ಹೂವಿನ ಬಾಣದ ಈ ವೈರಲ್ ಹುಡುಗಿ ಯಾರು..? ಈಗ ಏನ್ ಹೇಳ್ತಿದ್ದಾಳೆ ಇವರು..? VIDEO

ಕಳೆದ ಎರಡ್ಮೂರು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಕನ್ನಡದ ಮುಗ್ಧ ಹುಡುಗಿಯೊಬ್ಬರು ಭಾರೀ ವೈರಲ್ ಆಗ್ತಿದೆ. ಅದುವೇ ‘ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ..’ ಹಾಡು ಹಾಡಿ ವೈರಲ್ ಆದ ಹುಡುಗಿ. ಆ ಹುಡುಗಿ ಯಾರು? ಯಾವ ಊರು, ಏನು ಮಾಡಿಕೊಂಡು ಇದ್ದಾರೆ ಅನ್ನೋದ್ರ ಬಗ್ಗೆ ಮಾಹಿತಿ ನೀಡಿದ್ದಾರೆ.

author-image
Ganesh Kerekuli
Advertisment

ಕಳೆದ ಎರಡ್ಮೂರು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಕನ್ನಡದ ಮುಗ್ಧ ಹುಡುಗಿಯೊಬ್ಬರು ಭಾರೀ ವೈರಲ್ ಆಗ್ತಿದೆ. ಅದುವೇ ‘ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ..’ ಹಾಡು ಹಾಡಿ ವೈರಲ್ ಆದ ಹುಡುಗಿ. ಇದೀಗ ಅವರು ನ್ಯೂಸ್​ಫಸ್ಟ್​ ಜೊತೆ ಮಾತಿಗೆ ಸಿಕ್ಕಿದ್ದಾರೆ. ಈ ವೇಳೆ ಅವರು ಯಾರು? ಯಾವ ಊರು, ಏನು ಮಾಡಿಕೊಂಡು ಇದ್ದಾರೆ ಅನ್ನೋದ್ರ ಬಗ್ಗೆ ಮಾಹಿತಿ ನೀಡಿದ್ದಾರೆ. 

ಯಾರು ಈ ಮುಗ್ಧ ಹುಡುಗಿ..?  

ಅಂದ್ಹಾಗೆ ಈ ಹುಡುಗಿ ಹೆಸರು ನಿತ್ಯಾ ಶ್ರೀ. ನನ್ನ ಊರು ಮಂಡ್ಯ ಜಿಲ್ಲೆಯ ಕೆ.ಆರ್.​ಪೇಟೆ ತಾಲೂಕಿನ ಮೊಸಳೆಕೊಪ್ಪ ಗ್ರಾಮ. ಪದವಿ ಶಿಕ್ಷಣ ಪಡೆಯಲು ಮೈಸೂರಿಗೆ ಬಂದಿದ್ದೇನೆ ಎಂದಿದ್ದಾರೆ. ಇದೇ ವೇಳೆ ವೈರಲ್ ಹಾಡಿನ ಬಗ್ಗೆ ಮಾತನಾಡಿರುವ ಅವರು.. ನಾನು ನನ್ನ ಸ್ನೇಹಿತರನ್ನು ಖುಷಿ ಪಡಿಸಲು ಹಾಡಿದ್ದೆ. ಇದು ಇಷ್ಟು ವೈರಲ್ ಆಗತ್ತೆ ಎಂದು ಗೊತ್ತಿರಲಿಲ್ಲ. ತುಂಬಾ ಖುಷಿ ಆಗಿದೆ. 

ಇದನ್ನೂ  ಓದಿ:ರಾಜಕೀಯ ಸಿಂಹಾಸನ ಅಲಂಕರಿಸಿದ AI; ಅಲ್ಬೇನಿಯಾ ಸರ್ಕಾರದಲ್ಲಿ ಎಐಗೆ ಸಚಿವ ಸ್ಥಾನ..!

Nithya shree (1)

ಸ್ನೇಹಿತರು ನನ್ನ ಹಾಡು ಕೇಳಿ ನಕ್ಕುನಕ್ಕು ಖುಷಿ ಪಟ್ಟರು. ನನ್ನ ಗುರುಗಳು ಕೃಷ್ಣಮೂರ್ತಿ ಸರ್ ಹಾಡನ್ನು ರೆಕಾರ್ಡ್ ಮಾಡಿ ಇನ್​​ಸ್ಟಾಗ್ರಾಮ್​​ನಲ್ಲಿ ಅಪ್ಲೋಡ್ ಮಾಡಿದ್ರು. ಅದು ರಾತ್ರೋರಾತ್ರಿ ಸಕ್ಕತ್ ವೈರಲ್ ಆಗಿದೆ. ಎಲ್ಲರೂ ಕೂಡ ನನ್ನ ಗುರುತು ಹಿಡಿತಿದ್ದಾರೆ. ನನ್ನ ಜೊತೆ ಸೆಲ್ಫಿ ಕೇಳಿದ್ದಾರೆ. ನನಗೆ ನಟಿ ಆಗಬೇಕು, ಆ್ಯಕ್ಟಿಂಗ್ ಮಾಡಬೇಕು ಎಂಬ ಆಸೆ ಇದೆ. ಯಶ್ ನನ್ನ ಫೇವರಿಟ್ ನಟ. ಅವರ ಜೊತೆ ಒಂದು ಸೈಡ್ ರೋಲ್ ಮಾಡಬೇಕು ಎಂದಿದ್ದಾರೆ. 

ನನ್ನ ತಂದೆಗೆ ನಾನು ನಟಿ ಆಗಬೇಕು ಎಂಬ ಆಸೆ ಇದೆ. ಅವಕಾಶ ಸಿಕ್ಕರೆ ಖಂಡಿತ ಆ್ಯಕ್ಟ್ ಮಾಡ್ತೀನಿ. ಒಂದಷ್ಟು ಜನ ಬ್ಯಾಡ್ ಕಾಮೆಂಟ್ ಮಾಡ್ತಿದ್ದಾರೆ. ಆದರೆ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಲ್ಲ. ನನ್ನಿಂದ ಒಂದಷ್ಟು ಜನ ನಕ್ಕಿದ್ರು ಅನ್ನೋ ಖುಷಿ ಇದೇ  ಎಂದು ನಿತ್ಯಾಶ್ರೀ ಹೇಳಿದ್ದಾರೆ. 

ಇದನ್ನೂ ಓದಿ:‘ಕಸ ಗುಡಿಸಿ ಮಗನ ಓದಿಸುತ್ತಿದ್ದೆ ಸಾರ್..’ ಹಾಸನ ದುರಂತದಲ್ಲಿ ಹೆತ್ತ ತಾಯಿ ಕಣ್ಣೀರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೂವಿನ ಬಾಣದಂತೆ viral girl Nitya shree
Advertisment