ಭಾರತ- ಪಾಕ್​ ಮಧ್ಯೆ ನಡೆದ ಏಷ್ಯಾಕಪ್​ನ ಟಾಪ್​- 5 ಮ್ಯಾಚ್​ಗಳು.. ಫುಲ್ ಥ್ರಿಲ್ಲಿಂಗ್..!

ಭಾರತ-ಪಾಕಿಸ್ತಾನ ಕದನದ ಕಾವು ಪೀಕ್​ ಲೆವೆಲ್​ನಲ್ಲಿದೆ. ಸ್ವಲ್ಪ ಎಡವಟ್ಟಾದರೆ ತಾಳ್ಮೆಯ ಕಟ್ಟೆಯೊಡೆದು ಆಕ್ರೋಶದ ರೋಷಾಗ್ನಿ ಉಕ್ಕಿ ಹರಿಯುತ್ತೆ. ನೀನಾ, ನಾನಾ ಅಂತಾ ಆನ್​ಫೀಲ್ಡ್​ನಲ್ಲೇ ತೊಡೆತಟ್ಟಲೂ ಆಟಗಾರರು ರೆಡಿ ಇರ್ತಾರೆ. ಅಂಥಹ ಟಾಪ್​​-5 ಮ್ಯಾಚ್​ಗಳ ಝಲಕ್ ಇಲ್ಲಿದೆ.

author-image
Bhimappa
INDVSPAK
Advertisment

ಇಂಡೋ-ಪಾಕ್​ ಪಂದ್ಯ ಅಂದ್ರೆ ಅದು ಕೇವಲ ಬ್ಯಾಟ್​ & ಬಾಲ್​ ನಡುವಿನ ವಾರ್​ ಮಾತ್ರವಲ್ಲ, ಈ ಕದನ ಕಣದ ಕಾವು ಪೀಕ್​ ಲೆವೆಲ್​ನಲ್ಲಿರುತ್ತೆ. ಸ್ವಲ್ಪ ಎಡವಟ್ಟಾದರೆ ತಾಳ್ಮೆಯ ಕಟ್ಟೆಯೊಡೆದು ಆಕ್ರೋಶದ ರೋಷಾಗ್ನಿ ಉಕ್ಕಿ ಹರಿಯುತ್ತೆ. ನೀನಾ, ನಾನಾ ಅಂತಾ ಆನ್​ಫೀಲ್ಡ್​ನಲ್ಲೇ ತೊಡೆತಟ್ಟಲೂ ಆಟಗಾರರು ರೆಡಿ ಇರ್ತಾರೆ. ಅಂಥಹ ಟಾಪ್​​-5 ಮ್ಯಾಚ್​ಗಳ ಝಲಕ್ ಇಲ್ಲಿದೆ.

ಏಷ್ಯಾಕಪ್​​ನ ಬಿಗ್ಗೆಸ್ಟ್​ ಬ್ಯಾಟಲ್​ಗೆ ಕೌಂಟ್​ಡೌನ್ ಶುರುವಾಗಿದೆ. ಬದ್ಧವೈರಿಗಳ ನಡುವಿನ ವಾರ್​ ನೋಡಲು ಇಡೀ ವಿಶ್ವ ಕ್ರಿಕೆಟ್ ಲೋಕವೇ ಸನ್ನದ್ಧವಾಗಿದೆ. ಸಂರ್ಘರ್ಷದ ನಡುವೆಯೂ ಇಂಡೋ ಪಾಕ್​ ಮುಖಾಮುಖಿ ಪಂದ್ಯದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದೆ. ಏಷ್ಯಾಕಪ್​​ನಲ್ಲಿ 19 ಬಾರಿ ಬದ್ಧವೈರಿಗಳು ಕಾದಾಟ ನಡೆಸಿದ್ರೆ. ಈ ಪೈಕಿ 10 ಪಂದ್ಯಗಳಲ್ಲಿ ಟೀಮ್ ಇಂಡಿಯಾನೇ ಅಧಿಪತ್ಯ ಸಾಧಿಸಿದೆ. ಇನ್ನುಳಿದ 9ರಲ್ಲಿ 6 ಪಂದ್ಯಗಳಲ್ಲಿ ಪಾಕ್ ಗೆದ್ದು ಬೀಗಿದ್ರೆ. 3 ಪಂದ್ಯಗಳು ರದ್ದಾಗಿವೆ. ಆದ್ರೆ, ಈ 19 ಪಂದ್ಯಗಳ ಪೈಕಿ 5 ಪಂದ್ಯಗಳ ಕಾದಾಟವಂತೂ ಯಾವುದೇ ಥ್ರಿಲ್ಲರ್ ಮೂವಿಗೂ ಕಡಿಮೆ ಇಲ್ಲ.

