 ದಿನಗಳ ತನಿಖೆ ವೇಳೆ ಪ್ರಭಾವಿಗಳ ಕೈವಾಡ, ಪಿತೂರಿ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ಕೊಟ್ಟಿದ್ದರು. ನಿನ್ನೆ ಕೇಸ್ ವಾಪಸ್ ತೆಗೆದುಕೊಳ್ತೀನಿ ಅಂತ ಕಣ್ಣೀರಿಟ್ಟಿದ್ದ ಸುಜಾತಾ, ಯಾಕೆ ಅನ್ನೋ ಕಾರಣವನ್ನೂ ಬಿಚ್ಚಿಟ್ಟಿದ್ದರು. ಆದ್ರೆ ಪ್ರಕರಣದ ಗಂಭೀರತೆ ಮೇಲೆ ವಿಚಾರಣೆ ಕೈಬಿಟ್ಟಿರಲಿಲ್ಲ. ಇಂದು 3ನೇ ದಿನವೂ ಆಟೋದಲ್ಲಿ ಬೆಳ್ತಂಗಡಿ SIT ಕಚೇರಿಗೆ ಆಗಮಿಸಿದ ಸುಜಾತಾ, ತನಿಖಾಧಿಕಾರಿ ಗುಣಪಾಲ ವಿಚಾರಣೆಯ ಸುಳಿಯಲ್ಲಿ ಸಿಲುಕಿದ್ದಾರೆ. ಸತತ ವಿಚಾರಣೆಯಲ್ಲಿ ಪತಿ ಅನಿಲ್ ಭಟ್ ಹಾಗೂ ಆಸ್ತಿ ವಿವಾದದ ಬಗ್ಗೆ ಮಾಹಿತಿ ನೀಡಿದ್ದಾರೆ.
ಎಸ್ಐಟಿ ಸುಳಿಯಲ್ಲಿ ಸುಜಾತಾ
ಸುಜಾತಾ ವಿಚಾರಣೆಯಲ್ಲಿ ಮಂಡ್ಯ ಮೂಲದ ಪ್ರಭಾವಿ ವ್ಯಕ್ತಿಯ ಹೆಸರು ಪ್ರಸ್ತಾಪಿಸಿದ್ದಾರೆಂಬ ಮಾಹಿತಿ ಸಿಕ್ಕಿದೆ. ಅಜ್ಜನ ಆಸ್ತಿಯ ಮೇಲಿನ ವ್ಯಾಮೋಹವೇ ಇಷ್ಟಕ್ಕೆಲ್ಲಾ ಕಾರಣ. ಮಂಡ್ಯ ಮೂಲದ ವ್ಯಕ್ತಿನೇ ಇದಕ್ಕೆ ಕೇಂದ್ರಬಿಂದು. ಮಹೇಶ್ ಶೆಟ್ಟಿ, ಗಿರೀಶ್ ಮಟ್ಟಣವರ್ ಸಂಪರ್ಕ ಇರೋದು ನಿಜ ಅಂತ ಹೇಳಿದ್ದಾರಂತೆ. ಉಡುಪಿಯ ಪರೀಕದ ಜಮೀನಿನ ಬಗ್ಗೆ ತಗಾದೆ ತೆಗೆದಿದ್ದ ಸುಜಾತರ ಕುಟುಂಬ ಕಲಹ- ಮನಸ್ತಾಪಗಳ ಬಗ್ಗೆ ಗುಣಪಾಲ್ ಪ್ರಶ್ನೆ ಮಾಡಿದ್ದಾರೆ. ಅನಂತಪದ್ಮನಾಭ ಯಾನೆ ಅಣ್ಣಯ್ಯ ಭಟ್ಗೆ 9 ಮಕ್ಕಳಿದ್ದು, ಮೂರುವರೆ ಎಕರೆ ಜಮೀನನ್ನು ಒಟ್ಟು 10 ಜನಕ್ಕೆ ಪಾಲು ಮಾಡಬೇಕಿತ್ತು. ಅಜ್ಜ, ಅಪ್ಪ-ಚಿಕ್ಕಪ್ಪ ದೊಡ್ಡಪ್ಪ ಹಾಗೂ ತನ್ನ ಅಕ್ಕ ತಂಗಿಯರ ಕಥೆಯನ್ನೂ ಬಿಚ್ಚಿಟ್ಟಿದ್ದಾರೆ. ಕುಟುಂಬದ ಕಥೆ ದೂರು ಆರೋಪ ಕೇಳಿ ಸುಸ್ತಾದ ಎಸ್ಐಟಿ, ಸೂಕ್ತ ದಾಖಲೆ ಕೇಳುತ್ತಿದ್ದಾರೆ. ಆದ್ರೆ ಯಾವುದೇ ದಾಖಲೆ ಇಲ್ಲದೆ ಪೆಚ್ಚು ಮೋರೆ ಹಾಕಿ ಕೂತಿದ್ದಾರೆ. ತೀರಿಹೋದ ಚಿಕ್ಕಪ್ಪ ನಾರಾಯಣ ಉಪಾಧ್ಯಾಯ ಮೇಲೆ ಗರಂ ಆಗಿದ್ದು ನಮಗೆ ಜಮೀನು ಬೇಕಿತ್ತು ಎಂದು ಕಣ್ಣೀರಿಡುತ್ತಿರುವುದಾಗಿ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಚೆನ್ನಾಗಿ ಅಡುಗೆ ಮಾಡ್ತೀನಿ, ಅನು ಚೆನ್ನಾಗಿ ತಿಂತಾಳೆ -ಅನುಶ್ರೀ ಬಗ್ಗೆ ಪತಿ ಹೇಳಿದ್ದೇನು?
