ಹಾಸನ ದುರಂತ.. ಜೀವ ಕಳೆದುಕೊಂಡವ್ರೆಲ್ಲ 25 ವರ್ಷದೊಳಗಿನ ಯುವಕರು..

ಹಾಸನದ ಮೊಸಳೆಹೊಸಹಳ್ಳಿಯಲ್ಲಿ ನಡೆದಿರೋದು ಹೃದಯವಿದ್ರಾವಕ ದುರಂತ. ತಮ್ಮ ಪಾಡಿಗೆ ತಾವು ಗಣೇಶ ಮೆರವಣಿಗೆಯಲ್ಲಿ ಸಂಭ್ರಮಾಚರಣೆ ನಡೆಸ್ತಿದ್ದವರ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ದುರಂತ ಅಂದ್ರೆ ಬಲಿಯಾದ ಎಲ್ಲರೂ ಬಾಳಿ ಬದುಕಬೇಕಿದ್ದ ಯುವಕರು

author-image
Ganesh Kerekuli
Hassan incident (4)
Advertisment

ಹಾಸನದ ಮೊಸಳೆಹೊಸಹಳ್ಳಿಯಲ್ಲಿ ನಡೆದಿರೋದು ಹೃದಯವಿದ್ರಾವಕ ದುರಂತ. ತಮ್ಮ ಪಾಡಿಗೆ ತಾವು ಗಣೇಶ ಮೆರವಣಿಗೆಯಲ್ಲಿ ಸಂಭ್ರಮಾಚರಣೆ ನಡೆಸ್ತಿದ್ದವರ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ದುರಂತ ಅಂದ್ರೆ ಬಲಿಯಾದ ಎಲ್ಲರೂ ಬಾಳಿ ಬದುಕಬೇಕಿದ್ದ ಯುವಕರು. ರಾಜ್ಯ ಸರ್ಕಾರ 5 ಲಕ್ಷ ಪರಿಹಾರ ಘೋಷಿಸಿದೆ. ಸಿಎಂ ಸಿದ್ದು, ಮಾಜಿ ಪ್ರಧಾನಿ ದೇವೇಗೌಡ್ರು, ಹೆಚ್​ಡಿಕೆ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ:ಬೈಕ್ ಅಡ್ಡ ಬಂದಿದ್ದೇ ಹಾಸನ ದುರಂತಕ್ಕೆ ಕಾರಣ.. 9 ಬಲಿ, 25 ಜನ ಗಂಭೀರ

Hassan incident (1)

5 ಲಕ್ಷ ಪರಿಹಾರ 

ಹಾಸನದ ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ಕಂಡು ಕೇಳರಿಯದ ದುರಂತ ನಿನ್ನೆ ನಡೆದೋಗಿದೆ.. ಗಣೇಶ ಮೆರವಣಿಗೆ ದುರಂತಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.. ಈ ಘಟನೆ ತೀವ್ರ ದುಃಖ ತಂದಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗುವುದು, ನೊಂದವರ ಜೊತೆ ನಾವೆಲ್ಲರೂ ನಿಲ್ಲೋಣ ಅಂತ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:2 ವರ್ಷಗಳಿಂದ ಜನಾಂಗೀಯ ಹಿಂಸಾಚಾರಕ್ಕೆ ನಲುಗಿದ್ದ ಮಣಿಪುರ.. ಇವತ್ತು ಮೋದಿ ಮೊದಲ ಭೇಟಿ



ಮೊಸಳೆಹೊಸಹಳ್ಳಿ ಗಣೇಶ ಮೆರವಣಿಗೆ ದುರಂತದಲ್ಲಿ ಮೃತಪಟ್ಟ ಎಲ್ಲ 9 ಮಂದಿ 17ರಿಂದ 25 ವರ್ಷದೊಳಗಿನ ಯುವಕರಾಗಿದ್ದಾರೆ.. 

9 ಜನರ ಜೀವ ತೆಗೆದ ಟ್ರಕ್!

