/newsfirstlive-kannada/media/media_files/2025/08/24/sanjana-galrani-2025-08-24-16-43-37.jpg)
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಿದ್ದ ಮಾಸ್ಕ್ ಮ್ಯಾನ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸದ್ಯ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ವಿಚಾರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ಫುಲ್ ಗ್ಲಾಮರ್ ಲುಕ್ನಲ್ಲಿ ದರ್ಶನ್.. ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಸಾಂಗ್ ರಿಲೀಸ್
ಇದರ ಮಧ್ಯೆ ಇದೇ ಮೊದಲ ಬಾರಿಗೆ ನಟಿ ಸಂಜನಾ ಗಲ್ರಾನಿ ಧರ್ಮಸ್ಥಳ ಕೇಸ್ ಕುರಿತು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇವತ್ತಿನ ಬೆಳವಣಿಗೆ ನೋಡಿದ್ರೆ ಮನಸ್ಸಿಗೆ ನೋವಾಗ್ತಿದೆ. ನಾಪತ್ತೆಯಾದ ಹೆಣ್ಮಕ್ಕಳ ಕುಟುಂಬಕ್ಕೆ ನ್ಯಾಯ ಸಿಗಬೇಕು. ರಾಜಕಾರಣ ಆಗುತ್ತಿದೆ ಎಂಬುದು ಮಾತ್ರ ನನಗೆ ಗೊತ್ತಿಲ್ಲ. ಅನ್ಯಾಯವಾದವರಿಗೆ ನ್ಯಾಯ ಸಿಗಬೇಕೆಂಬುದು ನನ್ನ ಆಗ್ರಹ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