/newsfirstlive-kannada/media/media_files/2025/09/13/hassan-incident-2025-09-13-07-14-49.jpg)
ಇದು ಘನಘೋರ ದುರಂತ.. ಅಲ್ಲಿ ನಡೀತಿದ್ದ ಗಣೇಶನ ಮೆರವಣಿಗೆ ಸಾವಿನ ಮೆರವಣಿಗೆಯಾಗಿ ಬದಲಾಗಿದೆ. ಝಗಮಗಿಸುವ ಲೈಟ್ನಲ್ಲಿ ಢಗಢಗ ಡಿಜೆ ಸೌಂಡ್ನಲ್ಲಿ ಕುಣಿದು ಕುಪ್ಪಳಿಸುತ್ತಿದ್ದವರ ಮೇಲೆ ಯಮಸ್ವರೂಪಿ ಕಂಟೈನರ್ ನುಗ್ಗಿದೆ. ಅಡ್ಡ ಬಂದ ಬೈಕ್ ಸವಾರನನ್ನು ಉಳಿಸಲು ಹೋಗಿ ಘೋರ ದುರಂತ ನಡೆದೋಗಿದೆ.
ಹಾಸನ ತಾಲೂಕಿನ ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಅದ್ಧೂರಿ ಗಣೇಶ ಮೆರವಣಿಗೆ ಸಾವಿನ ಮೆರವಣಿಗೆಯಾಗಿ ಬದಲಾಗಿದೆ. ಡಿಜೆ ಸೌಂಡ್ನಲ್ಲಿ ಸಖತ್ ಸ್ಟೆಪ್ ಹಾಕುತ್ತಿದ್ದವರ ಮೇಲೆ ಯಮಸ್ವರೂಪಿಯಾಗಿ ಬಂದ ಟ್ರಕ್ 9 ಜನರನ್ನು ಬಲಿ ಹಾಕಿದೆ.
ಇದನ್ನೂ ಓದಿ:2 ವರ್ಷಗಳ ನಂತರ ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ.. ಕೀ, ಪೆನ್ನು ನಿಷಿದ್ಧ
ಪ್ರತಿವರ್ಷದಂತೆ ಈ ಬಾರಿಯೂ ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ಗಣೇಶನ ಅದ್ಧೂರಿ ಉತ್ಸವ ನಡೀತಿತ್ತು.. ನಿನ್ನೆ ಸಂಜೆ 7 ಗಂಟೆ ವೇಳೆಯಲ್ಲಿ ಮನ ತಣಿಸುವ ಆರ್ಕೇಸ್ಟ್ರಾ ಹಾಗೂ ಝಗಮಗಿಸುವ ಲೈಟಿಂಗ್ಸ್, ಡಿಜೆ ಸೌಂಡ್ ಜೊತೆ ಯುವಕರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.. ಈ ವೇಳೆ ಹಾಸನ-ಮೈಸೂರು ಹೆದ್ದಾರಿಯಲ್ಲಿ ಹಾಸನದಿಂದ ಹೊಳೆನರಸೀಪುರ ಕಡೆಗೆ ಟ್ರಕ್ವೊಂದು ವೇಗವಾಗಿ ನುಗ್ಗಿದೆ.. ಈ ವೇಳೆ ಏಕಾಏಕಿ ರಸ್ತೆಗೆ ಅಡ್ಡ ಬಂದ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ಕಳೆದುಕೊಂಡು ಮೆರವಣಿಗೆಯಲ್ಲಿದ್ದ ಜನರ ಮೇಲೆ ನುಗ್ಗಿಸಿದ್ದಾನೆ.
ಇದನ್ನೂ ಓದಿ:ಭಾರತ- ಪಾಕ್ ಮಧ್ಯೆ ನಡೆದ ಏಷ್ಯಾಕಪ್ನ ಟಾಪ್- 5 ಮ್ಯಾಚ್ಗಳು.. ಫುಲ್ ಥ್ರಿಲ್ಲಿಂಗ್..!
