/newsfirstlive-kannada/media/media_files/2025/09/13/hassan-gokul-2025-09-13-12-37-48.jpg)
ಹಾಸನ: ನಿನ್ನೆ ರಾತ್ರಿ ಹಾಸನದಲ್ಲಿ ನಡೆದ ದುರಂತದಲ್ಲಿ ಒಟ್ಟು 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರೆಲ್ಲ ಬಹುತೇಕರು ಯುವಕರೇ ಆಗಿದ್ದಾರೆ. ಅವರಲ್ಲಿ ಗೋಕುಲ್ ಎಂಬ ವಿದ್ಯಾರ್ಥಿ ಕೂಡ ಸೇರಿದ್ದಾನೆ.
ಮಗನ ಕಳೆದುಕೊಂಡ ನೋವಿನಲ್ಲಿ ಮಾತನಾಡಿರುವ ತಾಯಿ.. ನನ್ನ ಮಗ ಪಿಯುಸಿಯಲ್ಲಿ ಸೈನ್ಸ್ ಓದುತ್ತಿದ್ದ. ಇಂಜಿನಿಯರಿಂಗ್ ಮಾಡಬೇಕು ಎಂದು ಕನಸು ಕಂಡಿದ್ದ. ನಾನು ಕಸಗುಡಿಸಿ ಮಗನ ಓದಿಸುತ್ತಿದ್ದೆ. ನನ್ನ ಪತಿ ಮರಗೆಲಸ ಮಾಡಿಕೊಂಡಿದ್ದಾರೆ. ನನಗೆ ಯಾವುದೇ ಪರಿಹಾರ ಬೇಡ. ನನಗೆ ನನ್ನ ಮಗ ಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಗ ಮೃತಪಟ್ಟಿದ್ದಾನೆ ಎಂದು ಕಣ್ಣೀರು ಇಟ್ಟಿದ್ದಾರೆ.
ಇದನ್ನೂ ಓದಿ:ಹಾಸನ ದುರಂತ.. ಜೀವ ಕಳೆದುಕೊಂಡವ್ರೆಲ್ಲ 25 ವರ್ಷದೊಳಗಿನ ಯುವಕರು..
ಹಾಸನ ತಾಲೂಕಿನ ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಅದ್ಧೂರಿ ಗಣೇಶ ಮೆರವಣಿಗೆ ಸಾವಿನ ಮೆರವಣಿಗೆಯಾಗಿ ಬದಲಾಗಿದೆ. ಡಿಜೆ ಸೌಂಡ್ನಲ್ಲಿ ಸಖತ್ ಸ್ಟೆಪ್ ಹಾಕುತ್ತಿದ್ದವರ ಮೇಲೆ ಯಮಸ್ವರೂಪಿಯಾಗಿ ಬಂದ ಟ್ರಕ್ 9 ಜನರನ್ನು ಬಲಿ ಹಾಕಿದೆ. ಪ್ರತಿವರ್ಷದಂತೆ ಈ ಬಾರಿಯೂ ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ಗಣೇಶನ ಅದ್ಧೂರಿ ಉತ್ಸವ ನಡೀತಿತ್ತು.. ನಿನ್ನೆ ಸಂಜೆ 7 ಗಂಟೆ ವೇಳೆಯಲ್ಲಿ ಮನ ತಣಿಸುವ ಆರ್ಕೇಸ್ಟ್ರಾ ಹಾಗೂ ಝಗಮಗಿಸುವ ಲೈಟಿಂಗ್ಸ್, ಡಿಜೆ ಸೌಂಡ್ ಜೊತೆ ಯುವಕರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.. ಈ ವೇಳೆ ಹಾಸನ-ಮೈಸೂರು ಹೆದ್ದಾರಿಯಲ್ಲಿ ಹಾಸನದಿಂದ ಹೊಳೆನರಸೀಪುರ ಕಡೆಗೆ ಟ್ರಕ್ವೊಂದು ವೇಗವಾಗಿ ನುಗ್ಗಿದೆ.. ಈ ವೇಳೆ ಏಕಾಏಕಿ ರಸ್ತೆಗೆ ಅಡ್ಡ ಬಂದ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ಕಳೆದುಕೊಂಡು ಮೆರವಣಿಗೆಯಲ್ಲಿದ್ದ ಜನರ ಮೇಲೆ ನುಗ್ಗಿಸಿದ್ದಾನೆ.
ಇದನ್ನೂ ಓದಿ: ಬೈಕ್ ಅಡ್ಡ ಬಂದಿದ್ದೇ ಹಾಸನ ದುರಂತಕ್ಕೆ ಕಾರಣ.. 9 ಬಲಿ, 25 ಜನ ಗಂಭೀರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