ಒಳ ಮೀಸಲು ಸಮೀಕ್ಷೆಯ ಬಿಗ್​ ಅಪ್​ಡೇಟ್ಸ್​.. ನ್ಯಾ.ನಾಗಮೋಹನದಾಸ್‌ ಆಯೋಗದಿಂದ ವರದಿ ಸಲ್ಲಿಕೆ

ಇಂದು ರಾಜ್ಯ ಸರ್ಕಾರಕ್ಕೆ ಒಳಮೀಸಲು ಸಮೀಕ್ಷಾ ವರದಿ ಸಲ್ಲಿಕೆ ಆಗಲಿದೆ. ನ್ಯಾ.ನಾಗಮೋಹನದಾಸ್‌ ಅವರು ಸಿಎಂ ಸಿದ್ದರಾಮಯ್ಯಗೆ ತಮ್ಮ ವರದಿಯನ್ನು ಸಲ್ಲಿಕೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಸರ್ಕಾರಕ್ಕೆ ವರದಿಯನ್ನು ಒಪ್ಪಿಸಲಿದ್ದಾರೆ.

author-image
Ganesh
internal reservation for Karnataka SC ST
Advertisment

ಇಂದು ರಾಜ್ಯ ಸರ್ಕಾರಕ್ಕೆ ಒಳಮೀಸಲು ಸಮೀಕ್ಷಾ ವರದಿ ಸಲ್ಲಿಕೆ ಆಗಲಿದೆ. ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ಉಪಪಂಗಡಗಳ ಅಂಕಿ-ಅಂಶಗಳ ಸಮೀಕ್ಷೆಗಾಗಿ ರಾಜ್ಯ ಸರ್ಕಾರ ರಚಿಸಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್​​ಎನ್ ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗವು ಇಂದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿದೆ.

ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ.. ಇಂದು 3 ಪಾಯಿಂಟ್​​ಗಳಲ್ಲಿ ಆಪರೇಷನ್, ಇಲ್ಲಿವರೆಗೆ ಸಿಕ್ಕಿದ್ದು ಏನೇನು?

ನ್ಯಾ.ನಾಗಮೋಹನದಾಸ್‌ ಅವರು ಸಿಎಂ ಸಿದ್ದರಾಮಯ್ಯಗೆ ತಮ್ಮ ವರದಿಯನ್ನು ಸಲ್ಲಿಕೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಸರ್ಕಾರಕ್ಕೆ ವರದಿಯನ್ನು ಒಪ್ಪಿಸಲಿದ್ದಾರೆ. ಎರಡು ದಿನಗಳ ಹಿಂದಷ್ಟೇ ಪರಿಶಿಷ್ಟ ಜಾತಿಯ ಎಡ, ಬಲ ಸಮುದಾಯದ ನಾಯಕರು ಒಳ ಮೀಸಲಾತಿ ಸಂಬಂಧ ಸಭೆ ನಡೆಸಿದ್ದರು. 

  • ಪರಿಶಿಷ್ಟ ಜಾತಿಯಲ್ಲಿ ಒಳಮೀಸಲು ಕಲ್ಪಿಸಲು ಉಪಪಂಗಡಗಳ ಅಂಕಿ-ಅಂಶ ಸಮೀಕ್ಷೆಗೆ ರಚನೆಯಾಗಿದ್ದ ಆಯೋಗ
  • ಒಳಪಂಗಡಗಳ ವಿಸ್ತ್ರತ ಸಮೀಕ್ಷೆ ನಡೆಸಿರುವ ನ್ಯಾ. ನಾಗಮೋಹನ ದಾಸ್ ಆಯೋಗ
  •  ಒಳಮೀಸಲು ಕಾರಣ ರಾಜ್ಯದಲ್ಲಿ ಸದ್ಯ ಸ್ಥಗಿತ ಆಗಿರುವ ಹೊಸ ನೇಮಕಾತಿ, ಬಡ್ತಿ ಪ್ರಕ್ರಿಯೆ
  • ವರದಿ ಸಲ್ಲಿಕೆಯಾದರೆ ಆ ಪ್ರಕ್ರಿಯೆಗಳು ಪುನಾರಂಭ ಸಾಧ್ಯತೆ. 20 ದಿನದಲ್ಲೇ ಒಳಮೀಸಲು ಜಾರಿ ಆಗುವ ನಿರೀಕ್ಷೆ
  • ಆಗದಿದ್ರೆ ಒಳಮೀಸಲು ಬೇಡಿಕೆ ತೀವ್ರ ಸಾಧ್ಯತೆ. ವರದಿ ಅಂಕಿ-ಅಂಶಗಳ ಬಗ್ಗೆಯೂ ಕುತೂಹಲ

ಇದನ್ನೂ ಓದಿ: KRS ಡ್ಯಾಂಗೆ ಟಿಪ್ಪು ಸುಲ್ತಾನ್ ಅಡಿಗಲ್ಲು; ದಾಖಲೆ ಸಮೇತ ಸ್ಪಷ್ಟನೆ ಕೊಟ್ಟ ಸಚಿವ ಹೆಚ್​.ಸಿ ಮಹದೇವಪ್ಪ

ಸುಪ್ರೀಂ ಕೋರ್ಟ್ ಕಳೆದ ವರ್ಷ ಆಗಸ್ಟ್ 1 ರಂದು ನೀಡಿದ ತೀರ್ಪಿನಲ್ಲಿ ಸಂವಿಧಾನದ ಅಡಿ ರಾಜ್ಯ ಸರ್ಕಾರಗಳು ಶಿಕ್ಷಣ ಮತ್ತು ಸೇವೆಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ಪರಿಶಿಷ್ಟ ಜಾತಿಗಳ ಉಪವರ್ಗೀಕರಣಕ್ಕೆ ಅವಕಾಶ ಕಲ್ಪಿಸಿತ್ತು. ಅದರಂತೆ ರಾಜ್ಯ ಸರ್ಕಾರ ನ್ಯಾ.ಡಾ.ಎಚ್‌.ಎನ್‌. ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗ ರಚಿಸಿತ್ತು. ಇಂದು ಆಯೋಗವು ಸಮೀಕ್ಷೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಿದೆ. 

ಇದನ್ನೂ ಓದಿ:ಮಾಟ, ಮಂತ್ರಕ್ಕೂ ಈಗ ಡಿಜಿಟಲ್ ಅಸ್ತ್ರ.. ಬೆಳಗಾವಿಯಲ್ಲಿ ಅಚ್ಚರಿ ತಂದ ಹೈಟೆಕ್ ವಾಮಾಚಾರ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಳ ಮೀಸಲಾತಿ
Advertisment