/newsfirstlive-kannada/media/media_files/2025/08/22/dhanraj-achar-2025-08-22-21-06-21.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ಧನರಾಜ್ ಆಚಾರ್ ಇಡೀ ಕುಟುಂಬ ಸಖತ್ ಖುಷಿಯಲ್ಲಿದೆ. ಈ ಇಡೀ ಕುಟುಂಬದ ಖುಷಿಗೆ ಕಾರಣ ಹುಟ್ಟು ಹಬ್ಬ.
ಇದನ್ನೂ ಓದಿ: ಸುಜಾತ ಭಟ್ ಬಗ್ಗೆ ಸೋದರನ ಶಾಕಿಂಗ್ ಹೇಳಿಕೆ, ಮಗಳು ಇರಲು ಸಾಧ್ಯವೇ ಇಲ್ಲ!
ಹೌದು, ಧನರಾಜ್ ಆಚಾರ್ ದಂಪತಿ ತಮ್ಮ ಮುದ್ದಾದ ಮಗಳ ಹುಟ್ಟು ಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಪ್ರಸಿದ್ಧಿಯ ಮೊದಲನೇ ವರ್ಷದ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
ಇನ್ನೂ, ಧನರಾಜ್ ಆಚಾರ್ ಮಗಳ ಹುಟ್ಟು ಹಬ್ಬಕ್ಕೆ ಚೈತ್ರಾ ಕುಂದಾಪುರ ದಂಪತಿ ಬಂದಿದ್ದರು. ವೇದಿಕೆ ಮೇಲೆ ನಿಂತುಕೊಂಡು ಪ್ರಸಿದ್ಧಿಯ ಬರ್ತ್ ಡೇ ಕೇಕ್ ಕಟ್ ಮಾಡಿಸಿದ್ದಾರೆ.
ಧನರಾಜ್ ಆಚಾರ್ ಬಿಗ್ಬಾಸ್ನಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಗಿಚ್ಚಿ ಗಿಲಿಗಿಲಿ ಮೂಲಕ ಧನರಾಜ್ ಆಚಾರ್ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟು ಕಮಾಲ್ ಮಾಡಿದ್ದರು. ಬಿಗ್ಬಾಸ್ ಮನೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಡೈಲಾಂಗ್ ಹೇಳಿ ಎಲ್ಲಾ ಸ್ಪರ್ಧಿಗಳ ಮನಸ್ಸನ್ನು ಗೆದ್ದುಕೊಂಡಿದ್ದರು. ಅಲ್ಲದೇ ವೀಕ್ಷಕರ ಮನಸ್ಸನ್ನು ಗೆದ್ದುಕೊಂಡು 16ನೇ ವಾರದವರೆಗೆ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