IND vs PAK: ಪಾಕ್ ವಿರುದ್ಧ ಟೀಂ ಇಂಡಿಯಾದ ಟಾರ್ಗೆಟ್ ಫಿಕ್ಸ್​​; ಗುರಿ ಸಾಧಿಸಿದ್ರೆ ಮರುಕಳಿಸಲಿದೆ ಮತ್ತೊಂದು ಇತಿಹಾಸ

2010ರಲ್ಲಿ ಕೆಣಕಿದ ಅಖ್ತರ್​ಗೆ​ ಹರ್ಭಜನ್​​​ ಸಿಂಗ್ ಸಿಕ್ಸರ್​ ಡಿಚ್ಚಿ..!

2010ರ ಭಾರತ-ಪಾಕ್ ಏಷ್ಯಾಕಪ್ ಮ್ಯಾಚ್ ತೀವ್ರ ಪೈಪೋಟಿಯಿಂದ ಕೂಡಿತ್ತು.  ಕೊನೇ ಓವರ್​​ ತನಕ ಸಾಗಿದ್ದ ಪಂದ್ಯದ ಕೊನೇ 2 ಎಸೆತಗಳಲ್ಲಿ ಟೀಮ್ ಇಂಡಿಯಾಗೆ 4 ರನ್ ಬೇಕಿತ್ತು. ಈ ಹಂತದಲ್ಲಿ ಕ್ರೀಸ್​​​​​ನಲ್ಲಿದ್ದ ಹರ್ಭಜನ್​ ಸಿಂಗ್​​ಗೆ ಶೊಯೇಬ್​ ಅಖ್ತರ್​ ಕೆಣಕಿದ್ರು. ಅಖ್ತರ್​ ಕುಚೇಷ್ಟೆಗೆ ಕೆರಳಿ ಹೋಗಿದ್ದ ಭಜ್ಜಿ ಸಿಕ್ಸ್ ಹೊಡೆದು ತೋರಿಸ್ತೀನಿ ಎಂದು ಪಂಥಾಹ್ವನ ಕೊಟ್ಟಿದ್ದರು. ಅದರಂತೆ ಕೊನೆಯ ಓವರ್​​ನಲ್ಲಿ ಸಿಕ್ಸರ್ ಚಚ್ಚಿದ ಹರ್ಭಜನ್ ಸಿಂಗ್ ಟೀಮ್​ ಇಂಡಿಯಾವನ್ನ ಗೆಲುವಿನ ದಡ ಸೇರಿಸಿದ್ರು.

ವಿರಾಟ್​ ವೀರಾವೇಶಕ್ಕೆ ಪಾಕ್ ಪಂಚ್ಚರ್..!

2012ರ ಏಷ್ಯಾಕಪ್​​​ನ ಈ ಮ್ಯಾಚ್ ಇಂಡಿಯನ್ ಕ್ರಿಕೆಟ್ ಅಭಿಮಾನಿಗಳ ಪಾಲಿನ ಫೇವರಿಟ್ ಮ್ಯಾಚ್.. ಯಾಕಂದ್ರೆ,  ಮೊದಲು ಬ್ಯಾಟಿಂಗ್ ನಡೆಸಿದ್ದ ಪಾಕ್​, ಟೀಮ್ ಇಂಡಿಯಾಗೆ 330 ರನ್​ಗಳ ಟಾರ್ಗೆಟ್ ನೀಡಿತ್ತು. ಪಾಕ್​​ ತಂಡದ ಬಲಿಷ್ಠ ಪೇಸ್ ಅಟ್ಯಾಕ್​​ನ ಧೂಳಿಪಟ ಮಾಡಿದ್ದ ವಿರಾಟ್ ಕೊಹ್ಲಿ, 148 ಎಸೆತಗಳಲ್ಲೇ 183 ರನ್ ಚಚ್ಚಿದ್ರು. ಇದು ವಿರಾಟ್​​ ಕೊಹ್ಲಿ ಆಲ್​ ಟೈಮ್ ಗ್ರೇಟ್ ಇನ್ನಿಂಗ್ಸ್​. ವಿರಾಟ್ ವೀರಾವೇಶಕ್ಕೆ ನೆಲ ಕಚ್ಚಿದ್ದ ಪಾಕ್, ಸೋಲೋಪ್ಪಿಕೊಂಡಿತ್ತು. ಇದಿಷ್ಟೇ ಅಲ್ಲ, ಪಾಕ್ ಎದುರು ಗೆದ್ದಿದ್ದ ಟೀಮ್ ಇಂಡಿಯಾ, ಇದೇ ವರ್ಷ ಏಷ್ಯಾಕಪ್​ ಗೆದ್ದಿತ್ತು.

