Advertisment

ವೈರಲ್ ಹುಡುಗಿಗೆ ಬ್ಯಾಡ್​ ಕಾಮೆಂಟ್ಸ್ ಕಾಟ​.. ಏನಂದ್ರು ನಿತ್ಯಶ್ರೀ..?

ಎರಡ್ಮೂರು ದಿನಗಳ ಹಿಂದೆ ‘ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ..’ ಹಾಡನ್ನು ಹಾಡಿದ ನಿತ್ಯಶ್ರೀ ಎಲ್ಲೆಡೆ ಸುದ್ದಿಯಾಗಿದ್ದಾರೆ..ಇದೀಗ ವೈರಲ್ ಸ್ಟಾರ್​ಗೆ ಸೊಶಿಯಲ್ ಮೀಡಿಯಾದಲ್ಲಿ ಬ್ಯಾಡ್​ ಕಾಮೆಂಟ್ಸ್ ಕಾಟ ಶುರುವಾಗಿದೆ. ಈ ಬಗ್ಗೆ ನ್ಯೂಸ್ ಫಸ್ಟ್ ಜೊತೆ ಮಾತನಾಡಿದ್ದಾರೆ.

author-image
Ganesh Kerekuli
nithyashree

ವೈರಲ್ ಹುಡುಗಿ ನಿತ್ಯಾಶ್ರೀ

Advertisment


ನ್ಯೂಸ್ ಫಸ್ಟ್ ಜೊತೆ ಮಾತನಾಡಿದ ವೈರಲ್ ಸ್ಟಾರ್ ನಿತ್ಯಾಶ್ರೀ ಅವರು ‘ಒಂದಷ್ಟು ಜನ ಬ್ಯಾಡ್ ಕಾಮೆಂಟ್ ಮಾಡ್ತಿದ್ದಾರೆ, ಕೆಲವರು ಇವಳೇನು ಸಾಧನೆ ಮಾಡಿದ್ದಾಳೆ ಅಂತ ವೈರಲ್ ಮಾಡ್ತಿದ್ದೀರಿ ಅಂತಿದ್ದಾರೆ. ಶೇ 100 ರಲ್ಲಿ ಶೇ 90 ರಷ್ಟು ಜನರು ಒಳ್ಳೆ ಕಾಮೆಂಟ್ಸ್ ಕೊಟ್ಟಿದ್ದಾರೆ. ಬ್ಯಾಡ್ ಕಾಮೆಂಟ್ಸ್​ಗೆಲ್ಲ  ತಲೆ ಕೆಡಿಸಿಕೊಳ್ಳಲ್ಲ. ನನ್ನಿಂದ ಒಂದಷ್ಟು ಜನ ನಕ್ಕಿದ್ರು ಅನ್ನೋ ಖುಷಿ ಇದೆ ಎಂದು ಹೇಳಿದ್ದಾರೆ. 

Advertisment

ಈ ಮುಗ್ಧ ಹುಡುಗಿ ಹಿನ್ನಲೆ ಏನು..?

ಈ ವೈರಲ್ ಹುಡುಗಿ ನಿತ್ಯಾ ಶ್ರೀ ಮೂಲತಃ ಊರು ಮಂಡ್ಯ ಜಿಲ್ಲೆಯ ಕೆ.ಆರ್.​ಪೇಟೆ ತಾಲೂಕಿನ ಮೊಸಳೆಕೊಪ್ಪ ಗ್ರಾಮ. ತಮ್ಮ ಪದವಿ ಶಿಕ್ಷಣ ಪಡೆಯಲು ಮೈಸೂರಿನಲ್ಲಿ ನೆಲೆಸಿದ್ದಾರೆ. ಇದೇ ವೇಳೆ ವೈರಲ್ ಹಾಡಿನ ಬಗ್ಗೆ ಮಾತನಾಡಿರುವ ಅವರು.. ನಾನು ನನ್ನ ಸ್ನೇಹಿತರನ್ನು ಖುಷಿ ಪಡಿಸಲು ಹಾಡಿದ್ದೆ. ಇದು ಇಷ್ಟು ವೈರಲ್ ಆಗತ್ತೆ ಎಂದು ಗೊತ್ತಿರಲಿಲ್ಲ. ತುಂಬಾ ಖುಷಿ ಆಗಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ನನ್ನ ಗುರುಗಳು ಕೃಷ್ಣಮೂರ್ತಿ ಸರ್ ಹಾಡನ್ನು ರೆಕಾರ್ಡ್ ಮಾಡಿ ಇನ್​​ಸ್ಟಾಗ್ರಾಮ್​​ನಲ್ಲಿ ಅಪ್ಲೋಡ್ ಮಾಡಿದ್ರು. ಅದು ರಾತ್ರೋರಾತ್ರಿ ಸಕ್ಕತ್ ವೈರಲ್ ಆಗಿದೆ. ಎಲ್ಲರೂ ಕೂಡ ನನ್ನ ಗುರುತು ಹಿಡಿತಿದ್ದಾರೆ. ನನ್ನ ಜೊತೆ ಸೆಲ್ಫಿ ಕೇಳಿದ್ದಾರೆ. ನನಗೆ ನಟಿ ಆಗಬೇಕು, ಆ್ಯಕ್ಟಿಂಗ್ ಮಾಡಬೇಕು ಎಂಬ ಆಸೆ ಇದೆ. ಯಶ್ ನನ್ನ ಫೇವರಿಟ್ ನಟ. ಅವರ ಜೊತೆ ಒಂದು ಸೈಡ್ ರೋಲ್ ಮಾಡಬೇಕೆಂಬ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಹೂವಿನ ಬಾಣದ ಈ ವೈರಲ್ ಹುಡುಗಿ ಯಾರು..? ಈಗ ಏನ್ ಹೇಳ್ತಿದ್ದಾಳೆ ಇವರು..? VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Nitya shree viral girl
Advertisment
Advertisment
Advertisment