Advertisment

ಧರ್ಮಸ್ಥಳ ಬುರುಡೆ ರಹಸ್ಯ.. ಇಂದು 3 ಪಾಯಿಂಟ್​​ಗಳಲ್ಲಿ ಆಪರೇಷನ್, ಇಲ್ಲಿವರೆಗೆ ಸಿಕ್ಕಿದ್ದು ಏನೇನು?

ಧರ್ಮಸ್ಥಳ ನೇತ್ರಾವತಿ ನದಿ ತಟದ ಈ ಕ್ಷೇತ್ರದಲ್ಲಿ ಆಘಾತಕಾರಿ ಸುದ್ದಿಗಳಿಂದ ಸದ್ದಾಗ್ತಿದೆ. ಮಾಜಿ ಸ್ವಚ್ಛತಾ ಕಾರ್ಮಿಕನೊಬ್ಬ ನೂರಾರು ಮೃತದೇಹಗಳನ್ನ ಹೂತಿರುವ ಬುರುಡೆ ರಹಸ್ಯ ಬಿಚ್ಚಿಟ್ಟ ಬಳಿಕ ಈಗ 13 ಪಾಯಿಂಟ್​ಗಳಲ್ಲಿ ಕಾರ್ಯಾಚರಣೆ ನಡೆಸಲಾಗ್ತಿದೆ. ಭೂಮಿ ಅಗೆದು ಬುರುಡೆ ರಹಸ್ಯವನ್ನ ಭೇದಿಸುವ ಕಾರ್ಯ ನಡೀತಿದೆ..

author-image
Ganesh Kerekuli
dharmasthala case(21)
Advertisment
  • ಇಂದು ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ಮಹಜರು
  • 11, 12, 13ರ ಪಾಯಿಂಟ್​ನಲ್ಲಿ ತಲಾಷ್ ಪ್ರಕ್ರಿಯೆ ನಡೆಯಲಿದೆ
  • 11, 12, 13ರ ಪಾಯಿಂಟ್​ನಲ್ಲಿ ಅಡಗಿದ್ಯಾ ಕಠೋರ ಸತ್ಯ..?

ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಹಲವು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದಿದ್ದ ಅನಾಮಧೇಯ ವ್ಯಕ್ತಿ ತೋರಿಸಿದ ಜಾಗದಲ್ಲಿ ತಲಾಷ್ ನಡೀತಿದೆ. ಈಗಾಗಲೇ 10 ಪಾಯಿಂಟ್​ಗಳಲ್ಲಿ ಶೋಧ ಮುಗಿದಿದೆ.  ನಿನ್ನೆ ಭಾನುವಾರ ಆಗಿದ್ದರಿಂದ ರಿಲ್ಯಾಕ್ಸ್​​ಗೆ ಜಾರಿದ್ದ ಎಸ್​​ಐಟಿ ತಂಡ, ಇವತ್ತು ಮತ್ತೆ ಮಹಜರು ಪ್ರಕ್ರಿಯೆ ಶುರು ಮಾಡಲಿದೆ. ಇನ್ನೂ 3 ಪಾಯಿಂಟ್​ಗಳಲ್ಲಿ ಇವತ್ತು ಆಪರೇಷನ್ ನಡೆಸಲಿದ್ದು ಎಸ್​ಐಟಿ ತಂಡ ಮುಂದೇನು ಮಾಡಲಿದೆ ಅನ್ನೋದು ಕುತೂಹಲ ಮೂಡಿಸಿದೆ

11, 12, 13ರ ಪಾಯಿಂಟ್​ನಲ್ಲಿ ಅಡಗಿದ್ಯಾ ಬುರುಡೆ ರಹಸ್ಯ!

