ಮಾಟ, ಮಂತ್ರಕ್ಕೂ ಈಗ ಡಿಜಿಟಲ್ ಅಸ್ತ್ರ.. ಬೆಳಗಾವಿಯಲ್ಲಿ ಅಚ್ಚರಿ ತಂದ ಹೈಟೆಕ್ ವಾಮಾಚಾರ..!

ಅಮವಾಸ್ಯೆ, ಹುಣ್ಣೆಮೆ ಸಂದರ್ಭದಲ್ಲಿ ಮೂರು ರಸ್ತೆ ಸೇರೋ ಜಾಗದಲ್ಲಿ ಅನೇಕ ರೀತಿ ವಾಮಾಚಾರವನ್ನು ನಾವು ನೋಡಿದ್ದೇವೆ.. ಆದ್ರೆ ಬೆಳಗಾವಿಯಲ್ಲಿ ವಿಚಿತ್ರ ವಾಮಾಚಾರ ಪ್ರಕರಣ ಬೆಳಕಿಗೆ ಬಂದಿದೆ. ರೈತರ ಜಮೀನುವೊಂದರಲ್ಲಿ ವಾಮಾಚಾರ ಮಾಡಿದ ದುಷ್ಕರ್ಮಿಗಳು, ಇದಕ್ಕಾಗಿ ಸ್ಮಾರ್ಟ್​ಫೋನ್ ಬಳಕೆ ಮಾಡಿದ್ದಾರೆ

author-image
Ganesh
belagavi black magic through mobile (1)

ವಾಮಾಚಾರಕ್ಕೆ ಫೋನ್ ಬಳಸಿರುವ ದುಷ್ಕರ್ಮಿಗಳು

Advertisment
  • ಲಿಂಬೆಹಣ್ಣು, ಕುಂಕುಮ ಅರಿಶಿಣ ಇಟ್ಟು ಮಾಟ ಕಾಮನ್
  • ಇಲ್ಲಿ ವಾಮಾಚಾರ ಮಾಡಲು ಮೊಬೈಲೇ ಇಟ್ಟ ಭೂಪರು!
  • ಬೆಳಗಾವಿಯ ಯಳ್ಳೂರು ಗ್ರಾಮದ ಬಳಿ ವಿಚಿತ್ರ ಘಟನೆ

ಮಾಟ-ಮಂತ್ರ.. ಯಾವಾಗ, ಎಲ್ಲಿಂದ ಆರಂಭ ಆಯ್ತೋ ಅನ್ನೋದಕ್ಕೆ ಇತಿಹಾಸವಿಲ್ಲ.. ಪುರಾಣದ ಪುರಾವೆಗಳಿವೆ.. ನಾವು ನೀವು ವಾಮಾಚಾರಗಳನ್ನ ಅಲ್ಲಲ್ಲಿ ಆಗಾಗ ನೋಡಿದ್ದೀವಿ.. ಮೂರು ರಸ್ತೆಗಳು ಸೇರೋ ಜಾಗಲದಲ್ಲಿ ತೆಂಗಿನಕಾಯಿ, ಲಿಂಬೆಹಣ್ಣು ಇಡೋದು ಇದೆಲ್ಲ ಕಾಮನ್.. ಮಾಟ ಈಗ ಅಪಡೇಟ್​ ಆಗಿದೆ.. ಸ್ಮಾರ್ಟ್​​ ಯುಗದಲ್ಲಿ ಡಿಜಿಟಲ್​ ವಾಮಾಚಾರ ನಡೆದಿದೆ.

ಸ್ಮಾರ್ಟ್​ ಮಾಟ-ಮಂತ್ರ!

ಅಂದ್ಹಾಗೆ ಇದು ಸ್ಮಾರ್ಟ್​​​ ವಾಮಾಚಾರ.. ಜನ ಸ್ಮಾರ್ಟ್​​​ ಆಗಿದ್ದಾರೆ.. ಅದರಂತೆ ಕ್ಷುದ್ರಶಕ್ತಿಗಳ ವಶಕ್ಕೆ ಇಲ್ಲಿ ಡಿಜಿಟಲ್​​​ ಅಸ್ತ್ರ ಬಳಸಿದ್ದಾರೆ. ಬೆಳಗಾವಿಯಲ್ಲಿ ಸ್ಮಾರ್ಟ್​ಫೋನ್ ವಾಮಾಚಾರವೊಂದು ಸದ್ಯ ಸುದ್ದಿಯಲ್ಲಿದೆ.. 

ಸ್ಮಾರ್ಟ್​ಫೋನ್​​ ವಾಮಾಚಾರ!

