ಫುಲ್​​ ಗ್ಲಾಮರ್​ ಲುಕ್​ನಲ್ಲಿ ದರ್ಶನ್.. ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಸಾಂಗ್ ರಿಲೀಸ್

ಈ ಮೊದಲೇ ಡೆವಿಲ್ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಅದರಂತೆ ಇದೀಗ ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಸಾಂಗ್ ರಿಲೀಸ್ ಆಗಿದ್ದು ದರ್ಶನ್​ ಅಭಿಮಾನಿಗಳಿಗೆ ಹಾಡು ದೊಡ್ಡ ಜೋಶ್ ಕೊಡುತ್ತಿದೆ.

author-image
Bhimappa
DHARSHAN
Advertisment

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಡೆವಿಲ್ ಸಿನಿಮಾದ ಕೆಲಸಗಳು ಪೂರ್ಣಗೊಂಡಿವೆ. ಈ ಮೊದಲೇ ಡೆವಿಲ್ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಅದರಂತೆ ಇದೀಗ ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಸಾಂಗ್ ರಿಲೀಸ್ ಆಗಿದ್ದು ದರ್ಶನ್​ ಅಭಿಮಾನಿಗಳಿಗೆ ಹಾಡು ದೊಡ್ಡ ಜೋಶ್ ಕೊಡುತ್ತಿದೆ.

ಬಹು ನಿರೀಕ್ಷೆಯ ದರ್ಶನ್ ನಟನೆಯ ಡೆವಿಲ್ ಮೂವಿಯ ಮೊದಲ ಹಾಡು ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಸಾಂಗ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಹಾಡು ಅದ್ಭುತವಾಗಿ ಇದ್ದು ದರ್ಶನ್​ ಕೂಡ ಮಸ್ತ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ಇಷ್ಟವಾಗುವ ರೀತಿ ಸ್ಟೈಲೀಶ್​ ಆಗಿ, ಗ್ಲಾಮರ್​ ಲುಕ್​ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಜ್ಜೆ ಹಾಕಿದ್ದಾರೆ. 

DHARSHAN_3

ಈ ಹಾಡನ್ನು ದೀಪಕ್ ಬಾಲು ಅವರು ಹಾಡಿದ್ದು ಅಜನೀಶ್ ಲೋಕನಾಥ್ ಅವರ ಸಂಗೀತ ಮನಮೋಹಕವಾಗಿದೆ. ಅನಿರುದ್ಧ ಶಾಸ್ತ್ರಿ ಲಿರಿಕಲ್ ಕೇಳುಗರಿಗೆ ವ್ಹಾವ್​ ಎನಿಸುತ್ತದೆ. ಸಂತು ಮಾಸ್ಟರ್ ಅವರ ಕೋರಿಗ್ರಾಫ್​ ಕಣ್ಣಿಗೆ ಕುಕ್ಕುವಂತೆ ಸೊಗಸಾಗಿ ಇದೆ. ಎಲ್ಲದಕ್ಕಿಂತ ದರ್ಶನ್ ಮತ್ತೊಮ್ಮೆ ಸಿನಿ ರಂಗದಲ್ಲಿ ಗೆಲ್ಲುವುದು ಪಕ್ಕಾ ಎನ್ನಬಹುದು. 

DHARSHAN_2

ದರ್ಶನ್ ಅವರು ಪ್ರಕರಣವೊಂದರಲ್ಲಿ ಹೈಕೋರ್ಟ್​ನಿಂದ ಜಾಮೀನು ಪಡೆದು ಹೊರ ಬಂದಿದ್ದರು. ಆದರೆ ಸುಪ್ರೀಂ ಕೋರ್ಟ್​ ಈ ಜಾಮೀನು ಬಗ್ಗೆ ವಿಚಾರಣೆ ನಡೆಸಿ ದರ್ಶನ್ ಅವರನ್ನು ಮತ್ತೆ ಜೈಲಿಗೆ ಕಳುಹಿಸಿದೆ. ಇನ್ನು 6 ತಿಂಗಳವರೆಗೆ ದರ್ಶನ್ ಜೈಲಿನಲ್ಲಿ ಇರಬೇಕಾಗಿದೆ. ಇದರಿಂದ ದರ್ಶನ್ ಇಲ್ಲದೇ ಡೆವಿಲ್ ಮೂವಿಯ ಮೊದಲ ಹಾಡು ಚಿತ್ರತಂಡ ಇಂದು ಬೆಳಗ್ಗೆ ಬಿಡುಗಡೆ ಮಾಡಿದೆ. 

ಇದನ್ನೂ ಓದಿ:ಘೋರ ದುರಂತ.. ಸೊಸೆಗೆ ಬೆಂಕಿ ಹಚ್ಚಿ ಜೀವ ತೆಗೆದ ಅತ್ತೆ, ಮಾವ, ಗಂಡ.. ಮಗು ಹೇಳಿದ್ದೇನು?

DHARSHAN_1

ಮಿಲನಾ ಪ್ರಕಾಶ್ ಅವರ ನಿರ್ದೇಶನದಲ್ಲಿ ಡೆವಿಲ್ ಸಿನಿಮಾ ಸಿದ್ಧವಾಗಿದೆ. ಅಕ್ಟೋಬರ್​ನಲ್ಲಿ ಸಿನಿಮಾ ತೆರೆಗೆ ಅಪ್ಪಳಿಸಲಿದೆ ಎನ್ನಲಾಗುತ್ತಿದೆ. ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 57ನೇ ಸಿನಿಮಾವಾಗಿದ್ದು ಮೂವಿಯಲ್ಲಿ ರಚನಾ ರೈ ಹೀರೋಯಿನ್ ಆಗಿ ಅಭಿನಯ ಮಾಡಿದ್ದಾರೆ. ಈ ಸಿನಿಮಾಗೆ ಮ್ಯೂಸಿಕ್ ಡೈರೆಕ್ಟರ್​ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ.  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Actor Darshan Darshan in jail Devil Movie
Advertisment