Advertisment

ಕಳೆದೆರಡು  ವಾರದಿಂದ ಧರ್ಮಸ್ಥಳದ್ದೇ ಸುದ್ದಿ.. ಪಾಯಿಂಟ್​​ ಒಂದರಿಂದ ಹತ್ತರವರೆಗೆ ಸಸ್ಪೆನ್ಸ್​ ಮೇಲೆ ಸಸ್ಪೆನ್ಸ್ ಕೊಟ್ಟ ನೇತ್ರಾವತಿ ನದಿ ತೀರ, ಅದೆಷ್ಟು ರಹಸ್ಯಗಳನ್ನ ಪೋಷಿಸ್ತಿದ್ಯೋ ಬಲ್ಲವಱರು? ಕಳೆದ ಜುಲೈ 29ನೇ ತಾರೀಖಿನಿಂದ ಶುರುವಾದ ಮಹಜರು ಪ್ರಕ್ರಿಯೆ ಕೊನೇ ಹಂತಕ್ಕೆ ಬಂದಂತಿದೆ.. ಈಗ 11, 12, 13ರ ಪಾಯಿಂಟ್​ಗಳ ಹತ್ತಿರಕ್ಕೆ ಬಂದಿದ್ದು ಕ್ಲೈಮ್ಯಾಕ್ಸ್​​ ಹಂತ ತಲುಪಿದೆ.. ಇವತ್ತು 11 ಹಾಗೂ 12ರ ಪಾಯಿಂಟ್​​ಗಳನ್ನ ಮಹಜರು ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: KRS ಡ್ಯಾಂಗೆ ಟಿಪ್ಪು ಸುಲ್ತಾನ್ ಅಡಿಗಲ್ಲು; ದಾಖಲೆ ಸಮೇತ ಸ್ಪಷ್ಟನೆ ಕೊಟ್ಟ ಸಚಿವ ಹೆಚ್​.ಸಿ ಮಹದೇವಪ್ಪ

dharmasthala case(17)

Advertisment

13 ಪಾಯಿಂಟ್​​ಗಳನ್ನ ಅನಾಮಧೇಯ ವ್ಯಕ್ತಿ ಮುಂದೆ ಬಂದು ಕಣ್ಣಿಗೆ ಕಟ್ಟಿದಂತೆ ತೋರಿಸಿದ್ದು ಇಡೀ ರಾಜ್ಯವೇ ಕುತೂಹಲದಿಂದ ಕಣ್ಬಿಟ್ಟು ನೋಡ್ತಿದೆ.. ಮಾರ್ಕಿಂಗ್​ನಲ್ಲಿ ಸಿಗುತ್ತೆ.. ಆ ಮಾರ್ಕಿಂಗ್​ನಲ್ಲಿ ಅಸ್ಥಿಪಂಜರ ಸಿಗುತ್ತೆ ಅಂತಾನೇ ತೋರಿಸಿದ್ದ.. 

ಪಾಯಿಂಟ್ 1-10.. ಸಿಕ್ಕಿದ್ದೇನು?

  • ಪಾಯಿಂಟ್ 1 : ಪ್ಯಾನ್ ಕಾರ್ಡ್​, 1 ಡೆಬಿಟ್ ಕಾರ್ಡ್, ಕೆಂಪು ರವಿಕೆ 
  •  ಪಾಯಿಂಟ್ 2, 3, 4, 5 : ಯಾವುದೇ ಅಸ್ಥಿಪಂಜರ, ವಸ್ತುಗಳು ಸಿಕ್ಕಿಲ್ಲ
  •  ಪಾಯಿಂಟ್ 6 : 12ಕ್ಕೂ ಹೆಚ್ಚಿನ ಅಸ್ತಿಪಂಜರದ ಅವಶೇಷಗಳು ಪತ್ತೆ 
  •  ಪಾಯಿಂಟ್ 7 : ಕುತೂಹಲ ಹುಟ್ಟಿಸಿದ 5 ಅಡಿ ಆಳದಲ್ಲಿ ಖರ್ಚೀಫ್​​
  •  ಪಾಯಿಂಟ್ 8, 9, 10 : ಅಸ್ಥಿಪಂಜರ ಪತ್ತೆಯಾಗಿಲ್ಲ

