/newsfirstlive-kannada/media/media_files/2025/09/12/manipura_modi-2025-09-12-23-17-56.jpg)
ನವದೆಹಲಿ: ಈಶಾನ್ಯ ರಾಜ್ಯಗಳಲ್ಲಿ ಒಂದಾದ ಮಣಿಪುರಕ್ಕೆ ಪ್ರಧಾನಿ ಮೋದಿಯವರು ಭೇಟಿ ನೀಡುತ್ತಿದ್ದು ಈ ವೇಳೆ ಸುಮಾರು 8,500 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿ ಎರಡು ವರ್ಷಗಳ ನಂತರ ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡುತ್ತಿದ್ದಾರೆ.
ಮಣಿಪುರದ ಹಿಂಸಾಚಾರದಲ್ಲಿ 2023ರಿಂದ ಒಟ್ಟು 260ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕುಕಿಸ್ ಹಾಗೂ ಮೈಥೇಯಿ ಜನಾಂಗದ ನಡುವೆ ನಡೆದಿದ್ದ ಜನಾಂಗೀಯ ಸಂಘರ್ಷದಲ್ಲಿ ಮನೆಗಳಿಗೆ ಬೆಂಕಿ ಹಚ್ಚಿ ಹಿಂಸಾಚಾರ ನಡೆಸಿದ್ದರಿಂದ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ತಮ್ಮವರನ್ನು ಕಳೆದುಕೊಂಡ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ.
ಇದನ್ನೂ ಓದಿ: BREAKING; ಗಣೇಶ ಮೆರವಣಿಗೆ ಮೇಲೆ ನುಗ್ಗಿದ ಟ್ರಕ್.. ಜೀವ ಬಿಟ್ಟ 7 ಜನ, ಕೆಲವರು ಗಂಭೀರ
ಕುಕಿಗಳು ಬಹುಸಂಖ್ಯಾತರಾಗಿರುವ ಚುರಾಚಂದ್‌ಪುರದ ಪೀಸ್ ಗ್ರೌಂಡ್‌ನಲ್ಲಿ 7,300 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಇವತ್ತು ಅಡಿಪಾಯ ಹಾಕಲಿದ್ದಾರೆ. ಇದಾದ ಮೇಲೆ ಮೈಥೇಯಿ ಬಹುಸಂಖ್ಯಾತ ಜನರು ಇರುವ ಇಂಫಾಲ್‌ನಲ್ಲಿ ಒಟ್ಟು 1,200 ಕೋಟಿ ರೂಪಾಯಿಗಳ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಮಣಿಪುರದ ಸಿಎಂ ಎನ್ ಬಿರೇನ್ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಫೆಬ್ರವರಿಯಿಂದಲೂ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಇದೆ. ಹೀಗಾಗಿ ಚುರಾಚಂದ್‌ಪುರದ ಪೀಸ್ ಗ್ರೌಂಡ್ ಹಾಗೂ ಇಂಫಾಲ್‌ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಭಾರೀ ಭದ್ರತೆ ಇರುತ್ತದೆ. ಎಲ್ಲಕಡೆಯೂ ಭದ್ರತಾ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿರುತ್ತಾರೆ. ಇದು ಅಲ್ಲದೇ ಜನರಿಗೆ ನೀರಿನ ಬಾಟಲಿ, ಬ್ಯಾಗ್, ಕರವಸ್ತ್ರ, ಛತ್ರಿ, ಕೀ, ಪೆನ್ನು, ಬೆಂಕಿಪೊಟ್ಟಣ ಇತ್ಯಾದಿಗಳನ್ನ ತೆಗೆದುಕೊಂಡು ಬರಬಾರದು ಎಂದು ಆದೇಶ ಹೊರಡಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