ಕೈಕೊಟ್ಟ ಬುರುಡೆ ಗ್ಯಾಂಗ್.. ಏಕಾಂಗಿಯಾದ ಸುಜಾತಾ ಭಟ್!
ಇನ್ನು ಅನನ್ಯಾ ಭಟ್ ಕೇಸ್ನಲ್ಲಿ ಸುಜಾತಾ ಏಕಾಂಗಿಯಾಗಿದ್ದಾರೆ. ಸುಜಾತಾ ಭಟ್ ಬೆನ್ನಿಗಿದ್ದ ಬುರುಡೆ ಗ್ಯಾಂಗ್ನ ಯಾವ ಸದಸ್ಯರು ಈಗ ಜೊತೆಗಿಲ್ಲ. ಅಸಲಿಯತ್ತು ಬಯಲಾದ ಬಳಿಕ ಎಲ್ಲರೂ ಕೈ ಎತ್ತಿದ್ದಾರೆ.
ಏಕಾಂಗಿ ಸುಜಾತಾ!
- ವಕೀಲರ ಜೊತೆ ಕಾರಲ್ಲಿ ಬಂದು ದೂರು ಕೊಟ್ಟಿದ್ದ ಸುಜಾತಾ
- ನಂತರ ಈಕೆಯೇ ಅನನ್ಯಾ ಅಂತ ಫೋಟೋ ತೋರಿಸಿದ್ದರು
- ಆದ್ರೀಗ ಸುಜಾತಾ ಭಟ್ ಜೊತೆಗಿದ್ದ ವಕೀಲರೂ ಕಾಣಿಸುತ್ತಿಲ್ಲ
- ಅಂದು ಕಾರಲ್ಲಿ ಎಂಟ್ರಿ, ಈಗ ಆಟೋದಲ್ಲಿ ವಿಚಾರಣೆಗೆ ಹಾಜರು
- ಗ್ಯಾಂಗ್ ಮುಂದೆ ಹೇಳಿದ್ದೊಂದು, ಮಾಧ್ಯಮಗಳ ಮುಂದೆ ಹೇಳಿದ್ದೊಂದು
- ಈಗ ಎಸ್ಐಟಿ ಮುಂದೆ ಮಾಡಿದ ತಪ್ಪು ಒಪ್ಪಿಕೊಳ್ತಿರುವ ಸುಜಾತಾ
- ಬುರುಡೆ ಗ್ಯಾಂಗ್ಗೆ ಭಾರೀ ಹಿನ್ನಡೆ, ಸುಜಾತಾರನ್ನ ದೂರ ಇಟ್ಟ ಗ್ಯಾಂಗ್
- ಅಂದು ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲೇ ವಾಸ್ತವ್ಯ ಇತ್ತು
- ಈಗ ಲಾಡ್ಜ್ನಲ್ಲಿ ವಾಸವಾಗಿ ವಿಚಾರಣೆಗೆ ಬರ್ತಿರುವ ಸುಜಾತಾ
ಇದನ್ನೂ ಓದಿ: 50 ಲಕ್ಷ ರೂ. ಖರ್ಚು ಮಾಡಿ ಮದುವೆ, ಪತಿಗೆ 10 ಲಕ್ಷ, ನಮ್ಮ ಮಗಳಿಗೆ ಆದ ತರ ಬೇರೆ ಹೆಣ್ಮಕ್ಕಳಿಗೆ ಆಗಬಾರದು ಎಂದ ಶಿಲ್ಪಾ ತಾಯಿ
ಸುಜಾತಾ ಭಟ್ ಈ ಹಿಂದೆ ಪ್ರಕರಣ ಒಂದರಲ್ಲಿ ಸಿಲುಕಿದ್ದು ಬಯಲಾಗಿದೆ. 1989ರಲ್ಲಿ ಉಡುಪಿ ಸ್ಟೇಟ್ ಹೋಮ್ನಲ್ಲಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. 1989ರಲ್ಲಿ ರಿ ಹೇಬಿಲಿಟೇಶನ್ ಸೆಂಟರ್ನಲ್ಲಿದ್ದ ಸುಜಾತಾ ಭಟ್ ಬಗ್ಗೆ ಉಡುಪಿ ನಿಟ್ಟೂರಿನ ಸ್ಟೇಟ್ ಹೋಮ್ ಮಾಹಿತಿ ನೀಡಿದೆ. ಒಟ್ಟಾರೆ ಸುಜಾತಾ ಭಟ್ ಪ್ರಕರಣವೇ ಸದ್ಯ ಸಂಪೂರ್ಣ ಉಲ್ಟಾ ಹೊಡೆದಿದೆ. ಬುರುಡೆ ಗ್ಯಾಂಗ್ಗೆ ಇದು ತಿರುಗುಬಾಣವಾಗಿ ಪರಿಣಮಿಸಿದೆ.
ಇದನ್ನೂ ಓದಿ: ಬುರುಡೆ ಚೆನ್ನನ ವಿರುದ್ಧ ದೂರು ಕೊಟ್ಟ ಸೌಜನ್ಯ ತಾಯಿ.. ಇವರ ಆಗ್ರಹ ಏನು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