ಹತ್ತು ಪಾಯಿಂಟ್​​ಗಳ ಮಹಜರು ಪ್ರಕ್ರಿಯೆ ಮುಗಿದಿದೆ. ಇನ್ನುಳಿದಂತೆ ಮೂರು ಪಾಯಿಂಟ್​​ಗಳ ನೆಲವನ್ನು ಅಗೆದು ಶೋಧಿಸಬೇಕಿದೆ. 13 ಪಾಯಿಂಟ್​​ಗಳೆಲ್ಲಾ ಮುಗಿದ ಮೇಲೆ ಎಸ್​ಐಟಿ ಅಧಿಕಾರಿಗಳು, ದೂರುದಾರ ಗಂಭೀರವಾಗಿ ಆರೋಪ ಮಾಡಿದ್ದ ಕಲ್ಲೇರಿ ಗ್ರಾಮದ ನೆಲವನ್ನ ಅಗೆಯುತ್ತಾರಾ ಅನ್ನೋ ಕುತೂಹಲ ಶುರುವಾಗಿದೆ. ಬೆಳ್ತಂಗಡಿ ಪ್ರದೇಶದ ಕಲ್ಲೇರಿ ಗ್ರಾಮದಲ್ಲಿ ಶಾಲಾ ಬಾಲಕಿಯರ ಅರೆನಗ್ನ ಸ್ಥಿತಿಯಲ್ಲಿ ಶವ ಪತ್ತೆ ಬಗ್ಗೆ ಇದೇ ಅನಾಮಿಕ ವ್ಯಕ್ತಿ ಪ್ರಸ್ತಾಪ ಮಾಡಿದ್ದ. ದೂರುದಾರ ಹೇಳಿದಂತೆ, 12 ರಿಂದ 15 ವರ್ಷಗಳ ಹದಿಹರೆಯದ ಹುಡುಗಿಯೊಬ್ಬಳು, ಸ್ಕೂಲ್ ಯೂನಿಫಾರ್ಮ್ ಧರಿಸಿದ್ದ ದೇಹ ನೋಡಿದ್ದೆ. ಆಕೆ ಅತ್ಯಾ*ಚಾರಕ್ಕೆ ಒಳಗಾಗಿದ್ದಳು ಅನ್ನೋ ಮಾಹಿತಿ ಕೊಟ್ಟಿದ್ದಾನೆ. ಹೀಗಾಗಿ 13 ಪಾಯಿಂಟ್​ಗಳ ಮಹಜರು ಮುಗಿದ್ಮೇಲೆ ಕಲ್ಲೇರಿ ಗ್ರಾಮದ ನೆಲವನ್ನೂ ಅಗೆಯುತ್ತಾರಾ ಅನ್ನೋ ಪ್ರಶ್ನೆ ಶುರುವಾಗಿದೆ.

Advertisment

ಇದನ್ನೂ ಓದಿ: ಸರ್ಕಾರಿ ಶಾಲೆಯ ನೀರಿನ ತೊಟ್ಟಿಗೆ ವಿಷ ಬೆರೆಸಿದ್ದು ಯಾರು..? ಪೊಲೀಸರ ತನಿಖೆಯಿಂದ ಹೊರ ಬಿತ್ತು ಮಾಹಿತಿ

dharmasthala case(10)

ಒಟ್ಟಾರೆ ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಅಗೆಯುವ ಕಾರ್ಯಾಚರಣೆ ನಿನ್ನೆ ಭಾನುವಾರ ಆಗಿದ್ದರಿಂದ ಕೊಂಚ ಬ್ರೇಕ್ ಕೊಡಲಾಗಿತ್ತು. ನಿರಂತರ ಕಾರ್ಯಾಚರಣೆಯಿಂದ ಕಂದಾಯ ಇಲಾಖೆಯ ಅಧಿಕಾರಿಗಳು FSL ತಂಡ ಹಾಗೂ ವೈದ್ಯರು ಸುಸ್ತಾಗಿದ್ದರು. ಇಂದು ಮತ್ತೆ ಪಾಯಿಂಟ್ ನಂಬರ್ 11 ಮತ್ತು 12ರಲ್ಲಿ ಪರಿಶೋಧನೆ ನಡೆಯಲಿದೆ. ಅನಾಮಿಕನ ವಿಚಾರಣೆಯಲ್ಲಿ ಹೇಳಿದ್ದ ಸ್ಥಳಗಳಲ್ಲಿ ಹಿಟಾಚಿ ಹಾಗೂ ಸುಮಾರು 60 ರಿಂದ 70 ಮಂದಿ ಸಿಬ್ಬಂದಿ ಮಹಜರು ಪ್ರಕ್ರಿಯೆ ನಡೆಸಲಿದ್ದು ಏನಾದ್ರೂ ಸಿಗಬಹುದಾ ಎಂಬ ಕುತೂಹಲ ಗರಿಗೆದರಿದೆ.

ವಿಶೇಷ ವರದಿ: ಕಿರಣ್ ಜೊತೆ ಪರೀಕ್ಷಿತ್, ನ್ಯೂಸ್​ಫಸ್ಟ್​, ಮಂಗಳೂರು 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dharmasthala
Advertisment
Advertisment
Advertisment