Advertisment

ಹುಟ್ಟುವ ಮೊದಲೇ ಅವಳಿ ಮಕ್ಕಳ ಹೆಸರು ರಿವೀಲ್​ ಮಾಡಿದ ನಟಿ ಭಾವನಾ ರಾಮಣ್ಣ.. ಏನದು..?

ಖ್ಯಾತ ನಟಿ ಹಾಗೂ ಭರತನಾಟ್ಯ ಕಲಾವಿದೆ ಭಾವನಾ ರಾಮಣ್ಣ ಅವರು ತಮಗೆ ಹುಟ್ಟುವ ಮಗುವಿಗೆ ಹೆಸರು ಏನು ಇಡಬೇಕು ಎಂದು ನಿಗದಿ ಮಾಡಿದ್ದಾರೆ. ತಮ್ಮ 40ನೇ ವಯಸ್ಸಿನಲ್ಲಿ ಐವಿಎಫ್‌ ಮೂಲಕ ಗರ್ಭ ಧರಿಸಿದ್ದಾರೆ. ಮದುವೆಯಾಗದೆ, ವೀರ್ಯ ದಾನ ಪಡೆದು ಅವಳಿ  ಮಕ್ಕಳಿಗೆ ಭಾವನಾ ರಾಮಣ್ಣ ಗರ್ಭಿಣಿ ಆಗಿದ್ದಾರೆ.

author-image
NewsFirst Digital
bhavana ramanna(2)
Advertisment

ಖ್ಯಾತ ನಟಿ ಹಾಗೂ ಭರತನಾಟ್ಯ ಕಲಾವಿದೆ ಭಾವನಾ ರಾಮಣ್ಣ ಸಖತ್​ ಖುಷಿಯಲ್ಲಿದ್ದಾರೆ. ತಮ್ಮ 40ನೇ ವಯಸ್ಸಿನಲ್ಲಿ ಐವಿಎಫ್‌ ಮೂಲಕ ಗರ್ಭ ಧರಿಸಿದ್ದಾರೆ. ಮದುವೆಯಾಗದೆ, ವೀರ್ಯ ದಾನ ಪಡೆದು ಅವಳಿ  ಮಕ್ಕಳಿಗೆ ಭಾವನಾ ರಾಮಣ್ಣ ಗರ್ಭಿಣಿ ಆಗಿದ್ದಾರೆ.

Advertisment

ಇದನ್ನೂ ಓದಿ: ಕರ್ಲಿ ಹೇರ್ ಸ್ಟೈಲ್‌ನಲ್ಲಿ ಕಿಚ್ಚ​.. ಸುದೀಪ್​ ಹೊಸ ಲುಕ್​ನ ಸಿಕ್ರೇಟ್ ಏನು..?

bhavana ramanna

ಮೊನ್ನೆಯಷ್ಟೇ ನಟಿ ಭಾವನಾ ರಾಮಣ್ಣ ಅವರ ಮನೆಯಲ್ಲಿ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಲಾಗಿದೆ. ಒಂಟಿಯಾಗಿ ತಾಯಿಯಾಗುವ ತೀರ್ಮಾನ ತೆಗೆದುಕೊಂಡಿರೋ ಭಾವನಾ ಅವರು ಸದ್ಯ ತುಂಬು ಗರ್ಭಿಣಿಯಾಗಿದ್ದಾರೆ.

bhavana ramanna baby shower celebration(1)

ನಟಿ ಭಾವನಾ ಅವರಿಗೆ ಇನ್ನೂ ಮದುವೆಯಾಗಿಲ್ಲ. ಆದ್ರೆ, ಮದುವೆಯಾಗದೇ ತಾಯಿಯಾಗಬೇಕೆಂಬ ಹಂಬಲ ಭಾವನಾ ಅವರಲ್ಲಿತ್ತು. ಹೀಗಾಗಿ ಐವಿಎಫ್‌ (In vitro fertilization) ಇನ್ ವಿಟ್ರೊ ಫಲೀಕರಣ (IVF) ಎಂದರೆ ಪ್ರಯೋಗಾಲಯದಲ್ಲಿ ಮೊಟ್ಟೆ ಮತ್ತು ವೀರ್ಯವನ್ನು ಸಂಯೋಜಿಸುವ ಮೂಲಕ ಗರ್ಭಧರಿಸಲು ಸಹಾಯ ಮಾಡುವ ಒಂದು ಚಿಕಿತ್ಸೆಯಾಗಿದೆ. ಈ ಮೂಲಕ ನಟಿ ಸದ್ಯ ಆರು ತಿಂಗಳ ಗರ್ಭಿಣಿಯಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ.

