/newsfirstlive-kannada/media/media_files/2025/09/15/rebal-star-ambaish-2025-09-15-12-55-24.jpg)
ಇತ್ತಿಚೆಗೆ ಕರ್ನಾಟಕ ಸರ್ಕಾರ ಸಾಹಸ ಸಿಂಹ ವಿಷ್ಣುವರ್ಧನ್ (Vishnuvardhan) ಹಾಗೂ ಹಿರಿಯ ನಟಿ ಸರೋಜಾ ದೇವಿ (Saroja Devi)ಗೆ ಮರಣೋತ್ತರ ‘ಕರ್ನಾಟಕ ರತ್ನ’ ಗೌರವ ಘೋಷಣೆ ಮಾಡಿದೆ. ಬೆನ್ನಲ್ಲೇ ರೆಬೆಲ್ ಸ್ಟಾರ್ ಅಂಬರೀಶ್ (Ambarish) ಅವರಿಗೂ ‘ಕರ್ನಾಟಕ ರತ್ನ’ (karnataka rathan) ನೀಡುವಂತೆ ಕೂಗು ಕೇಳಿ ಬಂದಿದೆ.
ಇವತ್ತು ಹಿರಿಯ ನಟಿ ತಾರಾ ಅನುರಾಧ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದರು. ಭೇಟಿ ವೇಳೆ ಅಂಬರೀಶ್ ಅವರಿಗೂ ಕರ್ನಾಟಕ ರತ್ನ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
/filters:format(webp)/newsfirstlive-kannada/media/media_files/2025/09/15/dk-shivakumar-and-tara-anuradha-2025-09-15-13-08-31.jpg)
ಅಂಬಿ ಫ್ಯಾನ್ಸ್ ಪರ ತಾರಾ ಮನವಿ
ಅಂಬರೀಶ್ಗೆ ಕರ್ನಾಟಕ ರತ್ನ ನೀಡಬೇಕು ಅನ್ನೋದು ಅಂಬಿ ಅಭಿಮಾನಿಗಳ ಒತ್ತಾಸೆ. ನೀವೂ ಕೂಡ (ಡಿಕೆ ಶಿವಕುಮಾರ್) ಅಂಬಿ ಅವರನ್ನ ತುಂಬಾ ಹತ್ತಿರದಿಂದ ಕಂಡಿದ್ದೀರಾ. ವಿಷ್ಣುವರ್ಧನ್ ಹಾಗೂ ಸರೋಜಾದೇವಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿರೊದು ಬಹಳ ಸಂತೋಷದ ಸುದ್ದಿ. ಜೊತೆಗೆ ಅಂಬರೀಶ್ಗೂ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿ ಎಂದು ತಾರಾ ಅನುರಾಧ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:8 ವರ್ಷಗಳ ವಿರಾಮದ ಬಳಿಕ ‘ಪೀಕಬೂ’ ಎಂದ ಗೋಲ್ಡನ್ ಕ್ವೀನ್.. VIDEO