ಶಾಹೀದ್ ಆಫ್ರಿದಿ ಮ್ಯಾಜಿಕ್​.. ಪಂದ್ಯ ಗೆಲ್ಲಿಸಿದ 2 ಸಿಕ್ಸರ್​!

2014ರ ಏಷ್ಯಾಕಪ್​ನ ಡಾಕ ಪಂದ್ಯ ಮರೆಯೋಕೆ ಸಾಧ್ಯನೇ ಇಲ್ಲ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 245 ರನ್ ಕಲೆ ಹಾಕಿತ್ತು. 246 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಪಾಕ್​​ಗೆ ಮೊಹಮ್ಮದ್ ಹಫೀಜ್ 75 ರನ್ ಗಳಿಸಿ ಆಸರೆಯಾಗಿದ್ರು. ಮತ್ತೊಂದೆಡೆ ವಿಕೆಟ್​ಗಳು ಉರುಳಿತ್ತು. ಆದ್ರೆ, ಶಾಹೀದ್​​ ಆಫ್ರಿದಿ 18 ಎಸೆತಗಳಲ್ಲಿ ಅಜೇಯ 34 ರನ್ ಗಳಿಸಿದ್ದು, ಪಂದ್ಯದ ದಿಕ್ಕನ್ನೇ ಬದಲಿಸಿತ್ತು. ಇಂಟ್ರೆಸ್ಟಿಂಗ್ ಅಂದ್ರೆ,  ಈ ಪಂದ್ಯದ ಕೊನೆ ಎರಡು ಓವರ್ ನಿಜಕ್ಕೂ ನಡೆದಿದ್ದು ಹೈಡ್ರಾಮಾ.

ಕೊನೆ 12 ಓವರ್​​​​ಗಳಲ್ಲಿ ಪಾಕ್​​​​​​​ 13 ರನ್ ಗಳಿಸಬೇಕಿತ್ತು. ಈ ಹಂತದಲ್ಲಿ 3 ರನ್ ನೀಡಿ 2 ವಿಕೆಟ್ ಬೇಟೆಯಾಡಿದ ಭುವನೇಶ್ವರ್ ಪಂದ್ಯಕ್ಕೆ ಮತ್ತೆ ಟ್ವಿಸ್ಟ್ ನೀಡಿದ್ರು. ಪಾಕ್ ಕೊನೆ ಓವರ್​​ 10 ರನ್ ಗಳಿಸಬೇಕಾಗಿದ್ದ ಅಂತಿಮ ಓವರ್​​ನ ಮೊದಲ ಎಸೆತದಲ್ಲೇ ಅಜ್ಮಲ್ ಔಟಾದ್ರು. ಆದ್ರೆ, ಮರು ಎಸೆತದಲ್ಲೇ ಸ್ಟ್ರೈಕ್ ಪಡೆದುಕೊಂಡ ಆಫ್ರಿದಿ, ಬ್ಯಾಕ್ ಟು ಬ್ಯಾಕ್ ಎರಡು ಸಿಕ್ಸರ್ ಸಿಡಿಸಿ ಟೀಮ್ ಇಂಡಿಯಾ ಗೆಲುವು ಕಸಿದಿದ್ದರು. 

