/newsfirstlive-kannada/media/media_files/2025/08/25/parineeti-chopra-2025-08-25-13-59-37.jpg)
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಪ್ ಸಂಸದ ರಾಘವ್ ಚಡ್ಡಾ ದಂಪತಿ ಸಖತ್ ಖುಷಿಯಲ್ಲಿದ್ದಾರೆ. ಸ್ಟಾರ್ ನಟಿ ಪರಿಣಿತಿ ಚೋಪ್ರಾ ದಂಪತಿ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ: ಮಹಿಳೆಯರೇ ಗಮನಿಸಿ.. ಕಪಾಟಿನಲ್ಲಿಟ್ಟ ಸೀರೆಗಳು ಹಾಳಾಗಬಾರದಾ? ಸೇಫ್ ಆಗಿರಿಸಲು ಹೀಗೆ ಮಾಡಿ..
ನಟಿ ಪರಿಣಿತಿ ಚೋಪ್ರಾ ತಾಯಿ ಆಗುತ್ತಿರೋ ಖುಷಿ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ಕಾಲಿನ ಫೋಟೋ ಶೇರ್ ಮಾಡಿದ್ದು, 1+1= 3 ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ ದಂಪತಿ.
ನಟಿ ಪರಿಣಿತಿ ಚೋಪ್ರಾ ಅವರು ಆಪ್ ಸಂಸದ ರಾಘವ್ ಚಡ್ಡಾ ಜೊತೆ ಕಳೆದ ವರ್ಷದ ಸೆಪ್ಟೆಂಬರ್ 24ರಂದು ಅದ್ಧೂರಿಯಾಗಿ ಸಪ್ತಪದಿ ತುಳಿದಿದ್ದರು. ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಈ ಜೋಡಿ ಮದುವೆಯಾಗಿದ್ದರು. ಇವರ ಮದುವೆಗೆ ಗಣ್ಯಾತಿ ಗಣ್ಯರು ಭಾಗಿಯಾಗಿ ಶುಭ ಹಾರೈಸಿದ್ದರು.
ನಟಿ ಪರಿಣಿತಿ ಚೋಪ್ರಾ 2011ರಿಂದಲೂ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. ‘ಶುದ್ಧ್ ದೇಸಿ ರೊಮ್ಯಾನ್ಸ್’, ‘ಹಸೀ ತೊ ಫಸೀ’, ‘ದಾವತ್ ಎ ಇಶ್ಕ್’, ‘ನಮಸ್ತೆ ಇಂಗ್ಲೆಂಡ್' 'ಮಿಷನ್ ರಾಣಿಗಂಜ್' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