/newsfirstlive-kannada/media/media_files/2025/08/24/sarees1-2025-08-24-19-30-33.jpg)
ಹೆಣ್ಣಿಗೆ ಸೀರೆ ಯಾಕೆ ಅಂದ ಹೇಳಿ.. ಆ ಅಂದ ಚಂದ ಅವಳ ಅಂದ ಒಳಗೆ ಅಡಗಿರೋದ್ರಿಂದ.. ಅಬ್ಬಬ್ಬಾ ನಮ್ಮ ನಾಡಿನ ಹೆಣ್ಣು ಮಕ್ಕಳಿಗೆ ಸೀರೆ ಎಂದರೆ ಪಂಚಪ್ರಾಣ. ಅದರಲ್ಲೂ ರೇಷ್ಮೆ ಸೀರೆ ಧರಿಸಿಬಿಟ್ಟರೆ ಸಾಕು ದೇವಲೋಕದ ಅಪ್ಸರೆಯೇ ಧರೆಗಿಳಿದಂತಾಗುತ್ತೆ.
ಹಬ್ಬ ಹರಿದಿನಗಳು ಬಂದರೆ ಸಾಕು ಇಷ್ಟ ಪಟ್ಟು ಸೀರೆಯನ್ನು ಖರೀದಿ ಮಾಡ್ತಾರೆ ನಾರಿಯರು. ಹಬ್ಬದ ದಿನವಂತೂ ಕೇಳಬೇಕಾ ತಾವು ಇಷ್ಟ ಪಟ್ಟ ಸೀರೆ ಧರಿಸಿ ಲಕ ಲಕ ಅಂತ ಮಿಂಚುತ್ತಿರುತ್ತಾರೆ. ಹಬ್ಬ ಮುಗಿದ ಬಳಿಕ ಹೊಸ ಸೀರೆಗಳನ್ನು ತಮ್ಮ ಕಪಾಟು, ಬೀರುವಿನಲ್ಲಿ ಬಿಡ್ತಾರೆ. ಹೀಗೆ ಮತ್ತೆ ಹಬ್ಬ ಹರಿದಿನ ಅಥವಾ ಮದುವೆ ಕಾರ್ಯಕ್ರಮದಲ್ಲಿ ಮಾತ್ರ ಸೀರೆಗಳನ್ನು ಬೀರುವಿನಿಂದ ಆಚೆ ತೆಗೆಯುತ್ತಾರೆ.
ಇದನ್ನೂ ಓದಿ: ಅದ್ಧೂರಿಯಾಗಿ ಮಗಳ ಹುಟ್ಟುಹಬ್ಬ ಆಚರಿಸಿದ ಬಿಗ್ಬಾಸ್ ಖ್ಯಾತಿಯ ಧನರಾಜ್ ಆಚಾರ್ ದಂಪತಿ
ಆದ್ರೆ, ಬಹಳ ದಿನಗಳ ಕಾಲ ಬೀರುವಿನಲ್ಲಿಟ್ಟ ಸೀರೆಗಳು ಹಾಳಾಗಬಹುದು, ವಾಸನೆ ಬರುವುದು ಗ್ಯಾರಂಟಿ. ಹೀಗಾಗಿ ಈ ಕೆಳಗಿನ ಸಿಂಪಲ್ ಟಿಪ್ಸ್ ಫಾಲೋ ಮಾಡಿದರೇ ನಿಮ್ಮ ಸೀರೆಗಳು ದೀರ್ಘಕಾಲದವರೆಗೆ ಸೇಫ್ ಆಗಿರಿಸಬಹುದು.
- ಯಾವುದಾದರೂ ಕಾರ್ಯಕ್ರಮಕ್ಕೆ ಹೋಗಿ ಬಂದ ಮೇಲೆ ನೀವು ಧರಿಸಿದ್ದ ಸಿಲ್ಕ್ ಸೀರೆಯನ್ನು ಹಾಗೇ ಮಡಚಿ ಇಡಬೇಡಿ. ಬರೋಬ್ಬರಿ 20 ನಿಮಿಷಗಳ ಕಾಲ ಒಣಗಿ ಹಾಕಬೇಕು.
- ಮೈಸೂರ್ ಸಿಲ್ಕ್ ಸೀರೆಯನ್ನು ಧರಿಸಿ, ಕಳಚಿದ ಬಳಿಕ ಭಿನ್ನ ವಿಭಿನ್ನವಾಗಿ ಮಡಚಿ ಇಡಬೇಕು. ಉದಾಹರಣೆಗೆ ಒಮ್ಮೆ ನೇರವಾಗಿ ಮಡಚಿಟ್ಟರೆ, ಮತ್ತೊಮ್ಮೆ ಉಲ್ಟಾ ಮಡಚಿ ಇಡಬೇಕು.
- ಸಿಲ್ಕ್ ಸೀರೆಗಳಿಗೆ ಇಸ್ತ್ರಿ ಮಾಡುವಾಗ ಗಮನವಿರಲಿ. ಇಸ್ತ್ರಿ ಮಾಡುವಾಗ ಸೀರೆಯನ್ನು ಉಲ್ಟಾ ಮಾಡಿ ಹೊಡೆಯಬೇಕು. ಉಲ್ಟಾ ಮಾಡಿ ಇಸ್ತ್ರಿ ಮಾಡಿದರೆ ಬಣ್ಣ ಮಾಸುವುದಿಲ್ಲ. ಜೊತೆಗೆ ಸೀರೆಯ ಜರಿ ಹಾಳಾಗುವ ಸಂಭವ ಇರುತ್ತದೆ.
- ಮುಖ್ಯವಾಗಿ ಬೀರುವಿನಲ್ಲಿ ಸಿಲ್ಕ್ ಸೀರೆಯನ್ನು ಇಡುವಾಗ ಯಾವುದಾದರೂ ಕಾಟನ್ ಬ್ಯಾಗ್ನಲ್ಲಿಯೇ ಮಡಚಿ ಇಡಿ. ಜೊತೆಗೆ ಫಂಗಸ್ನಿಂದ ತಪ್ಪಿಸಲು ಆ ಕಾಟನ್ ಬ್ಯಾಗ್ನಲ್ಲಿ ಒಂದು ಪಲಾವ್ ಎಲೆ, ಲವಂಗ ಹಾಗೂ ಏಲಕ್ಕಿ ಹಾಕಿ ಇಟ್ಟರೆ ಫಂಗಸ್ ಅಟ್ಯಾಕ್ ಆಗೋದಿಲ್ಲ.
- ಸೀರೆಯ ಮೇಲೆ ಎಣ್ಣೆಯ ಕಲೆಗಳು ಬಿದ್ದಿದ್ದರೇ ಅದರ ಮೇಲೆ ಟಾಲ್ಕಮ್ ಪೌಡರ್ ಹಾಕಿ ಟೀಶೂ ಪೇಪರ್ನಿಂದ ಅಥವಾ ಕಾಟನ್ ಬಟ್ಟೆಯಿಂದ ಸರಿಯಾಗಿ ಒರೆಸಿಕೊಳ್ಳಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