ನಟಿ ರಮ್ಯಾ ಮತ್ತೊಂದು ಪೋಸ್ಟ್​.. ಇವಾಗ ಏನಂದ್ರು..?

ಪುರುಷರನ್ನ ನಾಯಿಗೆ ಹೋಲಿಸಿ ವಿವಾದಾತ್ಮಕ ಪೋಸ್ಟ್​ ಬೆನ್ನಲ್ಲೇ ನಟಿ ರಮ್ಯಾ ಬೀದಿನಾಯಿಗಳ ಹಾವಳಿ ಬಗ್ಗೆ ಮತ್ತೆ ವಿಡಿಯೋ ಹರಿಬಿಟ್ಟಿದ್ದಾರೆ. ರಮ್ಯಾ ಅವರ ಈ ಪೋಸ್ಟ್ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

author-image
Ganesh Kerekuli
Ramya
Advertisment

ಬೆಂಗಳೂರು: ಪುರುಷರನ್ನ ನಾಯಿಗೆ ಹೋಲಿಸಿ ವಿವಾದಾತ್ಮಕ ಪೋಸ್ಟ್​ ಬೆನ್ನಲ್ಲೇ ನಟಿ ರಮ್ಯಾ ಬೀದಿನಾಯಿಗಳ ಹಾವಳಿ ಬಗ್ಗೆ ಮತ್ತೆ ವಿಡಿಯೋ ಹರಿಬಿಟ್ಟಿದ್ದಾರೆ. 

ಬಾಲಕಿ ಜೊತೆ ನಾಯಿಗಳು ಆಟವಾಡ್ತಿರುವ ವಿಡಿಯೋ ಫೋಸ್ಟ್​ ಮಾಡುವ ಮೂಲಕ, ನಾಯಿಗಳು ಆಕ್ರಮಣಕಾರಿ ಅಲ್ಲ ಎಂದು ಬಿಂಬಿಸಿದ್ದಾರೆ. ಬೀದಿನಾಯಿಗಳನ್ನು ಶೆಲ್ಟರ್​​ಗೆ ಹಾಕುವ ನಿರ್ಧಾರಕ್ಕೆ ನಟಿ ರಮ್ಯಾ ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೊಂದ್ಕಡೆ ಬೀದಿನಾಯಿಗಳಿಗೆ ಕಡಿವಾಣ ಇಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಬೆಳಗ್ಗೆ ವಾಕಿಂಗ್ ಮಾಡುವಾಗ ಭಯ ಆಗುತ್ತಿದೆ ಅಂತ ಜಿಬಿಎಗೆ ನಟಿ ರಮ್ಯಾ ದೂರು ನೀಡಿದ್ದಾರೆ.

ಇದನ್ನೂ ಓದಿ:ನಾಯಿ ಮನಸ್ಥಿತಿ ಅರ್ಥ ಮಾಡಿಕೊಳ್ಳಲಾಗಲ್ಲ ಎಂದ ಸುಪ್ರೀಂಕೋರ್ಟ್‌: ಹಾಗಾದ್ರೆ ಪುರುಷರನ್ನು ಜೈಲಿಗೆ ಹಾಕಲಾಗುತ್ತಾ ಎಂದ ನಟಿ ರಮ್ಯಾ!

ನಿನ್ನೆ ಏನು ಹೇಳಿದ್ದರು..?

ಬೀದಿನಾಯಿಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ್ದ ರಮ್ಯಾ, ಎಲ್ಲ ಪುರುಷರನ್ನ ಜೈಲಿಗೆ ಹಾಕಿ ಎಂದು ನಟಿ ರಮ್ಯಾ ಕಿಡಿಕಾರಿದ್ದರು. ಪುರುಷನು ಯಾವಾಗ ರೇಪ್ ಮಾಡ್ತಾನೋ? ಯಾವಾಗ‌‌ ಕೊಲೆ ಮಾಡ್ತಾನೋ ಗೊತ್ತಿಲ್ಲ. ಹಾಗಾಗಿ ಎಲ್ಲಾ ಪುರುಷರನ್ನ ಜೈಲಿಗೆ ಹಾಕಲಾಗುತ್ತಾ?  ಎಂದು ಪ್ರಶ್ನೆ ಮಾಡಿದ್ದರು. 

ಬೀದಿನಾಯಿಗಳ ಮನಸ್ಥಿತಿ ಯಾವಾಗ ಹೇಗಿರುತ್ತೋ ಹೇಳಲು ಸಾಧ್ಯವಿಲ್ಲ. ಬೀದಿನಾಯಿಗಳ ಮನಸ್ಸು ಯಾರಿಗೂ ಅರ್ಥವಾಗಲ್ಲ. ಯಾವಾಗ ಕಚ್ಚುವುದು, ಯಾವಾಗ ಕಚ್ಚುವುದಿಲ್ಲ ಎಂದು ಹೇಳಲಾಗಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Actress Ramya Dog
Advertisment