/newsfirstlive-kannada/media/media_files/2025/09/15/amulya-1-2025-09-15-09-36-30.jpg)
ನಟಿ ಅಮೂಲ್ಯ
ಗೋಲ್ಡನ್ ಕ್ವೀನ್ ಅಮೂಲ್ಯ (Actress Amulya) ಸಿನಿ ರಂಗಕ್ಕೆ ಮತ್ತೆ ಕಂಬ್ಯಾಕ್ ಆಗಿದ್ದಾರೆ. ಹುಟ್ಟುಹಬ್ಬದ ದಿನದಂದೇ ಅಮೂಲ್ಯ ಸಿಹಿಸುದ್ದಿ ಕೊಟ್ಟಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದ ‘ಪೀಕಬೂ’ (Pekaboo Movie) ಸಿನಿಮಾದ ಮೂಲಕ ಮತ್ತೆ ಸ್ಯಾಂಡಲ್ವುಡ್ ಅಂಗಳಕ್ಕೆ ಎಂಟ್ರಿ ನೀಡಿದ್ದಾರೆ.
ಬರೋಬ್ಬರಿ 8 ವರ್ಷಗಳ ಬಳಿಕ ಕಂಬ್ಯಾಕ್..
ಮದುವೆ, ಮಕ್ಕಳ ನಂತರ ನಟಿ ಅಮೂಲ್ಯ ನಟನೆಗೆ ವಾಪಸ್ ಆಗಿದ್ದಾರೆ. ಹುಟ್ಟುಹಬ್ಬದ ದಿನವೇ ಸಿನಿಮಾ ನಟನೆ ಬಗ್ಗೆ ಗುಡ್ನ್ಯೂಸ್ ಕೊಟ್ಟಿರುವ ನಟಿ, ಮಂಜು ಸ್ವರಾಜ್ ನಿರ್ದೇಶನದ ‘ಪೀಕಬೂ’ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಹಿಂದೆ ಮಂಜು ನಿರ್ದೇಶನದ ‘ಶ್ರಾವಣಿ ಸುಬ್ರಹ್ಮಣ್ಯ’ ಸಿನಿಮಾದಲ್ಲಿ ನಟಿ ಅಮೂಲ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ಅಂದ್ಹಾಗೆ ನಿನ್ನೆಯ ದಿನ ಅಮೂಲ್ಯ ಅವರ ಹುಟ್ಟುಹಬ್ಬ ಆಗಿತ್ತು. ಈ ಹಿನ್ನೆಲೆಯಲ್ಲಿ ಚಿತ್ರತಂಡ ಬರ್ತ್ಡೇ ಉಡುಗೊರೆಯಾಗಿ ಅಮೂಲ್ಯ ಪಾತ್ರದ ಟೀಸರ್ ಬಿಡುಗಡೆ ಮಾಡಿದೆ. ಚಾರ್ಲಿ ಚಾಪ್ಲಿನ್ ಸ್ಟೈಲ್ನಲ್ಲಿ ಸ್ಟೆಪ್ ಹಾಕುತ್ತ ಎಂಟ್ರಿ ನೀಡಿರುವ, ಲೆಟ್ಸ್ ಸ್ಟಾರ್ಟ್ದ ಮ್ಯೂಜಿಕ್ ಎನ್ನುತ್ತ ಸ್ಟೆಪ್ಸ್ ಹಾಕಿದ್ದಾರೆ. ಒಂದು ನಿಮಿಷವಿರುವ ವಿಡಿಯೋದಲ್ಲಿ ಅಮೂಲ್ಯ ಕಾಮಿಡಿಯೊಂದಿಗೆ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಬಹುದಿನಗಳ ಕನಸು ನನಸು ಆಯ್ತು @nimmaamulya#ಅಮೂಲ್ಯ_ಐಶು ಅವರು ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೆ ಕನ್ನಡ ಚಿತ್ರರಂಗಕ್ಕೆ ಒಪಸ್ ಆಗಿದ್ದರೆ ಅಭಿನಂದನೆಗಳು 💐 #ಸ್ವಾಗತ ಅಮೂಲ್ಯ ಐಶು ಅವರೇ 👍🎊💖✌️#comebackAmulya#AmulyaJagadish#Sandalwood#ಕನ್ನಡ_ಚಿತ್ರರಂಗpic.twitter.com/7Ry5e35mb1
— 🇮🇳 ವೀರೇಶ್ ಅಮೂಲ್ಯ🚩 (@AmulyaVeeresh) September 14, 2025
ಇತ್ತೀಚೆಗೆ ಜೀ ಕನ್ನಡದಲ್ಲಿ ಪ್ರಸಾರವಾಗ್ತರುವ ‘ನಾವು ನಮ್ಮವರು’ ಎಂಬ ರಿಯಾಲಿಟಿ ಶೋ ಮೂಲಕ ಅಮೂಲ್ಯ ಅದ್ದೂರಿಯಾಗಿ ಟಿವಿಯಲ್ಲಿ ಕಾಣಿಸಿಕೊಂಡಿದ್ದರು. ನಾವು ನಮ್ಮವರು ಎಂಬುದು ಜೀ ಕನ್ನಡ ವಾಹಿನಿಯಲ್ಲಿ ಆಗಸ್ಟ್ 2 ರಿಂದ ಪ್ರಸಾರವಾಗುವ ಒಂದು ಹೊಸ ಫ್ಯಾಮಿಲಿ ರಿಯಾಲಿಟಿ ಶೋ ಆಗಿದೆ. ಈ ಶೋನಲ್ಲಿ ಜಡ್ಜ್ ಆಗಿ ಅಮೂಲ್ಯಎಲ್ಲರ ಮನೆ ಮಾತಾಗಿದ್ದಾರೆ. ಅಷ್ಟೇ ಅಲ್ಲದೇ ಇತ್ತೀಚೆಗೆ ಮಕ್ಕಳೊಂದಿಗೆ ಸಣ್ಣ ಮಕ್ಕಳಂತೆ ತಾನು ಮಗುವಾಗಿ ಆಟ ಆಡಿ ಎಂಜಾಯ್ ಮಾಡ್ತಿರುವ ವಿಡಿಯೋ ಹಂಚಿಕೊಂಡಿದ್ದರು.
ಇದನ್ನೂ ಓದಿ: ವೈರಲ್ ಹುಡುಗಿಗೆ ಬ್ಯಾಡ್ ಕಾಮೆಂಟ್ಸ್ ಕಾಟ.. ಏನಂದ್ರು ನಿತ್ಯಶ್ರೀ..?