9 ಮಂದಿ ದುರ್ಮರಣ.. 25ಕ್ಕೂ ಹೆಚ್ಚು ಮಂದಿಗೆ ಗಾಯ
ಗಣೇಶ ಮೆರವಣಿಗೆಯಲ್ಲಿ ಜನ ಕಿಕ್ಕಿರಿದು ಸೇರಿದ್ದು ಕಂಟೈನರ್ ಏಕಾಏಕಿ ನುಗ್ಗಿದ್ದರಿಂದ ಅಲ್ಲೋಲ-ಕಲ್ಲೋಲವಾಗಿದೆ.. ಕಂಟೈನರ್ನಡಿ ಸಿಲುಕಿ 9 ಮಂದಿ ಸಾವಿನ ಮನೆ ಸೇರಿದ್ರೆ 25ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.. ಟ್ರಕ್ ನುಗ್ಗಿದ್ದೇ ತಡ ಸ್ಥಳೀಯರು ಹಾಗೂ ಪೊಲೀಸರು ಆಂಬ್ಯುಲೆನ್ಸ್ ಕರೆಸಿ ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ಸಾಗಿಸಿದ್ರು.. ಮಾಹಿತಿ ಪ್ರಕಾರ ಐವರು ಸ್ಥಳದಲ್ಲೇ ಮೃತಪಟ್ರೆ ತೀವ್ರ ಗಾಯಗೊಂಡಿದ್ದ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಇದನ್ನೂ ಓದಿ:ಗಿಲ್ ಯುವರಾಜನ ಪಟ್ಟವೇರಿದ ಜರ್ನಿಯೇ ರೋಚಕ.. ಕಾರಣ ಮಾತ್ರ ಜ್ಯೂಸ್ ಮಾರುವವನ ಮಗ!
ದುರಂತಕ್ಕೆ ಬೈಕ್ ಸವಾರ ಬೇಕಾಬಿಟ್ಟಿ ಅಡ್ಡ ಬಂದಿದ್ದು ಹಾಗೂ ಟ್ರಕ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಸಿಟ್ಟಿಗೆದ್ದ ಸ್ಥಳೀಯರು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಪಘಾತ ಮಾಡಿದ ವಾಹನ ಮಹಾರಾಷ್ಟ್ರ ನೋಂದಣಿ ಹೊಂದಿದ್ದು ಚಾಲಕ ಹೊಳೆನರಸೀಪುರ ತಾಲೂಕಿನ ಕಟ್ಟೆಬೆಳಗುಲಿ ಗ್ರಾಮದ ಭುವನೇಶ್ ಕೂಡ ಗಾಯಗೊಂಡಿದ್ದಾನೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ದುರ್ಘಟನೆಗೆ ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯಿಂದ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ:ಭಾರತ-ಪಾಕ್ ಮ್ಯಾಚ್ಗೆ ಡಿಮ್ಯಾಡೇ ಇಲ್ಲ! ಅದಕ್ಕೆ 4 ಕಾರಣ
ದುರಂತಕ್ಕೆ ಆಘಾತ ವ್ಯಕ್ತಪಡಿಸಿರುವ ಸ್ಥಳೀಯರು, ಮೆರವಣಿಗೆಗಳು ಸಾಗುವಾಗ ವಾಹನ ಸಂಚಾರಕ್ಕೆ ಸೂಕ್ತ ನಿರ್ಬಂಧಗಳನ್ನು ವಿಧಿಸಬೇಕು ಅಂತ ಆಗ್ರಹಿಸಿದ್ದಾರೆ. ಒಟ್ಟಾರೆ ಗಣೇಶನ ಅದ್ಧೂರಿ ಮೆರವಣಿಗೆ ಸಂಭ್ರಮ ಕ್ಷಣಾರ್ಧದಲ್ಲಿ ಸಾವಿನ ಕೂಪಕ್ಕೆ ತಳ್ಳಿದ್ದು ಈ ದುರಂತ ಇಡೀ ಹಾಸನ ಜಿಲ್ಲೆಯನ್ನು ಆಘಾತಕ್ಕೆ ನೂಕಿದಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