  1. ಪ್ರವೀಣ್ ಕುಮಾರ್, BE ಅಂತಿಮ ವರ್ಷದ ವಿದ್ಯಾರ್ಥಿ,  ಬಿಹಾರ
  2. ರಾಜೇಶ್ ಬಿನ್ ಮೂರ್ತಿ, ( 17 ) ಕೆ.ಬಿ. ಪಾಳ್ಯ, ಹೊಳೆನರಸೀಪುರ
  3. ಈಶ್ವರ್ ಬಿನ್ ರವಿಕುಮಾರ್( 17 ) ಡನಾಯಕನಹಳ್ಳಿ ಕೊಪ್ಪಲು, ಹೊಳೆನರಸೀಪುರ 
  4. ಗೋಕುಲ್  ಬಿನ್ ಸಂಪತ್ ಕುಮಾರ್( 17 ) ಮುತ್ತಿಗೆ ಹಿರೇಹಳ್ಳಿ 
  5. ಕುಮಾರ್ ಬಿನ್ ತಿಮ್ಮಯ್ಯ( 25 ) ಕಬ್ಬಿನಹಳ್ಳಿ, ಹಳೆಕೋಟೆ, ಹೊಳೆನರಸೀಪುರ
  6. ಪ್ರವೀಣ್​ ಬಿನ್ ಹನುಮಯ್ಯ ( 25 ) ಕಬ್ಬಿನಹಳ್ಳಿ, ಹೊಳೆನರಸೀಪುರ
  7. ಮಿಥುನ್ ಬಿನ್ ವಿಜಯ್ (23 ) ಗವಿಗಂಗಾಪುರ, ಹೊಸದುರ್ಗ, ಚಿತ್ರದುರ್ಗ ಜಿಲ್ಲೆ
  8. ಪ್ರಭಾಕರ್, ಬಂಟರಹಳ್ಳಿ, ಹೊಳೆನರಸೀಪುರ ತಾಲೂಕು
  9. ಮೃತನ ಹೆಸರು, ವಿಳಾಸ ತಿಳಿದು ಬಂದಿಲ್ಲ

ಪೊಲೀಸರ ನಿರ್ಲಕ್ಷ್ಯ ಎಂದ ಹೆಚ್​.ಡಿ.ರೇವಣ್ಣ

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹೊಳೆನರಸೀಪುರ ಶಾಸಕ ಹೆಚ್.ಡಿ. ರೇವಣ್ಣ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಕ್ರಮ ವಹಿಸಿದ್ರು. ಪೊಲೀಸರ ನಿರ್ಲಕ್ಷ್ಯದಿಂದಲೇ ದುರಂತ ನಡೆದಿದೆ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ.. ಗಣೇಶ ಮೆರವಣಿಗೆ ಬ್ಯಾರಿಕೇಡ್ ಹಾಕಿರಲಿಲ್ಲ.. ಮೆರವಣಿಗೆ ವೇಳೆ ಪೊಲೀಸರೇ ಇರಲಿಲ್ಲ ಅಂತ ಆಕ್ರೋಶ ಹೊರಹಾಕಿದ್ದಾರೆ.. ಮೃತರ ಕುಟುಂಬಗಳಿಗೆ ಕನಿಷ್ಠ 10 ಲಕ್ಷದಿಂದ 15 ಲಕ್ಷ ರೂ. ಪರಿಹಾರ ಕೊಡ್ಬೇಕು ಅಂತ ಆಗ್ರಹಿಸಿದ್ದಾರೆ..

ದುರಂತಕ್ಕೆ ಹೆಚ್​ಡಿಡಿ, ಹೆಚ್​​ಡಿಕೆ ತೀವ್ರ ಸಂತಾಪ

ದುರಂತಕ್ಕೆ ಮಾಜಿ ಪ್ರಧಾನಿ ದೇವೇಗೌಡ್ರು ಸಂತಾಪ ಸೂಚಿಸಿದ್ದಾರೆ.. ಗಣೇಶ ವಿಸರ್ಜನೆ ವೇಳೆ ನಡೆದ ಹೃದಯವಿದ್ರಾವಕ ಘಟನೆ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ ಅಂತ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:ನಿಮ್ಮ ಕೈ ನಡುಗುತ್ತಿದೆಯಾ, ರಕ್ತಹೀನತೆ ಕಾಡ್ತಿದೆಯಾ..? ಹಾಗಾದ್ರೆ ನಿಮ್ಗೆ ಈ ವಿಟಮಿನ್​ ಬೇಕೇ ಬೇಕು!

ಕೇಂದ್ರ ಸಚಿವ ಹೆಚ್.ಡಿ.ಕುಮಾಸ್ವಾಮಿ ಇದು ಅತಿ ದುರ್ದೈವದ ಘಟನೆಯಾಗಿದೆ ಅಂತ ಟ್ವೀಟ್ ಮಾಡಿದ್ದಾರೆ.

ಇತ್ತ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

 ಅದೇನೇ ಇರಲಿ.. ಇತ್ತೀಚೆಗೆ ನಡೆಯುತ್ತಿರುವ ಗಣೇಶ ಮರವಣಿಗೆಗಳು ಗಲಭೆ, ಗಲಾಟೆ, ದುರಂತದಲ್ಲಿ ಅಂತ್ಯ ಆಗ್ತಿರೋದು ಮಾತ್ರ ನಿಜಕ್ಕೂ ಆಘಾತಕಾರಿ ಸಂಗತಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Hassan Ganesh Procession Tragedy hassan tragedy Hassan ಹಾಸನ ದುರಂತ
Advertisment