ಬೆಳಗಾವಿಯ ಯಳ್ಳೂರು ಭಾಗದಲ್ಲಿ ರೈತರು ಭತ್ತ ನಾಟಿ ಮಾಡಿದ್ದಾರೆ. ಎಂದಿನಂತೆ ತಮ್ಮ ಜಮೀನಿಗೆ ಹೋದ ಸಂದರ್ಭದಲ್ಲಿ ರೈತರಿಗೆ ಶಾಕ್ ಆಗಿದೆ. ರೈತ ಸದಾನಂದ ದೇಸಾಯಿ ಎನ್ನುವ ರೈತನ ಹೊಲದಲ್ಲಿ ವಾಮಾಚಾರ ಕಂಡು ಬಂದಿದೆ. ಈ ವೇಳೆ ರೈತ ಮುಖಂಡ ರಾಜು ಮರವೆಗೆ ಫೋನ್​ ಮಾಡಿ ವಿಷಯ ತಿಳಿಸಲಾಗಿದೆ. ಸ್ಥಳಕ್ಕೆ ಹೋಗಿ ನೋಡಿದಾಗ ವಾಮಾಚಾರ ನಡೆದಿರೋದು ಬೆಳಕಿಗೆ ಬಂದಿದೆ.. ಅಲ್ಲಿ ಲಿಂಬೆಹಣ್ಣು, ಮೊಸರನ್ನ ಜೊತೆಗೆ ಸ್ಮಾರ್ಟ್​ಫೋನ್​ ಒಂದು ಪತ್ತೆಯಾಗಿದೆ. ಕಳೆದ ಕೆಲ ತಿಂಗಳಿಂದ ಸತತವಾಗಿ ವಾಮಾಚಾರದ ವಸ್ತುಗಳು ಪತ್ತೆಯಾಗುತ್ತಿವೆ. ಈ ಹಿಂದೆ ಬಟ್ಟೆಗೊಂಬೆ ಹಾಗೂ ಮೋಸಂಬಿ ಇಟ್ಟು ವಾಮಾಚಾರ ಮಾಡಲಾಗಿತ್ತಂತೆ. ಈ ವೇಳೆ ರೈತರು ಮೊಸಂಬಿಯನ್ನ ಅಲ್ಲಿಯೇ ತಿಂದು ಇದೊಂದು ಮೂಢನಂಬಿಕೆ ಎಂದು ತೋರಿಸುವ ಯತ್ನ ಮಾಡಿದ್ರಂತೆ.

ಇದನ್ನೂ ಓದಿ: Miss You ಬೆಂಗಳೂರು; ಸಿಲಿಕಾನ್ ಸಿಟಿ ಬಿಟ್ಟು ಹೋಗುವಾಗ ಗಳ ಗಳನೇ ಅತ್ತ ಫಾರಿನ್ ಯುವತಿ

belagavi black magic through mobile (2)
ಸ್ಮಾರ್ಟ್​​ ವಾಮಾಚಾರ


ಸದಾನಂದ ದೇಸಾಯಿ ಎನ್ನುವ ಯುವಕ ಬೇರೊಬ್ಬರ ಜಮೀನನ್ನ ಲೀಜ್ ಮೇಲೆ ಪಡೆದು ಕೃಷಿ ಮಾಡ್ತಿದ್ದಾನೆ. ಲೀಜ್​​​ ಪಡೆದ ಮೇಲೆ ಜಮೀನಿನಲ್ಲಿ ಅನೇಕ ರೀತಿ ವಿಚಿತ್ರ ಘಟನೆಗಳು ನಡೆದಿವೆ. ಆದ್ರೆ, ಯಾವ ಉದ್ದೇಶಕ್ಕೆ ಈ ರೀತಿ ವಾಮಾಚಾರ ಮಾಡಲಾಗ್ತಿದೆ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಈಗ ಪೋನ್​ ಬಳಿಸಿಯೂ ವಾಮಾಚಾರ ನಡೆಸಿರೋದು ಅಚ್ಚರಿ ಮತ್ತು ಕುತೂಹಲಕ್ಕೆ ಕಾರಣ ಆಗಿದೆ.
ಒಟ್ಟಾರೆ, ಈ ರೀತಿಯ ಕೃತ್ಯದಿಂದ ರೈತರ ಆತ್ಮಸ್ಥೈರ್ಯ ಕುಗ್ಗಿಸಲಾಗ್ತಿದೆ.. ಮೊಬೈಲ್ ಜಮಾನ ಬಂದ ಬಳಿಕ ಎಲ್ಲಾ ರೀತಿಯ ಮಾಹಿತಿ ಸಿಕ್ಕು ಡಿಜಿಟಲ್​​​ ಕ್ರಾಂತಿ ಆಗ್ತಿದೆ.. ಈ ನಡುವೆ, ಕೆಲವರು ಈ ಮೊಬೈಲ್​ನ್ನೆ ಬಳಸಿ ವಾಮಾಚಾರದ ಮೊರೆ ಹೋಗಿರೋದು ವಿಜ್ಞಾನವನ್ನೆ ಅಣಕಿಸಿದ್ದಾರೆ. ಅಷ್ಟಕ್ಕೂ ಮೊಬೈಲ್​​ ಬಳಸಿದ್ಯಾಕೆ? ವಾಮಾಚಾರದಲ್ಲಿ ಈ ಪ್ರಯೋಗ ಸಫಲ ಕಾಣುತ್ತಾ ಅನ್ನೋದು ಯಕ್ಷ ಪ್ರಶ್ನೆ.

ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ.. ಇಂದು 3 ಪಾಯಿಂಟ್​​ಗಳಲ್ಲಿ ಆಪರೇಷನ್, ಇಲ್ಲಿವರೆಗೆ ಸಿಕ್ಕಿದ್ದು ಏನೇನು?


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಮಾಚಾರ
Advertisment