ಇದನ್ನೂ ಓದಿ: BREAKING; ಗಣೇಶ ಮೆರವಣಿಗೆ ಮೇಲೆ ನುಗ್ಗಿದ ಟ್ರಕ್​.. ಜೀವ ಬಿಟ್ಟ 7 ಜನ, ಕೆಲವರು ಗಂಭೀರ

IND vs PAK ಪಂದ್ಯಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​​.. ಜಸ್ಟ್​ 10 ಸೆಕೆಂಡ್ಸ್ ಜಾಹೀರಾತಿಗೆ ಅರ್ಧ ಕೋಟಿ..!

ಪಾಂಡ್ಯ ಪವರ್​​ ಪಂಚ್​.. ಥ್ರಿಲ್ಲಿಂಗ್ ಎಂಡ್​..!

2022ರ ಏಷ್ಯಾಕಪ್ ಟೂರ್ನಿಯ ಲೀಗ್​ ಮ್ಯಾಚ್.  ಮೊದಲು ಬ್ಯಾಟಿಂಗ್ ಮಾಡಿದ ಪಾಕ್​​​ 19.4 ಓವರ್​ಗಳಲ್ಲಿ 147 ರನ್ ಗಳಿಗೆ ಆಲೌಟ್ ಆಗಿತ್ತು. 148 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ, 18 ಎಸೆತಗಳಲ್ಲಿ 32 ರನ್ ಕಲೆಹಾಕಬೇಕಿತ್ತು. ಹ್ಯಾರಿಸ್ ರೌಫ್​, ನಿಸೀಮ್ ಶಾ, ಮಹಮ್ಮದ್ ನವಾಜ್​ರಂಥ ಪೇಸರ್​ಗಳ ಎದುರು ಇದು ಬಿಗ್ ಟಾಸ್ಕ್ ಆಗಿತ್ತು. ಈ ವೇಳೆ ಸ್ಪೋಟಕ ಬ್ಯಾಟಿಂಗ್ ನಡೆಸಿದ್ದ ಪಾಂಡ್ಯ, 17 ಎಸೆತಗಳಲ್ಲಿ ಅಜೇಯ 33 ರನ್ ಗಳಿಸುವ ಮೂಲಕ ಟೀಮ್ ಇಂಡಿಯಾಗೆ ಗೆಲುವಿನ ಉಡುಗೊರೆ ನೀಡಿದರು.

ಕೊನೆ 2 ಓವರ್​.. ಪಾಕ್​​ಗೆ ಗೆಲುವಿನ ಸಿಹಿ..!

2022ರ ಏಷ್ಯಾಕಪ್​​​ನ  ಸೂಪರ್-4ನಲ್ಲಿ ಭಾರತ, ಪಾಕ್ ಮತ್ತೊಮ್ಮೆ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್​ ಕಲೆ ಹಾಕಿತ್ತು. 182 ರನ್​ಗಳ ಗುರಿ ಬೆನ್ನಟ್ಟಿದ ಪಾಕ್​​​​, ಉತ್ತಮ ಆರಂಭದ ಹೊರತಾಗಿಯೂ ಗೆಲುವಿನ  ದಡ ಸುಲಭವಾಗಿರಲಿಲ್ಲ. ಕೊನೆ 2 ಓವರ್​​​ಗಳಲ್ಲಿ 26 ರನ್ ಗಳಿಸಬೇಕಿದ್ದ ಚಾಲೆಂಜ್ ಪಾಕ್ ಮುಂದಿತ್ತು. ಆದ್ರೆ, 19ನೇ ಓವರ್​​ನಲ್ಲಿ ಭುವಿ ಬಿಟ್ಟುಕೊಟ್ಟ 19 ರನ್, ಟೀಮ್ ಇಂಡಿಯಾ ಪಾಲಿಗೆ ಮುಳ್ಳಾಯ್ತು. ಕೊನೆ ಓವರ್​​ನಲ್ಲಿ ಟೈಟ್ ಬೌಲಿಂಗ್ ನಡೆಸಿದ ಹೊರತಾಗಿಯೂ 7 ರನ್ ಡಿಫೆಂಡ್​ ಮಾಡಿಕೊಳ್ಳಲಾಗದೆ ಸೋಲುವಂತಾಯ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Ind vs Pak IND vs UAE Asia Cup 2025
Advertisment