Advertisment

ಇದನ್ನೂ ಓದಿ: ಒಳ ಮೀಸಲು ಸಮೀಕ್ಷೆಯ ಬಿಗ್​ ಅಪ್​ಡೇಟ್ಸ್​.. ನ್ಯಾ.ನಾಗಮೋಹನದಾಸ್‌ ಆಯೋಗದಿಂದ

bhavana ramanna baby shower celebration(2)

ಇನ್ನೂ, ಭಾವನಾ ಅವರು ತಮಗೆ ಹುಟ್ಟುವ ಮಗುವಿಗೆ ಹೆಸರು ಏನು ಇಡಬೇಕು ಎಂದು ನಿಗದಿ ಮಾಡಿದ್ದಾರೆ. ಹೆಣ್ಣು ಮಗು ಹುಟ್ಟಿದರೇ ರುಕ್ಮಿಣಿ ಅಂತ ಇಡುತ್ತೇನೆ ಎಂದಿದ್ದಾರೆ. ಮಕ್ಕಳಿಗೆ ಏನೆಂದು ಹೆಸರು ಇಡುವಿರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಭಾವನಾ ಅವರು, ಈಗ ಹೆಣ್ಣು ಮಗುವಿನ ಹೆಸರನ್ನು ಮಾತ್ರ ಯೋಚನೆ ಮಾಡಿದ್ದೇನೆ. ಆಕೆಗೆ ನನ್ನ ಅಮ್ಮನ ಅಮ್ಮ ಅಂದ್ರೆ ಅಜ್ಜಿಯ ಹೆಸರಾಗಿರುವ ರುಕ್ಮಿಣಿ ಇಡಬೇಕು ಎಂದುಕೊಂಡಿದ್ದೇನೆ ಎಂದಿದ್ದಾರೆ. ಆದರೆ ಗಂಡು ಮಗುವಿನ ಹೆಸರನ್ನು ಇನ್ನೂ ಯೋಚಿಸಿಲ್ಲ ಎಂದಿದ್ದಾರೆ.

bhavana ramanna baby shower celebration

ಚಿಕ್ಕಂದಿನಿಂದಲೂ ಭಾವನಾ, ಮಕ್ಕಳ ಜೊತೆಗಿರುವುದನ್ನು ಇಷ್ಟಪಡುತ್ತಿದ್ದರು. ಆದರೆ, ತಮ್ಮ 20ನೇ ವಯಸ್ಸಿನಲ್ಲಿ ತಾಯಿಯಾಗುವ ಯೋಚನೆ ಗಂಭೀರವಾಗಿರಲಿಲ್ಲ. 30ನೇ ವಯಸ್ಸಿನಲ್ಲಿ ಪ್ರೀತಿಯ ಆಕಾಂಕ್ಷೆಯಿದ್ದರೂ, ತಾಯಿಯಾಗುವ ಬಗ್ಗೆ ಯೋಚನೆ ಮಾಡಿರಲಿಲ್ಲ. ನಾನು ಯಾವಾಗಲೂ ಮಕ್ಕಳ ಸುತ್ತಲಿರುವ ವಾತಾವರಣದಲ್ಲಿ ಬೆಳೆದೆ. ನನ್ನ ತಂದೆ-ತಾಯಿ, ಮೂವರು ಸಹೋದರ-ಸಹೋದರಿಯರು, ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ತುಂಬಿದ ಮನೆಯಲ್ಲಿ ಬೆಳೆದೆ. ಆದರೆ 40ನೇ ವಯಸ್ಸಿಗೆ ತಲುಪಿದಾಗ ತಾಯಿಯಾಗಬೇಕೆಂಬ ಆಸೆಯನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಭಾವನಾ ಇಂಗ್ಲೀಷ್ ಪತ್ರಿಕೆಯೊಂದಕ್ಕೆ ತಿಳಿಸಿದ್ದರು.

Advertisment

bhavana ramanna(1)

ಸದ್ಯ ನಟಿ ಭಾವನಾ ರಾಮಣ್ಣ ಅವರ ಸೀಮಂತ ಶಾಸ್ತ್ರದ ಫೊಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಅಭಿಮಾನಿಗಳು ನಟಿಗೆ ಶುಭ ಹಾರೈಸುತ್ತಿದ್ದಾರೆ. ವಿಶೇಷ ಎಂದರೆ, ಭಾವನಾ ರಾಮಣ್ಣ ಅವರ ಸೀಮಂತ ಶಾಸ್ತ್ರದಲ್ಲಿ ಸ್ಟಾರ್​ ಗಾಯಕಿ ಅರ್ಚನಾ ಉಡುಪ ಭಾಗಿಯಾಗಿದ್ದರು. ಅಲ್ಲದೇ ಲೋಕದ ಕಣ್ಣಿಗೆ ರಾಧೆಯು ಕೂಡ ಎಂಬ ಹಾಡನ್ನು ಹಾಡಿದ್ದರು. ಇದೇ ಹಾಡನ್ನು ನಟಿ ಭಾವನ ಎಂಜಾಯ್​ ಮಾಡುತ್ತಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bhavana Ramanna
Advertisment
Advertisment
Advertisment