/newsfirstlive-kannada/media/media_files/2025/08/06/actress-ramya-2025-08-06-07-08-31.jpg)
ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡು ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಆರೋಪಿಗಳನ್ನು ಸೈಬರ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬರೋಬ್ಬರಿ 43 ಅಕೌಂಟ್ಗಳ ವಿರುದ್ಧ ನಟಿ ರಮ್ಯಾ ದೂರು ದಾಖಲು ಮಾಡಿದ್ದರು.
ಇದನ್ನೂ ಓದಿ: Raksha Bandhan: ರಾಖಿ ಕಟ್ಟೋ ಮುನ್ನ ಸಹೋದರಿಯರು ಓದಲೇಬೇಕಾದ ಪ್ರಮುಖ ವಿಚಾರ ಇಲ್ಲಿದೆ..!
ಆ ಬೆನ್ನಲ್ಲೇ ಸೈಬರ್ ಪೊಲೀಸರು 4 ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು. ಅಲ್ಲದೇ ಇನ್ನೂಳಿದ ಅಕೌಂಟ್ಗಳನ್ನು ಪತ್ತೆ ಹಚ್ಚುತ್ತಿದ್ದಾರೆ. ಇದರ ಮಧ್ಯೆ ನಟಿ ರಮ್ಯಾ ಹೊಚ್ಚ ಹೊಸ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಹೌದು, ಮೋಹಕ ತಾರೆ ರಮ್ಯಾ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಹೊಸ ಫೋಟೋಸ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಬ್ಲಾಕ್ ಜರ್ಕಿನ್ ಓವರ್ ಕೋಟ್ ರೀತಿಯ ಡ್ರೆಸ್ ಧರಿಸಿದ್ದಾರೆ. ಆ ಕಾಸ್ಟ್ಯೂಮ್ಗೆ ಮ್ಯಾಚ್ ಆಗುವಂತಹ ಹೀಲ್ಸ್ ಶೂ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಶೇರ್ ಮಾಡಿಕೊಂಡ ಎರಡು ಗ್ಲಾಮರಸ್ ಫೋಟೋ ಎಲ್ಲರನ್ನು ಸೆಳೆಯುತ್ತಿದೆ. ನಟಿ ರಮ್ಯಾ ಸೋಶಿಯಲ್ ಮೀಡಿಯಾ ಸಿಕ್ಕಾಪಟ್ಟೆ ಌಕ್ಟೀವ್ ಆಗಿದ್ದಾರೆ. ಆಗಾಗ ಹೊಸ ಹೊಸ ಫೋಟೋಗಳನ್ನು ನಟಿ ಶೇರ್ ಮಾಡಿಕೊಳ್ಳುತ್ತ ಸುದ್ದಿಯಲ್ಲಿ ಇರುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